ಕೂದಲಿಗಾಗಿ ಎಲ್ಲೆಡೆ ತುಂಬಿರುವ ಮಾಲಿನ್ಯದ ವಾತಾವರಣ ಹಾಗೂ ನಮ್ಮ ಬಿಡುವಿಲ್ಲದ ದಿನಚರಿಯಿಂದಾಗಿ ಮೂಡುವ ಸ್ಟ್ರೆಸ್‌, ಕೂದಲಿನ ಮೇಲೆ ಕುಪ್ರಭಾವ ಬೀರುತ್ತದೆ. ಇದರಿಂದ ಕೂದಲು ಉದುರುವಿಕೆ, ಅದು ನಿರ್ಜೀವ ಆದಂತೆ ತೋರುವಿಕೆ, ಅದರಲ್ಲಿ ಹೆಚ್ಚು ತಲೆ ಹೊಟ್ಟು ಇತ್ಯಾದಿ ಸಮಸ್ಯೆಗಳಿಂದ ಕಿರಿಕಿರಿ ಹೆಚ್ಚುತ್ತದೆ. ಹೀಗಿರುವಾಗ ಕೂದಲಿನ ಸೌಂದರ್ಯ ಕಾಪಾಡಿಕೊಳ್ಳಲು ಹೇರ್‌ ಸ್ಪಾ ಒಂದು ಉತ್ತಮ ಟ್ರೀಟ್‌ಮೆಂಟ್‌ ಆಗಿದೆ. ಅಸಲಿಗೆ, ಹೇರ್‌ ಸ್ಪಾ ಟೆಕ್ನಿಕ್‌ ಕೂದಲಿಗೆ ಉತ್ತಮ ಪೋಷಣೆ ಒದಗಿಸುವುದರ ಜೊತೆಗೆ ಅದನ್ನು ಹೆಚ್ಚು ಆರೋಗ್ಯಕರವಾಗಿ, ಹೊಳೆಹೊಳೆಯುವಂತೆ ಮಾಡಬಲ್ಲದು.

ಹೇರ್ಸ್ಪಾ

ಹೇರ್‌ ಸ್ಪಾದಲ್ಲಿ ಕ್ರೀಂ, ಎಣ್ಣೆ, ನೀರು ಬಳಸಿ ಕೂದಲನ್ನು ಆಳವಾಗಿ ಹೈಡ್ರೇಟ್‌ಗೊಳಿಸಿ ನಂತರ ರಿಲ್ಯಾಕ್ಸ್ ಮಾಡಿಸಲಾಗುತ್ತದೆ. ಹೇರ್‌ ಸ್ಪಾದಲ್ಲಿ ಸುಮಾರು 45 ನಿಮಿಷದಿಂದ 1 ಗಂಟೆಯವರೆಗೆ ಸಮಯ ತಗುಲುತ್ತದೆ. ಹೇರ್‌ ಸ್ಪಾ ಮೂಲಕ ಒದಗಿಸುವ ಮಸಾಜ್‌ ಹಾಗೂ ಹಾಟ್‌ ಟವೆಲ್ ‌ಥೆರಪಿ ರಕ್ತ ಸಂಚಾರವನ್ನು ಹೆಚ್ಚಿಸುತ್ತದೆ ಹಾಗೂ ಕೂದಲಿನ ಡೀಟಾಕ್ಸಿಫಿಕೇಶನ್‌ ಸಹ ಮಾಡುತ್ತದೆ.

