ಬೇಸಿಗೆಯ ಬಿಸಿಲು ಅಡಿ ಇಡುತ್ತಿದ್ದಂತೆಯೇ ಚುರಿಚುರಿಯಿಂದ ಆರಂಭವಾಗುವ ಧಗೆ, ತೀವ್ರ ಉಷ್ಣತೆ, ಧೂಳುಮಣ್ಣು, ಬೆವರಿನ ದುರ್ಗಂಧದಿಂದ ಹಿಂಸೆ ಎನಿಸುತ್ತದೆ. ಇಂಥ ಹವಾಮಾನದಲ್ಲಿ ಆಯ್ಲಿ ಸ್ಕಿನ್‌ ಇನ್ನಷ್ಟು ಹೆಚ್ಚು ಜಿಡ್ಡು ಜಿಡ್ಡಾಗಿ ಅಂಟಂಟೆನಿಸುತ್ತದೆ. ಇಂಥ ತ್ವಚೆಯ ಸೌಂದರ್ಯ ಹೆಚ್ಚಿಸಲು ತಜ್ಞರ ಸಲಹೆ ಪರಿಶೀಲಿಸೋಣ.

ಆಯ್ಲಿ ಸ್ಕಿನ್‌ ಮೇಕಪ್‌ : ಆಯ್ಲಿ ಸ್ಕಿನ್‌ವುಳ್ಳ ಮಹಿಳೆಯರು ಬೇಸಿಗೆಯನ್ನೂ ಸಹ ಇತರ ಕಾಲಗಳಂತೆಯೇ ಎಂಜಾಯ್‌ ಮಾಡಬಹುದು. ಸ್ಕಿನ್‌ ಹೇಗೇ ಇರಲಿ, ಅದರ ಸೌಂದರ್ಯ ಹೆಚ್ಚಿಸಲು ನೀವು ಸಮ್ಮರ್‌ನಲ್ಲಿ ಈ ಕೆಳಗಿನ ಸ್ಪೆಷಲ್ ಟ್ರಿಕ್ಸ್ ಬಳಸಿ ಬಿಸಿಲಲ್ಲೂ ನಳನಳಿಸುತ್ತಿರಿ!

ಸ್ಕಿನ್‌ ಕ್ಲೀನಿಂಗ್‌ ಕಡೆ ಗಮನವಿರಲಿ : ಮೇಕಪ್‌ ಮಾಡುವ ಮೊದಲು ಮುಖವನ್ನು ಚೆನ್ನಾಗಿ ತೊಳೆದು, ಸ್ಕ್ರಬ್‌ ಮಾಡಿ. ನಂತರ ಅದನ್ನು ಕ್ಲೆನ್ಸರ್‌, ಕ್ಲೆನ್ಸಿಂಗ್‌ ಮಿಲ್ಕ್ ನಿಂದ ಶುಚಿಗೊಳಿಸಿ. ಕ್ಲೆನ್ಸರ್‌ ತ್ವಚೆಯನ್ನು ಆಳವಾಗಿ ಶುಚಿಗೊಳಿಸುವುದೇ ಅಲ್ಲದೇ ಜೊತೆಗೆ ಹೆಚ್ಚುವರಿ ತೈಲೀಯ ಅಂಶವನ್ನೂ ಹೀರಿಕೊಳ್ಳುತ್ತದೆ. ಮೇಕಪ್‌ ಮಾಡಿಕೊಳ್ಳುವ ಮೊದಲು ನಿಮ್ಮ ಮುಖಲನ್ನು ಆಲ್ಕೋಹಾಲ್‌ ಫ್ರೀ ಟೋನರ್‌ ನಿಂದ ಶುಚಿಗೊಳಿಸಿ. ಕ್ಲೆನ್ಸರ್‌ನಿಂದ ಮುಖವನ್ನು ಶುಚಿಗೊಳಿಸುವ 5 ನಿಮಿಷಗಳ ನಂತರ ಇದನ್ನು ಹಚ್ಚಬೇಕು.

