ನೀವು ಕುರ್ಚಿಯಲ್ಲಿ ಪ್ರತ್ಯೇಕವಾಗಿ ಮತ್ತು ವಿಶೇಷವಾಗಿ ಕಾಣಿಸಿಕೊಳ್ಳಬೇಕಾದರೆ ಹೊಸದೇನಾದರೂ ಟ್ರೈ ಮಾಡಬೇಕು. ಆದರೆ ಹೆಚ್ಚಿನ ಮಹಿಳೆಯರು ತಮ್ಮ ಲುಕ್‌ಗಾಗಿ ಎಕ್ಸ್ ಪೆರಿಮೆಂಟ್‌ ಮಾಡಲು ಇಷ್ಟಪಡುವುದಿಲ್ಲ. ಹೇಗೆ ಕಾಣುತ್ತದೊ, ತಮಗೆ ಸೂಟ್‌ ಆಗುವುದೋ ಇಲ್ಲವೋ ಎಂದು ಯೋಚಿಸುತ್ತಾರೆ. ಹೀಗಾಗಿ ಅವರು ಪ್ರತಿಯೊಂದು ಕಾರ್ಯಕ್ರಮಕ್ಕೂ ಒಂದೇ ರೀತಿಯ ಮೇಕಪ್‌ ಮಾಡಿಕೊಳ್ಳುತ್ತಾರೆ.

ಎಲ್ಲರ ದೃಷ್ಟಿಯೂ ನಿಮ್ಮ ಕಡೆಗೇ ಇರಲಿ ಎಂದು ನೀವು ಬಯಸುವಿರಾದರೆ ಕೊಂಚ ಬೇರೆಯವರನ್ನು ಟ್ರೈ ಮಾಡಲು ಕಲಿಯಿರಿ. ಮೇಕಪ್‌ ತಜ್ಞರಿಂದ ಸೂಚಿಸಲ್ಪಟ್ಟ ಕೆಲವು ವಿಶೇಷ ಮೇಕಪ್‌ ವಿಧಾನಗಳನ್ನು ಇಲ್ಲಿ ಪ್ರಸ್ತುತಪಡಿಸುತ್ತಿದ್ದೇವೆ. ಅವುಗಳನ್ನು ಅನುಸರಿಸಿ ನೀವು ಲುಕ್‌ನಲ್ಲಿ ಬದಲಾವಣೆ ತರಬಹುದು.

face-mkp

ಐ ಮೇಕಪ್

ಮೇಕಪ್‌ ಮಾಡುವಾಗ ಯಾವಾಗಲೂ ಐ ಮೇಕಪ್‌ನಿಂದ ಪ್ರಾರಂಭಿಸಿ. ಏಕೆಂದರೆ ಕೊಂಚ ಹರಡಿಕೊಂಡರೂ ಬೇಸ್‌ ಹಾಳಾಗುವುದಿಲ್ಲ. ಐ ಮೇಕಪ್‌ ಮಾಡುವ ಮೊದಲು ಐ ಪ್ರೈಮರ್‌ ಹಚ್ಚಿ. ಆಮೇಲೆ ಐ ಬ್ರೋಸ್‌ನ  ಮೇಲೆ ಮತ್ತು ಕೆಳಭಾಗಕ್ಕೆ ಐ ಬೇಸ್‌ ಹಚ್ಚಿ. ಇದರಿಂದ ಐ ಬ್ರೋಸ್‌ ಶಾರ್ಪ್‌ ಆಗಿ ಕಾಣುತ್ತದೆ. ನಿಮ್ಮ ಬಳಿ ಐ ಬೇಸ್‌ ಇಲ್ಲದಿದ್ದರೆ ಐ ಬ್ರೋಸ್‌ ಡಿಫೈನ್‌ ಮಾಡಲು ಲೈಟ್‌ ಪೆನ್ಸಿಲನ್ನೂ ಬಳಸಬಹುದು. ಇದಾದ ಮೇಲೆ ಕ್ರೀಮ್ ಬೇಸ್ಡ್ ರೆಡ್‌ ಐ ಶ್ಯಾಡೊ ಹಚ್ಚಿ ಮತ್ತು ತಕ್ಷಣ ಗ್ಲಿಟರ್‌ ಹಚ್ಚಿ. ಹೀಗೆ ಮಾಡುವುದರಿಂದ ಐ ಶ್ಯಾಡೋ ಮೇಲೆ ಗ್ಲಿಟರ್‌ ಸರಿಯಾಗಿ ಡೆಪಾಸಿಟ್‌ ಆಗುತ್ತದೆ. ನಂತರ ವೈಟ್‌ ಮತ್ತು ಪರ್ಲ್ ಹೈಲೈಟರ್‌ನ್ನು ಬೆರೆಸಿ ಐ ಬ್ರೋಸ್‌ ಕೆಳಗೆ ಹಚ್ಚಿ. ಐ ಮೇಕಪ್‌ ಎದ್ದು ತೋರಲು ಮತ್ತೆ ಬ್ಲ್ಯಾಕ್‌ ಶ್ಯಾಡೋ ಹಚ್ಚಿ. ಈಗ ಕಣ್ಣಿಗೆ ಲೈನರ್‌ ಹಚ್ಚಿ. ಲೈನರ್‌ ಹಚ್ಚಿದ ನಂತರ ಕಾಜಲ್ ಮತ್ತು ಮಸ್ಕರಾ ಹಚ್ಚಿ.

