ಎರಡನೇ ಮಗುವಿನ ಆಗಮನ ಹತ್ತು ಹಲವು ಖುಷಿಗಳನ್ನು ತರುತ್ತದೆ ಅದರ ಜೊತೆ ಜೊತೆಗೆ ಅದು ಅನೇಕ ಜವಾಬ್ದಾರಿಗಳನ್ನೂ ಹೊತ್ತುಕೊಂಡು ಬರುತ್ತದೆ. ಹೀಗಾಗಿ ಎರಡನೇ ಮಗು ಮನೆಗೆ ಬಂದ ಬಳಿಕ ಏನೇನು ಬದಲಾವಣೆ ಆಗಬಹುದು ಎಂದು ಮೊದಲ ಮಗುವಿಗೆ ತಿಳಿ ಹೇಳುವುದು ಅತ್ಯವಶ್ಯಕ. ನಿಮ್ಮ ಕ್ರಮದಿಂದ ತಮ್ಮನೇ ಬರಲಿ, ತಂಗಿಯೇ ಬರಲಿ ಅದು ತನ್ನನ್ನು ತಾನು ಏಕಾಂಗಿ ಎಂದು ಭಾವಿಸುವುದು. ಆದರೆ ಅದರ ಜೊತೆ ಜೊತೆಗೆ ಪ್ರೀತಿಯನ್ನೂ ಹಂಚಬೇಕಾಗುತ್ತದೆ. ಸಮಯ ಹೊಂದಿಸಬೇಕಾಗುತ್ತದೆ. ಗಮನ ಕೇಂದ್ರೀಕರಿಸಬೇಕಾಗುತ್ತದೆ. ಈ ಎಲ್ಲ ಸಂಗತಿಗಳಿಗಾಗಿ ಮಗುವನ್ನು ಮೊದಲು ಸನ್ನದ್ದುಗೊಳಿಸಬೇಕಾಗುತ್ತದೆ.
ಸಿದ್ಧತೆಯ ಆರಂಭ ಹೇಗೆ? : ಎಷ್ಟೋ ಸಲ ಮಕ್ಕಳು ಮಾನಸಿಕವಾಗಿ ಅದಕ್ಕೆ ಸಿದ್ಧರಾಗುವುದಿಲ್ಲ. ಇಷ್ಟು ದಿನ ದೊರೆಯುತ್ತಿದ್ದ ಪ್ರೀತಿ ಹಾಗೂ ಅಟೆನ್ಶನ್ಗೇ ಇನ್ನು ಮುಂದೆ ಪಾಲುದಾರರೊಬ್ಬರು ಬರುತ್ತಾರೆಂದರೆ ಅದಕ್ಕೆ ಸಹಿಸಿಕೊಳ್ಳಲು ಆಗುವುದಿಲ್ಲ. ಇಂತಹ ಸಂದರ್ಭಲ್ಲಿ ಮಗುವನ್ನು ಭಾವನಾತ್ಮಕವಾಗಿ ನಿರ್ವಹಣೆ ಮಾಡಬೇಕು. ಏಕೆಂದರೆ ನೀವು ಮಗುವನ್ನು ಆ ಹಂತದಲ್ಲಿ ಸರಿಯಾಗಿ ನಿರ್ವಹಣೆ ಮಾಡದಿದ್ದರೆ ಅವರ ಕೋಮಲ ಮನಸ್ಸು ಘಾಸಿಗೊಳ್ಳುತ್ತದೆ. ಇನ್ನೊಂದು ಮಗು ಬರುವುದು ಅದಕ್ಕೆ ಇಷ್ಟ ಇಲ್ಲದೆ ಇರಬಹುದು ಅಥವಾ ತನ್ನ ಪೋಷಕರು ಹಾಗೂ ಬರಲಿರುವ ಮಗುವಿನ ಬಗ್ಗೆ ಅದಕ್ಕೆ ಅತೃಪ್ತಿ ಹೆಚ್ಚುತ್ತಾ ಹೋಗಬಹುದು.
