ಸಮಾಜ ಇಷ್ಟು ಅಸಹಾಯಕ ಏಕೆ?
47 ವರ್ಷದ ಒಬ್ಬ ನಡುವಯಸ್ಸಿನ ವ್ಯಕ್ತಿ 4 ವರ್ಷದ ಹಸುಗೂಸನ್ನು ಚಾಕಲೇಟ್ ಆಮಿಷವೊಡ್ಡಿ ಸೈಕಲ್‌ನಲ್ಲಿ ಸವಾರಿ ಕರೆದೊಯ್ದು, ದೂರ ಪ್ರದೇಶದಲ್ಲಿ ಅದರ ಮೇಲೆ ಅತ್ಯಾಚಾರ ಮಾಡಿ, ಸಾಕ್ಷ್ಯಾಧಾರ ಸಿಗದಂತೆ ಕಲ್ಲಿನಿಂದ ಅದರ ತಲೆ ಜಜ್ಜಿಹಾಕಿದರೆ ಇದಕ್ಕಿಂತ ಬರ್ಬರ ಕೃತ್ಯ ಮತ್ತೊಂದಿರಲು ಸಾಧ್ಯವೇ? ಆದರೆ ಕಾಮತೃಷೆ ಯಾವ ಹೀನಾಯ ಮಟ್ಟ ಮುಟ್ಟುತ್ತದೆಂದರೆ ಅದು ಬಹಿರಂಗವಾಗಿಯೇ ಬಿಂಬಿಸಲ್ಪಡುತ್ತದೆ. ಯಾರು ಹಿಂಸಕ, ಕ್ರೂರಿ, ಅಶಿಕ್ಷಿತ ಅಲ್ಲವೋ ಅಂಥವರಿಂದಲೂ ಹೀಗಾಗಲು ಸಾಧ್ಯವಿದೆ.
ಇಷ್ಟಕ್ಕೂ ಆ ಮಗು ಈ ಪಾಪಿಯ ಪರಿಚಿತರ ಕೂಸು. ಇವನನ್ನು ಮಾಮ ಎನ್ನುತ್ತಾ ಸಲುಗೆ ವಹಿಸಿರಬಹುದು. ಈ ಪಾಪಿ ಅಂಥ ಮುಗ್ಧ ಮಗುವಿನ ಮೇಲೆ ಪೈಶಾಚಿಕ ಅತ್ಯಾಚಾರ ಮಾಡಿದ್ದಲ್ಲದೆ, ಅದು ದೂರಬಾರದೆಂದು ಅತಿ ಕ್ರೂರವಾಗಿ ಅದರ ತಲೆ ಜಜ್ಜಿ ಕೊಲೆ ಮಾಡಿದ್ದಾನೆ. ಇದಕ್ಕಿಂತಲೂ ಅತಿ ದುಃಖದ ವಿಷಯವೆಂದರೆ ಅವನು ತನ್ನನ್ನು ತಾನು ಇನ್ನೂ ಸಂಭಾವಿತನೆಂದೇ ಬಿಂಬಿಸಿಕೊಳ್ಳಲು ಯತ್ನಿಸಿದ್ದು, ತನಗೆ ಒದಗಬಹುದಾದ ಮೃತ್ಯುದಂಡನೆಯಿಂದ ಮಾಫಿ ಪಡೆಯಲು, ಇವನನ್ನು ಸೆರೆಮನೆಗೆ ತಳ್ಳಿದಾಗ, ಅಪರಾಧಿಗಳ ವರ್ತನೆಯಲ್ಲಿ ಸುಧಾರಣೆ ತರಲು ಇರುವಂಥ, ಇಂದಿರಾಗಾಂಧಿ ಓಪನ್ ಯೂನಿರ್ಸಿಟಿಯ ಪರೀಕ್ಷೆಗೆ ಹಾಜರಾಗಿ, ಡ್ರಾಯಿಂಗ್ ಸ್ಪರ್ಧೆಯಲ್ಲೂ ಪಾಲ್ಗೊಂಡಿದ್ದ. ಅಂದರೆ ಈ ಅಪರಾಧಿ ಇಂಥ ಹೇಯಕೃತ್ಯದ ನಂತರ ನೇಣುಗಂಬ ಏರುವುದರಿಂದ ತಪ್ಪಿಸಿಕೊಳ್ಳಲು ಮಾಡಬಾರದ ಪ್ರಯತ್ನಗಳನ್ನೆಲ್ಲಾ ಮಾಡುತ್ತಿದ್ದಾನೆ.