ಫೇಸ್‌ ಮೇಕಪ್‌ : ಚರ್ಮದಲ್ಲಿ ಹೆಚ್ಚುವರಿ ಹೊಳಪನ್ನು ತರಲು ಆಯಿಲ್‌ಫ್ರೀ, ಜಿಡ್ಡು ಹೀರಿಕೊಳ್ಳುವ ಫೌಂಡೇಶನ್‌ ಮತ್ತು ಟಿಂಟೆಡ್‌ ಮಾಯಿಶ್ಚರೈಸರ್‌ನ್ನು ಬಳಸಬೇಕು. ಆಯ್ಲಿ ಸ್ಕಿನ್‌ ಮೇಲೆ ಮೇಕಪ್‌ಗೆ ಮೊದಲೇ ಆ್ಯಂಟಿಶೈನ್‌ ಪ್ರೈಮರ್‌ ಹಚ್ಚಿರಿ. ಅಗತ್ಯಕ್ಕೆ ತಕ್ಕಂತೆ ಇದನ್ನು ಮತ್ತೊಮ್ಮೆ ಹಚ್ಚಬಹುದು.

ಮಾಯಿಶ್ಚರೈಸರ್‌  ಫೌಂಡೇಶನ್‌ : ನೀವು ಉತ್ತಮ ಗುಣಮಟ್ಟದ ಮಾಯಿಶ್ಚರೈಸರ್‌ ಹಚ್ಚಿಕೊಂಡಲ್ಲಿ, ಮೇಕಪ್‌ ಹೆಚ್ಚು ಹೊತ್ತು ನಿಲ್ಲುತ್ತದೆ ಮತ್ತು ನಿಮ್ಮ ಲುಕ್ಸ್ ಸಹ ಸುಧಾರಿಸುತ್ತದೆ. ಸದಾ ಆಯಿಲ್ ಫ್ರೀ ಅಥವಾ ವಾಟರ್‌ ಬೇಸ್ಡ್ ಮಾಯಿಶ್ಚರೈಸರ್‌ನ್ನೇ ಬಳಸಬೇಕು.

ಆಯಿಲ್‌ಫ್ರೀ ಫೌಂಡೇಶನ್‌ ತ್ವಚೆಯ ಓಪನ್‌ ಫೋರ್ಸ್‌ನ್ನು ಪೂರ್ತಿ ಮುಚ್ಚುತ್ತದೆ. ಉತ್ತಮ ಪರಿಣಾಮಕ್ಕಾಗಿ ಇದನ್ನು ತುಸು ಮಾಯಿಶ್ಚರೈಸರ್‌ ಜೊತೆ ಬೆರೆಸಿ, ಮುಖಕ್ಕೆ ಬ್ರಶ್‌ ಮಾಡಿ ಅಥವಾ ಕೈ ಬೆರಳುಗಳಿಂದ ತೀಡಿರಿ.

ಟ್ರಾನ್ಸ್ ಲ್ಯೂಶನ್‌ ಪೌಡರ್‌ : ಫೌಂಡೇಶನ್‌ ಹಚ್ಚಿದ ನಂತರ ಟ್ರಾನ್ಸ್ ಲ್ಯೂಶನ್‌ ಪೌಡರ್‌ ಹಚ್ಚಬೇಕು. ಫೌಂಡೇಶನ್‌ ಹಚ್ಚಿದ ಸುಮಾರು 10 ನಿಮಿಷಗಳ ನಂತರ ಇದನ್ನು ಹಚ್ಚಬೇಕು. ಇದು ಸದಾ ಲೌಡ್ ಕಲರ್‌ನದೇ ಆಗಿರಬೇಕು. ಇದರಿಂದ ಹಣೆ, ಕೆನ್ನೆ, ಮೂಗು, ಗಲ್ಲಗಳನ್ನು ಹೈಲೈಟ್‌ಗೊಳಿಸಿ.

