ಕಾನೂನು ಮಾಡಿದರಷ್ಟೇ ಸಾಲದು

ಯಾವುದಾದರೂ ಹುಡುಗಿಗೆ ಒಬ್ಬ ಹುಡುಗ ತನ್ನನ್ನು ಸತತವಾಗಿ ಹಿಂಬಾಲಿಸುತ್ತಿದ್ದಾನೆಂದು ಗೊತ್ತಾದರೆ ಆಕೆಗೆ ವಿಪರೀತ ಭಯ ಆವರಿಸುತ್ತದೆ. ಮೊದ ಮೊದಲು ಅದು ಒಂದು ರೀತಿ ಸುಯೋಗ ಎನಿಸುತ್ತಿತ್ತು. ಆದರೆ ಹಿಂಬಾಲಿಸುವ ವ್ಯಕ್ತಿ ಗಂಟೆಗಟ್ಟಲೆ ರಸ್ತೆಯಲ್ಲಿ ಕಾಯುತ್ತಾ ನಿಂತಿದ್ದರೆ, ಮನೆಯೆದುರು ಟೆಂಟ್‌ ಹಾಕಿದ್ದರೆ, ಆಕೆಗೆ ಭಯ ಆವರಿಸುವುದು ಸಹಜವೇ. ಇದರಿಂದ ಅವಳಿಗೆ ಒಂದೊಂದು ಕ್ಷಣ ಕೆಂಡದ ಮೇಲೆ ಕೂತಂತೆ ಭಾಸವಾಗುತ್ತದೆ.

ಈಗ ಸರ್ಕಾರ ಒಂದು ಹೊಸ ಕಾನೂನನ್ನು ರೂಪಿಸಿದ್ದು, ಅದರನ್ವಯ ಹಿಂಬಾಲಿಸುವುದನ್ನು ಕೂಡ ಗಂಭೀರ ಆರೋಪದ ಶ್ರೇಣಿಯಲ್ಲಿ ಸೇರಿಸಲಾಗಿದೆ. ಮೊದಲು ಹಿಂಬಾಲಿಸುವಿಕೆಯನ್ನು ಯಾವುದೇ ಅಪಾಯ ಉಂಟು ಮಾಡಿರುವುದು, ಯಾವುದೇ ಅಪರಾಧ ಆಗಿರಲಿಲ್ಲ. ಆದರೆ 2013ರಲ್ಲಿ ರೂಪುಗೊಂಡ ಭಾರತೀಯ ದಂಡ ಸಂಹಿತೆಯ 354ಡಿಯ ಪ್ರಕಾರ ಹಿಂಬಾಲಿಸುವ ವ್ಯಕ್ತಿಗೆ 3 ವರ್ಷ ಶಿಕ್ಷೆ ಆಗಬಹುದು. ಆ ವ್ಯಕ್ತಿ ಆಕೆಗೆ ಯಾವುದೇ ತೊಂದರೆ ಅಪಾಯ ಮಾಡದಿದ್ದರೂ ಸಹ ಈ ಕಾನೂನು ಅನ್ವಯಿಸುತ್ತದೆ.