ಸುಮಾರು 8 ವರ್ಷಗಳ ನಂತರ ಅವನ ಕಡೆಯಿಂದ ಬಂದಿದ್ದ ಕೊನೆಯ ಅಪೀಲ್‌ನ್ನು ತಿರಸ್ಕರಿಸಲಾಯಿತು. ಆದರೆ ಇವನನ್ನು ಯಾವಾಗ ನೇಣಿಗೇರಿಸುತ್ತಾರೆ….? ಅದಂತೂ ಯಕ್ಷಪ್ರಶ್ನೆಯಾಗಿಯೇ ಉಳಿದಿದೆ. ಅದಕ್ಕೆ ಮತ್ತೆ 4-5 ವರ್ಷಗಳ ಕಾಲಾವಕಾಶ ಹಿಡಿದರೂ ಆಶ್ಚರ್ಯವೇನಿಲ್ಲ.
ಯಾರು ಇಂಥ ಅತ್ಯಾಚಾರ ಎಸಗಿದ ಪಾಪಿಗಳಿಗೆ ತಕ್ಷಣ ಗಲ್ಲುಶಿಕ್ಷೆ ಆಗಬೇಕೆಂದು ಬೇಡಿಕೆ ಇರಿಸುತ್ತಾರೋ, ಅಂಥವರು ತಾಳ್ಮೆಯಿಂದ ವರ್ಷಗಟ್ಟಲೇ ಕಾಯಬೇಕಾಗಿರುವುದು ನಮ್ಮ ಕಾನೂನಿನ ಕ್ರಮವಾಗಿದೆ. ಕಾನೂನು ತನ್ನ ಕೈಚಳಕವನ್ನು ಸರಿಯಾಗಿಯೇ ತೋರುತ್ತಿದ್ದರೂ, ಇಂಥವರಿಗೆ ಶಿಕ್ಷೆ ಆಗುವಷ್ಟರಲ್ಲಿ ಎಷ್ಟೋ ವರ್ಷ ಕಳೆದಿರುತ್ತದೆ. ಸಾಮಾನ್ಯವಾಗಿ ಅಪರಾಧಿ ಜೇಲು ಸೇರಿದ ಮೇಲೆ, ಕೋರ್ಟುಗಳಲ್ಲಿ ಅಪರಾಧ ಸಾಬೀತುಪಡಿಸಬೇಕಿರುವ ಪೊಲೀಸ್ ಹಾಗೂ ವಕೀಲರ ಸಣ್ಣಪುಟ್ಟ ದೋಷಗಳಿಂದಾಗಿ ಇವರಿಗೆ ಲಾಭ ಆಗಿ, ಶಿಕ್ಷೆ ಇನ್ನೂ ಮುಂದೂಡಲ್ಪಡುತ್ತದೆ.
