ಹಿಂದಿ ಸಿನೆಮಾ `ಕೀ ಅಂಡ್‌ ಕಾ’ ದಲ್ಲಿ ಗೃಹಿಣಿಯ ಪಾತ್ರ ನಿರ್ಹಿಸುತ್ತಿರುವ ನಾಯಕ, ಪತಿಯ ಪಾತ್ರ ನಿರ್ವಹಿಸುತ್ತಿರುವ ನಾಯಕಿಗೆ ರಾತ್ರಿ ಮಂಚದ ಮೇಲೆ ಹೀಗೆ ಹೇಳುತ್ತಾನೆ. ಇವತ್ತು ಬೇಡ ಡಾರ್ಲಿಂಗ್‌, ಇವತ್ತು ತುಂಬಾ ತಲೆ ನೋಯ್ತಿದೆ. ತಾತ್ಪರ್ಯವೇನೆಂದರೆ ಒಂದುವೇಳೆ ಹುಡುಗ ಪತ್ನಿಯ ಪಾತ್ರ ನಿರ್ಹಿಸಿದರೆ ಸೆಕ್ಸ್ ಹೆಸರಿನಲ್ಲಿ ಅವನ ತಲೆಯಲ್ಲೂ ನೋವುಂಟಾಗುತ್ತದೆ. ಪತಿಗೆ ಹೋಲಿಸಿದರೆ ಪತ್ನಿ ಸಂಭೋಗದ ಬಗ್ಗೆ ತಣ್ಣನೆಯ ಪ್ರತಿಕ್ರಿಯೆ ನೀಡುತ್ತಾಳೇಕೆ? ತಲೆನೋವಿನ ವಿಚಾರ ನಿಜವಾಗಿರಲಿ ಅಥವಾ ನೆಪವಾಗಿರಲಿ, ಪತ್ನಿಯ ಬಾಯಿಂದಲೇ ಬರುತ್ತದೆ. ಸಮಾಗಮದ ಬಗ್ಗೆ ಪ್ರಸ್ತಾಪ ನಿಜಕ್ಕೂ ಪತ್ನಿಯರಿಗೆ ತಲೆನೋವು ತರುತ್ತದೆಯಾ?

ಒಂದು ವೇಳೆ ಪತ್ನಿಯ ಮನಸ್ಸಿನಲ್ಲಿ ತನ್ನ ಪತಿಯ ಬಗ್ಗೆ ಆಕರ್ಷಣೆ ಅಥವಾ ಪ್ರೀತಿಯಲ್ಲಿ ಕೊಂಚ ಕೊರತೆಯಿದ್ದರೆ ರೊಮ್ಯಾಂಟಿಕ್‌ ಆಗುವುದು ಕಷ್ಟವಾಗುತ್ತದೆ. ಆದರೆ ಯಾವುದೇ ಗಟ್ಟಿಯಾದ ಕಾರಣವಿಲ್ಲದೆ ವೈಮನಸ್ಯ ಉಂಟಾದರೆ?