ಮೊದಲ ಮಗುವಿಗೆ ಹೆಚ್ಚು ಕಾಳಜಿ : ಎರಡನೇ ಮಗು ಅಂದರೆ ಈಗ ಹುಟ್ಟಿದ ಮಗು ಚಿಕ್ಕದಾಗಿರುವುದರಿಂದ ಆ ಮಗುವಿಗೆ ಹೆಚ್ಚಿನ ಕಾಳಜಿ ತೋರಿಸುವ ಅಗತ್ಯವಿಲ್ಲ. ಆದರೆ ಎರಡನೇ ಮಗುವಿನ ಜೊತೆ ಮೊದಲ ಮಗುವಿನ ಸಂಬಂಧ ಚೆನ್ನಾಗಿರಲು ನೀವು ಮೊದಲ ಮಗುವಿನ ಬಗ್ಗೆ ಅದಕ್ಕೆ ಅತೃಪ್ತಿ ಹೆಚ್ಚುತ್ತದೆ. ಹೀಗಾಗಿ ಇನ್ನೊಂದು ಮಗು ಬರುವ ಮುನ್ಸೂಚನೆ ದೊರೆಯುತ್ತಿದ್ದಂತೆ ಮೊದಲ ಮಗುವನ್ನು ಸನ್ನದ್ದುಗೊಳಿಸುವ ಪ್ರಕ್ರಿಯೆ ಆರಂಭಿಸಬೇಕು. ಮಗು ಹುಟ್ಟುತ್ತಿದ್ದಂತೆಯೇ ಅದರ ಜೊತೆಗೆ ಒಡನಾಟ ಹೆಚ್ಚುವಂತೆ ನೋಡಿಕೊಳ್ಳಿ. ಸ್ತ್ರೀರೋಗ ತಜ್ಞೆ ಡಾ. ಪೂಜಾರ ಪ್ರಕಾರ ಮೊದಲ ಹಾಗೂ ಎರಡನೇ ಮಗುವಿನ ನಡುವೆ ವಯಸ್ಸಿನ ಅಂತರ ಹೆಚ್ಚಿಗೆ ಇರುವುದಿಲ್ಲ. ಆದಾಗ್ಯೂ ಮೊದಲ ಮಗು ತಿಳಿವಳಿಕೆಯುಳ್ಳದ್ದಾಗಿರುತ್ತದೆ. ಅವು ಎಲ್ಲ ಸಂಗತಿಗಳ ಬಗ್ಗೆ ಅನುಭೂತಿ ಮಾಡಿಕೊಳ್ಳುತ್ತಿರುತ್ತದೆ. ಹೀಗಾಗಿ ಅದು ಎರಡನೇ ಮಗುವನ್ನು ತನ್ನ ಪ್ರತಿಸ್ಪರ್ಧಿ ಎಂದು ಭಾವಿಸಲಾರದು ಹಾಗೂ ಕಿರಿಯ ಮಗುವಿನ ಜೊತೆ ತನ್ನ ನಿಕಟತೆ ಬೆಳೆಸಿಕೊಳ್ಳಬೇಕು ಎಂಬ ರೀತಿಯಲ್ಲಿ ನೀವು ಮೊದಲ ಮಗುವಿನ ಬಗ್ಗೆ ಕಾಳಜಿ ವಹಿಸಬೇಕು. ಮೊದಲ ಮಗು ಹೆರಿಗೆ ಹಾಗೂ ನಂತರದ ಬೆಳವಣಿಗೆಗಳನ್ನು ಗಮನಿಸುತ್ತಿರುತ್ತದೆ. ಹೀಗಾಗಿ ಎರಡನೇ ಮಗುವಿನ ಬಗ್ಗೆ ಪ್ರತಿಯೊಂದು ಆಗುಹೋಗುಗಳ ಸಂದರ್ಭದಲ್ಲಿ ಮೊದಲ ಮಗುವನ್ನು ಜೊತೆಗೇ ಇರಿಸಿಕೊಳ್ಳಿ.