ಅಪರಾಧಿ ಮೊದಲು ಸೆಶನ್ ಕೋರ್ಟ್ ನಂತರ ಹೈಕೋರ್ಟ್, ಸಿಂಗಲ್ ಜಡ್ಜ್ ಹೈ ಕೋರ್ಟ್ ನಂತರ ಡಿವಿಷನ್ ಬೆಂಚ್ ಹಾಗೂ ಹೈಕೋರ್ಟ್ ನಂತರ ಸುಪ್ರೀಂಕೋರ್ಟ್ ಮತ್ತು ಎಷ್ಟೋ ಸಲ ಸುಪ್ರೀಂಕೋರ್ಟ್‌ನ ಆದೇಶಕ್ಕೆ ಪಿಟೀಶನ್ ಸಲ್ಲಿಸುತ್ತಾ ಇರುತ್ತಾರೆ. ಇಷ್ಟೆಲ್ಲ ಅಪರಾಧ ಮಾಡಿದ್ದರೂ ತಮ್ಮನ್ನು ತಾವು ಮುಗ್ಧರೆಂದು ಸಾಬೀತುಪಡಿಸಲು ಇನ್ನಿಲ್ಲದ ಪ್ರಯತ್ನ ನಡೆಸುತ್ತಾರೆ.
ಈ ಪ್ರಕರಣದಲ್ಲಿ ಮಹಾರಾಷ್ಟ್ರದ ಈ ಅಪರಾಧಿ ಬಸಂತ್ ಸಂಪತ್‌ನ ಕುಟುಂಬದ ಬಳಿ ಅಪೀಲ್ ಮೇಲೆ ಅಪೀಲ್‌ಗೆ ಮೊರೆಹೋಗಲು ಅಷ್ಟು ರಾಶಿ ಹಣ ಎಲ್ಲಿಂದ ಬಂತು? ಇದಂತೂ ಗೊತ್ತಿಲ್ಲ.
ಏಕೆಂದರೆ ಅಪರಾಧ ನಡೆದ ದಿನ ಇವನು ಆ ಹಸುಗೂಸನ್ನು ಸೈಕಲ್‌ನಲ್ಲೇ ಕರೆದೊಯ್ದಿದ್ದ, ಅಂದರೆ ಬೈಕ್‌ವುಳ್ಳವನೂ ಅಲ್ಲ…. ಹಾಗಿದ್ದೂ ಇಂಥ ಅಮಾನವೀಯ ಅಪರಾಧ ಮಾಡಿದ ವ್ಯಕ್ತಿಯನ್ನು ಉಳಿಸಿಕೊಳ್ಳೋಣ ಎಂದು ಅವನ ಮನೆಯವರು ಲಕ್ಷಾಂತರ ಹಣ ಖರ್ಚು ಮಾಡಿ ವರ್ಷಗಟ್ಟಲೇ ಕೇಸ್ ಎಳೆದಾಡಿದ್ದಾರೆ.
ನಮ್ಮ ದೇಶದ ಕಾನೂನಿನ ಮೂಗಿನಡಿ ನ್ಯಾಯ ಸಿಗುವುದು ಎಷ್ಟು ತಡ…. ಗೊತ್ತೇ ಇದೆ. ಇದಕ್ಕಿಂತಲೂ ಘೋರ ಕಾರಣ ಎಂದರೆ ಸಮಾಜದಲ್ಲಿ ಅಪರಾಧಿಗೆ ಆಸರೆ ಸಿಕ್ಕುವುದು. ಅದು ನಿರ್ಭಯಾ ಕಾಂಡದಂಥ ಬಹು ಚರ್ಚಿತ ಪ್ರಕರಣವಿರಲಿ ಅಥವಾ ನಿಠಾರಿಯ ಸೀರಿಯಲ್ ಕಿಲ್ಲಿಂಗ್ ಕೇಸ್ ಇರಲಿ, ಇಂಥ ಅಪರಾಧಿಯೂ ಸಾಮಾನ್ಯ ಪೀಡಿತ ವ್ಯಕ್ತಿಯ ಹಾಗೆ ಕಾನೂನಿನ ಕೈಲಿ ಸುರಕ್ಷಿತಾಗುತ್ತಾನೆ. ಎಷ್ಟೋ ಸಲ ಇಂಥ ಕೇಸುಗಳಲ್ಲಿ ಅಕಸ್ಮಾತ್ ಅತ್ಯಾಚಾರಕ್ಕೆ ಒಳಗಾದವಳು ಬದುಕುಳಿದರೆ, ಅವಳಿಗೆ ಬೆದರಿಕೆ ಒಡ್ಡಿ ಅಥವಾ ಹಣದಾಸೆ ತೋರಿಸಿ, ಅವಳ ಬಾಯಿ ಮುಚ್ಚಿಸಿಬಿಡುತ್ತಾರೆ. ಏಕೆಂದರೆ ಇಂಥ ಪ್ರಕರಣಗಳಲ್ಲಿ ಆಗುವ ವಿಳಂಬದ ಕಾರಣ, ಆ ಸಮಯದ ದುರುಪಯೋಗವನ್ನು ಸಾಕ್ಷಿಗಳ ಬಾಯಿ ಮುಚ್ಚಿಸಲು ಅಥವಾ ಸಂತ್ರಸ್ತಳಿಂದ ತೀರ್ಪನ್ನೇ ಬದಲಿಸಿಬಿಡುವಂಥ ಕೆಲಸಗಳು ನಡೆದುಹೋಗುತ್ತವೆ.
