ಚೇರ್ ಪರ್ಸನ್‌ಮ್ಯಾನೇಜಿಂಗ್ ಡೈರೆಕ್ಟರ್, ಫಸ್ಟ್ ಗ್ಲೋಬಲ್
ಗಣಿತ ಕಲಿಯಲು ಇಷ್ಟ, ಆದರೆ ಸೇರಲು ಇಷ್ಟವಿಲ್ಲ ಎಂದಾಗ ಬೇರೇನು ಮಾಡಬಹುದು, ಈ ವಿವರಗಳನ್ನು ದೇವೀನಾರಿಂದ ಕೇಳಿ ತಿಳಿಯಿರಿ….
ದೇವೀನಾ ಮೆಹ್ರಾ ಭಾರತದ ಪ್ರಪ್ರಥಮ ಇನ್ ವೆಸ್ಟಿಂಗ್ ಫರ್ಮ್ `ಫಸ್ಟ್ ಗ್ಲೋಬಲ್’ನ ಫೌಂಡರ್ ಎನಿಸಿದ್ದಾರೆ. ಈಕೆ ವಿಶ್ವದ ಪ್ರತಿಯೊಂದು ಸ್ಟಾಕ್ ಮಾರ್ಕೆಟ್‌ಪತ್ರಿಕೆಗಳಲ್ಲಿ ಹೆಸರು ಗಳಿಸಿದ್ದಾರೆ. ಇಂದು ಗೃಹಶೋಭಾ ಇವರ ಸಂದರ್ಶನದಿಂದ, ಕಾಲೇಜ್ ನಲ್ಲಿ ಹೊಸ ಕೋರ್ಸುಗಳ ಅಡ್ಮಿಶನ್ ಕೋರುವ ವಿದ್ಯಾರ್ಥಿಗಳಿಗೆಂದೇ ವಿಶೇಷ ಸಲಹೆಗಳನ್ನು ಸಂಗ್ರಹಿಸಿದೆ :
ನಿಮ್ಮ ಎಜುಕೇಶನ್ ಜರ್ನಿ ಹೇಗಿತ್ತು?
ನಾನು ಅಂಡರ್ ಗ್ರಾಜುಯೇಶನ್ ಗಾಗಿ ದೆಹಲಿಗೆ ಹೋದಾಗ, ಇಲ್ಲಿ ಆನರ್ಸ್ ನಲ್ಲಿ ಸಬ್ಸಿಡರಿ ಸಬ್ಜೆಕ್ಟ್ ನ ಅಂಕಗಳು ಕೂಡುವುದಿಲ್ಲ ಅಂತ ಗೊತ್ತಾಗಿ, 1 ವರ್ಷದ ನಂತರ ನಾನು ಲಖ್ನೌನ ವಿ.ವಿ.ದಲ್ಲಿ ಅಡ್ಮಿಶನ್ ಪಡೆದೆ. ಇಲ್ಲಿ ನಾನು ಗಣಿತ, ಇಂಗ್ಲಿಷ್, ಸಂಖ್ಯಾಶಾಸ್ತ್ರ ಆರಿಸಿಕೊಂಡಿದ್ದೆ. ಅದು ನನ್ನ ಮುಂದಿನ ಜೀವನಕ್ಕೆ ಆಧಾರವಾಯ್ತು. ಅಲ್ಲಿ ನನ್ನ ಪರ್ಫಾರ್ಮೆನ್ಸ್ ನಿಂದಾಗಿ ಮುಂದೆ ನನಗೆ ಅಹಮದಾಬಾದಿನಲ್ಲಿ ಅಡ್ಮಿಶನ್ ಪಡೆದೆ.
ನಿಮ್ಮ ಪ್ರೊಫೆಶನ್ ನಲ್ಲಿ ಅತಿ ಆನಂದದಾಯಕ ಹಾಗೂ ಸವಾಲುಭರಿತ ಕ್ಷಣಗಳ ಬಗ್ಗೆ ಹೇಳಿ?
