ಎಜುಕೇಶನ್‌ ಅಂದ್ರೆ ಕೇವಲ ಶಾಲಾ ಕಾಲೇಜುಗಳಿಂದ ಡಿಗ್ರಿ ಯಾವ ಪುಸ್ತಕೀಯ ಜ್ಞಾನ ಪಡೆಯುವುದಷ್ಟೇ ಅಲ್ಲ, ಬದಲಿಗೆ ಉನ್ನತ ಮಾಹಿತಿಗಳಿಂದ ಯೋಚನೆ, ಚಿಂತನೆ, ಅರ್ಥೈಸಿಕೊಳ್ಳುವಿಕೆ, ಆಯ್ಕೆ, ಜೀವನ ಶೈಲಿಯ ವಿಧಾನ ಇತ್ಯಾದಿ ಬದಲಾಯಿಸುವ ತಾಕತ್ತು ಹೊಂದಿರುವುದಾಗಿದೆ. ನಮ್ಮ ದೈನಂದಿನ ನಿರ್ಧಾರಗಳಿಂದ ಹಿಡಿದು, ದೊಡ್ಡ ಸಾಮಾಜಿಕ ಬದಲಾವಣೆಗಳವರೆಗೂ ಎಜುಕೇಶನ್‌ ಎಂಬುದು ಎಷ್ಟೋ ಮಟ್ಟಗಳಲ್ಲಿ ಇದೆ. ಎಜುಕೇಶನ್‌ ಇದೆ ಎಂದರೆ ನಿಮ್ಮ ಜೀವನದಲ್ಲಿ ಎಲ್ಲ ಸಾಧ್ಯ. ಜೀವನದ ಸಂಘರ್ಷಗಳಲ್ಲಿ ವಿಜಯ ನಿಶ್ಚಿತ! ಏಕೆಂದರೆ, ಎಜುಕೇಶನ್‌ ಎಂಬ ಆಯುಧದಿಂದ ನೀವು ನಿಮ್ಮ ಜೀವನದ ಪ್ರತಿ ಹೂಡಿಕೆಯನ್ನೂ ಸಂಭಾಳಿಸಬಹುದು, ಹೆಚ್ಚಿಸಬಹುದು ಹಾಗೂ ಮುಂದಿನ ಪೀಳಿಗೆಗೆ ಹಂಚಬಹುದು. ಸೂಕ್ತ ಜ್ಞಾನ ಹಾಗೂ ಉನ್ನತ ಶಿಕ್ಷಣ ಮಾತ್ರವೇ ನಿಮ್ಮ ಬುದ್ಧಿವಂತಿಕೆಗೆ ಸಾಣೆ ಹಿಡಿಯಬಲ್ಲದು, ಯೋಚಿಸಿ, ವಿಚಾರಿಸಿ, ಅರಿಯುವ ಶಕ್ತಿ ನೀಡಬಲ್ಲದು. ಕತ್ತಲೆ ದಾರಿಯಲ್ಲಿ ಬೆಳಕಾಗಿ ನಿಮ್ಮನ್ನು ಗುರಿ ತಲುಪಿಸುತ್ತದೆ!

ಶಿಕ್ಷಣದ ಕಾರಣದಿಂದ ನಾವು ಗಾಳಿಮಾತು, ಭ್ರಮೆ ತುಂಬು ಜಾಹೀರಾತು ಯಾವ ಸುಳ್ಳು ಭರವಸೆಗಳಿಂದ ದೂರವಾಗಿ ನಮ್ಮ ಕೆರಿಯರ್‌, ಆರೋಗ್ಯ, ಹಣ, ಸಂಬಂಧಗಳ ಕುರಿತಾಗಿ ಉತ್ತಮ ನಿರ್ಧಾರಗಳನ್ನು ತಳೆಯಬಹುದಾಗಿದೆ. ಶಿಕ್ಷಣ ಇದ್ದರೆ ಆತ್ಮವಿಶ್ವಾಸ ಹೆಚ್ಚುತ್ತದೆ. ಈ ಭರವಸೆಯೇ ನಮ್ಮನ್ನು ರಿಸ್ಕ್ ತೆಗೆದುಕೊಳ್ಳಲು, ನೌಕರಿ ಬದಲಾಯಿಸಲು, ನಮ್ಮದೇ ಬಿಸ್‌ ನೆಸ್‌ಶುರು ಮಾಡಲು, ಸಾಹಸದ ಪ್ರೇರಣೆ ನೀಡುತ್ತದೆ. ಶಿಕ್ಷಣ ಕೇವಲ `ಡಿಗ್ರಿ’ ಗಳಿಸುವುದೊಂದೇ ಅಲ್ಲ, ಬದಲಿಗೆ ಸಮಸ್ಯೆ ನಿವಾರಿಸಲು, ನಮ್ಮ ಮಾತನ್ನು ನಡೆಸಲು, ಸತ್ಯಾಸತ್ಯತೆಗಳ ಬಗ್ಗೆ ತಿಳಿಯಲು ಜ್ಞಾನ ತುಂಬುತ್ತದೆ.