ಅತ್ಯಾಚಾರ, ಅದರಲ್ಲೂ ಮುಗ್ಧ ಮಕ್ಕಳ ಮೇಲೆ, ಏನೇ ಆದರೂ ಅಕ್ಷಮ್ಯವೇ ಸರಿ. ಇದೊಂದು ಪಶುವರ್ತನೆ ಎಂದು ದೂರ ಸರಿಸುವ ಕೇಸಲ್ಲ, ಏಕೆಂದರೆ ಪಶುಗಳೂ ಕೂಡ ಈ ಮಟ್ಟಕ್ಕೆ ಕುಕೃತ್ಯ ಎಸಗಲಾರವು. ಆದರೆ ನಮ್ಮ ಸಮಾಜದ ಅಸಹಾಯಕತೆಯ ಲಾಭ ಪಡೆಯಲೆಂದೇ, ಕಾಗದದ ಹಾಳೆಗಳ ಮೇಲೆ ಇಂಥ ಕುಕೃತ್ಯಗಳ ಕುರಿತು ಎಷ್ಟೇ ಹೇಳಿರಲಿ, ಅಂತಿಮವಾಗಿ ಗೆಲುವು ಸಿಗುವುದು ಕಾನೂನು ಚೌಕಟ್ಟಿನ ಇತಿಮಿತಿಗಳಲ್ಲೇ! ಇವನ ಕೇಸಿನಲ್ಲಿ ಜೈಲು ಶಿಕ್ಷೆಯೂ ಆಯಿತು, ಮರಣದಂಡನೆ ಏನೋ ಸಿಕ್ಕಿತು, ಆದರೂ ಅದು ಸಿಗುವಷ್ಟರಲ್ಲಿ ಇವನು 8-10 ವರ್ಷ ಹಾಯಾಗಿ ಜೀವನ ಕಳೆದಿದ್ದ, ಎಷ್ಟೋ ಗಂಭೀರ ಕಾಯಿಲೆಗಳಿಗೂ ಇಷ್ಟು ಕಾಲಾವಕಾಶ ದಕ್ಕುವುದಿಲ್ಲ.
ಮೊಬೈಲ್ ಕ್ರಾಂತಿಯ ದುರುಪಯೋಗ
ದೇಶದಲ್ಲಿ ಮೊಬೈಲ್ ಕ್ರಾಂತಿಯ ಪರಿಣಾಮ ಮನೆಮನೆಯಲ್ಲೂ ಗೋಚರಿಸುತ್ತಿದೆ. ಕುಟುಂಬದ ಸದಸ್ಯರು ಈಗ ಮಾತಾಡುವುದಿಲ್ಲ, ಆಲ್ಫಾಬೆಟ್ ಒತ್ತುತ್ತ ಇರುತ್ತಾರೆ, ಇಲ್ಲಿ ವ್ಯರ್ಥ ವಿಡಿಯೋ ನೋಡುತ್ತಾ ಕೂತಿರುತ್ತಾರೆ. ಅಪರಿಚಿತರೊಂದಿಗೆ ಹೆಚ್ಚುತ್ತಿರುವ ಅಂತರಕ್ಕೆ ಇದನ್ನೇ ಕಾರಣ ಎಂದು ಹೇಳಬಹುದು. ಏಕೆಂದರೆ ಮೊಬೈಲ್‌ನಲ್ಲಿ ಪ್ರತಿ ಸೆಕೆಂಡ್‌ಗೆ ಅಟೆಂಡ್ ಮಾಡದಿದ್ದರೆ ಆ ಸಂದೇಶ ಅಳಿಸಿ ಹೋಗಬಹುದು ಇಲ್ಲವೇ ಮಾಯಾಗಬಹುದು ಎಂಬಂತೆ ವರ್ತಿಸುತ್ತಾರೆ.
