ಮಾಯಿಶ್ಚರೈಸಿಂಗ್ ನಿಮ್ಮ ಸ್ಕಿನ್ ಶೇರ್‌ಗಾಗಿ ಬೆಳಗ್ಗೆ ಮತ್ತು ರಾತ್ರಿ ಮಲಗುವ ಮುನ್ನ ಮಾಯಿಶ್ಚರೈಸರ್ ಹಚ್ಚಿಕೊಳ್ಳಲು ಮರೆಯಬೇಡಿ. ಮಾಯಿಶ್ಚರೈಸರ್ ಕೊಳ್ಳುವಾಗ ಅದರಲ್ಲಿ ಆಯಿಲ್ ಬ್ಯಾಲೆನ್ಸ್ ಸರಿ ಇದೆಯೇ ಎಂದು ನೋಡಿ. ನೀವು ರಾತ್ರಿ ಮಲಗುವಾಗ ಚರ್ಮಕ್ಕೆ ಎಣ್ಣೆ ಹಚ್ಚುವಿರಾದರೆ ಬಾದಾಮಿ, ಆಲಿವ್, ಕೋಕೋನಟ್ ಮತ್ತು ಅವಕ್ಯಾಡೊ ಆಯಿಲ್‌ನ್ನೇ ಬಳಸಿ.
ಸನ್‌ಸ್ಕ್ರೀನ್‌ನ ಅಗತ್ಯ
ಚಳಿಗಾಲದಲ್ಲಿ ಸನ್‌ಸ್ಕ್ರೀನ್‌ನ ಅವಶ್ಯಕತೆ ಇರುವುದಿಲ್ಲ ಎಂಬುದೊಂದು ತಪ್ಪು ಗ್ರಹಿಕೆ. ವಾಸ್ತವವಾಗಿ ಚಳಿಗಾಲದಲ್ಲೂ ನಮ್ಮ ಚರ್ಮ ಬಿಸಿಲಿನ ಸಂಪರ್ಕದಲ್ಲಿರುತ್ತದೆ. ಆದ್ದರಿಂದ ಮನೆಯಿಂದ ಹೊರಡುವ ಮೊದಲು ಸನ್‌ಸ್ಕ್ರೀನ್ ಅಗತ್ಯವಾಗಿ ಹಚ್ಚಿಕೊಳ್ಳಿ. ಹೆಚ್ಚು ಕಾಲ ಬಿಸಿಲಿನಲ್ಲಿರುವುದಾದರೆ 2-3 ಗಂಟೆಗಳ ನಂತರ ಇದನ್ನು ಮತ್ತೆ ಹಚ್ಚಿಕೊಳ್ಳಿ.
ಸ್ಕಿನ್ ಎಕ್ಸ್ ಪೋಲಿಯೇಶನ್
ಚಳಿಗಾಲದಲ್ಲಿ ಸ್ಕಿನ್ ಎಕ್ಸ್ ಪೋಲಿಯೇಶನ್ ಅಂದರೆ ಚರ್ಮದಿಂದ ಡೆಡ್ ಸ್ಕಿನ್‌ಗಳನ್ನು ತೆಗೆಯಲು ಸ್ಕ್ರಬಿಂಗ್‌ನ ಅವಶ್ಯಕತೆ ಇಲ್ಲ ಎನ್ನುವುದೊಂದು ಮಿಥ್ಯೆ. ಚರ್ಮದ ಕೋಮಲತೆ ಮತ್ತು ತಾಜಾತನಕ್ಕಾಗಿ ಸ್ಕಿನ್ ಎಕ್ಸ್ ಪೋಲಿಯೇಶನ್ ಅವಶ್ಯಕತೆ ಇರುತ್ತದೆ. ಇದರಿಂದ ಡೆಡ್ ಸ್ಕಿನ್‌ಗಳು ಹೋಗಿ ಬ್ಲಡ್ ಸರ್ಕ್ಯುಲೇಶನ್ ಸರಾಗವಾಗಲು ಸಹಕಾರಿಯಾಗುತ್ತದೆ. ಎಕ್ಸ್ ಪೋಲಿಯೇಶನ್ ಗೆಮೈಲ್ಡ್ ಮತ್ತು ಸಿ ಮಿನರಲ್‌ಯುಕ್ತ ಸ್ಕ್ರಬ್‌ನ್ನೇ ಬಳಸುವುದು ಒಳ್ಳೆಯದು.