ಕಾನೂನು ಮಾಡುವುದು ಒಂದು ಸಂಗತಿ. ಅದನ್ನು ಅನ್ವಯಿಸುವುದು ಇನ್ನೊಂದು ಸಂಗತಿ. ಸಾಮಾನ್ಯವಾಗಿ ಒಬ್ಬ ವ್ಯಕ್ತಿ ಹುಡುಗಿಯನ್ನು ಹಿಂಬಾಲಿಸುವುದರಿಂದ ಆಕೆಯ ಕುಟುಂಬಸ್ಥರು ಅದೆಷ್ಟು ಹೆದರುತ್ತಾರೆಂದರೆ, ಪೊಲೀಸ್‌ ಠಾಣೆಗೆ ಹೋಗಲು ಕೂಡ ಧೈರ್ಯ ತೋರಿಸುವುದಿಲ್ಲ. ಯಾವಾಗಾದರೊಮ್ಮೆ ಹಿಂಬಾಲಿಸುವವರು ಒಂದೆರಡು ತಿಂಗಳಿನಲ್ಲಿಯೇ ಅವರು ತಮ್ಮ ದಾರಿ ಬದಲಿಸಿಕೊಳ್ಳುತ್ತಾರೆ. ಯಾರು ಹಿಂಬಾಲಿಸುವುದನ್ನೇ ಚಟವಾಗಿ ಮಾಡಿಕೊಂಡಿರುತ್ತಾರೋ, ಅವರು ತಮ್ಮದೇ ಆದ ಗುಂಪು ಕಟ್ಟಿಕೊಂಡಿರುತ್ತಾರೆ. ಅವರನ್ನು ನಿರ್ವಹಿಸುವುದು ಕಷ್ಟ. ಪೊಲೀಸರಿಗೆ ದೂರು ಕೊಟ್ಟರೆ ಅವರು ಆರಂಭದಲ್ಲಿ ಪೊಲೀಸ್‌ ಕಾನೂನಿನ ಹೊರತಾಗಿ ವಿಶೇಷ ಗಮನವನ್ನೇನೂ ಕೊಡುವುದಿಲ್ಲ. ಒಂದುವೇಳೆ ಪೊಲೀಸರು ಹಿಂಬಾಲಿಸುವ ವ್ಯಕ್ತಿಯನ್ನು ಬಂಧಿಸಿ ಎಚ್ಚರಿಕೆ ಕೊಟ್ಟರೂ ಯಾವುದೇ ಪ್ರಯೋಜನ ಆಗದು. ಇಂತಹದರಲ್ಲಿ ಆ ವ್ಯಕ್ತಿ ತನ್ನ ಜಾಗ ಬದಲಿಸುತ್ತಾನೆ. ಮನೆ ಇರುವ ಜಾಗದ ಬದಲು ಆಫೀಸು, ಮಾರುಕಟ್ಟೆ, ಸಂಬಂಧಿಕರ ಮನೆ ಇಂತಹ ಕಡೆ ಪ್ರತ್ಯಕ್ಷನಾಗುತ್ತಾನೆ. ಹಿಂಬಾಲಿಸುವ ದುರುಳ ವ್ಯಕ್ತಿಗೆ ಅನೇಕ ಸ್ನೇಹಿತರು ಇರುತ್ತಾರೆ. ಏಕೆಂದರೆ ಯಾವ ವ್ಯಕ್ತಿಗೆ ಹಿಂಬಾಲಿಸಲು ಸಾಕಷ್ಟು ಸಮಯ ಇರುತ್ತದೋ ಆ ವ್ಯಕ್ತಿಯ ಬಳಿ ಸಾಕಷ್ಟು ಹಣ ಇರುತ್ತದೆ. ಅಷ್ಟೇ ಅಲ್ಲ, ಗಂಟೆಗಟ್ಟಲೆ ಬಿಸಿಲು, ಮಳೆ, ಚಳಿಯನ್ನು ಸಹಿಸಿಕೊಳ್ಳುವ ಅದ್ಭುತ ದೈಹಿಕ ಶಕ್ತಿಯೂ ಇರುತ್ತದೆ. ಅವರು ಅಪರಾಧ ಎಸುಗುವುದರಲ್ಲಿ ನಿಸ್ಸೀಮರಾಗಿರುತ್ತಾರೆ. ಅವರು ಇನ್ನೊಬ್ಬರನ್ನು ಹಿಂಬಾಲಿಸುವ ಹಕ್ಕಿನ ಕುರಿತಂತೆ ಇತರರ ಜೊತೆ ಕಾದಾಡಲು ಕೂಡ ಹಿಂದೇಟು ಹಾಕುವುದಿಲ್ಲ. ಏಕೆಂದರೆ ಒಬ್ಬ ಹುಡುಗಿಯನ್ನು ಹಿಂಬಾಲಿಸುವವರನ್ನು ಬೇರೆಯವರು ಗಮನಿಸುತ್ತಾರೆ. ಅಕ್ಕಪಕ್ಕದವರು, ಅಂಗಡಿಯವರು ಹಾಗೂ ಪೊಲೀಸರು ಎಚ್ಚರಿಕೆ ಕೊಟ್ಟಾಗ್ಯೂ ಅವರು ಹಿಂಬಾಲಿಸುವುದನ್ನು ಬಿಡದೆ ಇದ್ದರೆ ಆಗ ಹುಡುಗಿಯ ಮನಸ್ಸಿನ ಮೇಲೆ ಗಾಢ ಪರಿಣಾಮ ಬೀರುತ್ತದೆ. ಹಿಂಬಾಲಿಸುವಿಕೆ ಎನ್ನುವುದು ಆ ವ್ಯಕ್ತಿಯ ಮಾನಸಿಕ ರೋಗವೇ ಆಗಿರುತ್ತದೆ. ಅದು ಹುಡುಗಿಯನ್ನು ಕೂಡ ರೋಗಿಯನ್ನಾಗಿಸುತ್ತದೆ. ಎಲ್ಲಿಯವರೆಗೆ ವ್ಯಕ್ತಿಯಿಂದ ತೊಂದರೆ ಆಗಿರುವುದಿಲ್ಲವೋ ಅಲ್ಲಿಯವರೆಗೆ ದೂರು ಕೊಡುವುದೆಂದರೆ ನಗೆಪಾಟಲು ಎನಿಸುತ್ತದೆ. ಭಾರತದಲ್ಲಿ ಈ ತೆರನಾದ ಪ್ರತಿಯೊಂದು ಪ್ರಕರಣಗಳಲ್ಲಿ ಮೊದಲ ಆಕ್ಷೇಪ ಹುಡುಗಿಯ ಮೇಲೆ ಹೊರಿಸಲಾಗುತ್ತದೆ. ಆಕೆಯೇ ಹಾಗೆ ಮಾಡಿರಬಹುದು, ಹೀಗೆ ಮಾಡಿರಬಹುದು, ಅದಕ್ಕೆಂದೇ ಆ ಹುಡುಗ ಅವಳ ಹಿಂದೆ ಬಿದ್ದಿದ್ದಾನೆ ಎಂದು ಹೇಳುತ್ತಾರೆ.