ಮನೆಯ ಸಮಸ್ಯೆಗಳು ಪರರ ಸಮಸ್ಯೆ ಎಂಬಂತೆ ಭಾಸವಾಗುತ್ತಿವೆ, ಪರರ ಭಾವನಾತ್ಮಕ ನಿಕಟತೆ ಹೆಚ್ಚುತ್ತಾ ಹೊರಟಿವೆ. ಕೆಲವೊಂದು ವಿಷಯಗಳನ್ನು ನಾವು ಅವರಿವರೊಂದಿಗೆ ಹೇಳಲು ಸಂಕೋಚಪಡುತ್ತೇವೆ. ಏಕೆಂದರೆ ಅವರು ತಪ್ಪು ಭಾವಿಸದಿರಲಿ ಎಂಬುದಾಗಿರುತ್ತದೆ. ಆದರೆ ಮೊಬೈಲ್ ಮುಖಾಂತರ ನಾವು ಹಿಂದೆಮುಂದೆ ಯೋಚಿಸದೆ ಒಂದು ಸಂಗತಿಯನ್ನು ನೂರಾರು ಸಾವಿರಾರು ಜನರ ಮುಂದೆ ಹೇಳಿಬಿಡುತ್ತೇವೆ. ಫೇಸ್‌ಬುಕ್, ವಾಟ್ಸ್ಆ್ಯಪ್, ಇನ್‌ಸ್ಟಾಗ್ರಾಮ್ ನಿಂದಾಗಿ ಬಹಳಷ್ಟು ಸಂಬಂಧಗಳು ಹಳಸುತ್ತಿವೆ.
ಇತ್ತೀಚೆಗೆ ಮೊಬೈಲ್ ಕ್ರಾಂತಿಯನ್ನು ಸಾಕಷ್ಟು ಪ್ರಮಾಣದಲ್ಲಿ ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ. ಗೂಗಲ್, ಫೇಸ್‌ಬುಕ್, ವಾಟ್ಸ್ಆ್ಯಪ್, ಇನ್‌ಸ್ಟಾಗ್ರಾಮ್ ಮುಂತಾದ ಗ್ರಾಹಕರನ್ನು ಮೂರ್ಖರನ್ನಾಗಿಸಿ ಕೋಟಿ ಕೋಟಿ ಬಾಚಿಕೊಳ್ಳುತ್ತಿವೆ.
ಮೊಬೈಲ್‌ನಲ್ಲಿ ನಮ್ಮ ವೈಯಕ್ತಿಕ ವಿಷಯಗಳನ್ನು ತೆರೆದಿಡುವುದು ಅಪಾಯಕಾರಿ. ಅದು ಕೌಟುಂಬಿಕ ಸಂಬಂಧಗಳಿಗೆ ಮಾರಕವಾಗಿ ಪರಿಣಮಿಸುತ್ತಿದೆ. ಮೊಬೈಲ್ ಒಂದು ಸಂಪರ್ಕ ಸಾಧನ ಎಂಬುದೇನೋ ನಿಜ. ಅದಕ್ಕೆ ಸಂಬಂಧ ಬೆಳೆಸುವ, ಹದಗೆಡಿಸುವ ಶಕ್ತಿ ಇದೆ. ಇದರಿಂದಾಗಿ ಇಡೀ ಜಗತ್ತೇ ತನ್ನ ವ್ಯಕ್ತಿತ್ವ ಕಳೆದುಕೊಂಡಿದೆ.