ಕನ್ಸೀಲರ್‌ : ಆಯ್ಲಿ ಸ್ಕಿನ್‌ ಮೇಲೆ ಅಧಿಕ ಪಿಂಪಲ್ಸ್ ಮಾರ್ಕ್ಸ್ ಇರುತ್ತದೆ. ಹಾಗಿರುವಾಗ ನಿಮ್ಮ ಸ್ಕಿನ್‌ಟೋನ್‌ಗೆ ತಕ್ಕಂಥ ಕನ್ಸೀಲರ್‌ನ್ನು ಪಿಂಪಲ್ಸ್  ಮಾರ್ಕ್ಸ್ ಮೇಲೆ ಬ್ರಶ್‌ ಅಥವಾ ಬೆರಳುಗಳಿಂದ ಥಪಥಪ ಎಂದು ತಟ್ಟಿ ಮೆತ್ತಿರಿ.

ಆಯಿಲ್ ಬ್ಲೋಟಿಂಗ್‌ ಶೀಟ್‌ : ನಿಮ್ಮ ಬಳಿ ಸದಾ ಆಯಿಲ್ ಬ್ಲೋಟಿಂಗ್‌ ಶೀಟ್‌ ಇರಿಸಿಕೊಳ್ಳಿ. ಇದರಿಂದ ನೀವು ಆರಾಮವಾಗಿ ಫೇಸ್‌ ಮೇಲೆ ಬಂದ ಎಕ್ಸ್ ಟ್ರಾ ಆಯಿಲ್‌ನ್ನು ಹೀರಿಕೊಳ್ಳುವಂತೆ ಮಾಡಬಹುದು.

ಐಸ್‌ ಮೇಕಪ್‌ : ಬೇಸಿಗೆಯಲ್ಲಿ ಬೆವರಿನ ಕಾರಣ ಐಸ್‌ ಮೇಕಪ್‌ ಹೆಚ್ಚು ಹೊತ್ತು ನಿಲ್ಲದೆ, ಹರಡಿಕೊಳ್ಳುತ್ತದೆ. ಇದಕ್ಕಾಗಿ ನೀವು ಮೊಬಿಲೀನ್‌ ನ್ಯೂಯಾರ್ಕ್‌ ವಾಲ್ಯೂಂ ಎಕ್ಸ್ ಪ್ರೆಸ್‌ ಮಸ್ಕರಾ ಮತ್ತು ಯಾರ್ಡ್ಲೆ ಆ್ಯಕ್ಟಿವ್‌ ಲ್ಯಾಶ್‌ ಮಸ್ಕರಾ ಬಳಸಿರಿ. ಇದು ನಿಮ್ಮ ಐಲ್ಯಾಶೆಸ್‌ನ್ನು ದಟ್ಟವಾಗಿ ತೋರಿಸುವುದಲ್ಲದೆ, ಹೆಚ್ಚು ಹೊತ್ತು ನಿಲ್ಲುತ್ತದೆ ಕೂಡ. ಐಬ್ರೋ ಪೆನ್ಸಿಲ್ನಿಂದ ಕಂಗಳಿಗೆ ಸಮರ್ಪಕ ಆಕಾರ ಕೊಡಿ. ಐ ಶ್ಯಾಡೋ ಲೈಟ್‌ ಬ್ರೌನ್‌ ಅಥವಾ ಗ್ರೇ ಹಚ್ಚಿರಿ. ಇದರಿಂದ ಕಂಗಳು ಅತ್ಯಾಕರ್ಷಕ ಎನಿಸುತ್ತವೆ.