ಗಂಡು ಹಾಗೂ ಹೆಣ್ಣಿನ ಆಲೋಚನೆಯಲ್ಲಿ ವ್ಯತ್ಯಾಸ

ಸೆಕ್ಸ್ ವಿಷಯದಲ್ಲಿ ಗಂಡು ಹಾಗೂ  ಹೆಣ್ಣು ಭಿನ್ನವಾಗಿರುತ್ತಾರೆ. ಒಂದು ಕಡೆ ಮಹಿಳೆಯ ದೈಹಿಕ ರೂಪದ ಬಗ್ಗೆ ಯೋಚಿಸಿಯೇ ಗಂಡು ಉತ್ತೇಜಿತನಾಗುತ್ತಾನೆ. ಆದರೆ ಒಬ್ಬ ಮಹಿಳೆಯನ್ನು ಭಾವನಾತ್ಮಕ ಹೊಂದಾಣಿಕೆ ಮತ್ತು ತನ್ನ ಸಂಗಾತಿಯ ಸಮಾಗಮ ಎನ್ನುವುದು ಕೇವಲ ದೈಹಿಕವಲ್ಲ. ಆದರೆ ಮಾನಸಿಕ ಹಾಗೂ ಭಾವನಾತ್ಮಕ ಮಟ್ಟದಲ್ಲಿರುತ್ತದೆ. ಹಳೆಯ ಹಿಂದಿ ಚಿತ್ರ `ಅನಾಮಿಕ’ದ ಹಾಡು `ಬಾಹೋಂ ಮೇ ಚಲೀ ಆಯೀ’ ಅಥವಾ `ರಾಮ್ ಲೀಲಾ’ ಚಿತ್ರದ ಹಾಡು `ಅಂಗ್‌ ಲಗಾದೇ’ ಇಂತಹ ಎಷ್ಟೋ ಹಾಡುಗಳು ಏನು ತಿಳಿಸಿವೆಯೆಂದರೆ ಪತ್ನಿಯರು ತಮ್ಮ ಪತಿಯನ್ನು ಪ್ರೀತಿಸುತ್ತಾರೆ, ಅವರನ್ನು ನಂಬುತ್ತಾರೆ. ಅವರಿಗೆ ಸಮಾಗಮ ತೀವ್ರ ಅಂತರಂಗದ ಖುಷಿಯನ್ನು ಕೊಡುತ್ತದೆ. ಆದರೆ ಯಾವ ಪತಿಪತ್ನಿಯರ ಸಂಬಂಧ ದ್ವೇಷ, ಈರ್ಷ್ಯೆ ಮತ್ತು ವೈಮನಸ್ಯದಿಂದ ತುಂಬಿರುತ್ತದೋ ಅಲ್ಲಿ ಸಮಾಗಮವನ್ನು ಇಷ್ಟವಿಲ್ಲದೆ ಅಥವಾ  ಪ್ರತೀಕಾರದ ರೂಪದಲ್ಲಿ ನೋಡಲಾಗುತ್ತದೆ. ಆದರೆ ಅನೇಕ ಬಾರಿ ನಮ್ಮ ಮಾನಸಿಕತೆ, ನಮ್ಮ ಸಂಸ್ಕಾರ, ನಮ್ಮ ಧಾರಣೆಗಳು ಸೆಕ್ಸ್ ಗೆ ತಪ್ಪು ಆಕಾರ ಕೊಡುತ್ತವೆ. ನಾವು ತಿಳಿದುಕೊಳ್ಳದೆ ಅದನ್ನು ತಿರಸ್ಕರಿಸುತ್ತೇವೆ. ಅದಕ್ಕೆ ಚಿಕಿತ್ಸೆ ಇದೆ. ಸುಲಭ ಹೌದು.

ಸಂಶೋಧನೆ ಏನು ಹೇಳುತ್ತದೆ?

ಬ್ರಿಟಿಕ್‌ ಕೊಲಂಬಿಯಾ ವಿಶ್ವವಿದ್ಯಾಲಯದ ಲೈಂಗಿಕ ಚಿಕಿತ್ಸೆಯ ಕಾರ್ಯಕ್ರಮದ ನಿರ್ದೇಶಕಿ ಡಾ. ರೋಸ್‌ಮೇರಿ ಬೇಸನ್‌ ಹೀಗೆ ಹೇಳುತ್ತಾರೆ, ಮಹಿಳೆಯರಲ್ಲಿ ಲೈಂಗಿಕ ಸಂತೃಪ್ತಿಗೆ ಸಂಬಂಧಿಸಿದಂತೆ ಅತ್ಯಂತ ದೊಡ್ಡ ದೂರೆಂದರೆ ಅವರಲ್ಲಿ ಇಚ್ಛೆ, ಉತ್ತೇಜನ ಮತ್ತು ಲೈಂಗಿಕ ಸಂತೃಪ್ತಿಯ ಕೊರತೆ. ಇನ್ನೊಂದು ವಿಷೇಷ ವಿಚಾರ ಲೈಂಗಿಕ ವಿಭಿನ್ನತೆ. ಒಂದುಕಡೆ ಮೂರನೇ ಒಂದು ಭಾಗದ ಮಹಿಳೆಯರಲ್ಲಿ ಪುರುಷರಿಗಿಂತ ಹೆಚ್ಚು ಕಾಮ ಇರುತ್ತದೆ. ಇನ್ನೊಂದು ಕಡೆ ಮೂರನೇ ಎರಡರಷ್ಚು ಭಾಗದ ಪುರುಷರಲ್ಲಿ ಕಾಮ ಪ್ರವೃತ್ತಿ ಹೆಚ್ಚಾಗಿರುತ್ತದೆ. ಈ ಕಾರಣದಿಂದ ಇಂತಹ ಜೋಡಿಯಲ್ಲಿ ಒಬ್ಬ ಮಹಿಳೆಗೆ ಕಾಮೋತ್ತೇಜಿತ ಪುರುಷನಿಂದಾಗಿ ತನ್ನ ಕಾಮದ ಇಚ್ಛೆಯನ್ನು ಅನುಭವಿಸುವ ಅವಕಾಶ ಸಿಗುವುದಿಲ್ಲ.