ಮೊಬೈಲ್ ಕ್ರಾಂತಿಯ ಬಳಿಕ ಬಹು ವೇಗದಲ್ಲಿ ಆರ್ಥಿಕ ಬೆಳವಣಿಗೆ ಆಗಬಹುದು, ಹಸಿವು, ಭಯ ನಿವಾರಣೆ ಆಗಬಹುದು, ಆರ್ಥಿಕ ಸುರಕ್ಷತೆ ಹೆಚ್ಚಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಆ ನಿರೀಕ್ಷೆ ಹುಸಿಯಾಗಿದೆ. ಇದರಲ್ಲಿ ಪ್ರತಿಯೊಬ್ಬ ಮನೆಯ ಗೃಹಿಣಿ, ಮಕ್ಕಳ ಪಾತ್ರ ಹೆಚ್ಚಿಗೆ ಇದೆ.
ಭಯೋತ್ಪಾದಕರಿಂದ ಹಿಡಿದು ಶಾಸಕರ ತನಕ ಹಲವು ಹಗರಣಗಳಿಗೆ ಈ ಮೊಬೈಲ್ ಕ್ರಾಂತಿ ಕೂಡ ಕಾರಣವಾಗಿದೆ. ಏಕೆಂದರೆ ಜನ ಮೊಬೈಲ್ ಎಂಬ ಕೈಕೋಳದಲ್ಲಿ ತಮ್ಮನ್ನು ತಾವು ಬಂಧಿಯಾಗಿಸಿಕೊಂಡಿರುವುದು ಇವರಿಬ್ಬರಿಗೂ ಚೆನ್ನಾಗಿ ಗೊತ್ತು.
ಕೈಕೋಳದಲ್ಲಿ ಬಂಧಿಯಾಗಿರುವ ಜನ ಎಂದೂ ಸುಖಿ, ಸಹಜ ಹಸನ್ಮುಖಿ ಪರಿವಾರದ ನಿರ್ಮಾಣ ಮಾಡಲು ಸಾಧ್ಯವಿಲ್ಲ. ಪುಸ್ತಕಗಳ ಮುಖಾಂತರ ಯಾವ ವಿಚಾರಗಳು ಹಿಂದಿನ ಪೀಳಿಗೆಯ ಮನೆ ಮನೆಗೆ ತಲುಪುತ್ತಿದ್ದವೋ, ಅವೆಲ್ಲವನ್ನು ಮೊಬೈಲ್ ಕ್ರಾಂತಿ ಮೂಲೆಗುಂಪು ಮಾಡಿದೆ. ಧರ್ಮ, ಕಂದಾಚಾರಗಳು, ಮತಾಂಧರ ತಾಳಕ್ಕೆ ತಕ್ಕಂತೆ ಕುಣಿಯುಂತೆ ಮಾಡಿವೆ.
ಇದೆಂಥ ಹಠಮಾರಿತನ?
ಮರಗಳು ಜೀವನಕ್ಕೆ ಅತ್ಯವಶ್ಯಕ. ಆದರೆ ಅವು ಎಲ್ಲೆಂದರಲ್ಲಿ ಬೆಳೆದಾಗ, ಅವುಗಳ ಬಳಿ ರಾಮ, ಅಂಬೇಡ್ಕರ್‌ರ ಮೂರ್ತಿ ಇಟ್ಟು ಅವನ್ನು ಒಂದು ಸ್ಮಾರಕದ ಹಾಗೆ ಗೌರವಿಸುವುದು, ಮರಗಳನ್ನು ಕತ್ತರಿಸಿದಾಗ ಗಲಾಟೆ ಮಾಡುವುದು ತಪ್ಪು.
