1 ನಿಮ್ಮ ಚರ್ಮಕ್ಕೆ ಹಾನಿಯಾಗದಂತೆ ತಡೆಯಲು ಮತ್ತು ಸದಾ ತಾಜಾ ಆಗಿಡಲು, ಧಾರಾಳವಾಗಿ ಸಾಕಷ್ಟು ನೀರು ಕುಡಿಯುತ್ತಿರಿ. ಜೊತೆಗೆ ಎಳನೀರು, ಬಾರ್ಲಿ ನೀರು ಕೂಡ ಇರಲೇಬೇಕು. ಇವು ಚರ್ಮದ ಆರ್ದ್ರತೆ ಕಾಪಾಡಿ, ಹೊಳಪು ಉಳಿಸಿಕೊಡುತ್ತವೆ.

2 ಚರ್ಮಕ್ಕೆ ತಕ್ಕಂತೆ ಸನ್‌ಸ್ಕ್ರೀನ್‌ ಹುಡುಕಿಕೊಳ್ಳುವುದು ಸುಲಭದ ಮಾತಲ್ಲ. ಆದರೆ ಇದಕ್ಕೆ ತನ್ನದೇ ಆದ ಲಾಭಗಳಿವೆ. ಭಾರತೀಯ ಚರ್ಮಕ್ಕೆ 30-50 SPFನ ಸನ್‌ಸ್ಕ್ರೀನ್‌ ನಿಜಕ್ಕೂ ಉಪಯುಕ್ತ. ಆಯ್ಲಿ ಚರ್ಮದವರಿಗೆ ಜೆಲ್‌ಯುಕ್ತ ಸನ್‌ಸ್ಕ್ರೀನ್‌ ಸಹ ಲಭ್ಯ. ಬಿಸಿಲಿಗೆ ಹೋಗುವ ಕನಿಷ್ಠ 20 ನಿಮಿಷ ಮೊದಲು ನಿಮ್ಮ ಚರ್ಮಕ್ಕೆ (ಮುಖ್ಯವಾಗಿ ತೆರೆದ ಅಂಗಗಳು) ಸನ್‌ಸ್ಕ್ರೀನ್‌ ಲೋಶನ್‌ ಯಾ ಜೆಲ್‌ ಹಚ್ಚಿರಿ.

3 ವ್ಯಾಯಾಮ ಮಾಡುವುದರಿಂದ ದೇಹದಲ್ಲಿ ರಕ್ತ ಸಂಚಾರ ಕ್ರಮಬದ್ಧವಾಗಿ ನಡೆಯುತ್ತದೆ. ಇದರಿಂದ ದೇಹಕ್ಕೆ ಅತ್ಯಗತ್ಯ ಆಮ್ಲಜನಕದ ಪೂರೈಕೆಯೂ ಆಗುತ್ತದೆ. ಇದರಿಂದ ಚರ್ಮ ಆರೋಗ್ಯಕರವಾಗುತ್ತದೆ.

4 ಬಿರು ಬಿಸಿಲಲ್ಲಿ ಕಂಗಳನ್ನು ಸುರಕ್ಷಿತವಾಗಿಡಲು ಸನ್‌ಗ್ಲಾಸೆಸ್‌ ಧರಿಸಿರಿ.

5 ಗುಲಾಬಿಜಲ, ಕಡಲೆಹಿಟ್ಟು, ಮೊಸರಿನಂಥ ನೈಸರ್ಗಿಕ ವಸ್ತುಗಳ ನೆರವಿನಿಂದ ಚರ್ಮವನ್ನು ಸ್ವಚ್ಛಗೊಳಿಸಿ. ಇದಾದ ಮೇಲೆ ಚರ್ಮವನ್ನು ಅಗತ್ಯ ಟೋನ್‌ ಮಾಡಿ. ಇದರಿಂದ ರೋಮರಂಧ್ರ ತಾನಾಗಿ ಕ್ಲೋಸ್‌ ಆಗುತ್ತದೆ. ಆಗ ಸಹಜವಾಗಿ ಚರ್ಮ ತಂಪಾಗುತ್ತದೆ. ಮಾಯಿಶ್ಚರೈಸರ್‌ ಬಳಸುವುದರಿಂದ ನಿಮ್ಮ ಚರ್ಮ ಆಯ್ಲಿ ಆಗುವ ಹಾಗಿದ್ದರೆ, ಬೇಸಿಗೆಯಲ್ಲಿ ನೀವು ಆರ್ದ್ರತೆಯುಕ್ತ ಮಾಯಿಶ್ಚರೈಸರ್‌ ಬಳಸಬಹುದು.

6 ಚರ್ಮದಿಂದ ಟ್ಯಾನ್‌ ದೂರಗೊಳಿಸಲು ನೀವು ಮುಖಕ್ಕೆ ಗಟ್ಟಿ ಮೊಸರಿನ ಪ್ಯಾಕ್‌ ಹಚ್ಚಿರಿ. ಇದಕ್ಕೆ ಜೇನುತುಪ್ಪ, ಓಟ್‌ಮೀಲ್‌, ಸೌತೆಪೇಸ್ಟ್, ನಿಂಬೆರಸ, ಚಂದನ ಇತ್ಯಾದಿ ಬೆರೆಸಿಕೊಳ್ಳಿ.

7 ಈ ಸೀಸನ್‌ನಲ್ಲಿ ಎಕ್ಸ್ ಫಾಲಿಯೇಶನ್‌ ಅನಿವಾರ್ಯ. ಏಕೆಂದರೆ ದಿನವಿಡೀ ಮುಖದಲ್ಲಿ ಅಶುದ್ಧತೆ ತುಂಬಿಕೊಳ್ಳುವುದರಿಂದ ಅದನ್ನು ಅಗತ್ಯ ತೆಗೆಯಲೇಬೇಕು. ಹೀಗಾಗಿ ವಾರದಲ್ಲಿ ಕನಿಷ್ಠ 2 ಸಲ  ಎಕ್ಸ್ ಫಾಲಿಯೇಟ್‌ ಮಾಡಿಸಬೇಕು.

– ಡಾ. ಕರುಣಾ ಕುಲಕರ್ಣಿ

Tags:
COMMENT