ನೀವು ಕುರ್ಚಿಯಲ್ಲಿ ಪ್ರತ್ಯೇಕವಾಗಿ ಮತ್ತು ವಿಶೇಷವಾಗಿ ಕಾಣಿಸಿಕೊಳ್ಳಬೇಕಾದರೆ ಹೊಸದೇನಾದರೂ ಟ್ರೈ ಮಾಡಬೇಕು. ಆದರೆ ಹೆಚ್ಚಿನ ಮಹಿಳೆಯರು ತಮ್ಮ ಲುಕ್‌ಗಾಗಿ ಎಕ್ಸ್ ಪೆರಿಮೆಂಟ್ ಮಾಡಲು ಇಷ್ಟಪಡುವುದಿಲ್ಲ. ಹೇಗೆ ಕಾಣುತ್ತದೊ, ತಮಗೆ ಸೂಟ್ ಆಗುವುದೋ ಇಲ್ಲವೋ ಎಂದು ಯೋಚಿಸುತ್ತಾರೆ. ಹೀಗಾಗಿ ಅವರು ಪ್ರತಿಯೊಂದು ಕಾರ್ಯಕ್ರಮಕ್ಕೂ ಒಂದೇ ರೀತಿಯ ಮೇಕಪ್ ಮಾಡಿಕೊಳ್ಳುತ್ತಾರೆ.
ಎಲ್ಲರ ದೃಷ್ಟಿಯೂ ನಿಮ್ಮ ಕಡೆಗೇ ಇರಲಿ ಎಂದು ನೀವು ಬಯಸುವಿರಾದರೆ ಕೊಂಚ ಬೇರೆಯವರನ್ನು ಟ್ರೈ ಮಾಡಲು ಕಲಿಯಿರಿ. ಮೇಕಪ್ ತಜ್ಞರಿಂದ ಸೂಚಿಸಲ್ಪಟ್ಟ ಕೆಲವು ವಿಶೇಷ ಮೇಕಪ್ ವಿಧಾನಗಳನ್ನು ಇಲ್ಲಿ ಪ್ರಸ್ತುತಪಡಿಸುತ್ತಿದ್ದೇವೆ. ಅವುಗಳನ್ನು ಅನುಸರಿಸಿ ನೀವು ಲುಕ್‌ನಲ್ಲಿ ಬದಲಾವಣೆ ತರಬಹುದು.
ಐ ಮೇಕಪ್
ಮೇಕಪ್ ಮಾಡುವಾಗ ಯಾವಾಗಲೂ ಐ ಮೇಕಪ್‌ನಿಂದ ಪ್ರಾರಂಭಿಸಿ. ಏಕೆಂದರೆ ಕೊಂಚ ಹರಡಿಕೊಂಡರೂ ಬೇಸ್ ಹಾಳಾಗುವುದಿಲ್ಲ. ಐ ಮೇಕಪ್ ಮಾಡುವ ಮೊದಲು ಐ ಪ್ರೈಮರ್ ಹಚ್ಚಿ. ಆಮೇಲೆ ಐ ಬ್ರೋಸ್‌ನ ಮೇಲೆ ಮತ್ತು ಕೆಳಭಾಗಕ್ಕೆ ಐ ಬೇಸ್ ಹಚ್ಚಿ. ಇದರಿಂದ ಐ ಬ್ರೋಸ್ ಶಾರ್ಪ್ ಆಗಿ ಕಾಣುತ್ತದೆ. ನಿಮ್ಮ ಬಳಿ ಐ ಬೇಸ್ ಇಲ್ಲದಿದ್ದರೆ ಐ ಬ್ರೋಸ್ ಡಿಫೈನ್ ಮಾಡಲು ಲೈಟ್ ಪೆನ್ಸಿಲನ್ನೂ ಬಳಸಬಹುದು. ಇದಾದ ಮೇಲೆ ಕ್ರೀಮ್ ಬೇಸ್ಡ್ ರೆಡ್ ಐ ಶ್ಯಾಡೊ ಹಚ್ಚಿ ಮತ್ತು ತಕ್ಷಣ ಗ್ಲಿಟರ್ ಹಚ್ಚಿ. ಹೀಗೆ ಮಾಡುವುದರಿಂದ ಐ ಶ್ಯಾಡೋ ಮೇಲೆ ಗ್ಲಿಟರ್ ಸರಿಯಾಗಿ ಡೆಪಾಸಿಟ್ ಆಗುತ್ತದೆ. ನಂತರ ವೈಟ್ ಮತ್ತು ಪರ್ಲ್ ಹೈಲೈಟರ್‌ನ್ನು ಬೆರೆಸಿ ಐ ಬ್ರೋಸ್ ಕೆಳಗೆ ಹಚ್ಚಿ. ಐ ಮೇಕಪ್ ಎದ್ದು ತೋರಲು ಮತ್ತೆ ಬ್ಲ್ಯಾಕ್ ಶ್ಯಾಡೋ ಹಚ್ಚಿ. ಈಗ ಕಣ್ಣಿಗೆ ಲೈನರ್ ಹಚ್ಚಿ. ಲೈನರ್ ಹಚ್ಚಿದ ನಂತರ ಕಾಜಲ್ ಮತ್ತು ಮಸ್ಕರಾ ಹಚ್ಚಿ.