ಇತ್ತೀಚೆಗೆ ಹಿಂಬಾಲಿಸುವವರು ಮೊಬೈಲ್‌‌ನಿಂದಲೂ ಕೂಡ ತೊಂದರೆ ಕೊಡಲಾರಂಭಿಸಿದ್ದಾರೆ. ಅವರು ಮೆಸೇಜ್‌, ಫೇಕ್‌ ಕಾಲ್‌, ಫೇಸ್‌ಬುಕ್‌ನಲ್ಲಿ ಮೇಲಿಂದ ಮೇಲೆ ಫ್ರೆಂಡ್ಸ್ ರಿಕ್ವೆಸ್ಟ್ ಕಳಿಸಿ ತೊಂದರೆ ಕೊಡುತ್ತಾರೆ. ಅದು ಕೂಡ ಖಾಸಗಿತನದ ಉಲ್ಲಂಘನೆ ಮಾಡಿದ ಅಪರಾಧವಾಗಿದೆ. ಆದರೆ ಇಂತಹ ಅಪರಾಧಗಳಿಗೆ ಶಿಕ್ಷೆಯಾಗುವ ಪ್ರಮಾಣ ಕಡಿಮೆ. ಅಂದಹಾಗೆ ಭಾರತದಲ್ಲಿ ಕಾನೂನು ರೂಪಿಸುವುದು ಸುಲಭ, ಆದರೆ ಅದನ್ನು ಉಲ್ಲಂಘನೆ ಮಾಡುವವರಿಗೆ ಶಿಕ್ಷೆ ಕೊಡಿಸುವುದು ಕಠಿಣ. ತಿಂಗಳಾನುಗಟ್ಟಲೆ ಅಲ್ಲ, ವರ್ಷಾನುಗಟ್ಟಲೆ ಪ್ರಕರಣಗಳು ನಡೆಯುತ್ತಿರುತ್ತವೆ.