ಆನಂದ ಅಂದ್ರೆ, ಇಡೀ ಪ್ರೊಫೆಶನಲ್ ಒಂದು ಲರ್ನಿಂಗ್ ಪ್ರೋಸೆಸ್ ಆಗಿದ್ದು, ಈ ಸ್ಟಾಕ್ ಮಾರ್ಕೆಟ್ ನಲ್ಲಿ ಪ್ರತಿ ದಿನ ಏನಾದರೊಂದು ಹೊಸತನ್ನು ಕಲಿಯುವ ಅವಕಾಶವಿದೆ! ಮತ್ತೆ ಸವಾಲು ಅಂದ್ರೆ, ಸ್ಟಾಕ್ ಮಾರುಕಟ್ಟೆ ಇರುವುದೇ ನಿಮ್ಮ ತಲೆ ಕೆಡಿಸಿಡಲು…. ಇಂಥ ಅನಿಶ್ಚಿತ ಮಾರುಕಟ್ಟೆಯಲ್ಲಿ ದುಡಿಯುವುದು ಪ್ರತಿ ದಿನ ರಿಸ್ಕೇ!
ಅಕಾಡೆಮಿ ಜೊತೆಗೆ ವಿದ್ಯಾರ್ಥಿಗಳು ಬೇರೆ ಯಾವ ಯಾವ ಸ್ಕಿಲ್ಸ್ ಗೆ ಕಡಿಮೆ ಫೋಕಸ್ ಮಾಡಬೇಕು ಅಂತೀರಿ?
ಎಲ್ಲಕ್ಕೂ ಮೊದಲು ಅವರು ತಮ್ಮ ಕಮ್ಯುನಿಕೇಶನ್ ಸ್ಕಿಲ್ಸ್ ನತ್ತ ಹೆಚ್ಚಿನ ನಿಗಾ ವಹಿಸಬೇಕು. ನೀವು ಜೀವನದಲ್ಲಿ ಮುನ್ನೇರಲು, ಕೆರಿಯರ್ ನಲ್ಲಿ ಅಭಿವೃದ್ಧಿ ಕಾಣಲು, ವಿಶ್ವದ ಅನೇಕ ಜನರನ್ನು ಭೇಟಿಯಾಗಲು, ಡೀಲ್ ಮಾಡಬೇಕೆಂದಿದ್ದರೆ, ನಿಮ್ಮ ಕಮ್ಯುನಿಕೇಶನ್ ಸ್ಕಿಲ್ಸ್ ಉನ್ನತ ಮಟ್ಟದ್ದಾಗಿರಬೇಕು. ಜೊತೆಗೆ ಆಂಗ್ಲ ಭಾಷೆಯ ಮೇಲಿನ ನಿಮ್ಮ ಹಿಡಿತ ಸುಪರ್ಬ್ ಆಗಿರಬೇಕು. ಇಂದು ನೀವು ಯಾವ ಕ್ಷೇತ್ರಕ್ಕೇ ಹೋದರೂ ಮೊದಲು ಚೆನ್ನಾಗಿ ಇಂಗ್ಲಿಷ್ ನಲ್ಲಿ ಸಂಭಾಷಿಸಲು ಬರುತ್ತದೆಯೇ ಎಂದೇ ನೋಡುತ್ತಾರೆ. ಹೀಗಾಗಿ ಇದನ್ನು ಚೆನ್ನಾಗಿ ಇಂಪ್ರೂವ್ ಮಾಡಿಕೊಳ್ಳಿ. ನೀವು ಯಾವ ವಿಭಾಗದಲ್ಲಿ ಪದವಿ ಪಡೆದಿರುತ್ತೀರೋ, ಅದರ ಕುರಿತಾಗಿ ಸಕಲ ವಿವರಗಳ ಮಾಹಿತಿ ಪಡೆದಿಟ್ಟುಕೊಳ್ಳಿ. ಕೇವಲ ಪಠ್ಯ ಪುಸ್ತಕಗಳ ಮಾಹಿತಿ ಸಾಕಾಗುವುದಿಲ್ಲ, ಅದು ಪರೀಕ್ಷೆಗಷ್ಟೇ ಸೀಮಿತ.
