ಮುಂದಿನ 2030ರ ಹೊತ್ತಿಗೆ ಡಯಾಬಿಟೀಸ್ ಮೆಲಟಿಸ್ (ಮಧುಮೇಹ) ಭಾರತದ ಸುಮಾರು 7.94 ಕೋಟಿಗೂ ಹೆಚ್ಚು ಮಂದಿಯನ್ನು ಪ್ರಭಾವಿತಗೊಳಿಸಲಿದೆ. ಚೀನಾದ 4.23 ಕೋಟಿ, ಅಮೆರಿಕಾದ 3.03 ಕೋಟಿ ಜನ ಇದರಿಂದ ಹಿಂಸೆಗೆ ಒಳಪಡಲಿದ್ದಾರೆ. ಈ ರೋಗ ಹೀಗೆ ದೇಶವಿಡೀ ಪ್ರಜೆಗಳನ್ನು ಆಕ್ರಮಿಸಲು ಹಲವಾರು ಕಾರಣಗಳಿವೆ. ಅಂದರೆ…… ಜನಸಂಖ್ಯೆ, ನಗರೀಕರಣ, ಸ್ಥೂಲತೆ, ಆರಾಮದಾಯಕ ಲೈಫ್‌ಸ್ಟೈಲ್ ಇತ್ಯಾದಿ.
ಡಯಾಬಿಟೀಸ್‌ಗೆ ಒಳಗಾದವರು ಸದಾ ಈ ಕಾರಣಗಳಿಗಾಗಿ ಕೊರಗುತ್ತಾರೆ. ಅಂದರೆ ಮುಂದೊಂದು ದಿನ ಅವರ ಕಂಗಳ ದೃಷ್ಟಿ ಹೋಗಬಹುದು, ಅವರ ಕಾಲು, ಪಾದ ಕತ್ತರಿಸಬೇಕಾದೀತು, ಕಿಡ್ನಿ ಫೇಲ್ಯೂರ್, ಮ್ಯಾಸಿವ್ ಹಾರ್ಟ್ ಅಟ್ಯಾಕ್ ಇತ್ಯಾದಿ.
ಯ ಜನತೆಯಲ್ಲೇ ಹೆಚ್ಚುತ್ತಿರುವ ಪ್ರಕರಣಗಳು
ಭಾರತದಲ್ಲಿ 22-30ರ ವಯಸ್ಸಿನ ಯುವಜನರ ಜನಸಂಖ್ಯೆ ಹೆಚ್ಚು. ಕಲ್ಲೂ ಕರಗಿಸಿಕೊಳ್ಳುವಂಥ ವಯಸ್ಸಿದು, ಆದರೆ ಈ ಯುವಜನತೆ ರೂಢಿಸಿಕೊಂಡಿರುವ ಜೀವನಶೈಲಿಯಿಂದಾಗಿ ಇವರ ಮೇಲೆ ಹಲವು ರೋಗಗಳು ದಾಳಿ ಇಡುತ್ತವೆ.
ಭಾರತವನ್ನು ಮಧುಮೇಹದ ರಾಜಧಾನಿ ಎಂದೇ ಹೇಳಲಾಗುತ್ತದೆ. ಅಸಲಿಗೆ ಯುವಜನತೆ ಅನಾರೋಗ್ಯಕರ ಆಹಾರ ಕ್ರಮದಿಂದ ಸ್ಥೂಲತೆಗೆ ತುತ್ತಾಗುತ್ತಾರೆ. ಇದರಿಂದ ಇವರು ಮಧುಮೇಹ ಮತ್ತಿತರ ಕಾರ್ಡಿಯೋವ್ಯಾಸ್ಕ್ಯುಲರ್ ಸಮಸ್ಯೆಗಳಿಗೆ ಬೇಗ ಗುರಿಯಾಗುತ್ತಾರೆ. ಹಿಂದೆಲ್ಲ ಈ ರೋಗ 45+ನವರಿಗೆ ಮಾತ್ರ ಬರುತ್ತಿತ್ತು, ಈಗ 25+ನವರಿಗೂ ಸಾಮಾನ್ಯ ಎನಿಸಿಬಿಟ್ಟಿದೆ. ಇದಕ್ಕೆ ಮುಖ್ಯ ಕಾರಣ ಪಾಶ್ಚಾತ್ಯ ಜೀವನಶೈಲಿಯ ಅಂಧಾನುಕರಣೆ.