ಬಾಡಿ ರಾಪ್
ಬಾಡಿ ಸ್ಪಾನಲ್ಲಿ ಬಾಡಿ ರಾಪ್ ಟ್ರೀಟ್‌ಮೆಂಟ್ ತೆಗೆದುಕೊಳ್ಳುವುದರಿಂದ ಚಳಿಗಾಲದಲ್ಲಿ ಶರೀರಕ್ಕೆ ಸ್ಛೂರ್ತಿ ದೊರೆಯುತ್ತದೆ. ಈ ಟ್ರೀಟ್‌ಮೆಂಟ್‌ನಲ್ಲಿ ಮಡ್ ರಾಪಿಂಗ್ ಸೇರಿದಂತೆ ಬಗೆಬಗೆಯ ಲೇಪಗಳನ್ನು ಹಚ್ಚಲಾಗುತ್ತದೆ. ಇದರಿಂದ ಡೆಡ್ ಸ್ಕಿನ್‌ಗಳು ಹೋಗಿ ಬ್ಲಡ್ ಸರ್ಕ್ಯುಲೇಶನ್ ಸರಾಗವಾಗಲು ಸಹಕಾರಿಯಾಗುತ್ತದೆ. ಎಕ್ಸ್ ಪೋಲಿಯೇಶನ್‌ಗೆ ಮೈಲ್ಡ್ ಮತ್ತು ಸಿ ಮಿನರಲ್‌ಯುಕ್ತ ಸ್ಕ್ರಬ್‌ನ್ನೇ ಬಳಸುವುದು ಒಳ್ಳೆಯದು.
ರಿಫ್ರೆಶಿಂಗ್ ಫೇಶಿಯಲ್ ವೈಪ್ಸ್
ಮುಖಕ್ಕೆ ಫೇಸ್ ವಾಶ್ ಬದಲು ಫೇಸ್ ವೈಪ್ಸ್ ಬಳಸಿ. ಇದು ನಿಮ್ಮ ಮುಖಕ್ಕೆ ಫ್ರೆಶ್, ಕ್ಲೀನ್ ಮತ್ತು ಗ್ಲೋಯಿಂಗ್ ಲುಕ್ ನೀಡಬಲ್ಲದು. ಮುಖವನ್ನು ಬಾರಿಬಾರಿಗೆ ತೊಳೆಯುವ, ಒಣಗಿಸುವ ಕೆಲಸವಿರುವುದಿಲ್ಲ.
ಗ್ಲೋಯಿಂಗ್ ಮೇಕಪ್
ಚಳಿಗಾಲದ ತಣ್ಣನೆಯ ಗಾಳಿಯು ಚರ್ಮದ ಕಾಂತಿಯನ್ನು ಕಳೆದುಬಿಡುವುದರಿಂದ ಮೇಕಪ್‌ನ ನಂತರ ಮುಖಕ್ಕೆ ಗ್ಲೋ ಬರುವುದಿಲ್ಲ. ನ್ಯಾಚುರಲ್ ಗ್ಲೋ ಲುಕ್ಸ್ ಗಾಗಿ ಮೊದಲು ಮುಖವನ್ನು ಮಾಯಿಶ್ಚರೈಸ್ ಮಾಡಿ. ನಂತರ ನಿಮ್ಮ ಸ್ಕಿನ್‌ಟೋನ್‌ಗಿಂತ ಒಂದು ಶೇಡ್ ಡೀಪರ್ ಮ್ಯಾಟ್ ಪೌಡರನ್ನು ಹಣೆ, ಮೂಗು ಮತ್ತು ಕೆನ್ನೆಗಳಿಗೆ ಹಚ್ಚಿ. ಚರ್ಮದ ಡೆಡ್‌ನೆಸ್ ದೂರ ಮಾಡಲು ಫೈನ್ ಹೈಲೈಟರ್ ಬಳಸಿ. ಆಮೇಲೆ ಗ್ಲಾಮರ್ ಗ್ಲೋನಿಂದ ಫೈನ್ ಟಚ್ ಕೊಡಿ. ಗ್ಲಾಮರ್ ಗ್ಲೋ ಪೌಡರ್ ನಿಮ್ಮ ಚರ್ಮಕ್ಕೆ ಫ್ರೆಶ್ ಅಂಡ್ ಟೆಂಡರ್ ಲುಕ್ಸ್ ನೀಡುತ್ತದೆ.
