ನೀವು ಹನೀಮೂನ್‌ ಗೆ ಹೊರಟು, ಬೀಚ್‌ ಲೊಕೇಶನ್‌ ಕುರಿತು ಪ್ಲಾನ್‌ ಮಾಡಿದ್ದರೆ, ಅದರಲ್ಲಿ ನಿಮ್ಮ ಮೇಕಪ್‌ ಮುಖಾಂತರ ಸಂಗಾತಿಗೆ ಇನ್ನಷ್ಟು ಹತ್ತಿರವಾಗಲು ಬಯಸಿದರೆ, ಈ ಸಲಹೆಗಳನ್ನು ಅಗತ್ಯವಾಗಿ ಅನುಸರಿಸಿ :

ಫೌಂಡೇಶನ್ಸ್ಕಿಪ್ಮಾಡಿ : ಸಮುದ್ರ ತೀರದಲ್ಲಿ ಹೆಚ್ಚು ಓಡಾಡಲು ಬಯಸುತ್ತೀರಾದರೆ, ಆಗ ಫೌಂಡೇಶನ್‌ ಬೇಡ. ಏಕೆಂದರೆ ಚರ್ಮದಲ್ಲಿ ಫೌಂಡೇಶನ್‌ ಬೆರೆತಾಗ, ಸಮುದ್ರ ತೀರದ ವಾತಾವರಣ ಅದನ್ನು ಬೆವರಾಗಿಸಿ ಮುಖ ಕಪ್ಪಿಡಿಸುತ್ತದೆ. ಇದಕ್ಕೆ ಬದಲಾಗಿ, ಉತ್ತಮ ಹೊಳಪು ನೀಡಲು, ಒಂದು ಟಿಂಟೆಡ್‌ ಮಾಯಿಶ್ಚರೈಸರ್‌ ಅಥವಾ BB ‌ಕ್ರೀಂ ಬಳಸಿಕೊಳ್ಳಿ. ಇವೆರಡರಲ್ಲೂ 30-40 SPF ಇದ್ದು, ಇಂಥ ಸಂದರ್ಭಕ್ಕೆ ಅದು ಪೂರಕ. ಫೌಂಡೇಶನ್‌ ಬೇಕೇ ಬೇಕು ಎನಿಸಿದರೆ, ಒಂದು ಅತಿ ತೆಳು ಪದರ ತೀಡಿಕೊಂಡರೆ ಸಾಕು.

ಬ್ರಾನ್ಝರ್ನಿಂದ ಆ್ಯಕ್ನೆ ಕವರ್ಮಾಡಿ : ಬೀಚ್‌ ನಲ್ಲಿ ತಿರುಗಾಟಕ್ಕೆ ಮುನ್ನ, ನಿಮ್ಮ ಆ್ಯಕ್ನೆ ಮೊಡವೆಗಳನ್ನು ಬ್ರಾನ್ಝರ್ ನಿಂದ ನೀಟಾಗಿ ಕವರ್‌ ಮಾಡಿಬಿಡಿ. ಆಗ ಪೋಟೋದಲ್ಲಿ ನೀವು ಹೆಚ್ಚು ಮಿಂಚುವಿರಿ. ನ್ಯಾಚುರಲಿ ಬ್ರಾಂಝರ್‌ ನಿಮ್ಮ ಲುಕ್ಸ್ ನ್ನು ಸೆಟ್ ಮಾಡಬಲ್ಲದು. ಇದಿಲ್ಲದಿದ್ದರೆ ನಿಮ್ಮ ಮೇಕಪ್‌ ಅಪೂರ್ಣ ಆಯಿತು. ಇದರಲ್ಲಿ ಮ್ಯಾಟ್‌ಎಕ್ಸ್ ಟ್ರಾ ಮ್ಯಾಟ್‌ ಎಂಬ 2 ಆಯ್ಕೆಗಳಿವೆ, ನೀವು ಎರಡನ್ನೂ ಕೊಂಡೊಯ್ಯಿರಿ. ನಿಮ್ಮ ಬ್ರಾಂಝರ್‌, ಕ್ರೀಂ ಬೇಸ್ಡ್ ಆಗಿರಬೇಕು. ಇದನ್ನು ಚೀಕ್‌ ಬೋನ್ಸ್, ಹೇರ್‌ ಲೈನ್ಸ್, ನೋಸ್‌ ಟಿಪ್‌ ಬಳಿ ಹಚ್ಚಿಕೊಳ್ಳಿ. ಮುಖ್ಯವಾಗಿ ಸನ್‌ ಕಿಸ್‌ ಫೋಟೋ ಬೇಕಿದ್ದರೆ, ಇದನ್ನು ತಪ್ಪದೆ ಬಳಸಿಕೊಳ್ಳಿ.