ಸುಶಿಕ್ಷಿತ ತಾಯಿತಂದೆ ಮಾತ್ರ ಮಕ್ಕಳ ಶಿಕ್ಷಣದ ಕುರಿತಾಗಿ ಸರಿಯಾದ ಮಾರ್ಗದರ್ಶನ ನೀಡಬಲ್ಲರು. ಅವರು ಮಕ್ಕಳ ಆರೋಗ್ಯ, ಪೌಷ್ಟಿಕತೆಗಳ ಕುರಿತು ಸೂಕ್ತ ಆಯ್ಕೆ ಮಾಡಬಲ್ಲರು. ಜೊತೆಗೆ ಲಿಂಗಭೇದವಿಲ್ಲದೆ ಗಂಡುಹೆಣ್ಣುಮಕ್ಕಳನ್ನು ಸಮಾನವಾಗಿ ಕಾಣುವ ಸಮಾಜ ನಿರ್ಮಿಸಬಲ್ಲರು. ಅವರು ತಮ್ಮ ಮಕ್ಕಳನ್ನು ವಿಭಿನ್ನ ತರಹದ ಜನರ ಭೇದಭಾವ ನೀತಿಯನ್ನು ಮಾನಸಿಕವಾಗಿ ದೂರ ಮಾಡಬಲ್ಲರು. ಶಿಕ್ಷಣವೆಂದೇ ಜನರಿಗೆ ವೋಟ್‌, ಕಾನೂನು, ಹಕ್ಕುಗಳ ಕುರಿತು ಸ್ಪಷ್ಟ ಚಿತ್ರಣ ನೀಡಬಲ್ಲದು.

ಶಿಕ್ಷಣದಿಂದ ವೈಯಕ್ತಿಕ ಸ್ವಾತಂತ್ರ್ಯ, ಕುಟುಂಬದ ಕ್ಷೇಮ, ಸಮಾಜದ ಪ್ರಗತಿ, ದೇಶದ ಅಭಿವೃದ್ಧಿ ಸಾಧ್ಯ. ಉನ್ನತಿ ಹಾಗೂ ಸಮೃದ್ಧಿಗೆ ಶಿಕ್ಷಣ ಪರ್ಯಾಯವಾಗಿದೆ. ಈ ಕಾರಣದಿಂದಲೇ ಗೃಹಶೋಭಾ ಈ ಸಂಚಿಕೆಯಲ್ಲಿ ಶೈಕ್ಷಣಿಕ ಲೇಖನಗಳಿಗೆ ಮಹತ್ವ ನೀಡಿದೆ. ಇದರಿಂದ ಓದುಗರು ಹೆಚ್ಚಿನ ಲಾಭ ಪಡೆಯಬಹುದು. ತಮಗೂ, ತಮ್ಮ ಮಕ್ಕಳಿಗೂ ಸೂಕ್ತ ನಿರ್ಧಾರ ಕೈಗೊಳ್ಳಲು ಸಹಾಯಕ ಆಗಲಿದೆ. ಹೀಗಾಗಿ ಈ ಸಂಚಿಕೆ ಪೇರೆಂಟ್ಸ್ ಹಾಗೂ ಯುವಜನತೆ ಇಬ್ಬರಿಗೂ ಆಗುವಂತೆ ರೂಪುಗೊಂಡಿದೆ.