ತಮ್ಮ ಮಕ್ಕಳನ್ನು ಯಾವ ಕೋರ್ಸಿಗೆ ಸೇರಿಸುವುದು ಎಂದು ಯಾರೋ ನನ್ನ ತಾಯಿಯನ್ನು ವಿಚಾರಿಸುತ್ತಿದ್ದುದು, ನನಗೆ ಚೆನ್ನಾಗಿ ನೆನಪಿದೆ. ಯಾವ ಕೋರ್ಸ್ ಗೆ (ವಿಜ್ಞಾನ, ಆರ್ಟ್ಸ್, ಕಾಮರ್ಸ್) ಸೇರುವುದು ಎಂಬುದು ಮುಖ್ಯವಲ್ಲ, ಅದನ್ನು ಮುಂದೆ ನೀವು ಹೇಗೆ ನಿಭಾಯಿಸಿಕೊಂಡು ಹೋಗುತ್ತೀರಿ ಎಂಬುದೇ ಮುಖ್ಯ. ಅದರಲ್ಲಿ ನೀವು ಬೆಸ್ಟ್ ಆಗಿರಿ, 100% ಪರಿಶ್ರಮ ವಹಿಸಿ ಎಂದು ಅವರು ಉತ್ತರಿಸಿದ್ದರು. ಆಗ ಮಾತ್ರ ಜೀವನದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ಅರ್ಥ ಮಾಡಿಕಂಡೆ. ಡಿಗ್ರಿ ಸಿಕ್ಕಿತು, ಕೆಲಸ ಗ್ಯಾರಂಟಿ ಎಂದು ಕುಳಿತರೆ ಆಗಲ್ಲ. ಕಾಲಕ್ಕೆ ತಕ್ಕಂತೆ ಯಾವ ಸ್ಕಿಲ್ಸ್ ಬೆಳೆಸಿಕೊಂಡು ಉದ್ಯೋಗ ಗಿಟ್ಟಿಸುವಿರಿ ಎಂಬುದೇ ಮುಖ್ಯ.
ಎಜುಕೇಶನ್, ಕೆರಿಯರ್, ಪ್ರೊಫೆಶನಲ್, ಈ ವಿಶ್ವ ಎದುರಿಸುವ ಛಾತಿಯೇ ಇರಲಿ, ಎಲ್ಲೆಡೆ ಬದಲಾವಣೆ ಅನಿವಾರ್ಯ. ಹೀಗಾಗಿ ನಿಮ್ಮ ಟ್ಯಾಲೆಂಟ್ ಹೆಚ್ಚಿಸಿಕೊಳ್ಳಿ. ಆಗ ಸಮಯಕ್ಕೆ ಸರಿಯಾಗಿ ಪ್ರತಿ ಸವಾಲು, ಬದಲಾವಣೆಗಳನ್ನೂ ಎದುರಿಸಬಹುದು.
ನಾವು ಇದರಿಂದ ಹೊರಬಿದ್ದಾಗ, ಸೆಕ್ಯುರಿಟಿ ಅನಾಲಿಸಿಸ್ ನಂಥ ಯಾ ಕೆರಿಯರ್ ಸಹ ಇರಲಿಲ್ಲ. ಇದಂತೂ ಇತ್ತೀಚೆಗೆ 7-8 ವರ್ಷಗಳಲ್ಲಿ ನಮ್ಮ ದೇಶದಲ್ಲಿ ಚಾಲ್ತಿಯಲ್ಲಿದೆ. ಆಗ ನಾನು ಇದನ್ನು ಕಲಿತೆ. ಹೀಗೆ ಕಲಿಕೆಗೆ ಕೊನೆಯೇ ಇಲ್ಲ, ಜೀವನವಿಡೀ ಕಲಿಯುತ್ತಲೇ ಇರಬೇಕು!
ಇಂದು ಫೈನಾನ್ಸ್ ಇನ್ ವೆಸ್ಟಿಂಗ್ ಸೆಕ್ಟರ್ ನಲ್ಲಿ ಸ್ಕೋಪ್ ಇದೆಯೇ?
