ಕಾಲಕಾಲಕ್ಕೆ  ಸೌಂದರ್ಯ ಸಾಧನಗಳನ್ನು ಬದಲಾಯಿಸಬೇಕು. ಇತರ ಉತ್ಪನ್ನಗಳಿಗೆ ಎಕ್ಸ್ ಪೈರಿ ಡೇಟ್‌ ಇರುವಂತೆ ಕಾಸ್ಮೆಟಿಕ್‌ ಪ್ರಾಡಕ್ಟ್ಸ್ ಗೂ ಸಹ ಇದ್ದೇ ಇರುತ್ತದೆ. ಆ ಗಡುವು ಮೀರಿದರೆ ಈ ಪ್ರಾಡಕ್ಟ್ಸ್ ಒಳಿತು ಮಾಡುವ ಬದಲು ಹಾನಿ ಉಂಟು ಮಾಡುತ್ತವೆ. ಆ ಕಾರಣದಿಂದ ನಿಮ್ಮ ಸ್ಕಿನ್‌ ಡ್ಯಾಮೇಜ್‌ ಆಗುವುದರ ಜೊತೆ ಅಲರ್ಜಿ ಆಗುವ ಸಾಧ್ಯತೆಗಳೂ ಇವೆ.

ಯಾವ ಬ್ಯೂಟಿ ಪ್ರಾಡಕ್ಟ್ಸ್ ಗೆ ಎಷ್ಟು ಆಯುಸ್ಸು?

ಬನ್ನಿ, ಈ ಕುರಿತಾಗಿ ತಜ್ಞರ ಸಲಹೆ ಗಮನಿಸೋಣ :

ಮಸ್ಕರಾ : ಐ ಮೇಕಪ್‌ನ್ನು ಕಂಪ್ಲೀಟ್‌ಗೊಳಿಸುವ ಮಸ್ಕರಾ 3 ತಿಂಗಳಿಗಿಂತ ಹೆಚ್ಚು ಕೆಲಸ ಮಾಡದು. ಹೀಗಾಗಿ ತಯಾರಿ ದಿನಾಂಕ ನೋಡಿಕೊಂಡು, ಅದರ ಸೀಲ್ ಒಡೆದ 3 ತಿಂಗಳ ಒಳಗೆ ಇದನ್ನು ಬಳಸಬೇಕು, ಅದರಾಚೆಗಲ್ಲ. ಇಲ್ಲದ್ದಿದರೆ ಕಂಗಳಲ್ಲಿ ಉರಿ, ನವೆ, ಸೋಂಕು ಉಂಟಾಗಬಹುದು.

ಫೌಂಡೇಶನ್‌ : ಪರ್ಫೆಕ್ಟ್ ಬೇಸ್‌ ಮೇಕಪ್‌ಗಾಗಿ ನಿಮ್ಮ ಸ್ಕಿನ್‌ಟೋನ್‌ಗೆ ಮ್ಯಾಚ್‌ ಆಗುವಂಥ ಫೌಂಡೇಶನ್‌ ಖರೀದಿಸಿದರಷ್ಟೇ ಸಾಲದು, ನೀವು ಇದರ ಎಕ್ಸ್ ಪೈರಿ ಡೇಟ್‌ನ್ನು ಗಮನಿಸಲೇಬೇಕು. ನೀವು ಯಾವಾಗಲೋ ಒಮ್ಮೆ ಫೌಂಡೇಶನ್‌ ಬಳಸುವಿರಾದರೆ, ಯಾವ ತಿಂಗಳು ನೀವು ಅದನ್ನು ಖರೀದಿಸುತ್ತೀರೋ, ಅದು ಆ ತಿಂಗಳೇ ತಯಾರಾದುದೇ ಅಥವಾ ಅದಕ್ಕೆ 1 ತಿಂಗಳು ವಾರವೋ ಎಂಬುದನ್ನು ನೋಡಿಕೊಳ್ಳಿ. ಇದಕ್ಕೆ 1 ವರ್ಷದ ಆಯುಸ್ಸು ಇರುತ್ತದೆ.

ಐ ಲೈನರ್‌ : ಲಿಕ್ವಿಡ್‌ ಜೆಲ್‌ ಐ ಲೈನರ್‌ನ ಆಯುಸ್ಸು 6 ತಿಂಗಳು ಮಾತ್ರ. ಆದರೆ ಪೆನ್ಸಿಲ್‌ ಐ ಲೈನರ್‌ 8 ತಿಂಗಳು ನಡೆಯುತ್ತದೆ. 6 ತಿಂಗಳಿಗೆ ಮೊದಲೇ ಲಿಕ್ವಿಡ್‌ ಐ ಲೈನರ್‌ ಒಣಗತೊಡಗಿದರೆ, ತಕ್ಷಣ ಅದನ್ನು ಬದಲಾಯಿಸಿ. ಕಾಸ್ಮೆಟಿಕ್ಸ್ ನಲ್ಲಿ ಡ್ರೈನೆಸ್‌ ಕಾಣಿಸಿದರೆ ಅದು ಬಳಸಲು ಯೋಗ್ಯವಲ್ಲ ಎಂದು ಅರ್ಥ.