ಕಣ್ಣುಗಳ ರಕ್ಷಣೆ
ಬೇಸಿಗೆ ಅಥವಾ ಚಳಿ ಎಲ್ಲ ಕಾಲಗಳಲ್ಲಿಯೂ ನಾವು ಚರ್ಮದ ರಕ್ಷಣೆಗೆ ಹಲವಾರು ಕ್ರಮಗಳನ್ನು ಅನುಸರಿಸುತ್ತೇವೆ. ಆದರೆ ಕಣ್ಣುಗಳ ಬಗ್ಗೆ ಅಷ್ಟು ಗಮನ ಕೊಡುವುದಿಲ್ಲ. ಹವಾ ಬದಲಾವಣೆಯು ನಮ್ಮ ಕಣ್ಣುಗಳ ಮೇಲೆ ಪ್ರಭಾವ ಬೀರುತ್ತದೆ ಎಂದು ಸೀನಿಯರ್ ಕನ್ಸಲ್ಟೆಂಟ್ ಮತ್ತು ಐ ಸರ್ಜನ್ ಆಗಿರುವ ಡಾ. ವಿನೋದ್ ಹೇಳುತ್ತಾರೆ. ಅವರ ಪ್ರಕಾರ ಕಣ್ಣುಗಳ ರಕ್ಷಣೆಗೆ ಕನ್ನಡಕ ಬಳಸಬೇಕು. ಆಯಾಸಪೂರ್ಣ ಕಣ್ಣುಗಳಿಗೆ ನ್ಯಾಚುರಲ್ ರಿಲ್ಯಾಕ್ಸರ್ ಆದ ರೋಸ್ ವಾಟರ್ ಉಪಯೋಗಿಸಬಹುದು. ಏನಾದರೂ ಹೆಚ್ಚಿನ ತೊಂದರೆ ಇದ್ದರೆ ವೈದ್ಯರನ್ನು ಸಂಪರ್ಕಿಸಬೇಕು.
ಆಲ್ಕೋಹಾಲ್ ಫ್ರೀ ಪ್ರಾಡಕ್ಟ್ಸ್
ಚರ್ಮಕ್ಕೆ ಹಾರ್ಶ್ ಸೀಲಿಂಗ್ ಸ್ಕ್ರಬ್, ಮಾಸ್ಕ್ ಹಾಗೂ ಆಲ್ಕೋಹಾಲ್ ಬೇಸ್ಡ್ ಟೋನರ್ ಮತ್ತು ಪ್ರಾಡಕ್ಟ್ ಗಳನ್ನು ಬಳಸುವುದರಿಂದ ಚರ್ಮ ಶುಷ್ಕವಾಗುತ್ತದೆ ಮತ್ತು ಡ್ಯಾಮೇಜ್‌ಗೆ ಒಳಗಾಗುತ್ತದೆ. ಆದ್ದರಿಂದ ಬೇಸಿಗೆಯಲ್ಲಿ ಬಳಸುವ ಸ್ಕಿನ್ ಪ್ರಾಡಕ್ಟ್ ಗಳನ್ನು ಚಳಿಗಾಲದಲ್ಲಿ ಬಳಸಬೇಡಿ ಮತ್ತು ಈ ಕಾಲದಲ್ಲಿ ಋತುವಿಗೆ ಅನುರೂಪವಾದ ಮೈಲ್ಡ್ ಕ್ಲೆನ್ಸರ್ ಮತ್ತು ಸ್ಕ್ರಬರ್‌ನ್ನು ಬಳಸಿ. ಆಲ್ಕೋಹಾಲ್ ರಹಿತ ಟೋನರ್ ಮತ್ತು ನರಿಶಿಂಗ್ ಮಾಸ್ಕ್ ನಿಂದ ನಿಮ್ಮ ತ್ವಚೆಯನ್ನು ನ್ಯಾಚುರಲೀ ಯಂಗ್ ಲುಕಿಂಗ್ ಆಗಿ ಮಾಡಬಹುದು.