ಪ್ರಸ್ತುತ ದಿನಗಳಲ್ಲಿ ಸುಶಿಕ್ಷಿತ ಯುವಜನತೆಯ ಕೆರಿಯರ್‌ ಗೆ ವಿಪುಲ ಅವಕಾಶಗಳಿವೆ.

ಮುಗಿಸಿದ ನಂತರ ಮುಂದೇನು ಎಂಬುದರ ನಿರ್ಧಾರ ಕೈಗೊಳ್ಳುವುದು ಸುಲಭವಲ್ಲ. ರೆಗ್ಯುಲರ್‌ ಕೋರ್ಸ್‌ ಗಳು ಒಂದು ಕಡೆ ಇರಲಿ, ಪ್ರೊಫೆಶನಲ್ ಕೋರ್ಸ್‌ ಗಳು ಸಹ ದಂಡಿಯಾಗಿವೆ. ಯಾವ ಕೋರ್ಸ್‌ ಗೆ ಸೇರಿದರೆ ಭವಿಷ್ಯತ್ತಿಗೆ ಉತ್ತಮ ರಿಟರ್ನ್ಸ್ ಸಾಧ್ಯ ಎಂಬುದನ್ನು ಒಂದಲ್ಲ 4-5 ಸಲ ಯೋಚಿಸಬೇಕು. ಯಾವುದರಿಂದ ಪ್ಲೇಸ್ಮೆಂಟ್‌ ಉತ್ತಮ ಆದೀತು ಎಂಬುದನ್ನೆಲ್ಲ ಯೋಚಿಸಬೇಕು. ಏನು ಮಾಡಿದರೆ ಲೈಫ್‌ ಸೆಕ್ಯೂರ್‌ ಆಗುತ್ತದೆ ಎಂಬುದು ಬಲು ಮುಖ್ಯ. ಇದರ ಜೊತೆಗೆ ಯುವಜನತೆ ಆಯಾ ಕೋರ್ಸ್‌ ನಲ್ಲಿ ಆಸಕ್ತಿ ವಹಿಸಬೇಕಾದುದು ಅತ್ಯಗತ್ಯ. ಯಾವುದರಲ್ಲಿ ಆಸಕ್ತಿ ಇದೆಯೋ, ಆ ಫೀಲ್ಡ್ ನಲ್ಲಿ ಯಾವ ತರಹದ ಕೋರ್ಸ್‌ ಯಶಸ್ಸು ನೀಡಲಿದೆ ಎಂಬುದನ್ನು ಬಲು ಎಚ್ಚರಿಕೆಯಿಂದ ನಿರ್ಧರಿಸಬೇಕಾಗುತ್ತದೆ.

ಈ ಏಪ್ರಿಲ್ ‌ಸಂಚಿಕೆಯಲ್ಲಿ ಸ್ಪೆಷಲ್ ಏನುಂಟು?

ಎಜುಕೇಶನ್‌ ಸೀರೀಸ್‌ ನ ಈ ಏಪ್ರಿಲ್ ‌ಸಂಚಿಕೆಯಲ್ಲಿ ನಿಮಗೆ ಶಿಕ್ಷಣದ ಕುರಿತಾಗಿ ವಿಸ್ತೃತ ರೋಚಕ ಮಾಹಿತಿ ಸಿಗಲಿದೆ :