ಸೋಂಕಿನ ಅಪಾಯ
ತುಸು ಮಾತ್ರ ಗಾಯವಾದರೂ ತ್ವಚೆಗೆ ಉಂಟಾಗುವ ಅಪಾಯಕಾರಿ ಸೋಂಕಿಗೆ ಸೆಲ್ಯುಲೈಟಿಸ್ ಎನ್ನುತ್ತಾರೆ. ನಿಮಗೆ ಡಯಾಬಿಟೀಸ್ ಇದ್ದರೆ, ನಿಮ್ಮ ಚರ್ಮದ ಕುರಿತು ಹೆಚ್ಚು ಎಚ್ಚರಿಕೆ ವಹಿಸಿ. ಏಕೆಂದರೆ ಬ್ಲಡ್ ಗ್ಲೂಕೋಸ್ ಲೆವೆಲ್ ಅಧಿಕವಾಗಿದ್ದರೆ, ಸೋಂಕು ಬೇಗ ಆಗುವ, ಹರಡುವ ಅಪಾಯವಿದೆ.
ಸೆಲ್ಯುಲೈಟಿಸ್ ಒಂದು ಗಂಭೀರ ಸೋಂಕು. ಇದು ತ್ವಚೆಯ ಒಳಗೂ ಹರಡುತ್ತಾ, ಅದರ ಒಳಗಿನ ಕೊಬ್ಬಿನ ಪದರಕ್ಕೂ ತಗುಲುತ್ತದೆ. ಸಾಮಾನ್ಯವಾಗಿ ಜನ ಸೆಲ್ಯುಲೈಟಿಸ್‌ನ್ನೇ ಸೆಲ್ಯುಲೈಟ್ ಎಂದುಕೊಳ್ಳುತ್ತಾರೆ. ಅಸಲಿಗೆ ಇವೆರಡೂ ಬಿಲ್‌ಕುಲ್ ಬೇರೆ ಬೇರೆ. ಸೆಲ್ಯುಲೈಟಿಸ್ ಎಂದರೆ ಕೊಬ್ಬಿನ ಪದರದ ಒಳ ಪದರವಾದ ಡರ್ಮಿಸ್ ಮತ್ತು ತ್ವಚೆಯ ಒಳಭಾಗದ ಟಿಶ್ಯುವಿನ ಒಂದು ಬ್ಯಾಕ್ಟೀರಿಯಲ್ ಸೋಂಕಾಗಿದೆ. ಆದರೆ ಸೆಲ್ಯುಲೈಟ್, ತ್ವಚೆಯ ಒಳಭಾಗದಲ್ಲಿ ಕೊಬ್ಬು ಜಮೆಗೊಳ್ಳುವುದರಿಂದ ಆಗುತ್ತದೆ. ಸೆಲ್ಯುಲೈಟಿಸ್‌ನ ಎಲ್ಲಕ್ಕಿಂತ ದೊಡ್ಡ ಹಿಂಸೆ ಎಂದರೆ, ಅದನ್ನು ಸರಿಯಾದ ಸಮಯದಲ್ಲೇ ವಾಸಿ ಮಾಡಿಕೊಳ್ಳದಿದ್ದರೆ, ದೇಹವಿಡೀ ಬೇಗ ವ್ಯಾಪಿಸುತ್ತದೆ. ಈ ಕಾರಣದಿಂದ ನಮ್ಮ ಟಿಶ್ಯು ಬೇಗನೇ ಹಾನಿಗೊಳಗಾಗುತ್ತದೆ ಇದರ ಬ್ಯಾಕ್ಟೀರಿಯಾ ರಕ್ತನಾಳಗಳ ಮುಖಾಂತರ ಹರಡುತ್ತವೆ.
ಸೆಲ್ಯುಲೈಟಿಸ್‌ನಿಂದ ಸುರಕ್ಷತೆ
ತ್ವಚೆಗೆ ನಷ್ಟ ಉಂಟು ಮಾಡುವಂಥ ಕಠಿಣಕರ ಮತ್ತು ಅಧಿಕ ಕೆಲಸಗಳನ್ನು ಮಾಡಬೇಡಿ. ಯಾವ ಕೆಲಸದಿಂದ ನಿಮಗೆ ಸುಸ್ತು ಅನಿಸುವುದಿಲ್ಲವೋ ಅಂಥದ್ದನ್ನೇ ಮಾಡಿ. ಎಲ್ಲಕ್ಕಿಂತಲೂ ಮಹತ್ವಪೂರ್ಣವಾದುದು ಎಂದರೆ, ಬ್ಲಡ್ ಶುಗರ್ ಲೆವೆಲ್ ಸದಾ ಬ್ಯಾಲೆನ್ಸ್ಡ್ ಆಗಿರುವಂತೆ ನೋಡಿಕೊಳ್ಳಿ. ಇದು ಹೆಚ್ಚಿತು ಎಂದರೆ ದೇಹದ ಇಮ್ಯೂನ್ ಸಿಸ್ಟಂ ನಿಶ್ಚಿತ ರೂಪದಲ್ಲಿ ದುರ್ಬಲಗೊಳ್ಳುತ್ತದೆ. ದೇಹದ ಯಾವ ಭಾಗಕ್ಕೆ ಗಾಯವಾದರೂ ಅದು ಬೇಗ ಗುಣವಾಗದು.