ಭಾರತೀಯ ಕಾನೂನಿನ ದೃಷ್ಟಿಕೋನ ವಿನಾಕಾರಣ ತನ್ನ ಗಂಡನನ್ನು ಸೆಕ್ಸ್ನಿಂದ ವಂಚಿತಳನ್ನಾಗಿ ಪತ್ನಿ ಅಥವಾ ತನ್ನ ಮರ್ಜಿಯಿಂದಲೇ ಸಮಾಗಮ ನಡೆಸಲು ಇಚ್ಛಿಸುವ ಪತ್ನಿಯನ್ನು ಕೋರ್ಟ್‌ ಪತಿ ಅಥವಾ ಪತ್ನಿ ಮೂಲಕ ವಿನಾಕಾರಣ ದೀರ್ಘಕಾಲದವರೆಗೆ ತನ್ನ ಸಂಗಾತಿಯನ್ನು ಸೆಕ್ಸ್ ನಿಂದ ವಂಚಿತರನ್ನಾಗಿ ಮಾಡುವುದು ಮಾನಸಿಕ ಕ್ರೂರತೆಯ ಶ್ರೇಣಿಯಲ್ಲಿಡುತ್ತದೆ. ಕೋರ್ಟ್‌ ತನ್ನ ಹಿಯರಿಂಗ್‌ನಲ್ಲಿ ಈ ವಾದದಲ್ಲಿ ತಾರ್ಕಿಕ ಒಪ್ಪಿಗೆ ನೀಡಿತು. ಏಪ್ರಿಲ್ 2005 ರಲ್ಲಿ ಗಂಡ ಕೇಶವ ಮದರಾಸ್‌ ಹೈಕೋರ್ಟ್‌ನಲ್ಲಿ ಪತ್ನಿ ಸವಿತಾ ವಿರುದ್ಧ ಬಹಳ ಕಾಲ ದೈಹಿಕ ಸಂಬಂಧಕ್ಕೆ ಅವಕಾಶ ಕೊಡದಿದ್ದಕ್ಕೆ ವಿಚ್ಛೇದನ ಕೋರಿದ್ದರು. ಅದಕ್ಕೆ ಕೋರ್ಟ್‌ ಒಪ್ಪಿಗೆ ನೀಡಿತು. ಮದರಾಸ್‌ ಹೈಕೋರ್ಟ್‌ನ ಈ ತೀರ್ಪಿನ ವಿರುದ್ಧ ಸವಿತಾ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದಳು. ಅಲ್ಲಿ ನ್ಯಾಯಾಧೀಶರಾದ ಜ್ಯೋತಿ ಮುಖ್ಯೋಪಾಧ್ಯಾಯ ಮತ್ತು  ಪಂತ್‌ ಮದರಾಸ್‌ ಹೈಕೋರ್ಟ್‌ನ ನಿರ್ಣಯವನ್ನು ಸರಿಯೆಂದು ಹೇಳುತ್ತಾ ಯಾವುದೇ ದೊಡ್ಡ ಕಾರಣವಿಲ್ಲದೆ ಅಥವಾ ಯಾವುದೇ ದೈಹಿಕ ದುರ್ಬಲತೆಯಿಲ್ಲದೆ ದೂರಾದರೂ ತಮ್ಮ ಪತಿ ಅಥವಾ ಪತ್ನಿಗೆ ಬಹಳ ಕಾಲ ದೈಹಿಕ ಸಂಬಂಧಕ್ಕೆ ಅವಕಾಶ ಕೊಡದಿದ್ದರೆ ಅದು ಮಾನಸಿಕ ಕ್ರೂರತೆಯ ಶ್ರೇಣಿಯಲ್ಲಿ ಬರುತ್ತದೆ. ಮಾನಸಿಕ ಕ್ರೂರತೆ ದೈಹಿಕ ಆಘಾತಕ್ಕಿಂತ ಹೆಚ್ಚು ಆಘಾತ ಕೊಡುತ್ತದೆ ಎಂದರು.

