ಐಡಿಯಲ್ ಕಪಲ್ ಆಗಲು ಈ ವಿಶೇಷ ಟಿಪ್ಸ್ ನಿಮಗೆ ಬಹಳ ಉಪಯೋಗವಾಗುತ್ತದೆ. ಯಾವ ರೀತಿ ನೀವು ಆದರ್ಶ ಪತಿಪತ್ನಿ ಆಗಬಹುದು ಎಂದು ತಿಳಿದುಕೊಳ್ಳೋಣವೇ…….?
ಇಂದಿನ ಜೀನಶೈಲಿಯಲ್ಲಿ ಮನೆ ಹಾಗೂ ಆಫೀಸಿನ ಹೆಚ್ಚುತ್ತಿರುವ ಜವಾಬ್ದಾರಿಗಳನ್ನು ನಿಭಾಯಿಸುವುದು ಸುಲಭ ಅನ್ನಿಸಿದರೂ ವಾಸ್ತವದಲ್ಲಿ ಸುಲಭವಲ್ಲ. ಸ್ವಸ್ಥ ಮಾನಸಿಕತೆಯ ಅಭಾವದಲ್ಲಿ ಈ ಸಂಬಂಧವನ್ನು ನಿಭಾಯಿಸುವಾಗ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಬನ್ನಿ. ಬಲಹೀನವಾಗುತ್ತಿರುವ ಸಂಬಂಧಗಳನ್ನು ಇನ್ನಷ್ಟು ಬಲಪ್ರದಗೊಳಿಸುವ ವಿಷಯಗಳ ಬಗ್ಗೆ ಅಧ್ಯಯನ ಮಾಡೋಣ.
ಮದುವೆಯ ಮೊದಲ 5 ವರ್ಷಗಳು
ಪತಿಪತ್ನಿಗೆ ಮೊದಲ 5 ವರ್ಷ ಬಹಳ ಪ್ರಮುಖವಾಗಿರುತ್ತದೆ. ಆರಂಭದ 5 ವರ್ಷಗಳಲ್ಲಿ ಮಾಡುವ ತಪ್ಪುಗಳು ಹೀಗಿವೆ?:
– ನಿಮ್ಮನ್ನು ಬದಲಿಸಿಕೊಳ್ಳಲು ಇಚ್ಛೆಯಿಲ್ಲದೆ, ಸಂಗಾತಿಯನ್ನು ಬದಲಾಗಲಿ ಎಂದು ಅಪೇಕ್ಷಿಸುವುದು.
– ಜೀವನ ಸಂಗಾತಿಯಿಂದ ಅಗತ್ಯಕ್ಕಿಂತ ಹೆಚ್ಚು ಅಪೇಕ್ಷೆಗಳನ್ನು ಇಟ್ಟುಕೊಳ್ಳುವುದು.
– ಸಣ್ಣಪುಟ್ಟ ವಿಷಯಗಳನ್ನೂ ದೊಡ್ಡ ಸಂಗತಿಗಳನ್ನಾಗಿ ಮಾಡಿ ಜಗಳವಾಡುವುದು. ತಾವೂ ನೆಮ್ಮದಿಯಾಗಿರುವುದಿಲ್ಲ. ಬೇರೆಯವರನ್ನೂ ನೆಮ್ಮದಿಯಾಗಿರಲು ಬಿಡುವುದಿಲ್ಲ.
– ಪರಸ್ಪರರ ದೋಷಗಳನ್ನು ಹುಡುಕಿ ರಂಪಾಟ, ರಾದ್ಧಾಂತ ಮಾಡುವುದು.ಈ ಕಾರಣಗಳಿಂದ ಪತಿಪತ್ನಿಯರಲ್ಲಿ ಅಂತರ ಹೆಚ್ಚುತ್ತಲೇ ಇರುತ್ತದೆ. ಸಮಯಕ್ಕೆ ಸರಿಯಾಗಿ ತಿಳಿವಳಿಕೆಯಿಂದ ಪತಿಪತ್ನಿ, ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳದಿದ್ದರೆ, ವಿಚ್ಛೇದನದ ಸಂಭಾವ್ಯತೆ ಹೆಚ್ಚು. ಆದ್ದರಿಂದ ಪತಿಪತ್ನಿಯರ ಸಂಬಂಧಗಳು ಬಹಳ ನಾಜೂಕಾಗಿರುತ್ತದೆ ಎಂದು ತಿಳಿದುಕೊಳ್ಳಬೇಕು ಅನ್ನುವ ಪ್ರಯಾಸದಿಂದ, ಆರೋಗ್ಯಕರ ಮಾನಸಿಕತೆಯೊಂದಿಗೆ ಸಂಭಾಳಿಸುವುದು ಅಗತ್ಯ.
