ಲೇಡಿ ಡಾಕ್ಟರ್‌ : ಎಲ್ಲಿ ಮರಿ.... ಸ್ವಲ್ಪ ಆಳವಾಗಿ ಉಸಿರು ಎಳೆದುಕೋ... ಏನಾದರೂ ಫೀಲ್‌ ಮಾಡು.

ಹುಡುಗ : ಓ.ಕೆ. ಡಾಕ್ಟರ್‌

ಡಾಕ್ಟರ್‌ : ಏನಾದ್ರೂ ಫೀಲ್ ಆಯಿತೇ?

ಹುಡುಗ : ನಿಮ್ಮ ಡಿಯೋ ಸುವಾಸನೆ ಬಲು ಬೊಂಬಾಟ್‌ ಆಗಿದೆ ಮೇಡಂ!

ಯಾಕಾದರೂ ಅಂದು ಸ್ಲೀವ್ ಲೆ‌ಸ್‌ ಬ್ಲೌಸ್‌ ಧರಿಸಿ ಬಂದೆನೋ ಎಂದು ಡಾಕ್ಟರ್‌ ತಲೆ ಚಚ್ಚಿಕೊಂಡರಂತೆ!

ಆ ದಿನ ಗುಂಡ ಆಫೀಸಿನಲ್ಲಿ ಕೆಲಸ ಮಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಫೋನ್‌ ರಿಂಗಾಯಿತು. ಹೆಂಡತಿ ಫೋನ್‌ ಮಾಡಿದ್ದಳು. ಅವನಿಗೆ ಸಾರಿ ಹೇಳಿದಳು. ಬಹಳ ಬಿಕ್ಕಳಿಸುತ್ತಾ ಇದನ್ನು ಹೇಳಿದಳು, ``ಇನ್ನು ಮುಂದೆ ನಿಮ್ಮೊಂದಿಗೆ ಎಂದೂ ಜಗಳ ಆಡುವುದಿಲ್ಲ. ನೀವು ಹೇಳಿದ ಎಲ್ಲಾ ಕೆಲಸವನ್ನೂ ಚಾಚೂ ತಪ್ಪದೆ ಮಾಡ್ತೀನಿ.... ಒಳ್ಳೆಯವಳಾಗಿ ಇರ್ತೀನಿ....''

ಇದನ್ನೆಲ್ಲ ಕೇಳಿ ಗುಂಡನಿಗೆ ಹೃದಯ ತುಂಬಿ ಬಂದಂತಾಯಿತು. ಆಮೇಲೆ ನೋಡುತ್ತಾನೆ.... ಅದು ಅವನ ಹೆಂಡತಿಯ ನಂಬರ್‌ ಅಲ್ಲ... ಧ್ವನಿಯಲ್ಲಿ ಎಂದೂ ಇಷ್ಟು ಸೌಮ್ಯತೆ ಇರಲಿಲ್ಲ... ಯಾರ ಹೆಂಡತಿಯೋ ಏನೋ? ರಾಂಗ್‌ ನಂಬರ್‌ ಇರಬೇಕು. ಆದರೆ ಅದನ್ನು ಕೇಳಿಸಿಕೊಂಡು ಅವನಿಗೆ ಬಹಳ ಖುಷಿ ಆಗಿದ್ದಂತೂ ನಿಜ!

ಅಮಿತ್‌ : ಗಂಡಸರ ಹೆಸರಿನ ಹಿಂದೆ ಚಿ. ಎಂದೇಕೆ ನಮೂದಿಸುತ್ತಾರೆ?

ಸುಮಿತ್‌ : ಏಕೆಂದರೆ ಆತ ಸದಾ ಚಿಂತಾಗ್ರಸ್ತ.

ಅಮಿತ್‌ : ಹೆಣ್ಣಿನ ಹೆಸರಿನ ಹಿಂದೆ ಅ.ಸೌ. ಎಂದೇಕೆ ನಮೂದಿಸುತ್ತಾರೆ?

ಸುಮಿತ್‌ : ಕೆಲವರು ಅದನ್ನು ಅಖಂಡ ಸೌಭಾಗ್ಯವತಿ ಎನ್ನುತ್ತಾರಾದರೂ ಅಷ್ಟಿಷ್ಟು ಸೌಜನ್ಯ ರೂಢಿಸಿಕೊಳ್ಳಲಿ ಎಂಬುದೇ ಒಳಾರ್ಥ!