ದೆಹಲಿಯಲ್ಲಿ ಒಬ್ಬ ವ್ಯಕ್ತಿ ಒಬ್ಬ ಹುಡುಗಿಯ ಹಿಂದೆ 2010ರ ತನಕ ಹಿಂಬಾಲಿಸುತ್ತಿದ್ದ. ಅವಳ ಸ್ಕೂಟಿಯ ಹಿಂದೆ ಹಿಂದೆಯೇ ಇವನ ಬೈಕ್‌ ಹಿಂಬಾಲಿಸುತ್ತಿತ್ತು. ಅವನು ಅದೆಷ್ಟು ದುಸ್ಸಾಹಸಿ ಹಾಗೂ ಹಠಮಾರಿ ವ್ಯಕ್ತಿಯಾಗಿದ್ದನೆಂದರೆ, ಸಿಗ್ನಲ್‌ನಲ್ಲಿ ಹಸಿರು ದೀಪಕ್ಕಾಗಿ ಕಾಯುತ್ತಿದ್ದ ಆಕೆಯ ಸ್ಕೂಟಿಯ ಹಿಂದಿನ ಸೀಟಿನ ಮೇಲೆ ಕುಳಿತು ಮದುವೆ ಮಾಡಿಕೊಳ್ಳಲೇಬೇಕೆಂದು ಹಟ ಹಿಡಿದಿದ್ದ. ಅವನ ಬಳಿ ರಿವಾಲ್ವರ್‌ ಕೂಡ ಇತ್ತು. ಅವಳು ನಿರಾಕರಿಸಿದಾಗ ಅವನು ಅವಳ ಬೆನ್ನಿಗೆ ಗುಂಡು ಹೊಡೆದಿದ್ದ. ಇದು 2010ರ ಘಟನೆ. ಈಗ ಆ ಹುಡುಗಿ ಲಕ್ವಾ ಪೀಡಿತಳಾಗಿದ್ದಾಳೆ. 2017ರವರೆಗೂ ಈ ಪ್ರಕರಣ ನಡೆಯುತ್ತಲೇ ಇದೆ. ಏಕೆ?ಎಲ್ಲಿಯವರೆಗೆ ಪ್ರಕರಣ ನ್ಯಾಯಾಲಯದಲ್ಲಿ ಇರುತ್ತದೊ, ಅಲ್ಲಿಯವರೆಗೆ ಸಂತ್ರಸ್ತೆಗೆ ನೆಮ್ಮದಿ ಎನ್ನುವುದೇ ಇರುವುದಿಲ್ಲ. ಏಕೆಂದರೆ ವಿಚಾರಣೆ ನಡೆಯುವ ದಿನಗಳಂದು ಆಕೆ ಅಲ್ಲಿಗೆ ಹಾಜರಿರಲೇಬೇಕಾಗುತ್ತದೆ.

ಇದೊಂದು ಸಾಮಾಜಿಕ ಅಪರಾಧ. ಖೇದದ ಸಂಗತಿಯೆಂದರೆ, ಸಮಾಜದ ಗುತ್ತಿಗೆದಾರರು ಧರ್ಮದ ಅಂಗಡಿಕಾರರು, ರಾಜಕೀಯ ಪಕ್ಷಗಳು ಹಾಗೂ ನ್ಯಾಯಾಲಯಗಳು ಈ ರೀತಿಯ ಪ್ರಕರಣಗಳನ್ನು ನೊಣದ ಸದ್ದು ಎಂಬಂತೆ ಭಾವಿಸಿ ನಿರ್ಲಕ್ಷ್ಯ ಮಾಡುತ್ತಾರೆ. ಆದರೆ ಆ ಬಳಿಕ ಅದು ನೊಣ ಅಲ್ಲ, ಮಿಡತೆಯಂತೆ ಹಗಲಿರುಳೂ ಹಿಂಸಿಸುತ್ತದೆ.