ತಪ್ಪುಗಳನ್ನು ಒಪ್ಪಿಕೊಳ್ಳಿ
ಎಲ್ಲಕ್ಕಿಂತ ವಿಚಿತ್ರ ವಿಷಯವೇನೆಂದರೆ ಪತಿಪತ್ನಿಯರು ತಮ್ಮ ತಪ್ಪುಗಳನ್ನು ಒಪ್ಪಿಕೊಳ್ಳುವುದಿಲ್ಲ. ಆದರೆ ಜೀವನಕ್ಕೆ ಸಂಬಂಧಿಸಿದ ಈ ತಪ್ಪುಗಳು ಜೀವನವನ್ನು ದೊಡ್ಡ ಸೀಮೆಯವರೆಗೆ ಪ್ರಭಾವಿತಗೊಳಿಸುತ್ತದೆ. ಇವನ್ನು ಚಿಕ್ಕ ತಪ್ಪುಗಳೆಂದುಕೊಳ್ಳುವುದು ಮೂಲರೂಪವಾಗಿ ತಪ್ಪೇ. ಸಂಬಂಧವನ್ನು ಯಾವುದೇ ಪರಿಸ್ಥಿತಿಯಲ್ಲೂ ಒಡೆಯುವುದರಿಂದ ರಕ್ಷಿಸಿಕೊಳ್ಳುವ ಜವಾಬ್ದಾರಿ ಪತಿ ಮತ್ತು ಪತ್ನಿಯರದ್ದಾಗಿದೆ. ಪತಿಪತ್ನಿಯರು ತಪ್ಪು ಮಾಡಿದ್ದರೆ, ಅದಕ್ಕೆ ಪರಿಹಾರವನ್ನೂ ಅವರಿಬ್ಬರೇ ಕಂಡುಕೊಳ್ಳಬೇಕು.
ಮನಬಿಚ್ಚಿ ಹೊಗಳಿ
ರಿಲೇಷನ್ಶಿಪ್ ಎಕ್ಸ್ ಪರ್ಟ್ಗಳು ಹೇಳುವುದೇನೆಂದರೆ ಪರಸ್ಪರ ಹೊಗಳಿಕೆಯ ಶಬ್ದಗಳು ಸಂಗಾತಿಗಳನ್ನು ಹತ್ತಿರಕ್ಕೆ ತರುತ್ತವೆ. ಒಡೆಯುವ ಹಂತಕ್ಕೆ ಬಂದಿರುವ ಸಂಬಂಧಗಳಲ್ಲಿ ಮತ್ತೆ ತಾಜಾತನ ತುಂಬುವ ಸಂಭಾವ್ಯತೆ ಇರುತ್ತದೆ. ವೈವಾಹಿಕ ಜೀವನದ ಯಶಸ್ಸು ಪತಿಪತ್ನಿಯರು ಪರಸ್ಪರ ಪ್ರಶಂಸೆ ಮಾಡುವುದರಿಂದ ಜೀವನವನ್ನು ಆನಂದಪೂರ್ಣವಾಗಿ ಮಾಡುತ್ತದೆ.
ರಿಲೇಷನ್ಶಿಪ್ ಟಿಪ್ಸ್
ಸ್ಟೀವ್ ಕಪೂರ್ ತನ್ನ ಪುಸ್ತಕದಲ್ಲಿ ಹೆಲ್ದಿ ರಿಲೇಷನ್ಶಿಪ್ಗೆ ಟಿಪ್ಸ್ ಕೊಟ್ಟಿದ್ದಾರೆ :
– ಪತಿಪತ್ನಿಯರು ಪರಸ್ಪರ ಡ್ರೆಸ್ ಸೆನ್ಸ್ ನ್ನು ಪ್ರಶಂಸಿಸಬೇಕು. ಒಳ್ಳೆಯ ವಿಷಯಗಳಿಗಾಗಿ ಹೊಗಳಲು ಜಿಪುಣತನ ಮಾಡಬಾರದು.
– ಪರಸ್ಪರ ಕಾಂಪ್ಲಿಮೆಂಟ್ಸ್ ಕೊಡಿ. ವಿಶ್ವಾಸದ ಆಧಾರದಲ್ಲಿ ಸಂಬಂಧಗಳಲ್ಲಿ ಸಿಹಿ ತುಂಬಿ.