ಹಲವು ವಿವಿಧ ಕ್ಷೇತ್ರಗಳ ವಿಶಿಷ್ಟ ವ್ಯಕ್ತಿಗಳ ಸಂದರ್ಶನ ಇರುತ್ತದೆ. ದೇವೀನಾ ಮೆಹ್ರಾ ಇನ್‌ ವೆಸ್ಟಿಂಗ್‌ಬ್ಯಾಂಕಿಂಗ್‌ ಸೆಕ್ಟರ್‌ ನಿಂದ, ನಿಗಾರ್‌ ಶಾಜಿ ಸ್ಪೇಸ್‌ ಸೈನ್ಸ್ ಸೆಕ್ಟರ್‌ ನಿಂದ, ಮಂಜರಿ ಜಾರೂಹಾರ್‌ ಸಿವಿಲ್ ‌ಸರ್ವೀಸಸ್‌ ಸೆಕ್ಟರ್‌ ನಿಂದ, ಅಮೀರಾ ಶಾಹ್‌ ಹೆಲ್ತ್ ಕೇರ್‌ ಸೆಕ್ಟರ್‌ ನಿಂದ ಹಾಗೂ ಋತು ಲಾಲ್ ‌ಮ್ಯಾನೇಜ್‌ ಮೆಂಟ್‌ ಸೆಕ್ಟರ್‌ ನಿಂದ ತಮ್ಮ ವಿಶೇಷ ಸಂದೇಶಗಳನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ.

ಇದರ ಜೊತೆ ಜೊತೆಯಲ್ಲೇ ಪ್ರಕಟಿತ ಲೇಖನಗಳ ಸ್ಕಿಲ್ಸ್ ‌ಬೇಸ್ಡ್ ಕೋರ್ಸೆಸ್‌ ಗೆ ಸಂಬಂಧಿಸಿದ ಮಾಹಿತಿ ಹಾಗೂ ಎಂಟರ್‌ಟೇನ್ಮೆಂಟ್‌ ಫೀಲ್ಡ್ ನಲ್ಲಿ ಏನೇನು ಕೆರಿಯರ್‌ ಆಪ್ಶನ್ಸ್ ಇತ್ಯಾದಿ ವಿಷಯಗಳ ಕುರಿತಾಗಿಯೂ ಸ್ಪಷ್ಟ ಮಾಹಿತಿ ಇದೆ.

ದೇವೀನಾ ಮೆಹ್ರಾ ಇನ್‌ ವೆಸ್ಟಿಂಗ್‌ಬ್ಯಾಂಕಿಂಗ್‌ ನಿಗಾರ್‌ ಶಾಜಿ ಸ್ಪೇಸ್‌ ಸೈನ್ಸ್ ಮಂಜರಿ ಜಾರೂಹಾರ್‌ ಸಿವಿಲ್ ‌ಸರ್ವೀಸಸ್ ಅಮೀರಾ ಶಾಹ್‌ ಹೆಲ್ತ್ ಕೇರ್‌ ಋತು ಲಾಲ್ ‌ಮ್ಯಾನೇಜ್‌ ಮೆಂಟ್‌ ಈ ಏಪ್ರಿಲ್ ‌ಸಂಚಿಕೆಯ ಎಜುಕೇಶನ್‌ ಸೀರೀಸ್‌ ಕುರಿತು ಎಜುಕೇಶನ್‌ ಸೀರೀಸ್‌ ನ ಈ ಏಪ್ರಿಲ್ ‌ಸಂಚಿಕೆಯಲ್ಲಿ ಗೃಹಶೋಭಾ ಓದುಗರಿಗಾಗಿ ಎಜುಕೇಶನ್‌ ಜರ್ನಿಯ ಕುರಿತಾಗಿ, ಶಿಕ್ಷಣ ಹಾಗೂ ಕೆರಿಯರ್‌ ನ ಆಯ್ಕೆಗೆ ಸಂಬಂಧಿಸಿದಂತೆ ಹಲವು ಮಹತ್ವಪೂರ್ಣ ಮಾಹಿತಿಗಳನ್ನು ಒದಗಿಸಿದೆ.