ದೆಹಲಿಯ ಪ್ರಗತಿ ಮೈದಾನದಲ್ಲಿ 1500 ಮರಗಳಿವೆ. ಅವು 30-40 ವರ್ಷಗಳಿಂದ ಇವೆ. ಈಗ ಇಡೀ ಪ್ರದೇಶವನ್ನು ಹೊಸ ರೀತಿಯಲ್ಲಿ ವಿನ್ಯಾಸಗೊಳಿಸಬೇಕಾಗಿದೆ. ಅದಕ್ಕಾಗಿ ಕೆಲವು ಮರಗಳನ್ನು ಕತ್ತರಿಸುವುದು ಅನಿವಾರ್ಯವಾಗಿದೆ. ಅದಕ್ಕಾಗಿ ಭಾರಿ ಗಲಾಟೆಯೇ ನಡೆಯುತ್ತಿದೆ. ಅದೇ ರೀತಿ ದೆಹಲಿಯ ಮತ್ತೊಂದು ರಸ್ತೆ ಅಗಲವೇನೊ ಆಯಿತು. ಆದರೆ ಅಲ್ಲಿ ಹತ್ತೆಂಟು ಮರಗಳು ಅಡ್ಡಿಯಾಗಿವೆ. ಜನರು ಅವನ್ನು ರಕ್ಷಿಸಲು ಹೋರಾಡುತ್ತಿದ್ದಾರೆ.
ಮನೆಯ ಬಾಗಿಲಲ್ಲಿ ಅಥವಾ ಆವರಣದಲ್ಲಿ ಗಿಡ ನೆಡುವ ಪರಂಪರೆ ಸಾವಿರಾರು ವರ್ಷಗಳಿಂದ ನಡೆಯುತ್ತಲೇ ಇದೆ. ಆದರೆ ಅಗತ್ಯ ಬಿದ್ದಾಗ ಮರ ಕಡಿಯಲು ನಿರ್ಬಂಧ ಹೇರಿದರೆ ಜನರು ಸಸಿ ನೆಡುವುದನ್ನೇ ನಿಲ್ಲಿಸಿಬಿಡಬಹುದು. ಮರಗಳನ್ನು ಎಲ್ಲಿಯವರೆಗೆ ಬೆಳೆಸಲಾಗುತ್ತದೆ ಎಂದರೆ ಮಾನವ ಪೀಳಿಗೆಗೆ ಸುಖ ನೆಮ್ಮದಿ ಕೊಡುವ ತನಕ. ಒಂದು ವೇಳೆ ಅವನ್ನು ಆರಾಧ್ಯ ದೈವ ಅಥವಾ ನಿಸರ್ಗಕ್ಕೆ ಅನಿವಾರ್ಯ ಎಂದು ಜನರ ಮೇಲೆ ಹೇರಿದರೆ ಜನರು ಅವುಗಳನ್ನು ನೆಡುವುದನ್ನೇ ನಿಲ್ಲಿಸಿಬಿಡಬಹುದು.
ಅರಳಿ ಮರಗಳನ್ನು ಕಡಿಯಲು ಧಾರ್ಮಿಕ ನಿರ್ಬಂಧ ಇದೆ. ಹೀಗಾಗಿ ಜನರು ಅವನ್ನು ನೆಡುವುದು ಕಡಿಮೆಯೇ. ಅವು ಬಹುವರ್ಷ ಬಾಳಲು ತಂತಾನೇ ಬೆಳೆಯುವುದೇ ಕಾರಣವಾಗಿದೆ.