ಅತೀತದಲ್ಲಿ ಇಣುಕಿ

ನಳಿನಿಯ ಒಬ್ಬ ಸಂಬಂಧಿಕ ಅವಳೊಂದಿಗೆ ಅತ್ಯಾಚಾರ ನಡೆಸಿದಾಗ ಅವನ ಕೂದಲು ಅವನ ವಯಸ್ಸನ್ನು ತಿಳಿಸಲಿಲ್ಲ. ಅವನನ್ನೇ ಮದುವೆಯಾದನಂತರ ಇಂದಿಗೂ ಅವಳಿಗೆ ಅದೇ ಅಂಟಂಟಾದ ಕೈಗಳು ಬಲತ್ಕಾರ ಮಾಡುತ್ತಿರುವಂತೆ ಅನ್ನಿಸುತ್ತದೆ. ಸೆಕ್ಸ್ ನ್ನು ಅವಳು ಪತ್ನಿಯ ಕರ್ತವ್ಯ ಎಂಬಂತೆ ನಿಭಾಯಿಸುತ್ತಾಳೆ. ತನ್ನ ಪತಿಯೊಂದಿಗೆ ಕಳೆದ ಪ್ರೇಮಾಲಾಪದ ಕ್ಷಣಗಳು ಎಂದೇನೂ ಭಾವಿಸುವುದಿಲ್ಲ. ನಿಮ್ಮ ಅತೀತದಲ್ಲೂ ಹೀಗೇನಾದರೂ ಆಗಿದ್ದು ಅದರ ನೆನಪು ಈಗ ಗಾಢವಾಗಿ ಕಾಡಿಸುತ್ತಿದೆಯೇ? ಹಿಂದಿನ ಯಾವುದಾದರೂ ಕಹಿ ಅನುಭವದಿಂದಾಗಿ ಇಂದು ನೀವು ಸಮಾಗಮಕ್ಕೆ ಹೆದರುತ್ತಿರಬಹುದು. ಒಂದುವೇಳೆ ನಿಮಗೆ ಬಾಲ್ಯದಲ್ಲಿ ಕೊಲೆ ಅಥವಾ ಅತ್ಯಾಚಾರದ ಅನುಭವವಾಗಿದ್ದು ಅದರಿಂದ ಸಮಾಗಮದ ಸಮಯದಲ್ಲಿ ನೀವು ಖುಷಿಯಾಗಿ ಇರಲಾಗುವುದಿಲ್ಲ. ಅಂತಹ ಸಂದರ್ಭದಲ್ಲಿ ನೀವು ಬೇಗನೆ ಪ್ರೊಫೆಶನಲ್ ಸಹಾಯ ಪಡೆದು ಆ ಕೆಟ್ಟ ಅತೀತದಿಂದ ನಿಮ್ಮನ್ನು ಮುಕ್ತರಾಗಿಸಿಕೊಳ್ಳಬೇಕು.

