ಹಿಂದಿ ಸಿನೆಮಾ `ಕೀ ಅಂಡ್‌ ಕಾ' ದಲ್ಲಿ ಗೃಹಿಣಿಯ ಪಾತ್ರ ನಿರ್ಹಿಸುತ್ತಿರುವ ನಾಯಕ, ಪತಿಯ ಪಾತ್ರ ನಿರ್ವಹಿಸುತ್ತಿರುವ ನಾಯಕಿಗೆ ರಾತ್ರಿ ಮಂಚದ ಮೇಲೆ ಹೀಗೆ ಹೇಳುತ್ತಾನೆ. ಇವತ್ತು ಬೇಡ ಡಾರ್ಲಿಂಗ್‌, ಇವತ್ತು ತುಂಬಾ ತಲೆ ನೋಯ್ತಿದೆ. ತಾತ್ಪರ್ಯವೇನೆಂದರೆ ಒಂದುವೇಳೆ ಹುಡುಗ ಪತ್ನಿಯ ಪಾತ್ರ ನಿರ್ಹಿಸಿದರೆ ಸೆಕ್ಸ್ ಹೆಸರಿನಲ್ಲಿ ಅವನ ತಲೆಯಲ್ಲೂ ನೋವುಂಟಾಗುತ್ತದೆ. ಪತಿಗೆ ಹೋಲಿಸಿದರೆ ಪತ್ನಿ ಸಂಭೋಗದ ಬಗ್ಗೆ ತಣ್ಣನೆಯ ಪ್ರತಿಕ್ರಿಯೆ ನೀಡುತ್ತಾಳೇಕೆ? ತಲೆನೋವಿನ ವಿಚಾರ ನಿಜವಾಗಿರಲಿ ಅಥವಾ ನೆಪವಾಗಿರಲಿ, ಪತ್ನಿಯ ಬಾಯಿಂದಲೇ ಬರುತ್ತದೆ. ಸಮಾಗಮದ ಬಗ್ಗೆ ಪ್ರಸ್ತಾಪ ನಿಜಕ್ಕೂ ಪತ್ನಿಯರಿಗೆ ತಲೆನೋವು ತರುತ್ತದೆಯಾ?

ಒಂದು ವೇಳೆ ಪತ್ನಿಯ ಮನಸ್ಸಿನಲ್ಲಿ ತನ್ನ ಪತಿಯ ಬಗ್ಗೆ ಆಕರ್ಷಣೆ ಅಥವಾ ಪ್ರೀತಿಯಲ್ಲಿ ಕೊಂಚ ಕೊರತೆಯಿದ್ದರೆ ರೊಮ್ಯಾಂಟಿಕ್‌ ಆಗುವುದು ಕಷ್ಟವಾಗುತ್ತದೆ. ಆದರೆ ಯಾವುದೇ ಗಟ್ಟಿಯಾದ ಕಾರಣವಿಲ್ಲದೆ ವೈಮನಸ್ಯ ಉಂಟಾದರೆ?