– ಪತಿಪತ್ನಿಯರಲ್ಲಿ ಯಾರಾದರೊಬ್ಬರು ಇನ್ನೊಬ್ಬರ ಮಾತನ್ನು ಕೇಳಲು ಇಷ್ಟವಿಲ್ಲದಿದ್ದರೆ ಅದಕ್ಕೆ ಕಾರಣ ತಿಳಿಯಲು ಪ್ರಯತ್ನಿಸಿ. ಅವರ ಜೊತೆ ವಾದ ಮಾಡಿ ಅವರಿಗೂ ಬೇಸರ ತರಿಸಿ, ನೀವು ಬೇಸರ ಮಾಡಿಕೊಳ್ಳಬೇಡಿ.
– ಇನ್ನೊಬ್ಬರ ಭಾವನೆಗಳೊಂದಿಗೆ ಆಟವಾಡಬೇಡಿ. ಒಬ್ಬರು ಇನ್ನೊಬ್ಬರನ್ನು ಬ್ಲ್ಯಾಕ್ಮೇಲ್ ಮಾಡುವುದು ಅಥವಾ ದೌರ್ಬಲ್ಯದ ಬಗ್ಗೆ ಫೋಕಸ್ ಮಾಡುವ ಅಭ್ಯಾಸ ಆತ್ಮಘಾತುಕವಾಗಿರುತ್ತದೆ. ಭಾವನಾತ್ಮಕ ಮಟ್ಟದಲ್ಲಿ ಪರಸ್ಪರ ಹೊಂದಾಣಿಕೆಗಾಗಿ ಸಮಯ ತೆಗೆದು ಅಗತ್ಯವಾಗಿ ಸುತ್ತಾಡಿ. ನಿಮ್ಮ ಪ್ರೀತಿಯ ಪ್ರದರ್ಶನನ್ನು ಜನರ ಮುಂದೆ ಮರೆತೂ ಸಹ ಮಾಡದಿರಿ.
– ವಾದ ವಿವಾದಗಳು ಒಳ್ಳೆಯ ಅಭ್ಯಾಸ ಅಲ್ಲ. ಅಂತಹ ಸಂದರ್ಭ ಬಂದಾಗ ನಿಮ್ಮ ಸಂವಾದ ನಿಲ್ಲಿಸಿ ಒಳ್ಳೆಯ ತಿರುವು ಕೊಡುತ್ತಾ ನಿಮ್ಮ ಸಂಬಂಧಗಳನ್ನು ಉಳಿಸಿ ಮತ್ತು ಬೆಳೆಸಿ.
ರಿಲೇಷನ್ಶಿಪ್ನ ಸಮಸ್ಯೆಗಳ ಹಿನ್ನೆಲೆ
ಬನ್ನಿ, ರಿಲೇಷನ್ಶಿಪ್ನ ಸಮಸ್ಯೆಗಳನ್ನು ನೀತಿಪೂರ್ವಕವಾಗಿ ನಿಭಾಯಿಸುವ ಬಗ್ಗೆ ತಿಳಿಯೋಣ.
– ನೀವು ನಿಮ್ಮ ಸಂಗಾತಿಯನ್ನು ಬಹಳ ಪ್ರೀತಿಸುತ್ತೀರಿ. ಆದರೆ ಬ್ಯಾಲೆನ್ಸ್ ಮಾಡುವ ವಿಷಯ ಬಂದಾಗ ತೆಪ್ಪಗೆ ಸಹಿಸಿಕೊಳ್ಳುತ್ತೀರಿ. ಮುಕ್ತವಾಗಿ ಅದನ್ನು ಪರಸ್ಪರ ಮಾತಾಡಿಕೊಳ್ಳುವುದಿಲ್ಲ. ಮಾತಾಡದೇ ಇರುವುದು ಬಹಳ ದೊಡ್ಡ ಬಲಹೀನತೆಯಾಗುತ್ತದೆ. ನಿಮ್ಮ ಕಡೆಯಿಂದ ಸ್ಪಷ್ಟವಾಗಿ ಸಂಗಾತಿಗೆ ಸಹಕಾರ ಕೊಟ್ಟು ವೈವಾಹಿಕ ಜೀವನವನ್ನು ಉತ್ತಮಗೊಳಿಸುವ ಬಗ್ಗೆ ಯೋಚಿಸಿ.
