“ಕಾಲೇಜು ಕಿಶೋರಿಯರಿರಲಿ ಅಥವಾ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕೆಲಸ ಮಾಡುವ ಉದ್ಯೋಗಸ್ಥ ವನಿತೆಯರಿರಲಿ, ಮನೆಯಿಂದ ಹೊರ ಹೊರಡುವ ಮೊದಲು ಅವರಿಗೆ ತಮ್ಮ ಉಡುಗೆ ಆರಿಸಲು ತಗಲುವ ಸಮಯಕ್ಕಿಂತ ಹೇರ್ಸ್ಟೈಲ್ ಮಾಡಿಕೊಳ್ಳಲು ತಗಲುವ ಸಮಯವೇ ಹೆಚ್ಚು ಎಂಬುದು ನಿಸ್ಸಂಶಯ. ಅವರ ಈ ಸಮಸ್ಯೆಯನ್ನು ಸರಿಪಡಿಸಲೆಂದೇ ಹೊಸ ಹೇರ್ ಸ್ಟೈಲಿಂಗ್ ವಿಧಾನ ಬಂದಿದೆ. ಏಕೆಂದರೆ ಹೇರ್ ಸ್ಟೈಲಿಂಗ್ ಎಂಬುದು ತನ್ನಿಂತಾನೇ ಒಂದು ಕಂಪ್ಲೀಟ್ ಹೇರ್ಸ್ಟೈಲ್ ಎನಿಸಿದೆ. ಇದನ್ನು ಮಾಡಿಸಿದ ಮೇಲೆ ಹೇರ್ನ್ನು ಓಪನ್ ಆಗಿಯೇ ಇಳಿಬಿಡಬೇಕು. ಬೇಕೆಂದರೆ ಪೋನಿಟೇಲ್ ಸಹ ಮಾಡಿಕೊಳ್ಳಬಹುದು,” ಎಂದು ಹೇಳುತ್ತಾರೆ, ಕೇಶ ವಿನ್ಯಾಸದ ಬಗ್ಗೆ ಸಂದೇಹ ನಿವಾರಿಸುವ ಎಕ್ಸ್ ಪರ್ಟ್ಸ್.ಓದುಗರಿಗೆ ತಮ್ಮ ಕೇಶ ವಿನ್ಯಾಸದ ಸಮಸ್ಯೆಯ ಬಗ್ಗೆ ಪರಿಹಾರ ದೊರಕಿದಂತೆಯೇ ಅಲ್ಲವೇ? ಬನ್ನಿ ಅದರ ಸಂಪೂರ್ಣ ವಿವರ ತಿಳಿದುಕೊಳ್ಳೋಣ.
ಹೇರ್ ಸ್ಟೈಲಿಂಗ್ ಮಾಡಿಸಿಕೊಳ್ಳುವ ಮೊದಲು ಯಾವ ವಿಷಯಗಳ ಬಗ್ಗೆ ಎಚ್ಚರ ವಹಿಸಬೇಕು?
ಪಾರ್ಲರ್ಗೆ ಹೋಗುವ ಹೆಂಗಸರು ಯೋಚಿಸಿ ಹೇರ್ ಕಲರ್ ಮತ್ತು ಹೈಲೈಟಿಂಗ್ ಏರಿಯಾ ಸರಿಯಾಗಿ ಆರಿಸದಿದ್ದರೆ, ಹೇರ್ ಹೈಲೈಟಿಂಗ್ ಕೂದಲನ್ನು ಎಷ್ಟು ಸ್ಟೈಲಿಶ್ಗೊಳಿಸಲು ಸಾಧ್ಯವೋ ಅಷ್ಟೇ ಹಾಳು ಮಾಡುವುದೂ ನಿಜ. ಹೀಗಾಗಿ ಈ ಕೆಳಗಿನ ಸಲಹೆಗಳತ್ತ ಅಗತ್ಯ ಗಮನಹರಿಸಿ :
– ಕೂದಲಿಗೆ ಹೈಲೈಟಿಂಗ್ ಮಾಡಿಸುವ ಮೊದಲು, ಅದಕ್ಕೆ ಮೆಹಂದಿ ಹಾಕಿಸಿಲ್ಲ ತಾನೇ ಎಂದು ಖಾತ್ರಿಪಡಿಸಿಕೊಳ್ಳಿ. ಅಸಲಿಗೆ, ಮೆಹಂದಿ ಬಳಿದ ಕೂದಲಿಗೆ ಹೈಲೈಟಿಂಗ್ ಮಾಡಿದಾಗ ಕಿತ್ತಳೆ ಬಣ್ಣದ ಎಫೆಕ್ಟ್ ಬರುತ್ತದೆ, ಜೊತೆಗೆ ಕೂದಲು ಸೀಳುವ ಭಯ ಇರುತ್ತದೆ. ಹೀಗಾಗಿ ಒಂದು ಪಕ್ಷ ಮೆಹಂದಿ ಹಾಕಿಸಿದ್ದರೆ, ಅದರ ಎಫೆಕ್ಟ್ ಸಂಪೂರ್ಣ ಖಾಲಿ ಆದ ನಂತರವೇ ಈ ಹೈಲೈಟಿಂಗ್ ಮಾಡಿಸಬೇಕು. ಸಹಜ ಬಿಳಿ ಕೂದಲು ಬಂದಿದ್ದರೆ ತೊಂದರೆ ಇಲ್ಲ.