ಕೆನ್ನೆಗಳ ಮೇಕಪ್‌ : ಆಯ್ಲಿ ಸ್ಕಿನ್‌ಗೆ ಲಿಕ್ವಿಡ್‌ ಬ್ಲಶರ್‌ ಬಳಸಿರಿ. ಇದು ಕೆನ್ನೆಗಳ ಮೇಲೆ ಒಂದೇ ಸಮಾನವಾಗಿ ಕಾಣಿಸುತ್ತದೆ, ಹರಡುವುದೂ ಇಲ್ಲ. ಇದನ್ನು ಬ್ರಶ್ಶಿನ ಸಹಾಯದಿಂದ ಚೀಕ್‌ಬೋನ್ಸ್ ನಿಂದ ಟೆಂಪಲ್ ಏರಿಯಾದವರೆಗೂ ಹರಡಿಕೊಳ್ಳಿ. ಇದು ನಿಮ್ಮ ಚರ್ಮಕ್ಕೆ ವಿಭಿನ್ನ ಗ್ಲೋ ನೀಡುತ್ತದೆ.

ಆಯ್ಲಿ ಸ್ಕಿನ್‌ಗೆ ಕಾರಣಗಳು

ಬೇರೆ ತರಹದ ಸ್ಕಿನ್‌ಗೆ ಹೋಲಿಸಿದಾಗ ಆಯ್ಲಿ ಸ್ಕಿನ್‌ವುಳ್ಳ ಮಹಿಳೆಯರು ಹೆಚ್ಚು ವರ್ಷಗಳ ಕಾಲ ಯಂಗ್‌ ಆಗಿರುತ್ತಾರೆ. ಇಂಥ ಸ್ಕಿನ್‌ ಮೇಲೆ ರಿಂಕಲ್ಸ್, ಫೈನ್ ಲೈನ್‌ ಇತ್ಯಾದಿ ಬೀಳುವ ಸಂಭವ ತುಸು ಕಡಿಮೆ ಎನ್ನಬೇಕು. ಆದರೆ ಆಯ್ಲಿ ಸ್ಕಿನ್‌ ಬಲುಬೇಗ ಶೈನ್‌ ಆಗುತ್ತದೆ. ಇದರಿಂದ ಮೇಕಪ್‌ ಬಲು ಬೇಗ ಹೋಗಿಬಿಡುತ್ತದೆ. ಇಂಥ ಸ್ಕಿನ್‌ ಮೇಲೆ ಪಿಂಪಲ್ಸ್ ಆ್ಯಕ್ನೆ ಬೇಗ ಆಗುತ್ತದೆ. ಆಯ್ಲಿ ಸ್ಕಿನ್‌ಗೆ ಕಾರಣ ಹುಡುಕಿ ಅದಕ್ಕೆ ಪರಿಹಾರ ಕಂಡುಕೊಳ್ಳಿ.

ಜೆನೆಟಿಕ್ಸ್ : ತ್ವಚೆಯ ಬಣ್ಣ ನಿರ್ಧರಿಸುವಲ್ಲಿ ಜೆನೆಟಿಕ್ಸ್ ಮಹತ್ವಪೂರ್ಣ ಪಾತ್ರ ವಹಿಸುತ್ತದೆ. ನಿಮ್ಮ ಫ್ಯಾಮಿಲಿಯಲ್ಲಿ ಯಾರದೇ ಸ್ಕಿನ್‌ ಆಯ್ಲಿ ಆಗಿದ್ದರೆ, ಅದು ನಿಮ್ಮ ಚರ್ಮದ ಮೇಲೂ ಪ್ರಭಾವ ಬೀರುತ್ತದೆ. ಅದು ನಿಮ್ಮ ಸ್ಕಿನ್‌ನ ಪೋರ್ಸ್‌ನಿಂದ ಹೆಚ್ಚು ಹೆಚ್ಚು ಆಯಿಲ್ ಸ್ರವಿಸುತ್ತದೆ.