ಬೇರೆ ಬೇರೆ ಕ್ಷೇತ್ರಗಳಿಗೆ ಸಂಬಂಧಪಟ್ಟ ಫೀಲ್ಡ್ ಎಕ್ಸ್ ಪರ್ಟ್ಸ್ ಜೊತೆ ಸಂಪೂರ್ಣ ವಿವರಗಳನ್ನು ಒಳಗೊಂಡ ಮಾಹಿತಿಯನ್ನು ವಿದ್ಯಾರ್ಥಿಗಳು ತಮ್ಮ ಮುಂದಿನ ಉನ್ನತ ಶಿಕ್ಷಣದ ಆಯ್ಕೆ ಮಾಡಿಕೊಳ್ಳಲು ಯಾವ ಕೆರಿಯರ್‌ ಸೂಕ್ತ ಎಂದು ತರ್ಕಬದ್ಧವಾಗಿ ಚಿಂತಿಸಿ ನಿರ್ಧರಿಸಲು ಅನುಕೂಲಾಗುವಂತೆ ಹಲವು ವಿಶ್ಲೇಷಣಾತ್ಮಕ, ಗಂಭೀರವಾದ, ಮಾಹಿತಿಪೂರ್ವಕ ಲೇಖನಗಳನ್ನು ಒದಗಿಸಲಾಗಿದೆ.

`ಗ್ರಾಜುಯೇಟ್‌’ ಆದ ಮಾತ್ರಕ್ಕೆ ಎಲ್ಲವೂ ಸಿಕ್ಕಂತಲ್ಲ ಎಂಬ ಸವಿವರಗಳನ್ನು ಒಳಗೊಂಡ ಮುಖ್ಯ ವೈಚಾರಿಕ ಲೇಖನವಿದ್ದು, ಜೊತೆ ಜೊತೆಗೆ ಪ್ರೊಫೆಶನಲ್ ಡಿಗ್ರಿ ಕೋಚಿಂಗ್‌ ಕ್ಲಾಸೆಸ್‌ ಆಯ್ಕೆ ಮುಂತಾದ ಮಾಹಿತಿಪೂರ್ವಕ ಲೇಖನಗಳು ವಿದ್ಯಾರ್ಥಿಗಳಿಗೆ ಬಲು ಸಹಕಾರಿ. ಇದರಲ್ಲಿ ಪ್ರಾಕ್ಟಿಕಲ್ ನಾಲೆಜ್‌ ಹಾಗೂ ಸ್ಮಾರ್ಟ್‌ ಕೆರಿಯರ್‌ ನ ಕುರಿತಾಗಿ ಅನೇಕ ವಿವರಣೆಗಳಿದ್ದು, ಪೋಷಕರಿಗೂ ಎಷ್ಟೋ ಸಲಹೆಗಳುಂಟು. ಇಂದಿನ ಜೆನ್‌ Z ವಿದ್ಯಾರ್ಥಿಗಳು ಪ್ರೊಫೆಶನಲ್ ಕಾಲೇಜಿನಲ್ಲಿ ದಾಖಲಾತಿ ಪಡೆಯುವುದು ಹೇಗೆ, ಕೇವಲ ಪದವೀಧರರಾದ ಮಾತ್ರಕ್ಕೆ ವಿದ್ಯಾಭ್ಯಾಸ ಮುಗಿಯಲಿಲ್ಲ, ಪ್ರೊಫೆಶನಲ್ ಡಿಗ್ರಿ ಹಾಗೂ ಕೋರ್ಸ್ ಗಳ ಡಿಮ್ಯಾಂಡ್‌ ಏನೇನು ಇತ್ಯಾದಿ ಸಕಲ ವಿವರಗಳನ್ನೂ ಒಳಗೊಂಡಿದೆ.

ಎಜುಕೇಶನ್‌ ಸೀರೀಸ್‌ ಹೇಗನ್ನಿಸಿತು?

ಈ ಸಂಚಿಕೆಯಲ್ಲಿ ಪ್ರಕಟಗೊಂಡ ಎಜುಕೇಶನ್‌ಸೀರೀಸ್‌ ನಿಮಗೆ ಹೇಗನ್ನಿಸಿತು? ಇದರಲ್ಲಿ ಪ್ರಕಟಗೊಂಡ ಎಕ್ಸ್ ಪರ್ಟ್ಸ್ ಜೊತೆಗಿನ ಮಾತುಕಥೆ ಹಾಗೂ ಮಾಹಿತಿಗಳ ಕುರಿತ ಲೇಖನ ಇತ್ಯಾದಿಗಳ ಕುರಿತು ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ ನಮ್ಮ ವೆಬ್‌ ಸೈಟ್‌ ವಿಸಿಟ್‌ ಮಾಡಿ : ……………..

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