– ಕೂದಲು ಹೈ ಟೆಕ್ಸ್ಚರ್ನದಾಗಿದ್ದರೆ, ಹೇರ್ ಹೈಲೈಟಿಂಗ್ಗಿಂತ ಮೊದಲು ಹೇರ್ ಸ್ಪಾ ಅಗತ್ಯ ಮಾಡಿಸಿ. ಡ್ರೈ ಹೇರ್ ಗೆ ಸ್ಪಾ ಒಂದು ಪ್ರೀ ಪ್ರೊಟೆಕ್ಷನ್ ಪ್ರಕ್ರಿಯೆ ಆಗಿದೆ. ಇಂಥ ಕೂದಲಿಗೆ ಮಾಯಿಶ್ಚರೈಸರ್ ಬೇಸ್ಡ್ ಹೇರ್ ಕಲರ್ ಆಗಿರಬೇಕು. ಇದರಿಂದ ಕೂದಲು ಉದ್ದ, ದಟ್ಟ, ಶೈನಿ ಸಾಫ್ಟ್ ಆಗುತ್ತದೆ.
– ನೀವು ಮೊದಲ ಸಲ ಹೇರ್ ಹೈಲೈಟ್ ಮಾಡಲು ಹೊರಟಿದ್ದರೆ, ಬಣ್ಣದ ಆಯ್ಕೆಯನ್ನು ಬಲು ಎಚ್ಚರಿಕೆಯಿಂದ ಮಾಡಿ. ಏಕೆಂದರೆ ಈ ಬಣ್ಣ ನಿಮ್ಮ ಕೂದಲಿನಿಂದ ಲೆಂಥ್ ಕತ್ತರಿಸಿದ ನಂತರವೇ ಹೋಗುವಂಥದ್ದು. ಒಂದು ಪಕ್ಷ ನೀವು ಆರಿಸಿದ ಬಣ್ಣ ನಿಮಗೆ ಹೊಂದುತ್ತಿಲ್ಲ ಎನಿಸಿದರೆ ನೀವು ಮತ್ತೆ ಕೂದಲಿಗೆ ಬೇಸ್ ಕಲರ್ ಹಾಕಿಸಿ, ಬಣ್ಣ ಬದಲಾಯಿಸಬೇಕಾಗುತ್ತದೆ. ಹಾಗಿರುವಾಗ ನೀವು ಮೊದಲು ನಿಮ್ಮ ಸ್ಕಿನ್ ಟೋನ್ ಬಗ್ಗೆ ತಿಳಿಯುವುದು ಮೇಲು. ನಿಮ್ಮ ತ್ವಚೆಯ ಬಣ್ಣ ತುಸು ಹಳದಿ ಎನಿಸಿದರೆ, ಆ್ಯಶ್ ಟೋನ್ಡ್ ಹೈಲೈಟ್ಸ್ ನಿಮ್ಮ ಬಣ್ಣಕ್ಕೆ ಕಾಂಪ್ಲಿಮೆಂಟ್ ಮಾಡುತ್ತದೆ. ನಿಮ್ಮ ಮೈ ಬಣ್ಣ ಫೇರ್ ಆಗಿದ್ದರೆ, ಬ್ಲಾಂಡ್ ಕಲರ್ಸ್ ನಿಮಗೆ ಹೆಚ್ಚು ಸೂಟ್ ಆಗುತ್ತದೆ. ನಿಮ್ಮದು ಶ್ಯಾಮಲ ವರ್ಣವಾಗಿದ್ದರೆ, ಆಗ ಕ್ಯಾರಮೆಲ್ ಶೇಡ್ಸ್ ಟ್ರೈ ಮಾಡಿ.
