ಐಡಿಯಲ್ ಕಪಲ್ ಆಗಲು ಈ ವಿಶೇಷ ಟಿಪ್ಸ್ ನಿಮಗೆ ಬಹಳ ಉಪಯೋಗವಾಗುತ್ತದೆ. ಯಾವ ರೀತಿ ನೀವು ಆದರ್ಶ ಪತಿಪತ್ನಿ ಆಗಬಹುದು ಎಂದು ತಿಳಿದುಕೊಳ್ಳೋಣವೇ…....?

ಇಂದಿನ ಜೀನಶೈಲಿಯಲ್ಲಿ ಮನೆ ಹಾಗೂ ಆಫೀಸಿನ ಹೆಚ್ಚುತ್ತಿರುವ ಜವಾಬ್ದಾರಿಗಳನ್ನು ನಿಭಾಯಿಸುವುದು ಸುಲಭ ಅನ್ನಿಸಿದರೂ ವಾಸ್ತವದಲ್ಲಿ ಸುಲಭವಲ್ಲ. ಸ್ವಸ್ಥ ಮಾನಸಿಕತೆಯ ಅಭಾವದಲ್ಲಿ ಈ ಸಂಬಂಧವನ್ನು ನಿಭಾಯಿಸುವಾಗ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಬನ್ನಿ. ಬಲಹೀನವಾಗುತ್ತಿರುವ ಸಂಬಂಧಗಳನ್ನು ಇನ್ನಷ್ಟು ಬಲಪ್ರದಗೊಳಿಸುವ ವಿಷಯಗಳ ಬಗ್ಗೆ ಅಧ್ಯಯನ ಮಾಡೋಣ.

ಮದುವೆಯ ಮೊದಲ 5 ವರ್ಷಗಳು

ಪತಿಪತ್ನಿಗೆ ಮೊದಲ 5 ವರ್ಷ ಬಹಳ ಪ್ರಮುಖವಾಗಿರುತ್ತದೆ. ಆರಂಭದ 5 ವರ್ಷಗಳಲ್ಲಿ ಮಾಡುವ ತಪ್ಪುಗಳು ಹೀಗಿವೆ?:

- ನಿಮ್ಮನ್ನು ಬದಲಿಸಿಕೊಳ್ಳಲು ಇಚ್ಛೆಯಿಲ್ಲದೆ, ಸಂಗಾತಿಯನ್ನು ಬದಲಾಗಲಿ ಎಂದು ಅಪೇಕ್ಷಿಸುವುದು.

- ಜೀವನ ಸಂಗಾತಿಯಿಂದ ಅಗತ್ಯಕ್ಕಿಂತ ಹೆಚ್ಚು ಅಪೇಕ್ಷೆಗಳನ್ನು ಇಟ್ಟುಕೊಳ್ಳುವುದು.

- ಸಣ್ಣಪುಟ್ಟ ವಿಷಯಗಳನ್ನೂ ದೊಡ್ಡ ಸಂಗತಿಗಳನ್ನಾಗಿ ಮಾಡಿ ಜಗಳವಾಡುವುದು. ತಾವೂ ನೆಮ್ಮದಿಯಾಗಿರುವುದಿಲ್ಲ. ಬೇರೆಯವರನ್ನೂ ನೆಮ್ಮದಿಯಾಗಿರಲು ಬಿಡುವುದಿಲ್ಲ.

- ಪರಸ್ಪರರ ದೋಷಗಳನ್ನು ಹುಡುಕಿ ರಂಪಾಟ, ರಾದ್ಧಾಂತ ಮಾಡುವುದು.ಈ ಕಾರಣಗಳಿಂದ ಪತಿಪತ್ನಿಯರಲ್ಲಿ ಅಂತರ ಹೆಚ್ಚುತ್ತಲೇ ಇರುತ್ತದೆ. ಸಮಯಕ್ಕೆ ಸರಿಯಾಗಿ ತಿಳಿವಳಿಕೆಯಿಂದ ಪತಿಪತ್ನಿ, ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳದಿದ್ದರೆ, ವಿಚ್ಛೇದನದ ಸಂಭಾವ್ಯತೆ ಹೆಚ್ಚು. ಆದ್ದರಿಂದ ಪತಿಪತ್ನಿಯರ ಸಂಬಂಧಗಳು ಬಹಳ ನಾಜೂಕಾಗಿರುತ್ತದೆ ಎಂದು ತಿಳಿದುಕೊಳ್ಳಬೇಕು ಅನ್ನುವ ಪ್ರಯಾಸದಿಂದ, ಆರೋಗ್ಯಕರ ಮಾನಸಿಕತೆಯೊಂದಿಗೆ ಸಂಭಾಳಿಸುವುದು ಅಗತ್ಯ.