ಮ್ಯಾಜಿಕ್ ರೊಟೀನ್ ಕೇರ್
ಚರ್ಮ ಸದಾಕಾಲ ಕಾಂತಿಯುತ ಮತ್ತು ಸುಂದರವಾಗಿ ಕಂಗೊಳಿಸಲು ಸ್ಕಿನ್‌ಕೇರ್ ಮ್ಯಾಜಿಕ್ ಪವರ್ ಬಗ್ಗೆ ತಿಳಿದಿರಬೇಕು. ಮೊದಲು ಮುಖವನ್ನು ಆಲ್ಕೋಹಾಲ್ ರಹಿತ ಕ್ಲೆನ್ಸರ್‌ನಿಂದ ಮೃದುವಾಗಿ ಸ್ವಚ್ಛಗೊಳಿಸಿ. ಸ್ಮೂತ್ ಸ್ಕಿನ್‌ಗಾಗಿ ಫೇಸ್ ಸೀರಮ್ ನ್ನು ಡೀಪ್ ಮಾಯಿಶ್ಚರೈಸರ್‌ಗೆ ಮಿಶ್ರ ಮಾಡಿ ಪೂರ್ತಿ ಮುಖ ಮತ್ತು ಕುತ್ತಿಗೆಗೆ ಲೇಪಿಸಿ. ಇದು ನಿಮ್ಮ ಚರ್ಮವನ್ನು ರೀಹೈಡ್ರೇಟ್ ಮಾಡುತ್ತಾ ಆ್ಯಂಟಿ ಏಜಿಂಗ್‌ನ ಕೆಲಸ ಮಾಡುತ್ತದೆ.
ಪಾದದ ರಕ್ಷಣೆ
ನೀವು ನಿಮ್ಮ ಪಾದಗಳನ್ನು ಇರಿಸಿಕೊಂಡಿರುವ ರೀತಿಯಿಂದ ನಿಮ್ಮ ಅಭ್ಯಾಸ, ವ್ಯಕ್ತಿತ್ವಗಳ ಪರಿಚಯ ಸಿಗುತ್ತದೆ. ಕಾಲುಗಳ ರಕ್ಷಣೆಯನ್ನು ಎಲ್ಲ ಕಾಲಗಳಲ್ಲಿಯೂ ಪ್ರತಿ ದಿನ ಮಾಡುತ್ತಿರಬೇಕು. ಆದರೆ ಚಳಿಗಾಲದಲ್ಲಿ ಹಿಮ್ಮಡಿ ಒಡೆತ, ಕಾರ್ನ್, ಫಂಗಸ್, ಗಂಟು, ಟ್ಯಾನಿಂಗ್ ಮುಂತಾದ ಸಮಸ್ಯೆಗಳು ಎದುರಾಗುವುದರಿಂದ ಮತ್ತಷ್ಟು ಆರೈಕೆ ಬೇಕಾಗುತ್ತದೆ. ಪ್ರೀಮಿಯಮ್ ಸ್ಟೋನ್‌ನ ಸಹಾಯದಿಂದ ಕಾಲುಗಳ ಡೆಡ್ ಸ್ಕಿನ್‌ನ್ನು ನಿವಾರಿಸಿ. ನಂತರ ಫೀಟ್ ಮಸಾಜ್ ಕ್ರೀಮ್ ಅಥವಾ ಮಾಯಿಶ್ಚರೈಸರ್ ಕ್ರೀಮ್ ಗೆ ಒಂದೆರಡು ಹನಿ ಎಸೆನ್ಶಿಯಲ್ ಆಯಿಲ್ ಸೇರಿಸಿ ಮೃದುವಾಗಿ ಮಸಾಜ್ ಮಾಡಿ. ಟೀ ಟ್ರಿ ಆಯಿಲ್ ಸಹ ಬಳಸಬಹುದು. ಇದು ಆ್ಯಂಟಿ ಬ್ಕಾಕ್ಟೀರಿಯಲ್ ಮತ್ತು ಆ್ಯಂಟಿ ಫಂಗಲ್ ಆಗಿರುವುದರಿಂದ ಫಂಗಲ್ ಇನ್‌ಫೆಕ್ಷನ್‌ನ್ನು ದೂರ ಮಾಡುತ್ತದೆ. ಇದಕ್ಕೆ ಬದಲು ರೋಸ್‌ಮೆರಿ ಆಯಿಲ್ ಬಳಸಬಹುದು. ಇದು ರಕ್ತ ಚಲನೆಯನ್ನು ಉತ್ತಮಗೊಳಿಸುತ್ತದೆ.