ಗಂಡು ಹಾಗೂ ಹೆಣ್ಣಿನ ಆಲೋಚನೆಯಲ್ಲಿ ವ್ಯತ್ಯಾಸ

ಸೆಕ್ಸ್ ವಿಷಯದಲ್ಲಿ ಗಂಡು ಹಾಗೂ  ಹೆಣ್ಣು ಭಿನ್ನವಾಗಿರುತ್ತಾರೆ. ಒಂದು ಕಡೆ ಮಹಿಳೆಯ ದೈಹಿಕ ರೂಪದ ಬಗ್ಗೆ ಯೋಚಿಸಿಯೇ ಗಂಡು ಉತ್ತೇಜಿತನಾಗುತ್ತಾನೆ. ಆದರೆ ಒಬ್ಬ ಮಹಿಳೆಯನ್ನು ಭಾವನಾತ್ಮಕ ಹೊಂದಾಣಿಕೆ ಮತ್ತು ತನ್ನ ಸಂಗಾತಿಯ ಸಮಾಗಮ ಎನ್ನುವುದು ಕೇವಲ ದೈಹಿಕವಲ್ಲ. ಆದರೆ ಮಾನಸಿಕ ಹಾಗೂ ಭಾವನಾತ್ಮಕ ಮಟ್ಟದಲ್ಲಿರುತ್ತದೆ. ಹಳೆಯ ಹಿಂದಿ ಚಿತ್ರ `ಅನಾಮಿಕ'ದ ಹಾಡು `ಬಾಹೋಂ ಮೇ ಚಲೀ ಆಯೀ' ಅಥವಾ `ರಾಮ್ ಲೀಲಾ' ಚಿತ್ರದ ಹಾಡು `ಅಂಗ್‌ ಲಗಾದೇ' ಇಂತಹ ಎಷ್ಟೋ ಹಾಡುಗಳು ಏನು ತಿಳಿಸಿವೆಯೆಂದರೆ ಪತ್ನಿಯರು ತಮ್ಮ ಪತಿಯನ್ನು ಪ್ರೀತಿಸುತ್ತಾರೆ, ಅವರನ್ನು ನಂಬುತ್ತಾರೆ. ಅವರಿಗೆ ಸಮಾಗಮ ತೀವ್ರ ಅಂತರಂಗದ ಖುಷಿಯನ್ನು ಕೊಡುತ್ತದೆ. ಆದರೆ ಯಾವ ಪತಿಪತ್ನಿಯರ ಸಂಬಂಧ ದ್ವೇಷ, ಈರ್ಷ್ಯೆ ಮತ್ತು ವೈಮನಸ್ಯದಿಂದ ತುಂಬಿರುತ್ತದೋ ಅಲ್ಲಿ ಸಮಾಗಮವನ್ನು ಇಷ್ಟವಿಲ್ಲದೆ ಅಥವಾ  ಪ್ರತೀಕಾರದ ರೂಪದಲ್ಲಿ ನೋಡಲಾಗುತ್ತದೆ. ಆದರೆ ಅನೇಕ ಬಾರಿ ನಮ್ಮ ಮಾನಸಿಕತೆ, ನಮ್ಮ ಸಂಸ್ಕಾರ, ನಮ್ಮ ಧಾರಣೆಗಳು ಸೆಕ್ಸ್ ಗೆ ತಪ್ಪು ಆಕಾರ ಕೊಡುತ್ತವೆ. ನಾವು ತಿಳಿದುಕೊಳ್ಳದೆ ಅದನ್ನು ತಿರಸ್ಕರಿಸುತ್ತೇವೆ. ಅದಕ್ಕೆ ಚಿಕಿತ್ಸೆ ಇದೆ. ಸುಲಭ ಹೌದು.

ಸಂಶೋಧನೆ ಏನು ಹೇಳುತ್ತದೆ?

ಬ್ರಿಟಿಕ್‌ ಕೊಲಂಬಿಯಾ ವಿಶ್ವವಿದ್ಯಾಲಯದ ಲೈಂಗಿಕ ಚಿಕಿತ್ಸೆಯ ಕಾರ್ಯಕ್ರಮದ ನಿರ್ದೇಶಕಿ ಡಾ. ರೋಸ್‌ಮೇರಿ ಬೇಸನ್‌ ಹೀಗೆ ಹೇಳುತ್ತಾರೆ, ಮಹಿಳೆಯರಲ್ಲಿ ಲೈಂಗಿಕ ಸಂತೃಪ್ತಿಗೆ ಸಂಬಂಧಿಸಿದಂತೆ ಅತ್ಯಂತ ದೊಡ್ಡ ದೂರೆಂದರೆ ಅವರಲ್ಲಿ ಇಚ್ಛೆ, ಉತ್ತೇಜನ ಮತ್ತು ಲೈಂಗಿಕ ಸಂತೃಪ್ತಿಯ ಕೊರತೆ. ಇನ್ನೊಂದು ವಿಷೇಷ ವಿಚಾರ ಲೈಂಗಿಕ ವಿಭಿನ್ನತೆ. ಒಂದುಕಡೆ ಮೂರನೇ ಒಂದು ಭಾಗದ ಮಹಿಳೆಯರಲ್ಲಿ ಪುರುಷರಿಗಿಂತ ಹೆಚ್ಚು ಕಾಮ ಇರುತ್ತದೆ. ಇನ್ನೊಂದು ಕಡೆ ಮೂರನೇ ಎರಡರಷ್ಚು ಭಾಗದ ಪುರುಷರಲ್ಲಿ ಕಾಮ ಪ್ರವೃತ್ತಿ ಹೆಚ್ಚಾಗಿರುತ್ತದೆ. ಈ ಕಾರಣದಿಂದ ಇಂತಹ ಜೋಡಿಯಲ್ಲಿ ಒಬ್ಬ ಮಹಿಳೆಗೆ ಕಾಮೋತ್ತೇಜಿತ ಪುರುಷನಿಂದಾಗಿ ತನ್ನ ಕಾಮದ ಇಚ್ಛೆಯನ್ನು ಅನುಭವಿಸುವ ಅವಕಾಶ ಸಿಗುವುದಿಲ್ಲ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