ಇಂದು ಫೈನಾನ್ಸ್ ನ ಪ್ರತಿ ಕ್ಷೇತ್ರದಲ್ಲೂ ಬಲು ಹೆಚ್ಚಿನ ಸ್ಕೋಪ್ ಇದೆ. ಅದು ಬ್ಯಾಂಕ್, ಸ್ಟಾಕ್ ಮಾರ್ಕೆಟ್ ಯಾವುದೇ ಇರಬಹುದು, ಯಾರು ಇವುಗಳಲ್ಲಿ ತಮ್ಮ ಕೆರಿಯರ್ ರೂಪಿಸಿಕೊಳ್ಳಲು ಬಯಸುತ್ತಾರೋ, ಅವರಿಗೆ ನಾನು ಹೇಳುವುದೆಂದರೆ, ಡೇ ಟ್ರೇಡರ್ ಯಾ ಕ್ರಿಪ್ಟೋ ಟ್ರೇಡಿಂಗ್ ಮಾಡಿ ಬಹಳಷ್ಟು ಹಣ ಗಳಿಸಬಹುದು ಎಂದು ಭಾವಿಸಬೇಡಿ. ಅದು ಸರಿಯಲ್ಲ. ಇದೊಂದು ಆಳವಾದ ಕಂದಕ ಇದ್ದಂತೆ.
ಹೀಗಾಗಿ ಒಂದು ಪ್ರಾಪರ್ ಕೆರಿಯರ್ ರೂಪಿಸಿಕೊಳ್ಳಲು ದೃಢ ಮನಸ್ಸಿನಿಂದ ಕೆಲಸ ಮಾಡಿ, ಅದರೊಂದಿಗೆ ಬೆಳವಣಿಗೆ ಕಂಡುಕೊಳ್ಳಿ. ಎಲ್ಲಿ ನಿಮಗೆ ಹೆಚ್ಚಿನ ಆಸಕ್ತಿ ಇದೆಯೋ ಅದನ್ನೇ ಮಾಡಿ. ಇಂದು ಟ್ರೇಡಿಂಗ್ ಬಲು ಟ್ರೆಂಡಿಂಗ್, ಫ್ಯಾಷನೆಬಲ್ ಎನಿಸಿದೆ. ಹೀಗೆಂದು ಇದರ ಹಿಂದೆಯೇ ಓಡಬಾರದು. ನಿಮ್ಮ ಆಸಕ್ತಿಗೆ ತಕ್ಕಂತೆ ಪರಿಶ್ರಮ ಇರಲಿ.
ನಮ್ಮ ಕೆರಿಯರ್ ನಲ್ಲಿ ನಾವು ಕಲಿತ ಕಾಲೇಜಿಗೆ ಹೆಚ್ಚಿನ ಪ್ರಾಮುಖ್ಯತೆ ಇದೆಯೇ?
ನೋಡಿ, ಒಂದು ಡಿಗ್ರಿ ಅನ್ನೋದು ನಿಮಗೆ ಮೊದಲ ಕೆಲಸ ಸಿಗುವವರೆಗೂ ಸಹಾಯ ಮಾಡುತ್ತದೆ. ಅದಾದ ನಂತರ ನಿಮ್ಮ ಹಾರ್ಡ್ ವರ್ಕ್‌ಲರ್ನಿಂಗ್ ಮಾತ್ರವೇ ನಿಮ್ಮನ್ನು ಮುಂದೆ ಕೊಂಡೊಯ್ಯುತ್ತದೆ. ಮತ್ತೊಂದು ವಿಷಯ, ಇಲ್ಲಿ ಯಾವ ಕಾಲೇಜ್ ಎಂಬುದಕ್ಕಿಂತ ಎಂಥ ಸಬ್ಜೆಕ್ಟ್ ಅನ್ನೋದೇ ಮುಖ್ಯ. ನೀವೇನೋ ಬೆಸ್ಟ್ ಕಾಲೇಜ್ ಸೇರಿದಿರಿ, ಆದರೆ ಅಲ್ಲಿ ನಿಮಗೆ ಸಿಕ್ಕ ಸಬ್ಜೆಕ್ಟ್ ನಿಮಗಿಷ್ಟವಿಲ್ಲದ್ದು ಅಂತಾದಾಗ, ಅದರಲ್ಲಿ ನೀವು ಹೇಗೆ ಬೆಸ್ಟ್ ಆಗಲು ಸಾಧ್ಯ? ಅದು ನಿಮ್ಮನ್ನು ಮುಂದೆ ಕೊಂಡೊಯ್ಯುತ್ತದೆಯೇ? ಆದ್ದರಿಂದ ನೀವು ಸೇರುವ ಕಾಲೇಜ್ ಚಿಕ್ಕದಾಗಿದ್ದರೂ ಪರವಾಗಿಲ್ಲ, ಆದರೆ ನೀವು ಆರಿಸಿಕೊಂಡ ಸಬ್ಜೆಕ್ಟ್ ನಿಮ್ಮ ಮೆಚ್ಚಿನದಾಗಿರಬೇಕು. ಅಂಥ ಕಡೆ ಅಡ್ಮಿಶನ್ ಪಡೆದು ಕಲಿಯಿರಿ. ನಿಮ್ಮ ಫೋಕಸ್ ಪೂರ್ತಿ ಅದರ ಕಡೆಗೇ ಇರಲಿ!
