ಹಬ್ಬಗಳು ಬಂದಾಗ ಗೃಹಿಣಿಯರು ಸದಾ ಬಿಝಿ ಆಗಿ, ಹಬ್ಬದ ತಯಾರಿಯಲ್ಲೇ ಇದ್ದುಬಿಡುತ್ತಾರೆಯೇ ಹೊರತು, ತಮ್ಮನ್ನು ತಾವು ರೆಡಿ ಮಾಡಿಕೊಂಡು ಹಬ್ಬ ಸಂಭ್ರಮಿಸೋಣ ಎಂಬುದರ ಕಡೆ ಗಮನ ಹರಿಸರು. ಇದಕ್ಕಾಗಿ ಸಿನಿಮಾ ನಟಿಯರಂತೆ ಫುಲ್ ಫೈನ್ ಮೇಕಪ್‌ ನಲ್ಲಿ ಒಂದು ಕಡೆ ಕುಳಿತುಬಿಡುವುದು ಎಂದು ಅರ್ಥವಲ್ಲ, ಚೇತೋಹಾರಿಯಾಗಿ ಲವಲವಿಕೆಯಿಂದ ಓಡಾಡಲು ನಮ್ಮನ್ನು ನಾವು ತಯಾರಿ ಮಾಡಿಕೊಳ್ಳುವುದು ಎಂದರ್ಥ.

ಅದರಲ್ಲೂ ನವರಾತ್ರಿ ಹಬ್ಬ ಎಂದರೆ 2 ವಾರಗಳ ಓಡಾಟದ ಸಂಭ್ರಮ, ಸಡಗರ ಇದ್ದದ್ದೇ. ಗೊಂಬೆಗಳ ಈ ಹಬ್ಬದಲ್ಲಿ, ಅವನ್ನೆಲ್ಲ ಜೋಡಿಸಿಕೊಂಡು ಹಬ್ಬಕ್ಕೆ ರೆಡಿ ಎಂದು ಹೇಳುವುದಕ್ಕೇ 4-5 ದಿನ ಬೇಕಾಗುತ್ತದೆ. ಇದಕ್ಕೆಲ್ಲ ಅದಮ್ಯ ಶಕ್ತಿ ಬೇಕು. ಈ ಫಿಟ್‌ ನೆಸ್ ಗಾಗಿ ನಮ್ಮನ್ನು ನಾವು ಸಿದ್ಧರಾಗಿ ಇಟ್ಟುಕೊಳ್ಳುವುದು ಅತಿ ಮುಖ್ಯ.

ಈ ಫಿಟ್‌ ನೆಸ್‌ ಗಾಗಿ ಸಹಜವಾಗಿ ಎಲ್ಲರೂ ಜಿಮ್ ಕಡೆ ವಾಲುವುದುಂಟು. ಆದರೆ ಎಲ್ಲರಿಗೂ ಈ ಸದವಕಾಶ ಸಿಗುವುದಿಲ್ಲ. ಇದಕ್ಕಾಗಿ ಪ್ರತ್ಯೇಕ ಸಮಯ, ಪುರಸತ್ತು, ಅನುಕೂಲ ಎಲ್ಲವೂ ಇರಬೇಕು. ಹಾಗೆ ಆಗದವರು ಬೇರೆ ಬೇರೆ ವ್ಯಾಯಾಮ, ಯೋಗಾಭ್ಯಾಸ, ವಾಕಿಂಗ್‌, ಜಾಗಿಂಗ್‌ ಇತ್ಯಾದಿಗಳಿಂದ ಇದನ್ನು ಸಾಧಿಸಬೇಕು. ಆಗ ಮಾತ್ರ ದೇಹ ಎಲ್ಲ ಕೆಲಸಗಳಿಗೂ ಬಾಗುತ್ತದೆ, ಬಳುಕುತ್ತದೆ, ನಾವು ಹೇಳಿದಂತೆ ಕೇಳುತ್ತದೆ.

