ವೆಡ್ಡಿಂಗ್ಪಾರ್ಟಿಗಾಗಿ ಹೊರಡುವುದಕ್ಕೆ ತಯಾರಾಗುತ್ತಿರುವ ಸಂದರ್ಭದಲ್ಲಿ, ಪ್ರತಿಯೊಬ್ಬ ಹುಡುಗಿಯೂ ತಾನು ನವ ವಧುವಿನಂತೆಯೇ ಅತಿ ಸುಂದರವಾಗಿ ಕಂಗೊಳಿಸಬೇಕು ಎಂಬ ಆಸೆ ಇರುತ್ತದೆ. ತನ್ನ ಮೇಕಪ್‌, ಹೇರ್ಸ್ಟೈಲ್ ನಿಂದ ಜನ ಮದುವೆ ಮನೆಯಲ್ಲಿ ಮತ್ತೆ ಮತ್ತೆ ತನ್ನತ್ತ ನೋಡುವಂತಾಗಲಿ ಎಂದು ಬಯಸುತ್ತಾಳೆ.

ಹೀಗಾಗಿ ಈ ಆಸೆ ನೆರವೇರಲು, ಸಿಂಪಲ್ ಅತ್ಯಾಕರ್ಷಕ ಹೇರ್‌ ಸ್ಟೈಲ್ಸ್ ‌ಬಗ್ಗೆ ಒಂದಿಷ್ಟು ತಿಳಿಯೋಣವೇ? ನೀವು ಮುಂದಿನ ವೆಡ್ಡಿಂಗ್‌ ಪಾರ್ಟಿಗೆ ಹೀಗೇಕೆ ಟ್ರೈ ಮಾಡಬಾರದು?

Soft-Hair-Look

ಸಾಫ್ಟ್ ಹೇರ್ಲುಕ್ಸ್

ಇಂಥ ಪಾರ್ಟಿಗಾಗಿ ನೀವು ಈ ವಿಧಾನ ಅನುಸರಿಸಿ. ಕೂದಲನ್ನು ನೀಟಾಗಿ ವಿವಿಧ ವಿಭಾಗಗಳಾಗಿ ವಿಂಗಡಿಸಿ, ಇದರಿಂದ ಸಾಫ್ಟ್ ಕರ್ಲ್ಸ್ ಮಾಡಿಕೊಳ್ಳಿ. ಟಾಂಗ್‌ ರಾಡ್‌ ಯಾ ಸ್ಟ್ರೇಟ್‌ ನಿಂಗ್‌ ರಾಡ್‌ ಬಳಸುತ್ತಾ ಕರ್ಲ್ಸ್ ಮೂಡಿಸಿ. ಹೀಗೆ ಪೂರ್ತಿ ಕರ್ಲ್ಸ್ ರೆಡಿಯಾದಾಗ, ನಿಮ್ಮ ಬೆರಳ ನೆರವಿನಿಂದ ಇದನ್ನು ತುಸು ಲೂಸ್‌ ಮಾಡಿ. ಈ ರೀತಿ ಸಾಫ್ಟ್ ಕರ್ಲ್ಸ್ ರೆಡಿ ಮಾಡಿಸಿ. ಇದನ್ನು ಮತ್ತಷ್ಟು ಆಕರ್ಷಕಗೊಳಿಸಲು, ಮುಂಭಾಗದಿಂದ ಲೈಟ್‌ ಆಗಿ ಬ್ರೆಡ್‌ ಸಹ ತೆಗೆದುಕೊಳ್ಳಬಹುದು. ಇದರಿಂದ ಆಕರ್ಷಕ ಇಂಡೋ ವೆಸ್ಟರ್ನ್‌ ಲುಕ್ಸ್ ಸಿಗುತ್ತದೆ. ನಂತರ ಕೂದಲಿಗೆ ತಾಜಾ ಹೂ ಮುಡಿಯಿರಿ. ಈ ಎವರ್‌ ಗ್ರೀನ್‌ ಹೇರ್‌ ಸ್ಟೈಲ್‌, ನಿಮ್ಮ ನೆಂಟರಿಷ್ಟರ ಮದುವೆಗೆ ಬಲು ಸೂಕ್ತ.