ಮೇಕಪ್‌ಗೆ ಬಳಸುವ ಯಾವುದೇ ಪ್ರಾಡಕ್ಟ್ ಹಚ್ಚುವ ಮುನ್ನ ಚೆನ್ನಾಗಿ ಮಿಕ್ಸಿಂಗ್ ಮಾಡಿ. ಹಾಗೆ ಮಾಡದಿದ್ದರೆ ಮೇಕಪ್‌ನ ಫಿನಿಶಿಂಗ್ ಚೆನ್ನಾಗಿರುವುದಿಲ್ಲ.
ಫೇಸ್ ಮೇಕಪ್
ಮೇಕಪ್ ಪ್ರಾರಂಭಿಸುವ ಮೊದಲು ಮುಖವನ್ನೂ ಕ್ಲೀನಿಂಗ್ ಮಾಡಿ. ಅದರ ನಂತರ ಟೋನಿಂಗ್ ಮತ್ತು ಮಾಯಿಶ್ಚರೈಸೇಶನ್ ಸರದಿ. ಈಗೆಲ್ಲ ಪ್ರೈಮರ್‌ನಲ್ಲೇ ಮಾಯಿಶ್ಚರೈಸರ್ ಸೇರಿರುವುದರಿಂದ ಮಾಯಿಶ್ಚರೈಸೇಶನ್ ಸ್ಟೆಪ್‌ನ್ನು ಕೈಬಿಡಬಹುದು ಮತ್ತು ಟೋನಿಂಗ್ ನಂತರ ಪ್ರೈಮರ್‌ನ್ನು ಹಚ್ಚಬಹುದು. ನಂತರ ಚೆನ್ನಾಗಿ ಮಿಕ್ಸ್ ಮಾಡಿ ಕನ್ಸೀಲರ್ ಹಚ್ಚಿ. ಕನ್ಸೀಲರನ್ನು ಕವರ್ ಮಾಡಲು ಡರ್ಮಾಬೇಸ್ ಹಚ್ಚಿ ಚೆನ್ನಾಗಿ ಮಿಕ್ಸ್ ಮಾಡಿ. ಕಡೆಯಲ್ಲಿ ಟ್ರಾನ್ಸ್ ಲೂಶನ್ ಪೌಡರ್‌ನಿಂದ ಬೇಸ್‌ನ್ನು ಲಾಕ್ ಮಾಡಿ.
ಹೇರ್‌ಸ್ಟೈಲ್
ಮೊದಲು ಇಯರ್ ಟು ಇಯರ್ ಪಾರ್ಟಿಶನ್ ಮಾಡಿ. ಮುಂಭಾಗದ ಕೂದಲನ್ನು ಪ್ರತ್ಯೇಕಿಸಿ. ನಂತರ ಕ್ರೌನ್ ಏರಿಯಾದಿಂದ ಕೂದಲನ್ನು ತೆಗೆದುಕೊಂಡು ಬ್ಯಾಕ್ ಕೂಂಬಿಂಗ್ ಮಾಡಿ. ಅದಕ್ರೆ ಹೇರ್ ಸ್ಪ್ರೇ ಮಾಡಿ. ಎಷ್ಟು ದೂರದಿಂದ ಹೇರ್ ಸ್ಪ್ರೇ ಮಾಡುವಿರೋ, ಅಷ್ಟು ಚೆನ್ನಾಗಿ ಹೇರ್ ಸ್ಟೈಲ್ ಇರುತ್ತದೆ. ಕೆಳಗಿನ ಅರ್ಧ ಭಾಗದ ಕೂದಲನ್ನು ಇದೇ ರೀತಿ ದೂಡಿ ಹೇರ್ ಸ್ಪ್ರೇ ಮಾಡಿ. ಈಗ ಹಾಫ್ ಏರಿಯಾಗೆ ಪಿನ್ ಹಾಕಿ. ಪಿನ್‌ನ ಕೆಳಗಿನ ಕೂದಲನ್ನು ಮೃದುವಾಗಿ ಬ್ಯಾಕ್ ಕೂಂಬಿಂಗ್ ಮಾಡಿ. ನಂತರ ಚಿಕ್ಕ ಚಿಕ್ಕ ಭಾಗಗಳನ್ನಾಗಿ ಮಾಡಿಕೊಂಡು ಹೇರ್ ಸ್ಪ್ರೇ ಮಾಡಿ ಮತ್ತು ರೋಲ್ ಮಾಡಿ ಬಾಬ್ ಪಿನ್ ಹಾಕಿ. ಈಗ ಮುಂಭಾಗದ ಕೂದಲನ್ನು ಗೈಡ್ ಪಾರ್ಟಿಶನ್ ಮಾಡಿಕೊಂಡು ಬ್ಯಾಕ್ ಕೂಂಬಿಂಗ್ ಮಾಡಿ. ನಂತರ ಹೇರ್‌ಸ್ಪ್ರೇ ಮಾಡಿ. ಕಡೆಯಲ್ಲಿ ಹೇರ್ ಆ್ಯಕ್ಸೆಸರೀಸ್‌ನಿಂದ ಅಲಂಕರಿಸಿ.