ದೈಹಿಕ ಸಮಸ್ಯೆಗಳಿಂದ ಮುಕ್ತಿ ಪಡೆಯಿರಿ

ಒಮ್ಮೊಮ್ಮೆ ದೈಹಿಕ ಸಮಸ್ಯೆಗಳಾದ ಹಾರ್ಮೋನ್‌ ಇನ್ ಬ್ಯಾಲೆನ್ಸ್ ಕಾರಣದಿಂದಲೂ ಮಹಿಳೆಯ ಮನಸ್ಸು ಸೆಕ್ಸ್ ನಿಂದ ವಿಮುಖವಾಗುತ್ತದೆ. ಒಂದು ವೇಳೆ ನಿಮಗೆ ಸೆಕ್ಸ್ ಬಗ್ಗೆ ಅಭಿರುಚಿ ಇಲ್ಲದಿದ್ದರೆ ಲೈಂಗಿಕ ತಜ್ಞರನ್ನು ಭೇಟಿಯಾಗಬೇಕು. ಅವರು ಇನ್ನಷ್ಟು ತೊಂದರೆಗಳಿಂದ ಪರಿಹಾರ ಕೊಡುತ್ತಾರೆ. ಚರಮ ಸ್ಥಿತಿ ತಲುಪದಿರುವುದು, ಸ್ನೇಹದ ಕೊರತೆ, ನೋವಿನಿಂದ ಕೂಡಿದ ಸಮಾಗಮ, ನೀವು ತೆಗೆದುಕೊಂಡ ಡ್ರಗ್ಸ್ ನಿಂದಾಗಿ ನಿಮಗೆ ಲೈಂಗಿಕ ಇಚ್ಛೆಯಲ್ಲಿ ಕೊರತೆ ಇತ್ಯಾದಿ.

ಸಂಗಾತಿಯೊಂದಿಗೆ ಎಂಜಾಯ್‌ ಮಾಡಿ

“ನಿನ್ನೊಂದಿಗೆ ಇದ್ರೆ ಒಂದು ಹೆಣದೊಂದಿಗೆ ಇದ್ದಂತೆ ಅನ್ನಿಸುತ್ತದೆ.” ಅಂತರಂಗದ ಕ್ಷಣಗಳಲ್ಲಿ ಪತ್ನಿಯಿಂದ ಯಾವುದೇ ರೆಸ್ಪಾನ್ಸ್ ಬರದಿದ್ದಾಗ ಆತನ ಬಾಯಿಂದ ಹೊರಬಿತ್ತು . ಒಂದು ವೇಳೆ ಪತ್ನಿ ಎಂದಾದರೂ ಪ್ರೀತಿಸಲು ಮುಂದಾಗದಿದ್ದರೆ ಪತಿಯೇ ಅಸುರಕ್ಷಿತ ಭಾವನೆಗೆ ಗುರಿಯಾಗುತ್ತಾನೆ. ಅಗತ್ಯಕ್ಕಿಂತ ಹೆಚ್ಚು ಮುಂದುವರಿಯುತ್ತಾನೆ. ಅದರಿಂದ ಪತ್ನಿ ಪತಿಯ ಅಗತ್ಯಕ್ಕಿಂತ ಹೆಚ್ಚು ಹಸ್ತಕ್ಷೇಪದಿಂದಾಗಿ ದೂರವಾಗುತ್ತಾಳೆ. ಪತ್ನಿಯೂ ತಾನೇ ಮುಂದುವರಿಯುತ್ತಾಳೆ ಅಥವಾ ಅವನ ಮುಂದುವರಿಕೆಗೆ ಪಾಸಿಟಿವ್ ರೆಸ್ಪಾನ್ಸ್ ಕೊಡುತ್ತೇನೆ ಎಂದು ಆಶ್ವಾಸನೆ ಕೊಟ್ಟರೆ ಅವನು ಧೈರ್ಯದಿಂದ ಪತ್ನಿಯು ಸಿದ್ಧಳಾಗಲು ಕಾಯತೊಡಗುತ್ತಾನೆ. ಒಬ್ಬ ಪತ್ನಿ ತಾನು ಬರೀ ಸ್ವೀಕರಿಸುವುದಷ್ಟೇ ಅಲ್ಲ ಆರಂಭವನ್ನೂ ಮಾಡುತ್ತಾಳೆ. ಅವಳು ಸೆಕ್ಸ್ ನ್ನು ಒಂದು ಜವಾಬ್ದಾರಿ ರೂಪದಲ್ಲಿ ನೋಡುತ್ತಾಳೆ.