ಗರ್ಭಾವಸ್ಥೆಯ ಸಂದರ್ಭದಲ್ಲಿ ಅಥವಾ ಹೆರಿಗೆಯ ಸಂರ್ಭದಲ್ಲಿ ಎರಡನೇ ಮಗುವಿಗಾಗಿ ಬಟ್ಟೆ ಅಥವಾ ಯಾವುದೇ ಸಲಕರಣೆಗಳನ್ನು ಖರೀದಿಸುವುದಿದ್ದರೆ, ಮೊದಲ ಮಗುವಿನ ಅಭಿಪ್ರಾಯ ಕೇಳಿ ಅಥವಾ ಅದರ ಆಸಕ್ತಿಗನುಗುಣವಾಗಿಯೇ ಖರೀದಿಸಿ. ಇದರಿಂದ ಅದರ ಮನಸ್ಸಿನಲ್ಲಿ ಅಸೂಯೆಯ ಭಾವ ಮೂಡದು. ಒಳ್ಳೆಯ ನಿಕಟತೆ ಬೆಳೆಯುತ್ತದೆ.
ಮಗು ಹುಟ್ಟಿದ ಬಳಿಕ
ಚಿಕ್ಕ ಮಗುವಿನ ಡೈಪರ್ ಬದಲಿಸುವ ಸಮಯದಲ್ಲಿ, ಸ್ನಾನ ಮಾಡಿಸುವಾಗ ಮೊದಲ ಮಗುವಿನ ಸಹಾಯ ಪಡೆದುಕೊಳ್ಳಿ. ಇದರಿಂದ ಅದಕ್ಕೆ ಚಿಕ್ಕ ಮಗುವಿನ ಜೊತೆಗೆ ನಿಕಟತೆ ಹೆಚ್ಚುತ್ತದೆ. ಏಕಾಂಗಿತನದ ಭಾವನೆಯೂ ಬರುವುದಿಲ್ಲ. ಇದು ಅದರಲ್ಲಿ ಅಣ್ಣ/ಅಕ್ಕನ ಜವಾಬ್ದಾರಿಯನ್ನು ಹೆಚ್ಚಿಸುತ್ತದೆ.
– ನೀವು ನಿಮ್ಮ ಕೆಲಸ ಕಾರ್ಯಗಳಲ್ಲಿ ಎಷ್ಟೇ ವ್ಯಸ್ತರಾಗಿದ್ದರೂ ಮೊದಲ ಮಗುವಿನ ದೈನಂದಿನ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಿ.
– ಒಂದು ವೇಳೆ ತಾಯಿ ಎರಡನೇ ಮಗುವಿನ ಬಗ್ಗೆ ಹೆಚ್ಚು ಗಮನಹರಿಸಬೇಕಾದ ಸಂದರ್ಭದಲ್ಲಿ ತಂದೆ ಮೊದಲ ಮಗುವಿನ ಬಗ್ಗೆ ಕಾಳಜಿ ವಹಿಸಬೇಕು. ಅದರ ಆಗುಹೋಗುಗಳಲ್ಲಿ ಆಸಕ್ತಿ ವಹಿಸಬೇಕು.