ಅಧಿಕಾಂಶವಾಗಿ ಹುಡುಗಿಯರು ಹೈಲೈಟ್ ಮಾಡಿಸುವಾಗ ಹಿಂಜರಿಯುತ್ತಾರೆ. ಹೀಗಾಗಿ ಅತಿ ಸಾಧಾರಣ ವಿಧದ ಹೈಲೈಟಿಂಗ್ ವಿಧಾನ ಅನುಸುರಿಸುತ್ತಾರೆ, ಅದುವೇ ಫೈನ್ ಹೈಲೈಟಿಂಗ್. ಈ ವಿಧಾನದಲ್ಲಿ ಕೂದಲಿನ 2-3 ಸ್ಟ್ರೀಕ್ಸ್ ಅನ್ನು ಕಲರ್ ಮಾಡಲಾಗುತ್ತದೆ. ಆದರೆ ಇದೀಗ ಹ್ಯಾಂಡ್ ಹೈಲೈಟಿಂಗ್ ಸಾಕಷ್ಟು ಟ್ರೆಂಡಿ ಎನಿಸಿದೆ. ಇದನ್ನು ನಮ್ಮ ತಲೆಗೂದಲಿನ ನ್ಯಾಚುರಲ್ ಕಲರ್ನೊಂದಿಗೆ ಬಲು ಸಹಜವಾಗಿ ವಿಲೀನಗೊಳಿಸಬಹುದಾಗಿದೆ.
ಇಷ್ಟು ಮಾತ್ರವಲ್ಲದೆ ಏಜೆಸ್ ಹೈಲೈಟಿಂಗ್ ಕೂಡ ಟ್ರೆಂಡ್ನಲ್ಲಿ ಇನ್ ಆಗಿದೆ. ಇದರಲ್ಲಿ ಕೂದಲಿನ ಲೆಂಥ್ನ ತುದಿಯಲ್ಲಿ ಟಿಪ್ ಹೈಲೈಟಿಂಗ್ ಮಾಡಲಾಗುತ್ತದೆ.
– ಸಿನಿಮಾ ಮಾಡೆಲಿಂಗ್ ಕೆರಿಯರ್ನ ಹುಡುಗಿಯರನ್ನು ಆದರ್ಶವಾಗಿ ಇರಿಸಿಕೊಂಡು ಎಂದೂ 3-4 ಬಗೆಯ ಕೂದಲಿನ ಹೈಲೈಟಿಂಗ್ ಮಾಡಿಸಬೇಡಿ. ಜೊತೆಗೆ ಎಕ್ಸ್ರಾಡಿನರಿ ಬಣ್ಣಗಳಾದ ಬ್ಲೂ, ಪರ್ಪಲ್, ಗ್ರೀನ್ ಇತ್ಯಾದಿ ಆರಿಸಬೇಡಿ. ಈ ತರಹ ಹೈಲೈಟ್ಗೊಳಿಸಲಾದ ಕೂದಲು, ಕೆಲವು ದಿನ ಚೆನ್ನ ಎನಿಸುತ್ತದೆ, ನಂತರ ಕೆಟ್ಟದಾಗಿ ಕಾಣಿಸುತ್ತದೆ.
ನಿಮ್ಮ ಡ್ರೆಸ್ನ ಮ್ಯಾಚಿಂಗ್ಗಾಗಿ ಕೂದಲನ್ನು ಹೈಲೈಟ್ ಮಾಡಬಯಸಿದರೆ, ಆಗ ಇನ್ಸ್ಟೆಂಟ್ ಕಲರ್ ಆರಿಸುವುದೇ ಸೂಕ್ತ. ಆದರೆ ಇದರಲ್ಲಿ ಅಮೋನಿಯಾದ ಪ್ರಮಾಣ ಹೆಚ್ಚಿರುತ್ತದೆ ಹಾಗೂ ಆರ್ಟಿಫಿಶಿಯಲ್ ಕೋಟಿಂಗ್ನ ಕಾರಣ ಕೂದಲಲ್ಲಿ ಗಾಳಿಯಾಡುವುದೇ ಕಷ್ಟವಾಗುತ್ತದೆ.
– ಹೈಲೈಟ್ಗೊಳಿಸಲಾದ ಕೂದಲಿನ ಸಂರಕ್ಷಣೆ ಅತಿ ಮುಖ್ಯ. ಏಕೆಂದರೆ ಕೂದಲಿಗೆ ಕೆಮಿಕಲ್ ಟ್ರೀಟ್ಮೆಂಟ್ ಮಾಡಲಾಗಿದೆ. ಆದ್ದರಿಂದ ಮಾಯಿಶ್ಚರೈಸರ್ (ಕಲರ್ ಪ್ರೊಟೆಕ್ಷನ್ವುಳ್ಳ) ಯುಕ್ತ ಕಂಡೀಶನರ್ ಬಳಸಿರಿ. ಜೊತೆಗೆ ಕೂದಲಿಗೆ ಸ್ಟೀಮ್ ಕೊಟ್ಟು ಪೆನೆಂಟ್ರೇಟ್ ಮಾಡಿ, ಇದರಿಂದ ಕೂದಲಿಗೆ ಸುಲಭವಾಗಿ ಆಕ್ಸಿಜನ್ ಸಿಗುತ್ತದೆ.