ಕೆರಿಯರ್ ಆರಿಸಿಕೊಳ್ಳುವ ವಿಷಯದಲ್ಲಿ ಇಂದಿನ ವಿದ್ಯಾರ್ಥಿಗಳಿಗೆ ನಿಮ್ಮ ಸಲಹೆ ಏನು?
ಮೊದಲ ಸಲಹೆ ಅಂದ್ರೆ, ಇಂದು ಶಾಲೆಗಳಲ್ಲಿ ಯಾ ಹೊರಗಡೆ ಕೌನ್ಸಿಲಿಂಗ್ ಸರ್ವೀಸಸ್ ಧಾರಾಳ ಇವೆ. ಅದರ ಸಹಾಯ ಪಡೆಯಿರಿ. ಎರಡನೇ ಸಲಹೆ, ಯಾ ಸಬ್ಜೆಕ್ಟ್/ ಕೋರ್ಸ್ ನಿಮಗೆ ಬಹಳ ಇಷ್ಟವೇ ಅದಕ್ಕೆ ಮಾತ್ರ ಸೇರಿರಿ. ಒಮ್ಮೆ ಅದಕ್ಕೆ ಸಂಬಂಧಿಸಿದ ಪ್ರೊಫೆಶನ್ಸ್ ರನ್ನು ಭೇಟಿಯಾಗಿ. ಒಂದು ದಿನ ಅವರ ಜೊತೆ ಕಳೆಯಿರಿ. ಅಂಥವರ ಕೆಲಸ ಹೇಗಿರುತ್ತದೆ, ಇಡೀ ದಿನ ಏನೇನು ಮಾಡುತ್ತಾರೆ ಎಂದು ನೋಡಿ ತಿಳಿಯಿರಿ. ನಿಮಗೆ `ಲಾ’ ಕಲಿಯುವುದು ಇಷ್ಟ ಅಂದ್ರೆ, ಒಂದು ದಿನ ಅಥವಾ ಅರ್ಧ ದಿನವಾದರೂ ಒಬ್ಬ ಲಾಯರೊಂದಿಗೆ ಕಳೆಯಿರಿ. ಅವರ ದಿನಚರ್ಯೆ, ಅವರ ಕೆಲಸದ ವೈಖರಿ, ಎದುರಿಸುತ್ತಿರುವ ಕಷ್ಟನಷ್ಟ ಎಲ್ಲಾ ನೋಟ್ ಮಾಡಿ. ಮುಂದೆ ನೀವು ಇದನ್ನೆಲ್ಲ ಯಶಸ್ವಿಯಾಗಿ ನಿಭಾಯಿಸಬಲ್ಲಿರಾ ಎಂದು ಸ್ವಯಂ ಪ್ರಶ್ನಿಸಿಕೊಳ್ಳಿ.