– ಎರಡನೇ ಮಗುವಿನ ಜನನದ ಬಳಿಕ ಮೊದಲನೇ ಮಗುವನ್ನು ಅದರಿಂದ ದೂರ ಇಡಬೇಡಿ. ತಮ್ಮ ಅಥವಾ ತಂಗಿಯನ್ನು ಸಮೀಪದಿಂದ ನೋಡಲು ಅವಕಾಶ ಕೊಡಿ. ಕೆಲವೊಮ್ಮೆ ಪುಟ್ಟ ಮಗುವನ್ನು ಅದರ ತೊಡೆಯ ಮೇಲೆ ಕೂರಿಸಿ. ಅದಕ್ಕೆ ಖುಷಿಯ ಅನುಭವವಾಗುತ್ತದೆ. ಚಿಕ್ಕ ಮಗುವಿದ್ದಾಗ ನೀನೂ ಹೀಗೆಯೇ ಇದ್ದೆ ಎಂದು ಅದಕ್ಕೆ ಹೇಳಿ. ಮಗು ದೊಡ್ಡದಾದ ಬಳಿಕ ನಿನ್ನ ಹಾಗೆಯೇ ಶಾಲೆಗೆ ಹೋಗುತ್ತದೆ. ನಿನ್ನೊಂದಿಗೆ ಆಟ ಆಡುತ್ತದೆ. ಹೀಗೆ ಹೇಳಿಕೊಡುವುದರಿಂದ ಮೊದಲ ಮಗುವಿನ ಮನಸ್ಸಿನಲ್ಲಿ ತನ್ನ ತಂಗಿ ಅಥವಾ ತಮ್ಮನ ಬಗ್ಗೆ ಭಾವನಾತ್ಮಕ ಸಂಬಂಧ ಒಡಮೂಡುತ್ತದೆ.
– ಎಷ್ಟೋ ಸಲ ಎರಡನೇ ಮಗು ಬಂದ ಬಳಿಕ ಮೊದಲ ಮಗುವಿಗೆ ಆ ಬಗ್ಗೆ ಹೇಳಲಾಗುತ್ತದೆ. ಆಗ ಆ ಮಗುವಿಗೆ ಎರಡನೇ ಮಗುವಿನ ಅಗತ್ಯವಾದರೂ ಏನಿತ್ತು ಎಂದು ಅನಿಸುತ್ತದೆ. ಅಷ್ಟೇ ಅಲ್ಲ, ಈವರೆಗೆ ತಾನೇ ಈ ಮನೆಗೆ ಪ್ರೀತಿಯ ಮಗು ಆಗಿದ್ದೆ, ಇನ್ನು ಮುಂದೆ ಹೊಸ ಮಗುವಿನ ಬಗ್ಗೆ ಗಮನಹರಿಸುತ್ತಾರೆ ಎಂದು ಅದಕ್ಕೆ ಅನಿಸುತ್ತದೆ. ಈ ರೀತಿಯ ಭಾವನೆ ಬರದೇ ಇರಲು ಅದಕ್ಕೆ ನಿನ್ನ ಜೊತೆಗೆ ಆಟ ಆಡಲು ತಮ್ಮ ಅಥವಾ ತಂಗಿ ಇದ್ದರೆ ಎಷ್ಟು ಚೆನ್ನಾಗಿರುತ್ತೆ ಅಲ್ವಾ ಎಂದು ಅದಕ್ಕೆ ತಿಳಿಸಿ ಹೇಳಿ. ನೀವು ಅದಕ್ಕೆ ಪುಸ್ತಕಗಳ ಮುಖಾಂತರ ಕೆಲವು ಉದಾಹರಣೆಗಳನ್ನು ಕೊಡಬಹುದು. ಈ ಮಗು ನಿನ್ನ ಜೊತೆ ಆಟ ಆಡೋದರಿಂದ ನಿನ್ನ ಏಕಾಂಗಿತನ ಹೊರಟುಹೋಗುತ್ತದೆ ಎಂದು ಅದಕ್ಕೆ ಭರವಸೆ ಕೊಡಿ.
ಈ ಎಲ್ಲಾ ಉಪಾಯಗಳನ್ನು ಸಲಹೆಗಳನ್ನು ಅನುಸರಿಸುವುದರಿಂದ ಮೊದಲ ಮಗುವಿಗೆ ಎರಡನೇ ಮಗುವಿನ ಬಗ್ಗೆ ಇರುವ ಪ್ರತಿಸ್ಪರ್ಧೆಯ ಭಾವನೆ ಮೂಡದು.
– ಡಾ. ಸರಿತಾ