ಮೇಕಪ್‌ಗೆ ಬಳಸುವ ಯಾವುದೇ ಪ್ರಾಡಕ್ಟ್ ಹಚ್ಚುವ ಮುನ್ನ ಚೆನ್ನಾಗಿ ಮಿಕ್ಸಿಂಗ್‌ ಮಾಡಿ. ಹಾಗೆ ಮಾಡದಿದ್ದರೆ ಮೇಕಪ್‌ನ ಫಿನಿಶಿಂಗ್‌ ಚೆನ್ನಾಗಿರುವುದಿಲ್ಲ.

DEL_2926

ಫೇಸ್‌ ಮೇಕಪ್‌

ಮೇಕಪ್‌ ಪ್ರಾರಂಭಿಸುವ ಮೊದಲು ಮುಖವನ್ನೂ ಕ್ಲೀನಿಂಗ್‌ ಮಾಡಿ. ಅದರ ನಂತರ ಟೋನಿಂಗ್‌ ಮತ್ತು ಮಾಯಿಶ್ಚರೈಸೇಶನ್‌ ಸರದಿ. ಈಗೆಲ್ಲ ಪ್ರೈಮರ್‌ನಲ್ಲೇ ಮಾಯಿಶ್ಚರೈಸರ್‌ ಸೇರಿರುವುದರಿಂದ ಮಾಯಿಶ್ಚರೈಸೇಶನ್‌ ಸ್ಟೆಪ್‌ನ್ನು ಕೈಬಿಡಬಹುದು ಮತ್ತು ಟೋನಿಂಗ್‌ ನಂತರ ಪ್ರೈಮರ್‌ನ್ನು ಹಚ್ಚಬಹುದು. ನಂತರ ಚೆನ್ನಾಗಿ ಮಿಕ್ಸ್ ಮಾಡಿ ಕನ್ಸೀಲರ್‌ ಹಚ್ಚಿ. ಕನ್ಸೀಲರನ್ನು ಕವರ್‌ ಮಾಡಲು ಡರ್ಮಾಬೇಸ್‌ ಹಚ್ಚಿ ಚೆನ್ನಾಗಿ ಮಿಕ್ಸ್ ಮಾಡಿ. ಕಡೆಯಲ್ಲಿ ಟ್ರಾನ್ಸ್ ಲೂಶನ್‌ ಪೌಡರ್‌ನಿಂದ ಬೇಸ್‌ನ್ನು ಲಾಕ್‌ ಮಾಡಿ.