ಹೇರ್‌ ಸ್ಪಾದ ಪ್ರಕ್ರಿಯೆ ಸೌಂದರ್ಯ ತಜ್ಞೆಯರ ಸಲಹೆಯಂತೆ, ಬೇರೆ ಬೇರೆ ಸಮಸ್ಯೆಗಳು ಹಾಗೂ ಬೇರೆ ಬೇರೆ ಕೂದಲಿಗಾಗಿ ಬೇರೆ ಬೇರೆ ಬಗೆಯ ಸ್ಪಾ ಮಾಡಿಸ ಬೇಕಾಗುತ್ತದೆ. ಅಂದರೆ ಕೂದಲಿನ ಟೆಕ್ಸ್ ಚರ್‌ಗಾಗಿ ಹೇರ್‌ ಸ್ಪಾ ಟ್ರೀಟ್‌ಮೆಂಟ್‌ ಬೇರೆಯೇ ಆಗಿರುತ್ತದೆ. ಕೂದಲಿನ ಟೆಕ್ಸ್ ಚರ್‌ ಕೆಟ್ಟಿದ್ದರೆ, ಸದಾ ಉದುರುತ್ತಿದ್ದರೆ, ಡ್ಯಾಂಡ್ರಫ್‌ ಹೆಚ್ಚಾಗಿದ್ದರೆ ಹೇರ್‌ ಸ್ಪಾ ನಿಜಕ್ಕೂ ಲಾಭಕಾರಿ. ತಲೆಹೊಟ್ಟು ಹೆಚ್ಚಾಗಿದ್ದ ಪಕ್ಷದಲ್ಲಿ ಆ್ಯರೋಮಾ ಸ್ಪಾ ಸಮಸ್ಯೆಯನ್ನು ಎಷ್ಟೋ ತಗ್ಗಿಸುತ್ತದೆ.

ಹೇರ್ಫಾಲ್ಗಾಗಿ ಸ್ಪಾ

ಯಾವುದೇ ಹೇರ್‌ ಸ್ಪಾ ಮಾಡಿಸುವ ಮೊದಲು, ತಲೆಗೆ ಯಾವುದೇ ವಿಧದ ಸೋಂಕು ಆಗಿಲ್ಲ ತಾನೇ ಎಂದು ಖಾತ್ರಿಪಡಿಸಿಕೊಳ್ಳಿ. ಅದಾದ ಮೇಲೆ ಕೂದಲಿನ ಪ್ರಕೃತಿಗೆ ಅನುಗುಣವಾಗಿ ಶ್ಯಾಂಪೂ ಹಚ್ಚಿ ತೊಳೆಯಿರಿ. ಅಂದರೆ, ಡ್ರೈ ಹೇರ್‌ಗಾಗಿ ಕಂಡೀಶನರ್‌ಯುಕ್ತ ಶ್ಯಾಂಪೂ ಬಳಸಿರಿ. ನಂತರ 200 ಮಿ.ಲೀ. ನೀರಿಗೆ ಬೇಸಿಲ್ ‌ಆಯಿಲ್‌, ಆ್ಯರೋಮಾ ಆಯಿಲ್‌ನ 2-3 ಹನಿ ಬೆರೆಸಿಕೊಂಡು ಬೇರೆಯಾಗಿಡಿ. ಕೂದಲನ್ನು ಪಾರ್ಟಿಂಗ್‌ ಮಾಡಿ, ಮೇಲಿನ ಮಿಶ್ರಣವನ್ನು ಕೂದಲಿಗೆ ಸ್ಪ್ರೇ ಮಾಡಿ. ನಂತರ ಕೊಬ್ಬರಿ ಎಣ್ಣೆಗೆ ಪಚೌಲಿ ಆಯಿಲ್‌ನ 4-5 ಹನಿ, 2 ಸಣ್ಣ ಚಮಚ ಕೆಸ್ಟರ್‌ ಆಯಿಲ್ ‌ಬೆರೆಸಿಕೊಂಡು ಲಘುವಾಗಿ ಮಸಾಜ್‌ ಮಾಡಬೇಕು. ಈ ಮಸಾಜ್‌ ಶುರು ಮಾಡುವ ಮೊದಲು ಹಣೆಗೆ ಆಲಿಲ್ ‌ಆಯಿಲ್ ‌ಅಥವಾ ಕ್ರೀಂ ಹಚ್ಚಿ ಮಸಾಜ್‌ ಮಾಡಬೇಕು ಎಂಬುದನ್ನು ಮರೆಯಬೇಡಿ. ಸ್ಪಾಗೆ ಬರುವ ಗ್ರಾಹಕರಿಗೆ ಈ ರೀತಿ ಮಾಡಿ, ರಿಲ್ಯಾಕ್ಸ್ ಆಗಿಸುತ್ತಾರೆ. ಕೂದಲಿನಲ್ಲಿ ಆ್ಯರೋಮಾ ಆಯಿಲ್‌ನ ಮಸಾಜ್‌ನಿಂದ ರಕ್ತ ಸಂಚಾರ ಸುಗಮಗೊಳ್ಳುತ್ತದೆ, ಕೂದಲಿಗೆ ಸೂಕ್ತ ಪೋಷಣೆ ದೊರಕುತ್ತದೆ. ಅದರಿಂದ ಕೂದಲಿನ ಬುಡ ಶಕ್ತಿಯುತವಾಗುತ್ತದೆ. ಜೊತೆಗೆ ಹೇರ್‌ ಫಾಲ್ ‌ಕೂಡ ನಿಂತುಹೋಗುತ್ತದೆ, ಕೂದಲಿನ ಬೆಳವಣಿಗೆ ಸಮರ್ಪಕವಾಗುತ್ತದೆ.