ಒಂದು ಹೊಸ ಹಾಗೂ ಸೂಕ್ತ ವ್ಯಾಖ್ಯೆ

ಹಿಂದಿಯ `ಪೀಪ್‌ಲಿ ಲೈವ್‌’ ಚಿತ್ರದ ನಿರ್ದೇಶಕ ಮಹಮೂದ್‌ ಫಾರೂಕಿ ಒಂದೂವರೆ ವರ್ಷಗಳ ಜೈಲು ವಾಸದ ಬಳಿಕ ಹೊರಬಂದಿದ್ದಾರೆ. ತಮ್ಮ ಮಹಿಳಾ ಸ್ನೇಹಿತೆಯೊಬ್ಬರ ಮೇಲಿನ ಬಲಾತ್ಕಾರದ ಆರೋಪದಿಂದ ಅವರಿಗೆ ಮುಕ್ತಿ ದೊರಕಿದೆ. 35 ವರ್ಷದ ಅಮೆರಿಕ ಮಹಿಳೆ, ಮಹಮೂದ್‌ ಹಾಗೂ ಅವರ ಪತ್ನಿ ಇಬ್ಬರಿಗೂ ಸ್ನೇಹಿತೆ. ಆಕೆ ಇವರ ಜೊತೆಯೇ ಊಟತಿಂಡಿ ಸೇವನೆ ಮಾಡುತ್ತಿದ್ದರು. ರಾತ್ರಿ ಬಹಳ ಹೊತ್ತಿನ ತನಕ ಅವರ ಮನೆಯಲ್ಲೇ ಇರುತ್ತಿದ್ದಳು. ಆಕೆ ಮಾಡಿದ ಆರೋಪವೆಂದರೆ, ಫಾರೂಕಿ ತನ್ನ ಬಟ್ಟೆ ಬಿಚ್ಚಿ ತನ್ನೊಂದಿಗೆ ಓವರ್‌ ಸೆಕ್ಸ್ ನ್ನು ಒತ್ತಾಯಪೂರಕವಾಗಿ ಮಾಡಿದ್ದರು.

ಕೆಳ ನ್ಯಾಯಾಲಯ ಮಹಮೂದ್‌ಗೆ 7 ವರ್ಷದ ಶಿಕ್ಷೆ ವಿಧಿಸಿತ್ತು. ಉಚ್ಚ ನ್ಯಾಯಾಲಯ ಆ ತೀರ್ಪನ್ನು ಬದಲಿಸುತ್ತಾ ಹೀಗೆ ಹೇಳಿತು, ಇದು ಒಪ್ಪಿಗೆಯ ಪ್ರಕರಣವೇ. ಒಂದು ವೇಳೆ ಮಹಿಳೆ ಮೃದು ಧ್ವನಿಯಲ್ಲಿ `ಬೇಡ’ ಅಂತ ಹೇಳಿದ್ದರೂ, ಅದನ್ನು ಆಹ್ವಾನವಲ್ಲ ತಿರಸ್ಕಾರ ಎಂದು ಗುರುತಿಸುವುದು ಕಷ್ಟ. ಈ ಸಂದೇಹದ ಮೇಲೆ ಮಹಮೂದ್‌ರನ್ನು ಬಿಡುಗಡೆಗೊಳಿಸಲಾಯಿತು.

ಪರಿಚಿತರಲ್ಲಿ ಸೆಕ್ಸ್ ನ್ನು ಬಲಾತ್ಕಾರ ಎಂದು ಕರೆಯುವ ಹೊಸ ವಿಧಾನವನ್ನು ಮಹಿಳೆಯರು ಅನುಸರಿಸುತ್ತಿದ್ದಾರೆ, ಅದು ಸೆಕ್ಸ್ ಸ್ವಾತಂತ್ರ್ಯವನ್ನು ದಮನ ಮಾಡುತ್ತದೆ. ಒಂದು ವೇಳೆ ಒಬ್ಬ ಪುರುಷ ಹಾಗೂ ಮಹಿಳೆಗೆ ಅವಕಾಶ ಸಿಕ್ಕಾಗ ಅವರಲ್ಲಿ ಆಸಕ್ತಿ ಹುಟ್ಟದೆ, ಉದಾಸೀನತೆ ಉತ್ಪತ್ತಿಯಾದರೆ ಅದನ್ನು ಸೃಷ್ಟಿಗೆ ವಿರುದ್ಧ ಎಂದು ಹೇಳಬಹುದು.