– ಕಡಿಮೆ ಕಾರ್ಬೋಹೈಡ್ರೇಟ್‌ನ ಆಹಾರ ಸೇವಿಸಿ. ಸದಾ ನಾರುಯುಕ್ತ ಹಣ್ಣು, ತರಕಾರಿಗಳನ್ನು ಧಾರವಾಳ ಸೇವಿಸಿ. ನಿಮ್ಮ ಬಳಿ ಸದಾ ಗ್ಲೂಕೊಮೀಟರ್ ಇಟ್ಟುಕೊಳ್ಳಿ, ಇದರಿಂದ ಬ್ಲಡ್ ಶುಗರ್ ಲೆವೆಲ್‌ನ್ನು ನಿಯಂತ್ರಿಸಲು ಎಷ್ಟೋ ನೆರವಾಗುತ್ತದೆ.
– ನೀವು ಸೆಲ್ಯುಲೈಟಿಸ್ ಕುರಿತಾಗಿ ಎಷ್ಟು ಜಾಗೃತರಾಗಿದ್ದರೂ ಸಾಲದು, ಸೂಕ್ಷ್ಮಾತಿಸೂಕ್ಷ್ಮವನ್ನೂ ಪರಿಶೀಲಿಸುತ್ತಿರಬೇಕು. ನಿಮ್ಮ ಕಾಲು, ಪಾದಗಳತ್ತ ಗಮನಕೊಡಿ. ತ್ವಚೆ ಊದಿಕೊಳ್ಳುವುದು, ಕೆಂಪಾಗುವುದು ಇತ್ಯಾದಿ ಆಗಬಾರದು. ಹಾಗಾದಾಗ ತಕ್ಷಣ ವೈದ್ಯರ ಸಲಹೆ ಪಡೆಯಿರಿ.
– ಗಾಯದ ಭಾಗವನ್ನು ಎಂದೆಂದೂ ನಿರ್ಲಕ್ಷಿಸಬೇಡಿ. ಅದನ್ನು ಸರಿಪಡಿಸಲು ತಕ್ಷಣ ವೈದ್ಯರ ಮೊರೆಹೋಗಿ. ನೆನಪಿಡಿ, ನಿಯಮಿತವಾಗಿ ಬ್ಲಡ್ ಟೆಸ್ಟ್ ಮಾಡಿಸದೆ ಇದ್ದರೆ, ಸಣ್ಣ ಗಾಯ ಸಹ ಸೆಲ್ಯುಲೈಟಿಸ್‌ಗೆ ಕಾರಣವಾಗಬಹುದು. ಗಾಯದ ಭಾಗವನ್ನು ಆದಷ್ಟೂ ಶುಚಿಯಾಗಿಡಿ. ಅದಕ್ಕೆ ನೀರು ತಗುಲದಂತೆ ಎಚ್ಚರವಹಿಸಿ. ಆದಷ್ಟೂ ಅದನ್ನು ನೇರವಾಗಿ ಗಾಳಿಗೊಡ್ಡಿ ಬೇಗ ಆರುವಂತೆ ಮಾಡಿ. ವೈದ್ಯರು ಹೇಳಿದಾಗ ಮಾತ್ರ ಅದನ್ನು ಡ್ರೆಸ್ಸಿಂಗ್‌ನಿಂದ ಕವರ್ ಮಾಡಬೇಕು. ಪ್ರತಿ ಸಲ ಫ್ರೆಶ್ ಡ್ರೆಸ್ಸಿಂಗ್ ಮಾಡಿಸಿ, ಸೋಮಾರಿತನ ಬೇಡ.
ಸನ್ ಗ್ಲಾಸಸ್ ದುರ್ಬಲ ದೃಷ್ಟಿಯುಳ್ಳವರಿಗೂ ಸಹ
ಹೀಗೆ ನಿಯಮಿತ ವಾಕಿಂಗ್, ಜಾಗಿಂಗ್, ಲಘು ವ್ಯಾಯಾಮಗಳಿಂದ ಫಿಟ್ ಆಗಿದ್ದು ಮಧುಮೇಹವನ್ನು ನಿಯಂತ್ರಿಸಿ. ನಿಮ್ಮ ಲೈಫ್‌ಸ್ಟೈಲ್ ಬದಲಿಸಿಕೊಂಡು, ಅತಿಯಾಗಿ ಯಾವುದನ್ನೂ ಸೇವಿಸದೆ, ಎಲ್ಲವನ್ನೂ ಹತೋಟಿಯಲ್ಲಿಟ್ಟುಕೊಂಡರೆ ನಿಮ್ಮ ಬ್ಲಡ್ ಶುಗರ್ ಲೆವೆಲ್ ಅದೇಕೆ ನಿಯಂತ್ರಣಕ್ಕೆ ಬರುವುದಿಲ್ಲ…..?
– ಡಾ. ಮೀನಾಕ್ಷಿ