ಹೇರ್‌ಸ್ಟೈಲ್

ಮೊದಲು ಇಯರ್‌ ಟು ಇಯರ್‌ ಪಾರ್ಟಿಶನ್‌ ಮಾಡಿ. ಮುಂಭಾಗದ ಕೂದಲನ್ನು ಪ್ರತ್ಯೇಕಿಸಿ. ನಂತರ ಕ್ರೌನ್‌ ಏರಿಯಾದಿಂದ ಕೂದಲನ್ನು ತೆಗೆದುಕೊಂಡು ಬ್ಯಾಕ್‌ ಕೂಂಬಿಂಗ್‌ ಮಾಡಿ. ಅದಕ್ರೆ ಹೇರ್‌ ಸ್ಪ್ರೇ ಮಾಡಿ. ಎಷ್ಟು ದೂರದಿಂದ ಹೇರ್‌ ಸ್ಪ್ರೇ ಮಾಡುವಿರೋ, ಅಷ್ಟು ಚೆನ್ನಾಗಿ ಹೇರ್ ಸ್ಟೈಲ್‌ ಇರುತ್ತದೆ. ಕೆಳಗಿನ ಅರ್ಧ ಭಾಗದ ಕೂದಲನ್ನು ಇದೇ ರೀತಿ ದೂಡಿ ಹೇರ್‌ ಸ್ಪ್ರೇ ಮಾಡಿ. ಈಗ  ಹಾಫ್‌ ಏರಿಯಾಗೆ ಪಿನ್‌ ಹಾಕಿ. ಪಿನ್‌ನ ಕೆಳಗಿನ ಕೂದಲನ್ನು ಮೃದುವಾಗಿ ಬ್ಯಾಕ್‌ ಕೂಂಬಿಂಗ್‌ ಮಾಡಿ. ನಂತರ ಚಿಕ್ಕ ಚಿಕ್ಕ ಭಾಗಗಳನ್ನಾಗಿ ಮಾಡಿಕೊಂಡು ಹೇರ್‌ ಸ್ಪ್ರೇ ಮಾಡಿ ಮತ್ತು ರೋಲ್ ಮಾಡಿ ಬಾಬ್‌ ಪಿನ್‌ ಹಾಕಿ. ಈಗ ಮುಂಭಾಗದ ಕೂದಲನ್ನು ಗೈಡ್‌ ಪಾರ್ಟಿಶನ್‌ ಮಾಡಿಕೊಂಡು ಬ್ಯಾಕ್‌ ಕೂಂಬಿಂಗ್‌ ಮಾಡಿ. ನಂತರ ಹೇರ್‌ಸ್ಪ್ರೇ ಮಾಡಿ. ಕಡೆಯಲ್ಲಿ  ಹೇರ್‌ ಆ್ಯಕ್ಸೆಸರೀಸ್‌ನಿಂದ ಅಲಂಕರಿಸಿ.

ಲಿಪ್‌ ಮೇಕಪ್‌

ಲಿಪ್‌ಸ್ಟಿಕ್‌ ಹಚ್ಚುವ ಮುನ್ನ ಲಿಪ್‌ ಲೈನಿಂಗ್‌ ಮಾಡಬೇಕು. ಮುಖ್ಯವಾಗಿ ಅಪರ್‌ ಲಿಪ್‌ ತೆಳುವಾಗಿದ್ದು, ಲೋಯರ್‌ ಲಿಪ್‌ ದಪ್ಪಗಿರುವವರಿಗೆ ಇದು ಅತ್ಯಗತ್ಯ. ಹೀಗೆ ಲಿಪ್‌ ಲೈನರ್‌ನಿಂದ ಲೈನಿಂಗ್‌ ಮಾಡಿದ ನಂತರ ಲಿಪ್‌ಸ್ಟಿಕ್‌ ಹಚ್ಚಿ. ಕಡೆಯಲ್ಲಿ ಹೈ ಪಿಗ್ಮೆಂಟ್‌ ಗ್ಲಿಟರ್‌ ಹಚ್ಚಲು ಮರೆಯದಿರಿ.

ಮೇಕಪ್‌ ಮಾಡುವಾಗ ಮುಖದ ಕಡೆಗಷ್ಟೇ ಗಮನ ನೀಡಿದರೆ ಸಾಲದು, ಹೇರ್‌ ಸ್ಟೈಲ್‌ನಿಂದಲೂ ಮುಖಕ್ಕೆ ಪರ್ಫೆಕ್ಟ್ ಶೇಪ್‌ ಕೊಡಬಹುದೆಂಬುದನ್ನು ತಿಳಿದುಕೊಳ್ಳಿ. ಮೇಕಪ್‌ ಜೊತೆಗೆ ಹೇರ್‌ಸ್ಟೈಲ್‌ನ್ನು ಗಮನಿಸಿಕೊಳ್ಳುತ್ತಾ ನೋಡುಗರ ಕಣ್ಸೆಳೆಯಿರಿ.