ಅಧಿಕ ಪ್ರಮಾಣದಲ್ಲಿ ಬಳಕೆ : ನಾವೆಲ್ಲರೂ ನಮ್ಮ ಸ್ಕಿನ್‌ನ್ನು ಸೌಮ್ಯ, ಶುಭ್ರ, ಸುಂದರಗೊಳಿಸಲು ಬ್ಯೂಟಿ ಪ್ರಾಡಕ್ಟ್ಸ್ ಬಳಸುತ್ತೇವೆ. ಆದರೆ ಅತ್ಯಧಿಕ ಪ್ರಮಾಣದಲ್ಲಿ ಕ್ರೀಂ, ಜೆಲ್, ಕೆಮಿಕಲ್ ಪೀಲ್‌ ಇತ್ಯಾದಿ ಬಳಸುವುದರಿಂದ ಅದು ಸ್ಕಿನ್‌ನಲ್ಲಿ ಹೆಚ್ಚು ಆಯಿಲ್ ಸ್ರವಿಸುವಂತೆ ಮಾಡುತ್ತದೆ.

ಋತುಮಾನದ ಬದಲಾವಣೆ : ಋತುಮಾನದ ಬದಲಾವಣೆಯೂ ಸಹ ಆಯ್ಲಿ ಸ್ಕಿನ್‌ಗೆ ಕಾರಣ ಎನಿಸುತ್ತದೆ. ಬಿಸಿಲು ಉಷ್ಣತೆ ಹೆಚ್ಚಿರುವ ಋತು, ಆಯಿಲ್‌ ಲೆವೆಲ್‌ನ್ನು ಹೆಚ್ಚಿಸುತ್ತದೆ. ಬೇಸಿಗೆ ಅಥವಾ ಶೀತಕಾಲದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಆಯಿಲ್‌ ಸ್ರವಿಸಲ್ಪಟ್ಟಾಗ, ಅದು ಸ್ಕಿನ್‌ನ್ನು ಡ್ರೈ ಆಗುವುದರಿಂದ ಕಾಪಾಡುತ್ತದೆ. ಆದರೆ, ಆಯ್ಲಿ ಸ್ಕಿನ್‌ನ್ನು ಇನ್ನಷ್ಟು ಹೆಚ್ಚು ಆಯ್ಲಿ ಮಾಡಿಬಿಡುತ್ತದೆ.

ಹಾರ್ವೋನ್‌ ಬದಲಾವಣೆ : ಯೌವನದ ಆರಂಭ, ಗರ್ಭಾವಸ್ಥೆ, ರಜೋನಿವೃತ್ತಿ ಹಾರ್ವೋನ್‌ಗಳ ಅಸ್ಥಿರತೆಗೆ ಹೆಚ್ಚು ಒತ್ತು ಕೊಡುತ್ತದೆ. ಅಂಥ ಸಂದರ್ಭಗಳಲ್ಲಿ ಹೆಂಗಸರ ದೇಹದಿಂದ ಹೆಚ್ಚು ಆಯಿಲ್ ಸ್ರವಿಸಲ್ಪಡುತ್ತದೆ.

ಔಷಧಿ ಚಿಕಿತ್ಸೆ : ಅತ್ಯಧಿಕ ಆಯ್ಲಿ ಸ್ಕಿನ್‌ ಸತತ ಔಷಧಿಗಳ ಸೇವನೆಯಿಂದಲೂ ಆಗುತ್ತದೆ. ಅಂದರೆ ಹಾರ್ಮೋನ್‌ ಬರ್ತ್‌ ಕಂಟ್ರೋಲ್ ಪಿಲ್ಸ್ ಮತ್ತು ಹಾರ್ಮೋನ್‌ ರೀಪ್ಲೇಸ್‌ಮೆಂಟ್‌ ನಿಂದಲೂ ಹೀಗಾಗುತ್ತದೆ. ಸುಂದರ ತ್ವಚೆ ಮತ್ತು ಉತ್ತಮ ಆರೋಗ್ಯಕ್ಕಾಗಿ ಡಾಕ್ಟರ್‌ ಸಲಹೆಯ ಮೇರೆಗೆ ಇಂಥ ಔಷಧಿ ಸೇವನೆ ಅನಿವಾರ್ಯ ಆದಾಗ ಕನಿಷ್ಠ ಪ್ರಮಾಣದಲ್ಲಿ ಸೇವಿಸಿ.