ವಿಕ್ಟೋರಿಯನ್ಬನ್

ನಿಮ್ಮ ಬಲು ಹತ್ತಿರದ ನೆಂಟರ ಮದುವೆಗೆ ಇಂಥ ಹೇರ್‌ ಸ್ಟೈಲ್ ‌ಹೆಚ್ಚು ಪೂರಕ. ಇಂಥ ಟೈ ಅಪ್‌ ಹೇರ್‌ ಸ್ಟೈಲ್ ‌ಅಥವಾ ಕೊಂಡೆ 80ರ ದಶಕದ ರೆಟ್ರೋ ಸ್ಟೈಲ್ ‌ಕೊಡುಗೆಯಾಗಿದೆ. ಇದು ಮುಂಭಾಗದಿಂದ ನಿಮಗೆ ಪ್ರಾಪರ್‌ ಸ್ಲೀಕ್‌ ಸಿಟಿಂಗ್‌ ನೀಡುತ್ತದೆ. ನೀವು ಫ್ರಂಟ್‌ ನಲ್ಲಿ ಫಿಂಗರ್‌ ಸಿಟ್ಟಿಂಗ್‌ ನಿಂದ ಇದನ್ನು ಆಕರ್ಷಕಗೊಳಿಸಿ. ಮುಂಭಾಗದ ಪಾರ್ಟಿಶನ್‌ ನ್ನು ಸಮಾನ ಸೆಕ್ಷನ್‌ ಗಳಾಗಿಸಿ, ಫಿಂಗರ್‌ ಸಿಟ್ಟಿಂಗ್‌ ನೊಂದಿಗೆ ಫ್ರಂಟ್‌ ಸ್ವೈಪ್‌ ಮಾಡಿಕೊಳ್ಳಿ, ಆಗ ತುಸು ಭಾಗ ಹಣೆ ಮೇಲೆ ಹರಿದಾಡುವಂತಿರಲಿ. ನಂತರ ನೀವು ಬೈತಲೆ ಬೊಟ್ಟಿನಿಂದಲೂ ಇದನ್ನು ಅಲಂಕರಿಸಬಹುದು. ಹಿಂಭಾಗದಲ್ಲಿ ಸುಂದರ ಬ್ರೆಡ್‌ ನೊಂದಿಗೆ, ಬನ್‌ (ಕೊಂಡೆ) ಮಾಡಿಕೊಳ್ಳಿ. ಇದರಿಂದ ನೀವು ನಾರ್ಮಲ್ ಜಡೆ ಸಹ ಹೆಣೆದುಕೊಳ್ಳಬಹುದು. ತಾಜಾ ಹೂಗಳಿಂದ ಕೊನೆಯಲ್ಲಿ ಅಲಂಕರಿಸಿ.

Princess-Bread

ಪ್ರಿನ್ಸೆಸ್ಬ್ರೆಡ್

ಇದು ಒಂದು ಚೆಂದದ ಟ್ರೆಂಡಿ ಹೇರ್‌ ಸ್ಟೈಲ್. ಇದನ್ನು ನವ ವಧು ಸಹ ಅನುಸರಿಸಬಹುದು. ವೆಡ್ಡಿಂಗ್‌ ಪಾರ್ಟಿಗಳಿಗೆ ಬಲು ಆಪ್ಯಾಯಮಾನ ಎನಿಸುತ್ತದೆ. ಇದರಲ್ಲಿ ಬಲು ಸುಂದರ ವಿಧಾನದಿಂದ ಮೆಸ್ಸೀ ಜಡೆ ರೂಪಿಸಲಾಗುತ್ತದೆ. ಇದನ್ನು ನಿಮ್ಮ ಒರಿಜಿನ್‌ಕೂದಲಿನಿಂದಲೂ ಮಾಡಿಸಿಕೊಳ್ಳಬಹುದು ಅಥವಾ ಚೌರಿಯಿಂದಲೂ ಸರಿ. ಇದನ್ನು ನೀವು ಲೆಫ್ಟ್ ಟು ರೈಟ್‌ ಹಾಗೂ ರೈಟ್‌ ಟು ಲೆಪ್ಟ್ ಬರುವಂತೆ ಮಾಡಿ. ನಂತರ ನಿಧಾನವಾಗಿ ನಿಮ್ಮ ಬೆರಳುಗಳಿಂದ ಇದನ್ನು ಓಪನ್‌ ಮಾಡಿ. ಇದರಲ್ಲಿನ ಬ್ರೆಡ್‌ ಗೆ ನೀವು ಅಲ್ಲಲ್ಲಿ ಹೂ ಸಿಗಿಸಿ ಆಕರ್ಷಕ ಟಚ್‌ ನೀಡಬಹುದು. ಇದಕ್ಕೆ ಬೇರೆಯದಕ್ಕಿಂತ ರೋಜಾ ಹೂ ಹೆಚ್ಚು ಸೂಕ್ತ. ಈ ಟ್ರೆಂಡಿ ವಿಧಾನವನ್ನು ನೀವು ಒಮ್ಮೆ ಟ್ರೈ ಮಾಡಿ ನೋಡಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