ಸ್ಮೂತ್ ಸ್ಕಿನ್ ವ್ಯಾಕ್ಸಿಂಗ್
ಚಳಿಗಾಲದಲ್ಲಿ ವ್ಯಾಕ್ಸಿಂಗ್‌ನ ಅಗತ್ಯವಿಲ್ಲ ಎಂದು ಭಾವಿಸುವುದುಂಟು. ಆದರೆ ಅದು ಸರಿಯಲ್ಲ. ರೆಗ್ಯುಲರ್ ವ್ಯಾಕ್ಸಿಂಗ್‌ನಿಂದ ಡೆಡ್ ಸ್ಕಿನ್ ದೂರವಾಗಿ ಸ್ಮೂತ್ ಫೀಲಿಂಗ್ ದೊರೆಯುತ್ತದೆ. ಮಾರುಕಟ್ಟೆಯಲ್ಲಿ ಅನೇಕ ಬಗೆಯ ವ್ಯಾಕ್ಸಿಂಗ್ ಲಭ್ಯವಿವೆ. ಅವುಗಳಲ್ಲಿ ಚಳಿಗಾಲಕ್ಕೆ ಸೂಕ್ತವಾದುದೆಂದರೆ ಬಾಡಿ ಬಟರ್, ರಾಯಲ್ ವ್ಯಾಕ್ಸ್, ಲೆಮನ್ ಗ್ರಾಸ್, ಡರ್ಟ್ ರಿಮೂವರ್, ಟ್ಯಾನ್ ರಿಮೂವರ್, ಚಾಕೋಲೇಟ್, ಡೀಟ್ಯಾನ್, ಪ್ಯಾಚ್ ವ್ಯಾಕ್ಸಿಂಗ್ ಮತ್ತು ಆ್ಯಲೋವೆರಾ ವ್ಯಾಕ್ಸ್.
ಮೇಕಪ್ ರಿಮೂವರ್
ಚಳಿಗಾಲದಲ್ಲಿ ಚರ್ಮ ಶುಷ್ಕವಾಗುತ್ತದೆ. ಮನೆಯ ಬಳಿ ಹೊರಗಿನ ತಾಪಮಾನದ ವ್ಯತ್ಯಾಸ ಮತ್ತು ಹಾಟ್ ಬ್ಲೋನ ಕಾರಣದಿಂದಲೂ ಚರ್ಮದ ಆರ್ದ್ರತೆ ಕಡಿಮೆಯಾಗುತ್ತದೆ. ಆದ್ದರಿಂದ ಮೇಕಪ್ ತೆಗೆಯಲು ನಾರ್ಮಲ್ ಕ್ಲೆನ್ಸಿಂಗ್ ಮಿಲ್ಕ್ ಗೆ ಬದಲು ಮಿನರಲ್ ಆಯಿಲ್ ಬೇಸ್ಡ್ ಮೇಕಪ್ ರಿಮೂವರ್ ಬಳಸಿ. ಇದು ಚರ್ಮವನ್ನು ಮೃದುವಾಗಿ ಸ್ವಚ್ಛಗೊಳಿಸಿ ಚರ್ಮದಲ್ಲಿ ಆಯಿಲ್ ಲೇಯರ್‌ನ್ನು ಹೆಚ್ಚಿಸುತ್ತದೆ. ಇದರಿಂದ ಚರ್ಮ ಸೌಮ್ಯತೆಯ ಅನುಭವದೊಂದಿಗೆ ಕೋಮಲವಾಗಿ ತೋರುತ್ತದೆ.
– ಪ್ರೀತಿ ಜೈನ್