ಮರಗಳ ರಕ್ಷಣೆ ಅತ್ಯವಶ್ಯ. ಅದೇ ರೀತಿ ಹೊಸ ಸಸಿಗಳನ್ನು ನೆಡುವ ಅವಶ್ಯಕತೆಯೂ ಇದೆ. ಅವನ್ನು ಅಗತ್ಯಕ್ಕನುಗುಣವಾಗಿ ಕಡಿಯುವ ಸೌಲಭ್ಯ ಇರಬೇಕು. ಜೀವನ ಎಂತಹ ಒಂದು ನಗರವನ್ನು ನಿರ್ಮಿಸುತ್ತಿದೆ ಎಂದರೆ, ಅಲ್ಲಿ ಪ್ರತಿಯೊಂದು ಹಂತದಲ್ಲೂ ಸಸಿ ನೆಡುವ ವ್ಯವಸ್ಥೆ ಇರುತ್ತದೆ. ಮುಂದೆ ಆ 30,000 ಜನಸಂಖ್ಯೆಯ ನಗರ ಹೇಗೆ ಕಾಣುತ್ತದೆ ಎಂದರೆ, ಆ ಇಡೀ ನಗರವೇ ಕಾಡಿನಲ್ಲಿದೆ ಎಂಬಂತೆ ಭಾಸವಾಗಲಿದೆ. ಇದು ಸಾಧ್ಯವಾಗುವುದು ಮರಗಳ ಬಗ್ಗೆ ಹಠಮಾರಿ ಧೋರಣೆ ನಿಂತಾಗ ಮಾತ್ರ.
ದೇಶದಲ್ಲಿ ಈಗಲೂ ಸೌದೆಯ ಕೊರತೆ ಇದೆ. ಆ ಕಾರಣದಿಂದ ಬಡವರು ಮರಗಳ ಭಾಗಗಳನ್ನು ಕತ್ತರಿಸುತ್ತಲೇ ಇರುತ್ತಾರೆ. ಆ ಉದ್ದೇಶಕ್ಕೆ ಯಾರೂ ನಿರ್ಬಂಧ ಹೇರುವುದಿಲ್ಲ. ಅವರು ರಾತ್ರೋರಾತ್ರಿ ಮರಗಳನ್ನು ನಾಶ ಮಾಡುತ್ತಿದ್ದಾರೆ. ಸ್ಲಮ್ ಗಳಲ್ಲಿ ಮರಗಳು ಇಲ್ಲವೇ ಇಲ್ಲ ಎನ್ನುವ ಮಟ್ಟಿಗೆ ಅವುಗಳ ಸಂಖ್ಯೆ ಕುಸಿದಿದೆ. ಏಕೆಂದರೆ ಅಲ್ಲಿ ಅಡುಗೆ ಮಾಡಲು ಸೌದೆಯೇ ಬೇಕು. ಅಲ್ಲಿಯ ಮರಗಳನ್ನು ಉಳಿಸುವುದು ಕಾಲೋನಿಯ ಮರಗಳನ್ನು ಉಳಿಸುವುದಕ್ಕಿಂತ ಹೆಚ್ಚಿನ ಅವಶ್ಯಕತೆ ಇದೆ.
ಪರಿಸರದ ಹೆಸರಿನಲ್ಲಿ ಧಾರ್ಮಿಕ ಕಂದಾಚಾರಗಳನ್ನು ಅನುಸರಿಸುವುದು ತಪ್ಪು. ಅದು ಪರಿಸರಕ್ಕೆ ಮಾರಕ. ನಗರಗಳ ವಿಕಾಸಕ್ಕೆ ಕೆಲವು ಮರಗಳನ್ನು ಕತ್ತರಿಸುವುದು ಅನಿವಾರ್ಯ. ಕತ್ತರಿಸಿದ ಮರದ ಜಾಗದಲ್ಲಿ ಹೊಸ ಸಸಿಗಳನ್ನು ನೆಟ್ಟೇ ನೆಡುತ್ತಾರೆ. ಯಾವುದೇ ನಗರ, ಕಾಲೋನಿ ಅಥವಾ ಮನೆಯೊಂದು ಸುಂದರಾಗಿ ಕಾಣುವುದು ಮರಗಳಿಂದಲೇ! ಮನುಷ್ಯ ಮರದ ವೈರಿ ಆಗುವುದು ಅವನು ಮೂರ್ಖನಾದಾಗ ಮಾತ್ರ.