ಕನ್ಸೀಲರ್‌ : ಬಹಳ ಕಡಿಮೆ ಪ್ರಮಾಣದ ಮಹಿಳೆಯರು ಇದರ ಬಳಕೆ ಮಾಡುತ್ತಾರೆ, ಜೊತೆಗೆ ಇದರ ಬಳಕೆ ಆಗುವುದೂ ಬಲು ಕಡಿಮೆ. ಹೀಗಾಗಿ ಇದನ್ನು ಕೊಳ್ಳುವಾಗ ಇದರ ಎಕ್ಸ್ ಪೈರಿ ಡೇಟ್‌ನ್ನು ಸರಿಯಾಗಿ ಗಮನಿಸಿ. ಆಗ ನೀವು ಮುಂದಿನ 18 ತಿಂಗಳವರೆಗೂ ಹಾಯಾಗಿ ಇದನ್ನು ಬಳಸುತ್ತಿರಬಹುದು.

blusher

ಬ್ಲಶರ್‌ : ಇದನ್ನು ಬೇಗ ಬೇಗ ಖಾಲಿ ಮಾಡಬೇಕು, ಇಲ್ಲದಿದ್ದರೆ ಎಕ್ಸ್ ಪೈರಿ ಡೇಟ್‌ ಬಂದೀತು ಎಂದು ನೀವು ಪ್ರತಿನಿತ್ಯ ಇದನ್ನು ಬಳಸುತ್ತಾ ಆತಂಕ ಪಡಬೇಕಿಲ್ಲ. ಏಕೆಂದರೆ ನಿಮ್ಮ ಈ ಬ್ಲಶರ್‌ ಮುಂದಿನ ಒಂದಲ್ಲ, ಎರಡು ವರ್ಷ ಬಾಳಿಕೆ ಬರುತ್ತದೆ.

ಲಿಪ್‌ಸ್ಟಿಕ್‌ : ಇದರ ಆಯುಸ್ಸು ಕೇವಲ 1 ವರ್ಷ ಮಾತ್ರ. ಅದು ನಿಮ್ಮ ಅತಿ ಅಚ್ಚುಮೆಚ್ಚಿನದಾಗಿರಲಿ ಅಥವಾ ನಿಮ್ಮ ಪ್ರೀತಿಪಾತ್ರರ ಉಡುಗೊರೆಯೇ ಇರಲಿ, 1 ವರ್ಷದ ನಂತರ ಅದನ್ನು ಬಳಸಬೇಕೆಂದು ಹಠ ಹೂಡಿದರೆ ತುಟಿಗಳಿಗೆ ಹಾನಿ ತಪ್ಪಿದ್ದಲ್ಲ.

Elizabeth

ಐಶ್ಯಾಡೋ : ನೀವು ಕ್ರೀಂ ಬೇಸ್ಡ್ ಐ ಶ್ಯಾಡೋ ಬಳಸುತ್ತೀರಾದರೆ, ಇದನ್ನು ನೀವು ವರ್ಷವಿಡೀ ಬಳಸಬಹುದು. ನೀವು ಒಂದು ಸಲಕ್ಕೆ ಒಂದಕ್ಕಿಂತ ಹೆಚ್ಚು ಐ ಶ್ಯಾಡೋ ಬಳಸುವಿರಾದರೆ, ಎರಡನೇ ಮೂರನೆಯದಕ್ಕೆ ಬೇರೆ ಬೇರೆ ಬ್ರಶ್‌ಗಳನ್ನೇ ಬಳಸಬೇಕು. ಆಗ ನೀವು ಬ್ಯಾಕ್ಟೀರಿಯಲ್ ಇನ್‌ಫೆಕ್ಷನ್‌ನಿಂದ ಬಚಾವಾಗಬಹುದು.

ಹೇರ್‌ ಪ್ರಾಡಕ್ಟ್ಸ್ : ಶ್ಯಾಂಪೂ, ಕಂಡೀಶನರ್‌, ಆಯಿಲ್‌ ಇತ್ಯಾದಿ ಕೇಶಾಲಂಕಾರದ ಉತ್ಪನ್ನಗಳನ್ನು ಸದಾ ಮುಚ್ಚಳ ಮುಚ್ಚಿರಿಸಿ ಸರಿಯಾಗಿ ಬಳಸಿದರೆ, ಇಂಥವನ್ನು ವರ್ಷವಿಡೀ ಆರಾಮಾಗಿ ಬಳಸಬಹುದು.