ನಿಮ್ಮ ವಿಷಯಕ್ಕೆ ಸಂಬಂಧಿಸಿದ ಹೆಚ್ಚು ಹೆಚ್ಚು ಪುಸ್ತಕಗಳನ್ನು ಓದುತ್ತಿರಿ. ಅದು ಕೇವಲ ಅಷ್ಟಕ್ಕೆ ಸೀಮಿತವಾಗದೆ, ಇಂದಿನ ಪ್ರಪಂಚದ ಆಗುಹೋಗುಗಳ ಬಗ್ಗೆ ತಿಳಿಸುವಂಥ ಪುಸ್ತಕ ಓದಿರಿ. ಅದು ಕನ್ನಡ, ಆಂಗ್ಲ ಯಾವ ಭಾಷೆಯೇ ಇರಲಿ, ನಿಮಗೆ ಇಷ್ಟವಾಗುವಂಥದ್ದನ್ನು ಓದುತ್ತಾ ಇರಿ. ಹೀಗೆ ಹೆಚ್ಚು ಓದಿದಷ್ಟೂ ನಿಮ್ಮ ಜ್ಞಾನದ ಶಕ್ತಿ ಬೆಳೆಯುತ್ತದೆ, ಕಲ್ಪನೆ ಕ್ರಿಯಾಶೀಲತೆ ಹೆಚ್ಚಿಸಿಕೊಳ್ಳಿ. ಇಂದಿಗೂ ಸಹ ನಾನು ವರ್ಷಕ್ಕೆ 40-60 ಪುಸ್ತಕ ಓದುತ್ತೇನೆ. ಕೇವಲ ಫೈನಾನ್ಸ್ ಮಾತ್ರವಲ್ಲದೆ, ಎಲ್ಲ ತರಹದ್ದೂ ಓದುತ್ತೇನೆ. 90ರ ನನ್ನ ತಾಯಿ ಈಗಲೂ ಪುಸ್ತಕ ಓದುದರಲ್ಲಿ ಆಸಕ್ತಿ ತೋರುತ್ತಾರೆ. ಹೀಗಾಗಿ ಸತತ ಓದುವಿಕೆ, ನಿಮ್ಮ ಬೆಳವಣಿಗೆಗೆ ಪೂರಕ.
ಕಾಲೇಜಿನಿಂದ ಹೊರಬಂದಾಗ, ಸಿಕ್ಕಿದ ಮೊದಲ ಕೆಲಸ ಬಿಡದೆ, ಅದಕ್ಕೆ ಆತುಕೊಳ್ಳಿ. ಇದಕ್ಕಿಂತ ಒಳ್ಳೆಯದು ಸಿಕ್ಕಿದಾಗ ನೋಡೋಣ ಎಂದು ಕಾಯುತ್ತಾ ಕೂರಬೇಡಿ. ಈ ಕಂಪನಿ ಬೇಡ ಅದೇ ಇರಲಿ, ಎಂದೆಲ್ಲ ತರ್ಕಿಸುತ್ತಾ ಕೂರಬೇಡಿ. ಸಿಕ್ಕಿದ್ದರಲ್ಲೇ ಅನುಭವ ಪಡೆದು ಹೊಸತನ್ನು ಕಲಿಯಿರಿ. ಹೀಗಾಗಿ ಸಿಕ್ಕಿದ ಕೆಲಸ ಶುರು ಮಾಡದಿದ್ದರೆ, ಪ್ರಾಕ್ಟಿಕಲ್ ಆಗಿ ನಿಮಗೆ ಅನುಭವ ಸಿಗದು, ಕಲಿಯುವುದು ಹೇಗೆ?
ಈಗಿನ ಕಾಲದ ಹೆಣ್ಣುಮಕ್ಕಳಿಗೆ ಏನು ಹೇಳಬಯಸುತ್ತೀರಿ?