ಆಟೋಟ ವ್ಯಾಯಾಮ

ನವರಾತ್ರಿ ಹಬ್ಬ 2 ತಿಂಗಳು ಇದೆ ಎನ್ನುವಾಗಲೇ ಈ ಕುರಿತಾಗಿ ಬೇಕಾದ ಬಾಡಿ ಫಿಟ್‌ ನೆಸ್‌ ಗೆ ರೆಡಿ ಮಾಡಿಕೊಳ್ಳುವುದು ಅತ್ಯಗತ್ಯ. ಉತ್ತಮ ವ್ಯಾಯಾಮ, ಯೋಗ, ಎಕ್ಸರ್‌ ಸೈಜ್‌ ಗಳಿಂದ ನೀವು ಬಳುಕುವ ಬಳ್ಳಿಯ ಮೈಮಾಟ ಪಡೆದು, ಸಂಗಾತಿಯನ್ನೂ ಅದೇ ರೀತಿ ಸ್ಲಿಮ್ ಟ್ರಿಮ್ ಆಗಿರುವಂತೆ ನೋಡಿಕೊಳ್ಳಿ. ಮಕ್ಕಳಿಗೂ ಈ ಕುರಿತು ಮೊದಲಿನಿಂದಲೇ ಸೂಕ್ಷ್ಮ ಕಲಿಸುವುದು ಲೇಸು. ಇದಕ್ಕಾಗಿ ಬೆಳಗ್ಗೆ ಅಥವಾ ಸಂಜೆ, ಅವರವರ ಸಮಯಾನುಕೂಲಕ್ಕೆ ತಕ್ಕಂತೆ ಹೊರಗಿನ ಓಪನ್‌ಏರಿಯಾದಲ್ಲಿ, ಧಾರಾಳ ಆಮ್ಲಜನಕ ಸೇವಿಸುತ್ತಾ ಲಾಂಗ ವಾಕಿಂಗ್‌, ಬ್ರಿಸ್ಕ್ ವಾಕ್‌, ಜಾಗಿಂಗ್‌, ರನ್ನಿಂಗ್‌, ಸ್ಕಿಪ್ಪಿಂಗ್‌ ಇತ್ಯಾದಿ ನಿಯಮಿತವಾಗಿ ಪಾಲಿಸುತ್ತಾ ನಿಮ್ಮ ದೇಹ ದಂಡಿಸಿ. ಹೆಚ್ಚಿನ ಅವಕಾಶವಿದ್ದರೆ ಯೋಗ, ಈಜು, ಜುಂಬಾ ಡ್ಯಾನ್ಸ್ ಇತ್ಯಾದಿ ಇನ್ನೂ ಉತ್ತಮ. ಒಟ್ಟಾರೆ ತಿಂದುಂಡು ಟಿವಿ ನೋಡುತ್ತಾ, ಕೈಯಲ್ಲೊಂದು ಮೊಬೈಲ್ ‌ಹಿಡಿದು ಸದಾ ವಿಡಿಯೋ, ರೀಲ್ಸ್, ಯೂಟ್ಯೂಬ್‌ ಗೆ ಮೊರೆಹೋಗುವ ಬದಲು ದೈಹಿಕವಾಗಿ ಹೀಗೆ ಚಟುವಟಿಕೆ ರೂಢಿಸಿಕೊಳ್ಳಬೇಕು.

ಹೊರಗಿನ ಕೆಲಸಗಳಿಗೆಂದು ಮನೆಯಿಂದ ಗೇಟ್‌ ಬಳಿ ಬಂದ ತಕ್ಷಣ, ಗಾಡಿ ತೆಗೆಯಲು ಹೋಗಬೇಡಿ. ಹತ್ತಿರದ ಅಂಗಡಿಗಳು, ಫ್ರೆಂಡ್ಸ್ ಮನೆ, ನಡೆಯಲು ಸ್ವಲ್ಪ ದೂರ ಎನಿಸಿದರೂ ಅಡ್ಡಿಯಿಲ್ಲ, ಕಾಲ್ನಡಿಗೆ ಎಂದೂ ಬಿಟ್ಟುಕೊಡಬೇಡಿ. ಅದೇ ರೀತಿ 3, 4ನೇ  ಮಹಡಿ ಇದ್ದಾಗಲೂ ದಿನದಲ್ಲಿ ಕನಿಷ್ಠ 2-3 ಸಲ ಹತ್ತಿ ಇಳಿದು ಮಾಡಬೇಕು. ಅದಕ್ಕಿಂತಲೂ ಹೆಚ್ಚಾಗಿ ಓಡಾಡಬೇಕಾದಾಗ ಮಾತ್ರ ಲಿಫ್ಟ್ ಬಳಸಿಕೊಳ್ಳಿ. ಮೊದಲನೆ ಮಹಡಿಯವರು ಮಾತ್ರ ಲಿಫ್ಟ್ ತಂಟೆಗೆ ಹೋಗುವುದೇ ಬೇಡ!

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