ಒಮ್ಮೆ ಗುಂಡನ ಮನೆಗೆ ರಾತ್ರಿ ಕಳ್ಳ ಹೇಗೋ ನುಗ್ಗಿ ಬಂದಿದ್ದ. ದಢೂತಿ ಹೆಂಡತಿ ಗುಂಡಿಯ ನೆರವಿನಿಂದ ಗುಂಡ ಅವನನ್ನು ಸೆರೆಹಿಡಿದ. ಅವನು ತಪ್ಪಿಸಿಕೊಳ್ಳಬಾರದೆಂದು ಕಳ್ಳನ ಮೇಲೆ ಎಗರಿ ಕುಳಿತ ಗುಂಡಿ, ``ಹೋಗ್ರಿ.... ಬೇಗ ಹೋಗಿ ಪೊಲೀಸರನ್ನು ಕರೆತನ್ನಿ!'' ಎಂದಳು.

ಅದನ್ನು ಕೇಳಿಸಿಕೊಂಡು ಗುಂಡ ಅಲ್ಲಿ ಇಲ್ಲಿ ಹುಡುಕಾಡ ತೊಡಗಿದ.

ಗುಂಡಿ : ಏನ್ರಿ ಹುಡುಕ್ತಿದ್ದೀರಿ.... ಬೇಗ ಹೋಗಿ ಪೊಲೀಸರನ್ನು ಕರೆತನ್ನಿ!

ಗುಂಡ : ನನ್ನ ಹೊಸ ಚಪ್ಪಲಿ ಎಲ್ಲೋ ಕಾಣಿಸ್ತಾ ಇಲ್ಲ......

ಕಳ್ಳ : ಅಯ್ಯೋ! ನನ್ನದೇ ಹಾಕ್ಕೊಂಡು ಹೋಗ್ರಿ.... ನೀವು ಪೊಲೀಸರನ್ನು ಬೇಗ ಕರೆತರದಿದ್ರೆ ನಾನು ಉಸಿರುಗಟ್ಟಿ ಇಲ್ಲೇ ಸತ್ತು ಹೋಗ್ತೀನಷ್ಟೆ.......

ಮಗ : ಅಮ್ಮ, `ಲವ್ ಮ್ಯಾರೇಜ್‌' ಆಗುವುದರಿಂದ ಮನೆಯವರೆಲ್ಲರೂ ತಿರುಗಿ ಬೀಳುವರೇ?

ತಾಯಿ : ಅಯ್ಯೋ.... ಅಷ್ಟಲ್ಲದೆ ಇನ್ನೇನಪ್ಪ? ನೀನು ಯಾರೋ ಸರಿಯಾದ ಲಂಕಿಣಿಯ ಮೋಹಜಾಲಕ್ಕೆ ಸಿಕ್ಕಿಬಿದ್ದಿರುವೆ ಅನ್ಸುತ್ತೆ. ಇದನ್ನೆಲ್ಲ ಅವಳೇ ಹೇಳಿಕೊಟ್ಟು, ಮನೆ ಆಸ್ತಿ ನಿನ್ನ ಹೆಸರಿಗೆ ಮಾಡಿಸಿಕೊಂಡು ಆ ಮನೆ ಬಿಟ್ಟು ಬಾ ಅಂದಿರಬೇಕಲ್ಲವೇ? ಈ ಮಾಡರ್ನ್‌ ಕಾಲದಲ್ಲಿ ಇಂಥ ತಾಟಕಿಯರಿಗೆ ಏನೇನೂ ಕಮ್ಮಿ ಇಲ್ಲ ಬಿಡು. ಬಂಗಾರದಂಥ ಮಗ ನೀನು, ನಿನ್ನ ಮೇಲೆ ಮಂಕುಬೂದಿ ಎರಚಿ ವಶೀಕರಣ ಮಾಡಿಕೊಂಡಿದ್ದಾಳಾ ಆ ಮಿಟಕಲಾಡಿ? ನೋಡಪ್ಪ... ಇಂಥ ಮಾಯಾಂಗನೆಯರ ಸಹವಾಸಕ್ಕೆ ಹೋಗದೆ ದೂರ ಇದ್ದುಬಿಡು. ನಿನ್ನ ಆಫೀಸಿನಲ್ಲೂ ಸ್ಟೆನೋ, ಟೈಪಿಸ್ಟು ಅಂತ ಇರ್ತಾರಲ್ಲ...ಅವರನ್ನು ಮಾತನಾಡಿಸಲೇ ಬೇಡ.... ಅವರ ಮನೆತನ ಎಂಥ ಹಾಳಾದ್ದು ಅಂತ ಗೊತ್ತಾಗುತ್ತೆ ನೋಡು...

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