– ರಿಲೇಷನ್ಶಿಪ್ನ ಸಂಪೂರ್ಣ ಆಧಾರ, ಕ್ರಿಯೆ ಮತ್ತು ಪ್ರತಿಕ್ರಿಯೆ ಆಗಿದೆ. ನಿಮ್ಮ ಪ್ರತಿಕ್ರಿಯೆ ವ್ಯಕ್ತಪಡಿಸಲು ಅವಸರಿಸಬೇಡಿ. ಚೆನ್ನಾಗಿ ಆಲೋಚಿಸಿ ತಿಳಿವಳಿಕೆಯಿಂದ ಸರಿಯಾದ ಪ್ರತಿಕ್ರಿಯೆ ನೀಡಿ. ಒಂದೇ ಒಂದು ಮಾತುಕಥೆಯಿಂದ ಯಾವಾಗಲೂ ಸಮಸ್ಯೆ ಪರಿಹಾರವಾಗುತ್ತದೆ ಎಂದು ತಿಳಿಯಬೇಡಿ.
– ನಿಮ್ಮ ರಿಲೇಷನ್ಶಿಪ್ನ್ನು ಉತ್ತಮಗೊಳಿಸಲು ಪರಸ್ಪರರ ಸಲಹೆ ಕೇಳಿ. ಅವು ರಿಲೇಷನ್ಶಿಪ್ಗೆ ಅತ್ಯಂತ ಪರಿಣಾಮಕಾರಿಯೂ, ಉಪಯೋಗಿಯೂ ಆಗಿದೆ. ಈ ಕೆಲಸ ಧೈರ್ಯದಿಂದ ಸಮಸ್ಯೆಯನ್ನು ತೆರೆದ ಮನಸ್ಸಿನಿಂದ ಸ್ವೀಕರಿಸಿದ ನಂತರವೇ ಆಗುತ್ತದೆ.
– ಯಥಾರ್ಥವಾಗಿ ವಾದ ಮಾಡಬೇಡಿ. ಇತರರನ್ನು ಅದರ ಭಾಗವಾಗಿ ಮಾಡಿಕೊಳ್ಳಬೇಡಿ. ಕನಿಷ್ಠ ಶಬ್ದಗಳಿಂದ ಸಮಸ್ಯೆಯನ್ನು ವ್ಯಕ್ತಪಡಿಸಿ. ಪರಸ್ಪರ ಸೂಕ್ತ ಸಮಯ ನೀಡಿ. ನೀವು ತೆರೆದ ಮನಸ್ಸು ಮತ್ತು ಮೆದುಳಿನಿಂದ ಸಮಸ್ಯೆಯನ್ನು ನಿವಾರಿಸಲು ಜವಾಬ್ದಾರಿಯಿಂದ ಸಂಪೂರ್ಣ ಗಮನಕೊಟ್ಟು ಮಾಡುವಂಥ ವಾತಾವರಣ ನಿರ್ಮಿಸಿ.
– ಪ್ರತಿ ಸಮಸ್ಯೆ ಪರಿಹಾರಕ್ಕೆ ಪರಸ್ಪರರಿಗೆ ಪಾರ್ಟಿ, ಲಂಚ್, ಡಿನ್ನರ್ ಕೊಟ್ಟು ಆಗಿದ್ದೆಲ್ಲಾ ಒಳ್ಳೆಯದೇ ಆಯಿತು ಎಂಬ ಅನುಭವ ಉಂಟುಮಾಡಿ.
ಸಮಸ್ಯೆಗಳಿಗೆ ಪರಿಹಾರ ಹುಡುಕಿ
ಪತಿಪತ್ನಿಯರ ಸಂಬಂಧ ಮದುವೆಯ ನಂತರ ಆರಂಭದ ಹಂತದಲ್ಲಿದ್ದಾಗ ಎಲ್ಲ ಸಂಬಂಧಿಕರ ಅಪೇಕ್ಷೆಗಳು ವಾಸ್ತವಿಕ ಆಧಾರದಲ್ಲಿ ಇರುವುದಿಲ್ಲ. ಬಂಧುಗಳು ನೂತನ ಸೊಸೆ ಎಲ್ಲರನ್ನೂ ಮನಸಾರೆ ಗೌರವಿಸಲಿ. ತನ್ನ ಸೌಕರ್ಯಗಳನ್ನು ನಿರ್ಲಕ್ಷಿಸಿ ಅವರನ್ನು ಬಹಳ ವರ್ಷಗಳಿಂದ ತಿಳಿದಿದ್ದಾಳೆ ಎಂಬಂತೆ ಸಂಬಂಧಗಳನ್ನು ನಿರ್ಮಿಸಲಿ ಎಂದು