ಬಲಾತ್ಕಾರ ಕೆಟ್ಟದ್ದು, ಆದರೆ ಸೆಕ್ಸ್ ನಲ್ಲಿ ಒಂದು ಕಡೆಯಿಂದ ಒಂದಷ್ಟು ಮಟ್ಟಿಗೆ ಒತ್ತಾಯ ಇದ್ದರೂ ಅದು ಒಬ್ಬರ ಬಗೆಗೆ ಆಕರ್ಷಣೆಯ ರೂಪವೇ ಆಗಿದೆ. ಅದು ಸ್ನೇಹದ ಸಿಮೆಂಟ್‌ ಆಗಿದೆ. ಅದು ಗಂಡಹೆಂಡತಿಯ ನಡುವೆ ಇರಬಹುದು ಅಥವಾ ಬೇರೆಯವರ ನಡುವೆ.

ಸ್ತ್ರೀ ಪುರುಷರ ನಡುವಿನ ಸೆಕ್ಸ್ ರಹಿತ ಸಂಬಂಧ ಇಬ್ಬರು ಪುರುಷರು ಹಾಗೂ ಇಬ್ಬರು ಮಹಿಳೆಯವರ ನಡುವಿನ ಸಂಬಂಧಕ್ಕಿಂತ ದುರ್ಬಲವಾಗಿರುತ್ತದೆ. ಸ್ತ್ರೀ ಪುರುಷರು ಸಂಬಂಧದಲ್ಲಿ ಒಬ್ಬರು ಮತ್ತೊಬ್ಬರ ಮೇಲೆ ಒತ್ತಡ ಹೇರಬಾರದು, ತಮಾಷೆ ಮಾಡಬಾರದು. ಯಾರಿಗೆ ಸೆಕ್ಸ್ ರಹಿತ ಸ್ನೇಹ ಬೇಕೊ ಅವರು ಬೇರೆ ಪುರುಷ ಅಥವಾ ಸ್ತ್ರೀಯರೊಂದಿಗೆ ಭೇಟಿಯಾಗಲೇಬಾರದು. ಅವರು ಕೇವಲ ವ್ಯಾವಹಾರಿಕ ಸಂಬಂಧ ಇಟ್ಟುಕೊಳ್ಳಬೇಕು. ಪುರುಷನಿಗೆ ಎಂತಹ ಸೆಕ್ಸ್ ಸುಖ ಬೇಕೆಂದರೆ, ಸಂಗಾತಿಯ ಸಾಂಗತ್ಯ ಸ್ನೇಹದ ಪಾಕದಲ್ಲಿ ಮಿಂದಂತಿರಬೇಕು. ವೇಶ್ಯೆಯಿಂದ ಪಡೆದ ಸುಖದಿಂದ ಯಾರಿಗೂ ಖುಷಿ ಸಿಕ್ಕಿಲ್ಲ. ಹಾಗೆಂದೇ ವೇಶ್ಯಾಗೃಹಗಳಲ್ಲಿ ನೃತ್ಯ ನಡೆಯುತ್ತದೆ. ಆ ಕಾರಣದಿಂದಲೇ ಗ್ರಾಹಕರನ್ನು ನಿಯಂತ್ರಿಸಬಹುದು.