ಫೇಸ್‌ ಕಾಂಟೂರಿಂಗ್‌

ಕಾಂಟೂರಿಂಗ್‌ ಮುಖದ ಫೀಚರ್ಸ್ ಗೆ ಶೋಭೆ ತರುತ್ತದೆ. ಮುಖಕ್ಕೆ ಓವಲ್ ಶೇಪ್‌ನಂತೆ ಕಾಂಟೂರಿಂಗ್‌ ಮಾಡಿ. ಇದಕ್ಕಾಗಿ ಇಯರ್‌ ಟಾಪ್‌ನಿಂದ ಮುಖದ ಹಾಲೋ ಲೈನ್‌ನವರೆಗೆ ಕಾಂಟೂರಿಂಗ್‌ ಮಾಡಿ. ಮುಖ ನ್ಯಾಚುರಲ್ ಆಗಿ ಕಾಣಲು ಕಾಂಟೂರಿಂಗ್‌ನ್ನು ಬ್ಲೆಂಡ್‌ ಮಾಡಿ.

ಬ್ಲಶರ್

ಮಹಿಳೆಯರು ಯಾವಾಗಲೂ ಪಿಂಕ್‌ ಬ್ಲಶರ್‌ ಹಚ್ಚಲು ಇಷ್ಟಪಡುತ್ತಾರೆ. ಅದರ ಬದಲು ಆರೆಂಜ್‌ ಮತ್ತು ಪೀಚ್‌ ಬ್ಲಶರ್‌ನ್ನು ಮಿಕ್ಸ್ ಮಾಡಿ ಹಚ್ಚಬೇಕು. ಇದಕ್ಕೆ ಸರಿಯಾದ ವಿಧಾನವೆಂದರೆ, ನಿಮ್ಮ ಸ್ಕಿನ್‌ಟೋನ್‌ಗೆ ಅನುಸಾರವಾಗಿ ಬ್ಲಶರ್‌ನ್ನು ಆರಿಸಿಕೊಳ್ಳಿ. ಡಾರ್ಕ್‌ ಸ್ಕಿನ್‌ ಆದರೆ ಲೈಟ್‌ ಕಲರ್‌ ಬ್ಲಶ್‌ ಆರಿಸಬೇಕು. ಫೇರ್‌ ಸ್ಕಿನ್‌ಗೆ ನ್ಯಾಚುರಲ್ ಕಲರ್‌ ಚೆನ್ನಾಗಿ ಹೊಂದಿಕೆಯಾಗುತ್ತದೆ.

ಇಂಡೊವೆಸ್ಟರ್ನ್‌ ಮೇಕಪ್‌

ಫೇಸ್‌ ಮೇಕಪ್‌ : ಫೇಸ್‌ ಕ್ಲೀನಿಂಗ್‌ ಮತ್ತು ಟೋನಿಂಗ್‌ ನಂತರ ಮುಖಕ್ಕೆ ಮೇಕಪ್‌ ಫಾರ್‌ ಎವರ್‌ ಪ್ರೈಮರ್‌ ಹಚ್ಚಿ. ಏರ್‌ಬ್ರಶ್‌ ಮೇಕಪ್‌ನಲ್ಲಿ ಕೆಲವರು ಕನ್ಸೀಲಿಂಗ್‌ ಮಾಡುವುದಿಲ್ಲ. ಕನ್ಸೀಲರ್‌ ಮುಖದ ಕಲೆಗಳನ್ನು ಮರೆಮಾಡುತ್ತದೆ. ಆದ್ದರಿಂದ ಕನ್ಸೀಲಿಂಗ್‌ ಅಗತ್ಯ. ಏರ್‌ಬ್ರಶ್‌ ಮೆಶೀನ್‌ನಲ್ಲಿ ಕನ್ಸೀಲರ್‌ ತುಂಬಿಸಿ, ನಿಧಾನವಾಗಿ ರೌಂಡ್‌ ಮೂವ್‌ಮೆಂಟ್‌ ಮಾಡುತ್ತಾ ಸ್ಪ್ರೇ ಮಾಡಿ.