ಎಲ್ಲ ವಾಟರ್ಪ್ರೂಫ್ಆಗಿರಲಿ : ಕನ್ಸೀಲರ್‌, ಮಸ್ಕರಾ, ಐ ಲೈನರ್‌, ಬ್ರೋ ಇತ್ಯಾದಿ ಎಲ್ಲ ವಾಟರ್‌ ಪ್ರೂಫ್‌ ಆಗಿದ್ದರೆ ಬಲು ಒಳ್ಳೆಯದು. ವಾಟರ್‌ ಪ್ರೂಫ್‌ ಮೇಕಪ್‌ ಬಳಸುವುದರಿಂದ, ಮೇಕಪ್‌ ಬಿಸಿಲಲ್ಲಿ ಕರಗೀತು ಎಂಬ ಟೆನ್ಶನ್‌ ಇರಲ್ಲ. ಹೀಗೆ ಮಾಡುವುದರಿಂದ, ಸಾಗರದ ತೆರೆಗಳೊಡನೆ ಚಿನ್ನಾಟವಾಡಲು ಕಷ್ಟ ಆಗುವುದಿಲ್ಲ. ಹೀಗಾಗಿ ನಿಶ್ಚಿಂತೆಯಿಂದ ನೀವು ಈ ಕ್ಷಣಗಳನ್ನು ಆನಂದಿಸಬಹುದು. ಹೀಗಾಗಿ ನಿಮ್ಮ ಹನಿಮೂನ್‌ ಫೋಟೋಸ್‌ ಬೆಸ್ಟ್ ಆಗಿ ಬರುತ್ತವೆ. ವಾಟರ್‌ ಪ್ರೂಫ್‌ ಮೇಕಪ್‌ ಗಳಲ್ಲಿ, ಸಿಲಿಕಾನ್‌ ಬೇಸ್‌ ಮೇಕಪ್‌ ಪ್ರಾಡಕ್ಟ್ಸ್ ದಿ ಬೆಸ್ಟ್ ಆಗಿವೆ.

ತುಟಿಗಳು ನ್ಯಾಚುರಲ್ ಆಗಿರಲಿ : ನೀವು ಫುಲ್ ಆನ್‌ ಲಿಪ್‌ ಸ್ಟಿಕ್‌ ಬಳಸುವುದರಿಂದ, ನಿಮ್ಮ ಇಡೀ ಸನ್‌ ಕಿಸ್ಡ್ ರೇಡಿಯೆಂಟ್‌ ಲುಕ್ಸ್ ಕೆಟ್ಟು ಹೋದೀತು. ಇದನ್ನು ತಪ್ಪಿಸಲು, ಲಿಪ್‌ ಸ್ಟೇನ್‌ ಯಾ ಲಿಪ್‌ ಬಾಮ್ ಆರಿಸಿ, ಇದು ಈ ಸಂದರ್ಭದಲ್ಲಿ ಬಲು ಅತ್ಯಗತ್ಯ. ಬೆರಳಿನಿಂದ ಇದನ್ನು ತುಟಿಗಳಿಗೆ ನೀಟಾಗಿ ತೀಡಿರಿ, ಪರ್ಫೆಕ್ಟ್ ನ್ಯಾಚುರಲ್ ಲುಕ್‌ ಸಿಗುತ್ತದೆ.

ಬ್ಲಾಟಿಂಗ್ಪೇಪರ್ಜೊತೆಗಿರಲಿ : ಯಾವುದೇ ಸೀಸನ್‌ ಇರಲಿ, ಬೀಚ್‌ ಕಡೆ ಹೋದಾಗ, ಮೇಕಪ್‌ ಸೆಟ್‌ ಮಾಡಿಕೊಳ್ಳಲು ಕಾಂಪ್ಯಾಕ್ಟ್ ಓಪನ್‌ ಮಾಡುವುದು, ಮತ್ತೆ ಮತ್ತೆ ಟಚ್‌ ಅಪ್‌ ನೀಡುವ ಗೊಡವೆ ಬೇಡ. ಹೀಗಾಗಿ ಬ್ಲಾಟಿಂಗ್‌ ಪೇಪರ್‌ ನಿಂದ, ನೀವು ಎಕ್ಸ್ ಟ್ರಾ ಆಯಿಲ್ ಬೆವರನ್ನು ತೊಲಗಿಸಿಬಿಡಿ. ಇದರಿಂದ ನಿಮ್ಮ ಮುಖದ ಮೇಕಪ್‌ ಕರಗುವ ರೇಜಿಗೆ ಇಲ್ಲ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