ತಪ್ಪುಗಳನ್ನು ಒಪ್ಪಿಕೊಳ್ಳಿ

ಎಲ್ಲಕ್ಕಿಂತ ವಿಚಿತ್ರ ವಿಷಯವೇನೆಂದರೆ ಪತಿಪತ್ನಿಯರು ತಮ್ಮ ತಪ್ಪುಗಳನ್ನು ಒಪ್ಪಿಕೊಳ್ಳುವುದಿಲ್ಲ. ಆದರೆ ಜೀವನಕ್ಕೆ ಸಂಬಂಧಿಸಿದ ಈ ತಪ್ಪುಗಳು ಜೀವನವನ್ನು ದೊಡ್ಡ ಸೀಮೆಯವರೆಗೆ ಪ್ರಭಾವಿತಗೊಳಿಸುತ್ತದೆ. ಇವನ್ನು ಚಿಕ್ಕ ತಪ್ಪುಗಳೆಂದುಕೊಳ್ಳುವುದು ಮೂಲರೂಪವಾಗಿ ತಪ್ಪೇ. ಸಂಬಂಧವನ್ನು ಯಾವುದೇ ಪರಿಸ್ಥಿತಿಯಲ್ಲೂ ಒಡೆಯುವುದರಿಂದ ರಕ್ಷಿಸಿಕೊಳ್ಳುವ ಜವಾಬ್ದಾರಿ ಪತಿ ಮತ್ತು ಪತ್ನಿಯರದ್ದಾಗಿದೆ. ಪತಿಪತ್ನಿಯರು ತಪ್ಪು ಮಾಡಿದ್ದರೆ, ಅದಕ್ಕೆ ಪರಿಹಾರವನ್ನೂ ಅವರಿಬ್ಬರೇ ಕಂಡುಕೊಳ್ಳಬೇಕು.

ಮನಬಿಚ್ಚಿ ಹೊಗಳಿ

ರಿಲೇಷನ್‌ಶಿಪ್‌ ಎಕ್ಸ್ ಪರ್ಟ್‌ಗಳು ಹೇಳುವುದೇನೆಂದರೆ ಪರಸ್ಪರ ಹೊಗಳಿಕೆಯ ಶಬ್ದಗಳು ಸಂಗಾತಿಗಳನ್ನು ಹತ್ತಿರಕ್ಕೆ ತರುತ್ತವೆ. ಒಡೆಯುವ ಹಂತಕ್ಕೆ ಬಂದಿರುವ ಸಂಬಂಧಗಳಲ್ಲಿ ಮತ್ತೆ ತಾಜಾತನ ತುಂಬುವ ಸಂಭಾವ್ಯತೆ ಇರುತ್ತದೆ. ವೈವಾಹಿಕ ಜೀವನದ ಯಶಸ್ಸು ಪತಿಪತ್ನಿಯರು ಪರಸ್ಪರ ಪ್ರಶಂಸೆ ಮಾಡುವುದರಿಂದ ಜೀವನವನ್ನು ಆನಂದಪೂರ್ಣವಾಗಿ ಮಾಡುತ್ತದೆ.

ರಿಲೇಷನ್‌ಶಿಪ್‌ ಟಿಪ್ಸ್

ಸ್ಟೀವ್‌ ಕಪೂರ್‌ ತನ್ನ ಪುಸ್ತಕದಲ್ಲಿ ಹೆಲ್ದಿ ರಿಲೇಷನ್‌ಶಿಪ್‌ಗೆ ಟಿಪ್ಸ್ ಕೊಟ್ಟಿದ್ದಾರೆ :

- ಪತಿಪತ್ನಿಯರು ಪರಸ್ಪರ ಡ್ರೆಸ್‌ ಸೆನ್ಸ್ ನ್ನು ಪ್ರಶಂಸಿಸಬೇಕು. ಒಳ್ಳೆಯ ವಿಷಯಗಳಿಗಾಗಿ ಹೊಗಳಲು ಜಿಪುಣತನ ಮಾಡಬಾರದು.

- ಪರಸ್ಪರ ಕಾಂಪ್ಲಿಮೆಂಟ್ಸ್ ಕೊಡಿ. ವಿಶ್ವಾಸದ ಆಧಾರದಲ್ಲಿ ಸಂಬಂಧಗಳಲ್ಲಿ ಸಿಹಿ ತುಂಬಿ.

- ಪತಿಪತ್ನಿಯರಲ್ಲಿ ಯಾರಾದರೊಬ್ಬರು ಇನ್ನೊಬ್ಬರ ಮಾತನ್ನು ಕೇಳಲು ಇಷ್ಟವಿಲ್ಲದಿದ್ದರೆ ಅದಕ್ಕೆ ಕಾರಣ ತಿಳಿಯಲು ಪ್ರಯತ್ನಿಸಿ. ಅವರ ಜೊತೆ ವಾದ ಮಾಡಿ ಅವರಿಗೂ ಬೇಸರ ತರಿಸಿ, ನೀವು ಬೇಸರ ಮಾಡಿಕೊಳ್ಳಬೇಡಿ.

- ಇನ್ನೊಬ್ಬರ ಭಾವನೆಗಳೊಂದಿಗೆ ಆಟವಾಡಬೇಡಿ. ಒಬ್ಬರು ಇನ್ನೊಬ್ಬರನ್ನು ಬ್ಲ್ಯಾಕ್‌ಮೇಲ್ ಮಾಡುವುದು ಅಥವಾ ದೌರ್ಬಲ್ಯದ ಬಗ್ಗೆ ಫೋಕಸ್‌ ಮಾಡುವ ಅಭ್ಯಾಸ ಆತ್ಮಘಾತುಕವಾಗಿರುತ್ತದೆ. ಭಾವನಾತ್ಮಕ ಮಟ್ಟದಲ್ಲಿ ಪರಸ್ಪರ ಹೊಂದಾಣಿಕೆಗಾಗಿ ಸಮಯ ತೆಗೆದು ಅಗತ್ಯವಾಗಿ ಸುತ್ತಾಡಿ. ನಿಮ್ಮ ಪ್ರೀತಿಯ ಪ್ರದರ್ಶನನ್ನು ಜನರ ಮುಂದೆ ಮರೆತೂ ಸಹ ಮಾಡದಿರಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