ಐ ಮೇಕಪ್

ಮೊದಲು ಕಣ್ಣಿಗೆ ಐ ಬೇಸ್‌ ಹಚ್ಚಿ. ನಂತರ ಮಧ್ಯಭಾಗಕ್ಕೆ ಪೀಕಾಕ್‌ ಕಲರ್‌ನ ಐ ಶ್ಯಾಡೋ ಹಚ್ಚಿ. ಇದನ್ನು ಹಚ್ಚಿದ ಕೂಡಲೇ ಹೈಲೈಟರ್‌ ಹಚ್ಚಿ. ಆಮೇಲೆ ಲೈನರ್‌ ಹಚ್ಚಿ. ವೆಸ್ಟರ್ನ್‌ ಮೇಕಪ್‌ನಲ್ಲಿ ಲೈನರ್‌ನ್ನು ಹೆಚ್ಚು ಡಿಫೈನ್‌ ಮಾಡಬಾರದೆಂದು ನೆನಪಿಡಿ. ಲೈನರ್‌ ಹಚ್ಚಿದ ನಂತರ ಇನ್ನರ್‌ ಕಾರ್ನರ್ಸ್ ಗೆ ಯೆಲ್ಲೋ ಶೇಡ್‌ ಹಚ್ಚಿ ಮರ್ಜ್‌ ಮಾಡಿ. ನಂತರ ಗ್ರೀನ್‌ ಮತ್ತು ಬ್ಲ್ಯಾಕ್‌ ಶ್ಯಾಡೋನಿಂದ ಕಣ್ಣಿಗೆ ಶೋಭೆ ನೀಡಿ. ಆಮೇಲೆ ಹೈಲೈಟರ್‌ ಹಚ್ಚಿ. ಇದಾದ ಮೇಲೆ ಗ್ರೀನ್‌ ಮೆಟಬಾಲಿಕ್‌ ಐ ಲೈನರ್‌ನಿಂದ ಫಿನಿಶಿಂಗ್‌ ಟಚ್‌ ಕೊಡಿ.

ಬ್ಲಶರ್

ಬ್ಲಶರ್‌ ಹಚ್ಚುವ ಸುಲಭ ವಿಧಾನವೆಂದರೆ ಕೆನ್ನೆಗಳಿಗೆ ಪಿಂಕ್‌, ಆರೆಂಜ್‌ ಮತ್ತು ಪೀಚ್‌ ಕಲರ್‌ನ ಬ್ಲಶರ್‌ನ್ನು ಆರಿಸಿಕೊಳ್ಳಿ.

ಲಿಪ್‌ ಮೇಕಪ್‌

ಮೊದಲು ಲಿಪ್‌ ಪೆನ್ಸಿಲ್‌ನಿಂದ ತುಟಿಗಳ ಔಟ್‌ಲೈನಿಂಗ್‌ ಮಾಡಿಕೊಳ್ಳಿ. ನಂತರ ಲಿಪ್‌ಸ್ಟಿಕ್‌ ಹಚ್ಚಿ.

