ಸುಂದರವಾಗಿ ಕಾಣಿಸಿಕೊಳ್ಳಬೇಕೆಂಬುದು ಪ್ರತಿಯೊಬ್ಬ ಹೆಣ್ಣಿನ ಆಸೆ. ಅದರಲ್ಲೂ ದೀಪಾವಳಿಯಂಥ ಪ್ರಮುಖ ಹಬ್ಬದ ಸಂದರ್ಭದಲ್ಲಿ ಎಲ್ಲರೆದುರು ನೀವು ಮಿರಿ ಮಿರಿ ಮಿಂಚುವುದು ಹೇಗೆ.....?

ಆರತಿ ತನ್ನ ಪರ್ಸನಾಲ್ಟಿ ಕುರಿತು ಹೆಚ್ಚಿನ ನಿಗಾ ವಹಿಸುತ್ತಾಳೆ. ಅವಳು ತನ್ನ ಔಟ್‌ ಫಿಟ್ಸ್ ನಿಂದ ಹಿಡಿದು ಸ್ಕಿನ್‌ ಕೇರ್‌ ವರೆಗೂ ಬಹಳ ಕಾಳಜಿ ತೋರಿಸುತ್ತಾಳೆ. ಹೀಗಾಗಿ 35 ಆದ ನಂತರ ಅವಳ ಚರ್ಮ ಬಿಲ್ ‌ಕುಲ್ ‌ಯಂಗ್‌ ಆಗಿದೆ, ಇವಳನ್ನು ಮೊದಲ ಬಾರಿ ಕಂಡವರು ಬಹುಶಃ 21-22ರ ಕಾಲೇಜು ಕನ್ಯೆ, ಎಂದೇ ಭಾವಿಸುತ್ತಾರೆ.

ಕೊರೋನಾ ಕಾಲದ ಬಿಡುವಲ್ಲಿ ಎಲ್ಲರೂ ಏನಾದರೊಂದು ಹೊಸ ಹವ್ಯಾಸ ಬೆಳೆಸಿಕೊಂಡಾಗ, ಇವಳು ತನ್ನ ಪರ್ಸನಾಲ್ಟಿ ಬದಲಾಯಿಸಲು ನಿರ್ಧರಿಸಿದಳು. ಎಲ್ಲಕ್ಕೂ ಮೊದಲು ಆರತಿ ತನ್ನ ಸ್ಥೂಲ ದೇಹವನ್ನು ಸರಿಪಡಿಸಿಕೊಂಡು ಬಳುಕುವ ಬಳ್ಳಿಯಾದಳು. ನಂತರ ತನ್ನ ಮೇಕ್‌ ಓವರ್‌, ಆಮೇಲೆ ಸ್ಕಿನ್‌ ಕೇರ್‌ ಕಡೆ ಗಮನ ಹರಿಸಿದಳು.

ಅವಳಿಗೆ ಎಲ್ಲಕ್ಕಿಂತ ಕಷ್ಟವಾದದ್ದು ಈ ಸ್ಕಿನ್‌ ಕೇರ್‌ ಜರ್ನಿ. ಇದಕ್ಕಾಗಿ ಅವಳು ತರತರಹದ ಕ್ರೀಂ, ಸೀರಂ, ಫೇಸ್‌ ವಾಶ್ ಬಳಸಿದಳು. ಹಲವು ವಿಧದ ಫೇಸ್‌ ಪ್ಯಾಕ್‌, ಮಾಸ್ಕ್, ಶೀಟ್‌ ಸಹ ಬಳಸಿದಳು. ಆದರೂ ಹೆಚ್ಚಿನ ಸುಧಾರಣೆ ಕಾಣಲಿಲ್ಲ. ಕೊನೆಯಲ್ಲಿ ಮನೆಮದ್ದು ಮಾಡಿದ್ದೂ ಆಯ್ತು. ಇದರಿಂದ ಹೆಚ್ಚಿನ ಹಣ ಖರ್ಚಾಯಿತೇ ಹೊರತು ಅವಳಿಗೆ ಬೇಕಾದ ರಿಸಲ್ಟ್ ಸಿಗಲಿಲ್ಲ.

ರಾತ್ರಿ ಎಷ್ಟೋ ಸಲ ಗಂಟೆಗಟ್ಟಲೆ ಲೈಟ್‌ ಉರಿಸುತ್ತಾ, ದೇಹವಿಡೀ ಹಲವು ನೈಟ್‌ ಕ್ರೀಂ, ಪ್ಯಾಕ್‌ ಬಳಸುತ್ತಿದ್ದಳು. ಭಾನುವಾರ ಬಂದಾಗ ಎಂಜಾಯ್‌ ಮಾಡುವ ಬದಲು, ಇಂಥದ್ದೇ ಚಟುವಟಿಕೆಗಳಲ್ಲಿ ತೊಡಗುತ್ತಿದ್ದಳು. ಹೊರಗೆ ಹೋದರೆ ಬಿಸಿಲಿಗೆ ಸ್ಕಿನ್ ಟ್ಯಾನ್‌ ಆದೀತೆಂದು, ಹೊರಗಿನ ಕಾರ್ಯಕ್ರಮ ರದ್ದು ಮಾಡುತ್ತಿದ್ದಳು.