ಲಿಪ್‌ಗ್ಲಾಸ್‌ : ತುಟಿಗಳ ಮೇಕಪ್‌ಗೆ ಫೈನ್‌ ಟಚ್‌ ನೀಡುವಂಥ ಲಿಪ್‌ಗ್ಲಾಸ್‌ನ್ನು ನೀವು 6 ತಿಂಗಳವರೆಗೂ ಬಳಸಬಹುದು. ಆದರೆ ಇದು ಬಾಟಲ್ ಪ್ರಾಡಕ್ಟ್ಸ್ ಆಗಿರಬೇಕು. ನಿಮಗೆ ವರ್ಷವಿಡೀ ಬಳಸಲು ಬೇಕು ಎಂದರೆ ಟ್ಯೂಬ್‌ನ ಲಿಪ್‌ಗ್ಲಾಸ್‌ ಬಳಸಿರಿ.

foundation

ನೇಲ್‌ಪಾಲಿಶ್‌ : ಸಾಮಾನ್ಯವಾಗಿ ಯಾವುದೇ ಬಗೆಯ ನೇಲ್‌ಪಾಲಿಶ್‌ ವರ್ಷವಿಡೀ ಬರುತ್ತದೆ, ಆದರೆ ಎಷ್ಟೋ ಸಲ ಗಾಳಿಗೆ ಒಡ್ಡಿಕೊಂಡಾಗ, ಅದು ಬೇಗ ಒಣಗಿ ಹೋಗುತ್ತದೆ. ಆದ್ದರಿಂದ ಮರೆಯದೆ ಬಳಸಿದ ಪ್ರತಿ ಸಲ, ಇದರ ಶೀಷೆಯ ಮುಚ್ಚಳವನ್ನು ಭದ್ರವಾಗಿ ಮುಚ್ಚಿರಿಸಿ

– ಪಿ. ಪೂರ್ಣಿಮಾ

ಒಂದಿಷ್ಟು ಸಲಹೆಗಳು

– ನೀವು ಮೇಕಪ್‌ ಪ್ರಾಡಕ್ಟ್ಸ್ ಬಾಳಿಕೆ ಹೆಚ್ಚಿಸ ಬಯಸಿದರೆ, ಅದನ್ನು ಸದಾ ಡ್ರೈ ಕೂಲ್‌ ಪ್ಲೇಸ್‌ನಲ್ಲೇ ಇಡಿ.

– ಯಾವುದೇ ಮೇಕಪ್‌ ಪ್ರಾಡಕ್ಟ್ಸ್ ಬಳಸುವ ಮೊದಲು, ಕೈಗಳನ್ನು ಚೆನ್ನಾಗಿ ತೊಳೆದು ಒರೆಸಿಕೊಳ್ಳಿ.

– ಮೇಕಪ್‌ ಪ್ರಾಡಕ್ಟ್ಸ್ ಬಳಸುವುದಕ್ಕಾಗಿ ಕಾಟನ್‌ ಬಾಲ್‌, ಸ್ಪಾಂಜ್‌, ಬ್ರಶ್‌ ಬಳಸುತ್ತಿರಬೇಕು. ಎಂದಿಗೂ ಬೆರಳಿನಿಂದ ಇದನ್ನು ಮುಟ್ಟಬೇಡಿ.

– ಬ್ಯೂಟಿ ಕಾಸ್ಮೆಟಿಕ್ಸ್ ನ್ನು ಬಿಸಿಲು, ಧೂಪ, ಗಾಳಿ, ಎ.ಸಿ, ನೀರು ಇತ್ಯಾದಿಗಳ ಸಂಪರ್ಕಕ್ಕೆ ಬರದಂತೆ ಎಚ್ಚರವಹಿಸಿ.

– ಬೇರೆಯವರ ಪ್ರಾಡಕ್ಟ್ಸ್ ಎಂದೂ ಬಳಸಬೇಡಿ, ನಿಮ್ಮದನ್ನು ಇತರರಿಗೆ ಕೊಡಲೂಬೇಡಿ.

– ಯಾವುದೇ ಮೇಕಪ್‌ ಪ್ರಾಡಕ್ಟ್ಸ್ ನ ಬ್ರಶ್‌ನ್ನು 2ಕ್ಕಿಂತ ಹೆಚ್ಚ ಸಲ ಬಾಟಲ್‌ನಲ್ಲಿ ಅದ್ದಬೇಡಿ.

– ಈ ಪ್ರಾಡಕ್ಟ್ಸ್ ಖರೀದಿಸುವ ಮೊದಲು ಒಮ್ಮೆ ಅವನ್ನು ಮೂಸಿ ನೋಡಿ. ಉತ್ತಮ ಪರಿಮಳ ಎನಿಸಿದರೆ ಮಾತ್ರ ಕೊಳ್ಳಿರಿ.

– ಯಾವ ಪ್ರಾಡಕ್ಟ್ಸ ನ್ನೇ ಆಗಲಿ, ಬಳಸುವ ಮುನ್ನ ಮಾತ್ರ ತೆರೆಯಿರಿ, ಕೊಂಡ ತಕ್ಷಣ ಅಲ್ಲ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