ಪುಸ್ತಕಗಳು ಸಾಕಷ್ಟು ಸಹಾಯಕಾರಿ

ಹೆಚ್ಚಾಗಿ ಕುಟುಂಬಗಳಿಂದ ದೊರೆತ ಸಂಸ್ಕಾರ ಹೇಗಿರುತ್ತದೆಂದರೆ ಹುಡುಗಿಯರು ಸಮಾಗಮವನ್ನು ತಪ್ಪು ಅಥವಾ ವರ್ಜ್ಯವೆಂದು ತಿಳಿಯುತ್ತಾರೆ. ಇದೇ ಕಾರಣದಿಂದ ವಿವಾಹದ ನಂತರ ಅವರು ಈ ವಿಷಯದ ಬಗ್ಗೆ ಮುಕ್ತವಾಗಿರುವುದಿಲ್ಲ. ತಮ್ಮ ಈ ಹಿಂಜರಿಕೆಯನ್ನು ದೂರ ಮಾಡಲು `ಗೈಡ್‌ ಟು ಗೆಟಿಂಗ್‌ ಇಟ್‌ ಆನ್‌.’ ` ದಿ ಗುಡ್‌ ಗರ್ಲ್ಸ್ ಗೈಡ್‌ ಟು ಗ್ರೇಟ್‌ ಸೆಕ್ಸ್’ ಇತ್ಯಾದಿ ಪುಸ್ತಕಗಳನ್ನು ಓದಬಹುದು.

ಸೆಕ್ಷುಯಲ್ ಥೆರಪಿಯೂ ಲಾಭಕಾರಿ

ಅನೇಕ ಬಾರಿ ಸ್ವತಃ ನಾವೇ ಹೆಜ್ಜೆಯಿಡುವುದು ಸಾಕಾಗುವುದಿಲ್ಲ. ನಿಮಗೆ ಆರೋಗ್ಯಕರ ವೈವಾಹಿಕ ಜೀವನಕ್ಕೆ ಅಸೌಕರ್ಯ ಆಗುತ್ತಿದ್ದರೆ ನೀವು ಪ್ರೊಫೆಶನಲ್ ಸಹಾಯದ ಬಗ್ಗೆ ಯೋಚಿಸಬಹುದು ಸೆಕ್ಷುಯಲ್ ಥೆರಪಿಯಲ್ಲಿ ಒಮ್ಮೆಲೇ ವಿಷಯ ಶುರು ಮಾಡಲಾಗುತ್ತದೆ. ಅದೂ ನೀವಿಬ್ಬರೂ ಮೊದಲ ಬಾರಿ ಭೇಟಿಯಾಗಿರುವಂತೆ. ಜೋಡಿಗಳಲ್ಲಿ ನಿಧಾನವಾಗಿ ಸಂಬಂಧ ದೃಢಗೊಳಿಸಲಾಗುತ್ತದೆ. ಸ್ಟೆಪ್‌ ಬೈ ಸ್ಟೆಪ್‌ ಸೆಕ್ಸ್ ನತ್ತ ಕರೆದೊಯ್ಯಲಾಗುತ್ತದೆ. ನಿಮ್ಮ ಪತಿ ಇಂತಹ ಪ್ರೋಗ್ರಾಂಗೆ ಹೋಗಲು ಇಚ್ಛಿಸದಿರಬಹುದು. ಹೀಗಿರುವಾಗ  ನೀವೊಬ್ಬರೇ ಇಂತಹ ಪ್ರೋಗ್ರಾಂನ ಲಾಭ ಪಡೆಯಬಹುದು. ಕೌನ್ಸೆಲರ್‌ನ ಸಹಾಯದಿಂದ ನೀವು ಸೆಕ್ಸ್ ಗೆ ಸಂಬಂಧಿಸಿದ ಬಹಳಷ್ಟು ಸಮಸ್ಯೆಗಳಿಗೆ ಉತ್ತರ ಪಡೆಯಬಹುದು. ಅಲ್ಲದೆ ನಿಮ್ಮ ಪತಿಯೊಂದಿಗೂ ಈ ವಿಷಯದ ಬಗ್ಗೆ ಮಾತಾಡಬಹುದು.