ಮಾನಸಿಕ ಒತ್ತಡ : ಟೆನ್ಶನ್‌ ನಮ್ಮ ದೇಹದ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತದೆ. ಟೆನ್ಶನ್‌ ಹೆಚ್ಚಿದಷ್ಟೂ ಆಯಿಲ್‌ ಹೆಚ್ಚು ಸ್ರವಿಸುತ್ತದೆ.

ಆಯ್ಲಿ ಸ್ಕಿನ್‌ನ ಬೇಸಿಕ್‌ ಆರೈಕೆ

ಒಂದು ಬಾಟಲಿಯಲ್ಲಿ ಸಮಪ್ರಮಾಣದಲ್ಲಿ ಗುಲಾಬಿ ಜಲ, ವಿಜ್‌ ಹೇಝಲ್, ಡಿಸ್ಟಿಲ್‌ ವಾಟರ್‌ ಬೆರೆಸಿಕೊಳ್ಳಿ. ಮುಚ್ಚಳ ಮುಚ್ಚಿ ಚೆನ್ನಾಗಿ ಕುಲುಕಿ, ಇದನ್ನು ಇಡೀ ರಾತ್ರಿ ಫ್ರಿಜ್‌ನಲ್ಲಿಡಿ. ಮಾರನೇ ದಿನದಿಂದ ದಿನಕ್ಕೆ 4-5 ಸಲ ಚರ್ಮಕ್ಕೆ ಹಚ್ಚಿಕೊಳ್ಳಿ.

– ಆಯ್ಲಿ ಸ್ಕಿನ್‌ವುಳ್ಳ ಮಹಿಳೆಯರು ನಿಯಮಿತವಾಗಿ ಚರ್ಮವನ್ನು ಸ್ವಚ್ಛಗೊಳಿಸುತ್ತಿರಬೇಕು. ದಿನಕ್ಕೆರಡು ಸಲ ಇಡೀ ಮುಖವನ್ನು ಫೇಸ್‌ವಾಶ್‌ನಿಂದ ಚೆನ್ನಾಗಿ ತೊಳೆದಾಗ ಮಾತ್ರ ಆಯಿಲ್ ಕಡಿಮೆ ಆಗುತ್ತದೆ.

– ಆಯ್ಲಿ ಸ್ಕಿನ್‌ನವರು ಮುಖ ತೊಳೆಯಲು ಸದಾ ಉಗುರು ಬೆಚ್ಚಗಿನ ನೀರನ್ನೇ ಬಳಸಬೇಕು. ಇಂಥ ಬಿಸಿ ನೀರು ಮಾತ್ರವೇ ಮುಖದ ಮೇಲಿನ ಜಿಡ್ಡಿನ ಪದರ ತೆಗೆಯುವಲ್ಲಿ ಸಹಾಯಕ.

– ಮುಖವನ್ನು ಓವರ್‌ ಆಗಿ ಸ್ಕ್ರಬ್‌ ಮಾಡಬಾರದು. ವಾರದಲ್ಲಿ 2-3 ಸಲ ಮಾತ್ರವೇ ಮಾಡಬೇಕು.

– ಆಗಾಗ ನ್ಯಾಚುರಲ್ ಫೇಸ್‌ ಮಾಸ್ಕ್ ಬಳಸುತ್ತಿರಬೇಕು. ಇದು ಮುಖದಿಂದ ಎಕ್ಸ್ ಟ್ರಾ ಆಯಿಲ್‌  ಸೆಳೆದುಕೊಳ್ಳುತ್ತದೆ ಮತ್ತು ಹಾನಿಕಾರಕ ಬ್ಯಾಕ್ಟೀರಿಯಾವನ್ನೂ ತೊಲಗಿಸುತ್ತದೆ.

– ಪ್ರಭಾ ಮಾಧವ

Tags:
COMMENT