ಅಪೇಕ್ಷಿಸುತ್ತಾರೆ. ಹೆಚ್ಚಿನ ಪತ್ನಿಯರು ತಮ್ಮ ಜನ್ಮದಿನ ಅಥವಾ ವಿವಾಹ ವಾರ್ಷಿಕೋತ್ಸವಕ್ಕೆ ಗಂಡ ಉಡುಗೊರೆಯಾಗಿ ಡೈಮಂಡ್ ಅಥವಾ ಗೋಲ್ಡ್ ಜ್ಯೂವೆಲರಿ, ಡಿಸೈನರ್ ಉಡುಪು ಇತ್ಯಾದಿ ಗಿಫ್ಟ್ ಕೊಡಲಿ ಎಂದು ಆಶಿಸುತ್ತಾರೆ. ಇಬ್ಬರೂ ಸಂಗಾತಿಗಳು ಜೀವನದಲ್ಲಿ ಪ್ರಾಕ್ಟಿಕಲ್ ಅಪ್ರೋಚ್ ತಮ್ಮದಾಗಿಸಿ ಕೊಂಡರೆ ಜೀವನವನ್ನು ಕೋಪ, ವ್ಯಂಗ್ಯ, ದೋಷಾರೋಪಣೆಗಳಿದ್ದರೂ ಉತ್ತಮವಾಗಿ ಕಳೆಯಬಹುದು. ಮನೋವಿಜ್ಞಾನಿ ಜಾನ್ ಗೋಟ್ಮನ್ ಹೀಗೆ ಹೇಳುತ್ತಾರೆ, ಪತಿಪತ್ನಿಯರ ಮಹತ್ವಪೂರ್ಣ ಕರ್ತವ್ಯವೆಂದರೆ ಅವರು ಪರಸ್ಪರರ ಮೇಲೆ ಕೆಸರು ಎರಚಬಾರದು. ಪರಸ್ಪರ ಪ್ರಶಂಸಿಸಬೇಕು. ಪರಸ್ಪರರಿಗಾಗಿ ಚಿಂತಿಸಿ. ಆದರೆ ರಚನಾತ್ಮಕ ಆಲೋಚನೆಯೊಂದಿಗೆ, ಅವರ ಪ್ರತಿ ನಿರ್ಧಾರ ಸಹಕಾರದ ಆಧಾರದ ಮೇಲೇ ಇರಬೇಕು.
ಪ್ರತಿ ಮದುವೆ ಸ್ಥಿತಿ ಹೇಗಿರುತ್ತದೆ ಎಂದರೆ ನೀವು ಒಳ್ಳೆಯದನ್ನು ಹುಡುಕಿದರೆ ನಿಮಗೆ ಎಲ್ಲ ಒಳ್ಳೆಯದೇ ಕಾಣಿಸುತ್ತದೆ. ಒಂದುವೇಳೆ ಪರಸ್ಪರರಲ್ಲಿ ನ್ಯೂನತೆಗಳನ್ನೇ ಹುಡುಕಿದರೆ ಬಹಳಷ್ಟು ನ್ಯೂನತೆಗಳೇ ಕಂಡುಬರುತ್ತವೆ. ಆದ್ದರಿಂದ ಒಳ್ಳೆಯದರ ಮೇಲೇ ಕೇಂದ್ರೀಕರಿಸಿ ಮತ್ತು ಪಾಸಿಟಿವ್ ದೃಷ್ಟಿ ನಿಮ್ಮದಾಗಿಸಿಕೊಳ್ಳಿ. ನಿಮ್ಮಲ್ಲಿ ಅಂತಹ ಎಲ್ಲ ಗುಣಗಳು ಮತ್ತು ಸಾಮರ್ಥ್ಯ ಇವೆ. ಅವು ನಿಮ್ಮನ್ನು `ವಿನ್ ವಿನ್’ ಸ್ಥಿತಿಯಲ್ಲಿ ಇಟ್ಟು, ವಿಜಯಿ ಎಂದು ಘೋಷಿಸುತ್ತವೆ. ಪ್ರೀತಿ ಕೇಳಿದರೆ ಸಿಗುವುದಿಲ್ಲ. ಪ್ರೀತಿ ಪಡೆಯಲು ಡಿಸರ್ವ್ ಆಗಿರಬೇಕು. ಬದುಕಿನ ಎಲ್ಲ ಕ್ಷಣಗಳು ಸಂತಸದಿಂದ ತೊಯ್ದು ಹೋಗುತ್ತವೆ. ಇದು ಪತಿಪತ್ನಿಯರ ಜನ್ಮಸಿದ್ಧ ಹಕ್ಕಾಗಿದೆ.
– ಡಾ. ಶಶಿಕಲಾ