ಉಚ್ಚ ನ್ಯಾಯಾಲಯ ಸೆಕ್ಸ್ ಬಗ್ಗೆ ಸೂಕ್ತ ಮತ್ತು ಹೊಸ ವ್ಯಾಖ್ಯಾನ ನೀಡಿದೆ. ಸ್ತ್ರೀ ಪುರುಷರ ಸಂಬಂಧವನ್ನು ಯಾವಾಗಲೂ ನೈತಿಕತೆ ಅಥವಾ ಒತ್ತಾಯ ಪೂರ್ವಕ ದೃಷ್ಟಿಯಿಂದ ನೋಡಬಾರದು. ಮದುವೆಗೂ ಮುಂಚೆ ಮತ್ತು ಮದುವೆಯ ಬಳಿಕ ಸ್ನೇಹಿತರಲ್ಲಿ ಸೆಕ್ಸ್ ನ ಸಾಕಷ್ಟು ಅಪಾಯಗಳಿವೆ. ಆದರೆ ಆ ಅಪಾಯದಲ್ಲೂ ಯಾರು ಆನಂದ ಪಡೆಯುತ್ತಾರೋ, ಅವರ ನಡುವೆ ಒಪ್ಪಿಗೆಯ ಸಲಿಗೆ ಇದ್ದರೆ, ಅವರನ್ನು ತಡೆಯುವ ಹಕ್ಕು ಯಾರಿಗೂ ಇಲ್ಲ. ಆಕರ್ಷಣೆ ಹುಟ್ಟಿದ ಮೇಲೆ 4 ಹೆಜ್ಜೆ ಮುಂದೆ ಸಾಗಿದ ಬಳಿಕ ಬಲಾತ್ಕಾರದ ಆರೋಪ ಹೊರಿಸುವ ಅಸ್ತ್ರವನ್ನು ಮಹಿಳೆಯರು ಅನುಸರಿಸುತ್ತಿದ್ದರೆ, ಅದು ಅವರನ್ನು ಅವರ ಕಾರ್ಯಕ್ಷೇತ್ರದಲ್ಲಿ ಎಂಟ್ರಿ ಮುಂದಾಗಿರುವುದನ್ನು ತೋರಿಸುತ್ತದೆ. ಈಗ ಪುರುಷರು ಮಹಿಳೆಯರ ಜೊತೆ ಸ್ನೇಹ ಸಂಬಂಧ ಹೊಂದಲು ಹಿಂದೇಟು ಹಾಕುತ್ತಿದ್ದಾರೆ. ಪುರುಷ ಪುರುಷರ ನಡುವೆ ಸ್ನೇಹದ ಬಗ್ಗೆ ಹೆಚ್ಚು ಒಲವು ಕಂಡು ಬರುತ್ತಿದೆ. ಉದಾಹರಣೆಗೆ `ಜಿಂದಗಿ ನ ಮಿಲೇಗಾ ದೊಬಾರಾ’ ಅಥವಾ `ಥ್ರೀ ಈಡಿಯೆಟ್ಸ್’ನಲ್ಲಿ ಕಂಡುಬಂದಂತೆ.

ಕಾರು ಮಾಲೀಕನೂ ಶ್ರೀಮಂತನಲ್ಲ

ಅಲ್ಫಾನ್ಸೊ ಕನ್ನಾಥನಮ್ ಈ ಹೆಸರನ್ನು ನೆನಪಿನಲ್ಲಿಟ್ಟುಕೊಳ್ಳಿ. ಆ ವ್ಯಕ್ತಿ ಶ್ರೀಮಂತಿಕೆಯ ಪ್ರಮಾಣಪತ್ರ ಕೊಡುತ್ತಾನೆ. ನೀವು ಬಡವರೆಂದು ನಿಮಗೆ ಅನಿಸುತ್ತಿದ್ದರೆ, ನಿಮ್ಮ ಪತಿ ನಿಮ್ಮನ್ನು ಮೊಬೈಲ್‌ನಲ್ಲಿಯೇ ಸುತ್ತಾಡಿಸುತ್ತಿದ್ದರೆ, ಮಾಹಿತಿ ತಂತ್ರಜ್ಞಾನ ಹಾಗೂ ಪ್ರವಾಸೋದ್ಯಮ ಸಚಿವರು ನಿಮಗೆ ಪ್ರಮಾಣ ಪತ್ರ ಕೊಡಬಹುದು. ಅದರಲ್ಲಿ ಬಹುಶಃ ಹೀಗೆ ಬರೆದಿರಬಹುದು. ಇದು ಭಾರತ ಸರ್ಕಾರದ ಪ್ರವಾಸೋದ್ಯಮ ಸಚಿವಾಲಯದ ಮಹಾದಾನ ಕಂಪ್ಯೂಟರ್‌ ತಂತ್ರಜ್ಞಾನದ ಸಹಾಯದಿಂದ ದೊರೆತ ಮಾಹಿತಿಯನ್ನು ಆಧರಿಸಿ ಪ್ರಮಾಣಪತ್ರ ನೀಡುವುದೇನೆಂದರೆ, ನೀವು ಒಂದು ಮೊಬೈಲ್ ನಂಬರ್‌ ನ ಮಾಲೀಕರಾಗಿರುವಿರಿ. ಹೀಗಾಗಿ ನೀವು ಸುಖ, ಸಮೃದ್ಧರಾಗಿರುವಿರಿ. ನಿಮ್ಮ ಉಳಿದ ಆಸ್ತಿಯ ಮೇಲೆ ವಿಶಿಷ್ಟ ಜನಪ್ರಿಯ ಶೇ.70ರಷ್ಟು ಜನರ ಒಪ್ಪಿಗೆಯ ಆಧಾರದ ಮೇಲೆ ನಿಮ್ಮ ಮೇಲೆ ಹೆಚ್ಚುವರಿ ತೆರಿಗೆ ಹೊರೆ ಹೊರಿಸಿ ನಿಮಗೆ ಅಭಿವೃದ್ಧಿ ಹೊಂದಿದ್ದ ದೇಶದ ನಿಟ್ಟಿನಲ್ಲಿ ಸಾಲ ತೀರಿಸುವ ಅವಕಾಶ ನೀಡುತ್ತ, ನೀವೊಬ್ಬ ವಿಶ್ವಪುತ್ರ ಹಾಗೂ ವಿಶ್ವ ನೇತಾರನ ದೇಶದ ನಾಗರಿಕರಾಗಬೇಕು.