ನಿಮ್ಮತ್ತ ಕಾಳಜಿ ಇರಲಿ!

ಪ್ರತಿ ವಾರಕ್ಕೊಮ್ಮೆ ಬ್ಯೂಟಿ ಪಾರ್ಲರ್‌ ಗೆ ಹೋಗುವಳು. ಆಗಲೂ ಸಮಾಧಾನ ಸಿಗದೆ ಸ್ಕಿನ್‌ ಕ್ಲಿನಿಕ್‌ ಗೆ ಸಹ ಹೋದಳು. ಸಾವಿರಾರು ರೂ.ಗಳ ಬೊಟಾಕ್ಸ್ ಇಂಜೆಕ್ಷನ್‌, ಪೀಲ್ ‌ಮಾಸ್ಕ್, ಸರ್ಜರಿ, ಡಾಕ್ಟರ್‌ ಆದೇಶಿಸಿದ ಕ್ರೀಂ, ಲೋಶನ್‌ ಇತ್ಯಾದಿಗಳೂ ಆಯ್ತು. ಅಂತೂ ಛಲ ಬಿಡದೆ ಅವಳು ತನ್ನ ಸ್ಕಿನ್‌ ಕೇರ್‌ ವಿಷಯದಲ್ಲಿ ಯಶಸ್ಸು ಕಂಡುಕೊಂಡಳು!

ಇಂಥದ್ದೇ ಅನುಭವ 52ರ ಮಹಿಳೆ ರೇವತಿಗೂ ಆಯ್ತು. ಬಿಸ್‌ ನೆಸ್‌ ನಲ್ಲಿ ನುರಿತ ಆಕೆ, ``ಇವತ್ತಿಗೂ ನಾನು ಸ್ಕಿನ್‌ ಟ್ರೀಟ್‌ ಮೆಂಟ್ ಗಾಗಿ ಕ್ಲಿನಿಕ್‌ ಗೆ ಹೋಗ್ತೀನಿ ಅಂದ್ರೆ ನನ್ನ ಮಕ್ಕಳು ನನ್ನತ್ತ ವಿಚಿತ್ರವಾಗಿ ಗುರಾಯಿಸುತ್ತಾರೆ. ನನ್ನ ಕುಟುಂಬದವರ ಇಂಥ ಪ್ರತಿಕ್ರಿಯೆ ನನಗೆ ಅರ್ಥವೇ ಆಗೋಲ್ಲ. ನನ್ನ ಎಲ್ಲಾ ಖರ್ಚನ್ನೂ ನಾನೇ ನಿಭಾಯಿಸುತ್ತೇನೆ. ನನ್ನ ದೈನಂದಿನ ವಸ್ತುಗಳು, ಮೆಡಿಕಲ್ ಬಿಲ್‌, ಮಾತ್ರೆ ಔಷಧಿ, ಕಾಸ್ಮೆಟಿಕ್ಸ್ ಇತ್ಯಾದಿ.....

``ನನ್ನ ಪತಿ, ಮಗ ಸಹ ದುಡಿಯುತ್ತಾರೆ. ಇವರು ಮಾತ್ರ ಹೀಗಾಡುತ್ತಾರೆ ಅಂತಲ್ಲ.... 23ರ ನನ್ನ ಮಗಳು ಹೇಳುತ್ತಾಳೆ, `ಅಮ್ಮ, ಈ ವಯಸ್ಸಲ್ಲಿ ನಿನಗೆಂಥ ಬ್ಯೂಟಿ ಹುಚ್ಚು? ಇದಾಕ್ಕಗಿ ಪಾರ್ಲರ್‌ ಗೆ ಹೋಗಬೇಕೇ? ನಿನ್ನ ವಯಸ್ಸಿನ ಇತರರನ್ನು ನೋಡು.... ಭಜನೆ, ದೇವಸ್ಥಾನ, ಹರಿಕಥೆ ಅಂತ ನೆಮ್ಮದಿಯಾಗಿದ್ದಾರೆ. ಈ ವಯಸ್ಸಿನಲ್ಲಿ ನಿನಗೆಂಥ ಸ್ಕಿನ್‌ ಟ್ರೀಟ್‌ ಮೆಂಟ್‌?' ಎಂದು ಸಿಡುಕುತ್ತಾಳೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