ಮಸಾಜ್‌ ನಂತರ ಕೂದಲಿಗೆ ಹಾಟ್‌ ಟವೆಲ್‌ನಿಂದ ಸ್ಟೀಂ ಕೊಡಿ. ಇದರಿಂದ ಕ್ಯುಟಿಕಲ್ಸ್ ತೆರೆದುಕೊಳ್ಳುತ್ತವೆ ಹಾಗೂ ಎಣ್ಣೆ ಬುಡದವರೆಗೂ ತಲುಪುತ್ತದೆ. ನಂತರ ಶ್ಯಾಂಪೂ ಹಚ್ಚಿ ತೊಳೆಯಿರಿ.

ಈಗ ಪ್ಯಾಕ್‌ ತಯಾರಿಸಿಕೊಳ್ಳಿ. ಪ್ಯಾಕಿಗಾಗಿ 2 ಚಮಚ ಮೆಂತ್ಯದ ಪುಡಿ, 2 ಚಮಚ ಜೀರಿಗೆ ಪುಡಿ, 4-5 ಚಮಚ ಹಾಲು ಇತ್ಯಾದಿ ಬೆರೆಸಿಡಿ. ಇನ್ನೊಂದು ಬಟ್ಟಲಲ್ಲಿ 1 ಚಮಚ ರೀಠಾ ಪೌಡರ್‌ (ರೆಡಿಮೇಡ್‌ಲಭ್ಯ), 1 ಚಮಚ ಸೀಗೆಪುಡಿ, 1 ಚಮಚ ಚಿಗರೇಪುಡಿ, 1 ಸಣ್ಣ ಚಮಚ ಅಶ್ವಗಂಧ, 1 ಸಣ್ಣ ಚಮಚ ಈರುಳ್ಳಿ ರಸ, 1 ಚಮಚ ತ್ರಿಫಲಾ ಚೂರ್ಣ, 1 ಚಮಚ ಕಿತ್ತಳೆಹಣ್ಣಿನ ಒಣ ಸಿಪ್ಪೆಯ ಪುಡಿ, ಹಾಲಲ್ಲಿ ನೆನೆಹಾಕಿದ 2 ಎಸಳು ಕೇಸರಿ ಇತ್ಯಾದಿ ಬೆರೆಸಿಕೊಳ್ಳಿ. ಕೊನೆಯಲ್ಲಿ ಇದಕ್ಕೆ 2 ಚಮಚ ಆಲಿಲ್ ‌ಆಯಿಲ್‌, 1 ಸಣ್ಣ ಚಮಚ ಬ್ರಾಹ್ಮಿ ಸೇರಿಸಲು ಮರೆಯದಿರಿ. ಈ 2 ಪ್ಯಾಕ್‌ನ್ನೂ ಕೂದಲಿನ ಬುಡ ಹಾಗೂ ಇಡಿಯಾಗಿ ಕೂದಲಿಗೆ  ಹಾಕಿರಿ. ಅರ್ಧ ಗಂಟೆ ಬಿಟ್ಟು ಕೂದಲನ್ನು ಶ್ಯಾಂಪೂನಿಂದ ತೊಳೆಯಿರಿ. ಈ ರೀತಿ ಕೂದಲು ನವೀನ ವಿಧಾನದಿಂದ ಹೊಳೆಯತೊಡಗುತ್ತದೆ, ಬಲು ಮೃದುವಾಗುತ್ತದೆ. ಇದನ್ನು ವಾರಕ್ಕೆರಡು ಸಲ ಮಾಡಿಕೊಳ್ಳುವುದರಿಂದ ಕ್ರಮೇಣ ಕೂದಲು ಉದುರುವಿಕೆ ಕೂಡ ನಿಂತುಹೋಗುತ್ತದೆ.

ಲಲಿತಾ

Tags:
COMMENT