ಸಹಿ ಅಲ್ಫಾನ್ಸೊ ಕನ್ನಾಥನಮ್ (ಭಾರತ ಸರ್ಕಾರದ ಮೊಹರು) ಇದು ಕಾಲ್ಪನಿಕ ಕಥೆಯಲ್ಲ, ಇದು ಇಂದಿನ ಮಂತ್ರಿಗಳ ಮಾನಸಿಕತೆಯಾಗಿದೆ. ಅವರು ಜನರ ಕಷ್ಟಗಳ ಬಗ್ಗೆ ಯೋಚಿಸುತ್ತಿಲ್ಲ. ಪೆಟ್ರೋಲ್ ಡೀಸೆಲ್‌ ಬೆಲೆ ಹೆಚ್ಚಾದರೆ, ದೈನಂದಿನ ವಸ್ತುಗಳ ಮೇಲೆ ಜಿಎಸ್‌ಟಿ ಹೆಚ್ಚಾದರೆ ಮನೆಯ ಖರ್ಚು ವೆಚ್ಚ ಹೆಚ್ಚಾಗುತ್ತದೆ. ಬೈಕ್‌ ಇದ್ದರೆ ಶ್ರೀಮಂತಿಕೆ ಬರುವುದಿಲ್ಲ. ಇಂದು ಕಾರು ಹೊಂದಿದವರು ಕೂಡ ಶ್ರೀಮಂತರಾಗಿರುವುದಿಲ್ಲ.

ಪೆಟ್ರೋಲ್ ಡೀಸೆಲ್‌ ಬೈಕ್‌ ಅಥವಾ ಕಾರಿನಲ್ಲಷ್ಟೇ ಅಲ್ಲ, ಬಸ್‌, ಟ್ರಕ್‌, ಟ್ರ್ಯಾಕ್ಟರ್‌ಗೂ ಹಾಕಲಾಗುತ್ತದೆ. ಇವೆಲ್ಲ ಬಡವರ ಉಪಯೋಗಕ್ಕೆ ಬರುವಂಥವು. ಅವನ್ನು ಬಡವರ ಶ್ರೇಣಿಯಲ್ಲಿ ಸೇರಿಸುವುದರ ಅರ್ಥ ಅಲ್ಫಾನ್ಸೊ ಸಾಹೇಬರು ಬಹುಶಃ ಅಲ್ಫಾನ್ಸೊ ಮಾವಿನಹಣ್ಣುಗಳ ಹಾಗೆ ಪ್ರತಿಯೊಬ್ಬ ಸಾಮಾನ್ಯರನ್ನೂ ಒಂದೇ ರೀತಿ ಭಾವಿಸುತ್ತಾರೇನೋ…….?

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