– ವೀಣಾ ವಿವೇಕ್‌

ವೈವಾಹಿಕ ಸುಖದೆಡೆಗೆ ಒಟ್ಟಿಗೆ ಹೆಜ್ಜೆ ಹಾಕಿ

ಒಂದುವೇಳೆ ನೀವು ಪ್ರತಿಬಾರಿಯೂ ನಿಮ್ಮ ಪತಿಯೊಂದಿಗಿನ ಅಂತರಂಗದ ಕ್ಷಣಗಳಲ್ಲಿ ವ್ಯಾಕುಲರಾಗಿದ್ದರೆ ನಿಮ್ಮಿಬ್ಬರಿಗೂ ವೈವಾಹಿಕ ಸುಖಪ್ರಾಪ್ತಿಯಾಗುವಂತಹ ಹೆಜ್ಜೆಗಳನ್ನಿಡಬೇಕು. ಈ ಸಮಸ್ಯೆಯಂತೂ ಸಂವೇದನಾಶೀಲವಾಗಿದೆ. ಆದರೆ ಅದನ್ನು ಪರಿಹರಿಸುವುದು ಕಷ್ಟವಲ್ಲ. ಬನ್ನಿ, ಕೆಲವು ಉಪಾಯಗಳನ್ನು ಅನುಸರಿಸಿ ಸಂಬಂಧಗಳನ್ನು ಸರಿಪಡಿಸೋಣ.

– ಸಂಬಂಧ ಬೆಳೆಸುವಾಗ ಆರಂಭದಲ್ಲಿ ಸ್ವಲ್ಪಕಾಲ ನೀವು ವೈವಾಹಿಕ ಸುಖಕ್ಕೆ ಸಿದ್ಧರಾಗಿರುವುದಿಲ್ಲ. ಆದರೆ ನಿಮ್ಮ ಪತಿಗೆ ನಿಮ್ಮ ಉದ್ದೇಶ ಕಡಿಮೆ ಸೆಕ್ಸ್ ಅಲ್ಲ, ಅದರೆ ಇಡೀ ಜೀವನಕ್ಕಾಗಿ ಹೆಚ್ಚು ಉತ್ತಮ ಸೆಕ್ಸ್ ಎಂದು ತಿಳಿದಾಗ  ಅವರು ನಿಮ್ಮ ಮಾತನ್ನು ಒಪ್ಪುತ್ತಾರೆ. ಅವರಿಗೆ ಈ ವಿಷಯದ ಬಗ್ಗೆ ನಿಮ್ಮೊಂದಿಗೆ ಮಾತಾಡಿಸಲು, ಪುಸ್ತಕಗಳನ್ನು ಓದಲು ಅಥವಾ ಯಾರಾದರೂ ಕೌನ್ಸೆಲರ್‌ರನ್ನು ಮಾತಾಡಲು ಅಭ್ಯಂತರ ಇರುವುದಿಲ್ಲ. ಒಂದುವೇಳೆ ಅವರಿಗೇನಾದರೂ ಅಭ್ಯಂತರ ಇದ್ದರೆ ನೀವೊಬ್ಬರೇ ಕೌನ್ಸೆಲರ್‌ನ್ನು ಭೇಟಿಯಾಗಿ ಈ ಸಮಸ್ಯೆಗೆ ಪರಿಹಾರ ಹುಡುಕಲು ಪ್ರಯತ್ನಿಸಿ.

– ನೀವು ನಿಮ್ಮ ಪತಿಯ ಸಮೀಪ ಹೋಗಲು ಕಷ್ಟವಾಗುವಂತಹ ಏನಾದರೂ ವಿಷಯವಿದ್ದರೆ ಉದಾಹರಣೆಗೆ ಅವರ ದೇಹದಿಂದ ಬರುತ್ತಿರುವ ಬೆವರಿನ ವಾಸನೆ, ಅವರ ಬಾಯಿಂದ ಬರುತ್ತಿರುವ ದುರ್ವಾಸನೆ ಇತ್ಯಾದಿಗಳ ಬಗ್ಗೆ ಅಗತ್ಯವಾಗಿ ಅವರಿಗೆ ತಿಳಿಸಿ. ಏಕೆಂದರೆ ಇಂತಹ ಸಣ್ಣ ಸಣ್ಣ ವಿಷಯಗಳೂ ಸಹ ಆತ್ಮೀಯ ಕ್ಷಣಗಳಲ್ಲಿ ಪ್ರಭಾವ ಬೀರುತ್ತವೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