ನಿಮ್ಮ ತಲೆಗೂದಲು ಉತ್ತಮ, ಸ್ಟೈಲಿಶ್ ಹೇರ್ಕಟ್ ಹೊಂದಿದ್ದಾಗ ಮಾತ್ರ ಈ ಹೈಲೈಟಿಂಗ್, ಕೂದಲಿಗೆ ಲುಕ್ ನೀಡಲು ಸಾಧ್ಯ. ಹೀಗಾಗಿ ಇಲ್ಲಿನ ಸರಳ, ಸುಂದರ ಹೇರ್ಕಟ್ಸ್ ವಿಧಾನ ಅನುಸರಿಸಿ ನೋಡಿ.
ರೇಝರ್ ಕಟ್ : ಈ ಕಟ್ಗಾಗಿ ಎಲ್ಲಾ ಕೂದಲನ್ನು ನೋಸ್ ಲೆವೆಲ್ಗೆ ತಂದು, ತಕ್ಷಣ ಸ್ಟ್ರೇಟ್ ಕಟ್ ಮಾಡಿಬಿಡಿ. ಇದರಿಂದ ಬ್ಯಾಕ್ನಲ್ಲಿ ಡೀಪ್ ಕಡೆ ಮುಂಭಾಗದ ಕೂದಲಲ್ಲಿ ರೇಝರ್ ಕಟ್ನ ಎಫೆಕ್ಟ್ ಕಂಡುಬರುತ್ತದೆ.
ಕ್ರೌನ್ ಕಟ್ : ಎಲ್ಲಾ ಕೂದಲನ್ನೂ 90 ಡಿಗ್ರಿ ಕೋನದಲ್ಲಿ ತಂದು ಕಟ್ ಮಾಡಿ. ಇದರಿಂದ ಕೂದಲಿಗೆ ಲೇಝರ್ ಎಫೆಕ್ಟ್. ಲೈಟ್ ವೀ ಶೇಪ್, ಬಾರ್ಡರ್ ಲೇಯರಿಂಗ್ ಆಗುತ್ತದೆ.
ಇಯರ್ ಟು ಇಯರ್ ಪಾರ್ಟಿಂಗ್ ಕಟ್ : ನೀವು ಸ್ಟೆಪ್ಸ್ ವಿತ್ ಲೇಯರ್ ಕಟ್ ಮಾಡಿಸಬೇಕಿದ್ದರೆ, ಆಗ ಈ ಕಟ್ ನಿಮಗೆ ಪರ್ಫೆಕ್ಟ್ ಎನಿಸುತ್ತದೆ. ಈ ಕಟ್ನಲ್ಲಿ ಇಯರ್ ಟು ಇಯರ್ ಪಾರ್ಟಿಂಗ್ ನಂತರ, ಕೂದಲನ್ನು ವಿರುದ್ಧ ದಿಕ್ಕಿನಲ್ಲಿ ಕತ್ತರಿಸಲಾಗುತ್ತದೆ. ಇದರಿಂದ ಕೂದಲಿನಲ್ಲಿ ಸ್ಟೆಪ್ ಲೇಯರ್ ಎರಡರ ಎಫೆಕ್ಟ್ ಬರುತ್ತದೆ.
ಸ್ಲೋಪ್ ಕಟ್ : ಎಷ್ಟೋ ಹುಡುಗಿಯರು ಕೂದಲಿನ ಲೆಂಥ್ ಕಡಿಮೆ ಮಾಡಿಸಲು ಬಯಸುವುದಿಲ್ಲ. ಹೀಗಿರುವಾಗ ಸ್ಲೋಪ್ ಕಟ್ ಮಾಡಿಸಿ, ಅವರು ಸ್ಟೈಲಿಶ್ ಕಟ್ ಮಾಡಿಸಿಕೊಳ್ಳುತ್ತಾರೆ. ಇದರಿಂದ ಕೂದಲಿನ ಲೆಂಥ್ ಕಡಿಮೆ ಆಗುವುದಿಲ್ಲ. ಇದಕ್ಕಾಗಿ ಇಯರ್ ಟು ಇಯರ್ ಪಾರ್ಟಿಂಗ್ ಮಾಡಿ, ಮೇಲಿನಿಂದ ಕತ್ತರಿಯಾಡಿಸುತ್ತಾ ಕೆಳಬದಿಗೆ ಬರುತ್ತಾರೆ.
– ಅನುರಾಧಾ