ಹೇರ್‌ ಸ್ಟೈಲ್

ಇಯರ್‌ ಟು ಇಯರ್‌ ಪಾರ್ಟಿಶನ್‌ ಮಾಡಿ. ಹಿಂಭಾಗದ ಕೂದಲನ್ನು ಪೋನಿಟೇಲ್ ಕಟ್ಟಿ. ಕ್ರೌನ್‌ ಏರಿಯಾನಲ್ಲಿ ಸ್ಟಫಿಂಗ್‌ ಮಾಡಿ ಪಿನ್‌ನಿಂದ ಸೆಟ್‌ ಮಾಡಿ ಮಧ್ಯಭಾಗದಲ್ಲಿ ಸೆಕ್ಷನ್‌ ಮಾಡಿ ಬ್ಯಾಕ್‌ ಕೂಂಬಿಂಗ್‌ ಮಾಡಿ ಮತ್ತು ಸ್ಟಫಿಂಗ್‌ನಿಂದ ಕಲರ್‌ ಮಾಡಿ. ನಂತರ ಎರಡೂ ಪಕ್ಕದಿಂದ ಕೂದಲನ್ನು ತೆಗೆದುಕೊಂಡು ಸ್ಟಫಿಂಗ್‌ನ್ನು ಕವರ್‌ ಮಾಡಿ. ಈಗ ಐ ಬ್ರೋಸ್‌ನ್ನು ಗೈಡ್‌ ಲೈನ್‌ ಮಾಡಿಕೊಂಡು ಕೂದಲನ್ನು ಭಾಗ ಮಾಡಿ. ಪಕ್ಕದ ಕೂದಲನ್ನು ಬ್ಯಾಕ್‌ ಕೂಂಬಿಂಗ್‌ ಮಾಡಿ ಹೇರ್‌ ಸ್ಪ್ರೇ ಮಾಡಿ. ಮೇಲಿನ ಭಾಗವನ್ನು ಮೃದುವಾಗಿ ಸವರಿ ನೀಟ್‌ ಲುಕ್‌ ಕೊಡಿ.

ಇನ್ನೊಂದು ಪಕ್ಕದ ಕೂದಲನ್ನು ಹೀಗೇ ಮಾಡಿ. ನಂತರ ಮಧ್ಯದ ಕೂದಲನ್ನು ಚಿಕ್ಕ ಚಿಕ್ಕ ಸೆಕ್ಷನ್‌ಗಳಾಗಿ ಮಾಡಿಕೊಂಡು ಬ್ಯಾಕ್‌ ಕೂಂಬಿಂಗ್‌ ಮಾಡಿ ಮತ್ತು ಪಕ್ಕಕ್ಕೆ ತಂದು ಬಾಬ್‌ ಪಿನ್‌ ಹಾಕಿ. ನಂತರ ಸ್ಟಫಿಂಗ್‌ ಮಾಡಿ ಪಿನ್‌ನಿಂದ ಸೆಟ್‌ ಮಾಡಿ. ಮೇಲಿನಿಂದ ತುರುಬಿನ ನೆಟ್‌ ಹಾಕಿ, ಬಿಗಿಯಾಗಿ ಕೂರುವಂತೆ ಪಿನ್‌ ಹಾಕಿ. ಈಗ 2 ಆರ್ಟಿಫಿಶಿಯಲ್ ಜಡೆಗಳನ್ನು ತೆಗೆದುಕೊಂಡು ಹೇರ್‌ ಸ್ಪ್ರೇ ಮಾಡಿ. ಅದನ್ನು ತುರುಬಿನ ಮೇಲೆ ಇರಿಸಿ ಪಿನ್‌ನಿಂದ ಸೆಟ್‌ ಮಾಡಿ. ಈಗ ಕೂದಲಿನ ಒಂದು ಸೆಕ್ಷನ್‌ ತೆಗೆದುಕೊಂಡು ನಾಟ್‌ ಹಾಕಿ ತುರುಬಿನ ಮೇಲೆ ಫಿಕ್ಸ್ ಮಾಡಿ. ಒಂದು ಸೆಕ್ಷನ್‌ ಬಿಟ್ಟು ಉಳಿದ ಎ್ಲಾ ಸೆಕ್ಷನ್‌ಗಳನ್ನೂ ಇದೇ ರೀತಿ ನಾಟ್‌ ಹಾಕಿ ತುರುಬಿನ ಮೇಲೆ ಫಿಕ್ಸ್ ಮಾಡಿ.ಕಡೆಯಲ್ಲಿ ಉಳಿದ ಸೆಕ್ಷನ್‌ನ್ನು 2 ಭಾಗಗಳಾಗಿ ವಿಂಗಡಿಸಿ ಟ್ವಿಸ್ಟ್ ಮಾಡಿ ಹೇರ್‌ ಸ್ಪ್ರೇ ಮಾಡಿ. ನಂತರ ಫ್ಯಾಂಟಸಿ ಕೂಂಬ್‌ನಲ್ಲಿ 1-1 ಸೆಕ್ಷನ್‌ ಹಾಕಿ ಬನ್‌ನ ಕೆಳಗಿನಿಂದ ಹೊರತೆಗೆಯಿರಿ.

– ರಾಧಾ ಕುಮಾರ್‌ 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