ನನ್ನ ಕಲಿಕೆ, ಆಯ್ಕೆ ಎಲ್ಲವೂ ಸರಿಯಾಗಿತ್ತು. ಎಷ್ಟೋ ಮನೆಗಳಲ್ಲಿ ಇಂದೂ ಸಹ, ಹೆಣ್ಣುಮಕ್ಕಳು ಬಯಸುವ ಕೋರ್ಸ್ ಕೊಡಿಸದೆ, ಅವರ ಬಯಕೆಗೆ ತಿಲಾಂಜಲಿ ಇತ್ತು, ನೀನು ಮುಗಿಸಿ, ಮದುವೆ ಮಾಡಿಕೊಂಡು ಹೋಗೋದನ್ನು ನೋಡು ಎಂದು ದಬಾಯಿಸಲಾಗುತ್ತದೆ. ಇಂಥ ಇಕ್ಕಟ್ಟಿನಲ್ಲಿರುವ ಹೆಣ್ಣುಮಕ್ಕಳಿಗೆ ನಾನು ಹೇಳುವುದೊಂದೇ, ನೀವು ಹೇಳಿದ್ದನ್ನು ಮನೆಯವರು ಒಪ್ಪದಿದ್ದರೆ, ನಿಮ್ಮ ಪರವಾಗಿ ಅವರನ್ನು ಒಪ್ಪಿಸುವವರ ನೆರವು ಪಡೆಯಿರಿ. ನಿಮ್ಮ ಪಕ್ಷನ್ನು ಬಿಟ್ಟು ಕೊಡಬೇಡಿ. ಬಲವಂತದ ಒತ್ತಾಯಕ್ಕೆ ಮಣಿಯದಿರಿ. ನನ್ನ ಮಾತು ದಯವಿಟ್ಟು ಕೇಳಿಸಿಕೊಳ್ಳಿ, ನನ್ನ ಕನಸು, ಬಯಕೆ, ಹಕ್ಕು ನೆರವೇರಿಸಿ ಕೊಡಿ ಎಂದು ವಾದಿಸಿ. ನೀವು ಓದುವ ಮುಗಿಸಿ ಕೆಲಸಕ್ಕೆ ಸೇರಿದಾಗಲೂ, ನಿಮ್ಮ ಹಣ ನೀವೇ ಮ್ಯಾನೇಜ್ ಮಾಡಿ. ಎಷ್ಟೋ ಮನೆಗಳಲ್ಲಿ ಹೆಣ್ಣುಮಕ್ಕಳ ತಂದೆ, ಪತಿ, ಅಣ್ಣತಮ್ಮಂದಿರೇ ಅವರ ಆರ್ಥಿಕ ಸಂಗತಿಗಳ ಹೊರೆ ಹೊರುತ್ತಾರೆ. ನಿಮ್ಮದು 1,000/ ರೂ.ಗಳ ಸ್ಟಾರ್ಟ್ ಅಪ್ ಆದರೂ ಸರಿ, ನಿಮ್ಮ ಹಕ್ಕು ನಿಮ್ಮ ಕೈಲಿರಲಿ!
ಆರ್ಥಿಕ ಸುಭದ್ರತೆ ಬಗ್ಗೆ ತಿಳಿದುಕೊಳ್ಳುತ್ತಾ, ಎಲ್ಲದರಲ್ಲೂ ಸ್ವಲ್ಪ ಸ್ವಲ್ಪವಾಗಿಯೇ ಇನ್ ವೆಸ್ಟ್ ಮಾಡಿ. ಅದು ಈಕ್ವಿಟಿ, ಗೋಲ್ಡ್ ಇತ್ಯಾದಿ ಯಾವುದೇ ಇರಲಿ. ಸಾಮಾನ್ಯವಾಗಿ ಹೆಂಗಸರು 2 ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಹೊಂದಿರುತ್ತಾರೆ ಎಂದು ಗಮನಿಸಿದ್ದೇನೆ ಡೇ ಟ್ರೇಡಿಂಗ್. ಹೀಗಾಗಿ ನಿಮ್ಮೆಲ್ಲ ಹಣವನ್ನೂ ಇಷ್ಟರಲ್ಲೇ ಇನ್ ವೆಸ್ಟ್ ಮಾಡುವುದೂ ಸರಿಯಲ್ಲ. ಹೀಗಾಗಿ ಎಲ್ಲದರಲ್ಲೂ ತುಸುತುಸು ಹೂಡಿಕೆ ಮಾಡುತ್ತಾ, ನಿಮ್ಮ ಹಣದ ಕುರಿತು ನೀವೇ ಮ್ಯಾನೇಜ್ ಮಾಡಿ.





