ಇಂಥ ಸೆಲೆಬ್ ಲುಕ್ಸ್ ನಿಂದ ನೀವು ನಿಮ್ಮ ಮದುವೆಯಲ್ಲಿ ಅತಿ ಬ್ಯೂಟಿಫುಲ್ ಬ್ರೈಡಲ್ ಮಾತ್ರವಲ್ಲ, ಇಡೀ ಮದುವೆ ಮನೆಯ ಆಕರ್ಷಣೆಯ ಕೇಂದ್ರಬಿಂದು ಆಗಬಲ್ಲಿರಿ......!
ರೇಷ್ಮೆ ಸೀರೆ ಹಾಗೂ ಲೆಹಂಗಾ ಚೋಲಿ, ಭಾರತೀಯ ಸಂಸ್ಕೃತಿಯಲ್ಲಿ ಬೆರೆತುಹೋದ ಒಂದು ವಿಶಿಷ್ಟ ಉಡುಗೆ. ಇದನ್ನು ವಿಶೇಷ ಸಮಾರಂಭಗಳಲ್ಲಿ ಬಳಸಿಕೊಂಡಾಗ, ಒಂದೇ ಸಲಕ್ಕೆ ಸೆನ್ಸೇಶನ್‌ಟ್ರೆಡಿಶನಲ್ ಎರಡೂ ಬಗೆಯ ಫೀಲ್ ಹುಟ್ಚುತ್ತದೆ. ಭಾರತೀಯ ವಧುವಿಗಂತೂ, ತನ್ನ ಅತಿ ವಿಶಿಷ್ಟ ದಿನವಾದ ಧಾರೆಯ ಮುಹೂರ್ತಕ್ಕೆ, ಆರತಕ್ಷತೆಗಳಿಗೆ ಇಂಥ ಉಡುಗೆ ಮೊದಲ ಆಯ್ಕೆ ಆಗಿರುತ್ತದೆ. ಹೀಗಾಗಿ ನೀವು ಮದುವೆಯಂಥ ಶುಭ ಸಮಾರಂಭಕ್ಕೆ ಇಂಥ ಉಡುಗೆ ಆರಿಸುವಾಗ ಅತಿ ಎಚ್ಚರಿಕೆ ವಹಿಸಿ. ಈ ಕೆಳಗಿನ 5 ಸೆಲೆಬ್ಸ್ ಲುಕ್ಸ್ ನಿಂದ ನಿಮಗೆ ಹೆಚ್ಚಿನ ಪ್ರೇರಣೆ ಸಿಗಲಿದೆ!
ಆಲಿಯಾ ಭಟ್
ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ತಮ್ಮ ಮದುವೆಯಲ್ಲಿ ಬಲು ಲೈಟ್ ಕಲರ್ಸ್ ಆರಿಸಿದ್ದರು. ಸಾಮಾನ್ಯವಾಗಿ ಉ.ಭಾರತೀಯ ವಧು ಹೆಚ್ಚು ಗಾಢ ಬಣ್ಣಗಳಾದ ಕೆಂಪು, ಮೆರೂನ್ ಇತ್ಯಾದಿಗಳನ್ನೇ ಆರಿಸುತ್ತಾಳೆ. ಆದರೆ ಆಲಿಯಾ ಆಫ್ ವೈಟ್ ಸೀರೆಯಲ್ಲಿ ಬಲು ಮುದ್ದಾದ ಮದುಮಗಳಾಗಿ ಕಂಗೊಳಿಸಿದಳು. ಆ ಮದುವೆಯ ಥೀಂ ಲೈಟ್‌ಗೋಲ್ಡ್ ಆಗಿತ್ತು. ಈ ಕಾರಣದಿಂದಲೇ ವಧೂವರರು ಈ ಬಣ್ಣದ ಔಟ್ ಫಿಟ್ಸ್ ನಲ್ಲಿ ಕಾಣಿಸಿದ್ದರು.
ಆಲಿಯಾ ತನ್ನ ಬ್ರೈಡಲ್ ಲುಕ್ಸ್ ಗಾಗಿ ಜುಮಕಿ, ಚೋಕರ್, ಕಡಗ, ಬೈತಲೆಬೊಟ್ಟು, ಬಳೆ ಇತ್ಯಾದಿಗಳಿಂದ ಅಲಂಕೃತಳಾಗಿದ್ದಳು. ಬಹಳ ದಿನಗಳ ನಂತರ ಮದುವೆಯಲ್ಲೂ ವಧು ಹೀಗೆ ಕೂದಲು ಹರಡಿಕೊಂಡಿರುವುದನ್ನು ಇಲ್ಲಿ ಗಮನಿಸಬಹುದಿತ್ತು. ಆಲಿಯಾ ಬೇರೆ ಹೇರ್ ಡೂಗೆ ಗಮನ ಕೊಡದೆ, ಹೀಗೆ ಸಿಂಪಲ್ ಆಗಿಯೇ ಇರಿಸಿಕೊಂಡಿದ್ದಳು. ಹೀಗಾಗಿ ಇವಳ ಬೈತಲೆಬೊಟ್ಟು ಇಲ್ಲಿ ಹೆಚ್ಚು ಶೈನ್ ಆಯಿತು.
ಈ ದಿನಕ್ಕಾಗಿ ಇವಳು ಸಟ್ ಮೇಕಪ್ ಆರಿಸಿದ್ದಳು. ಅದು ಇವಳ ಪೇಸ್ಟಲ್ ಅಟೈರ್ ಜೊತೆ ಪರ್ಫೆಕ್ಟ್ ಎನಿಸಿತ್ತು. ಮೇಕಪ್ ಬೇಸ್ ಡ್ಯೂಯಿ ಆಗಿತ್ತು, ಕೆನ್ನೆಗೆ ಲೈಟ್ ಪಿಂಕಿಶ್ ಲುಕ್ ಒದಗಿಸಲಾಗಿತ್ತು.
ಕತ್ರೀನಾ ಕೈಫ್
ಕತ್ರೀನಾ ಮತ್ತು ವಿಕ್ಕಿ ಕೌಶ್ ರ ಮದುವೆ ರಾಜಸ್ಥಾನದಲ್ಲಿ ಆಯಿತು. ಇವರ ಮದುವೆಯಲ್ಲಿ ಪಂಜಾಬಿ ಲುಕ್ಸ್ ಪ್ರಧಾನವಾಗಿತ್ತು. ಈ ಜೋಡಿ ಮುಹೂರ್ತದಂದು ಎಲ್ಲರ ಗಮನ ಸೆಳೆಯಿತು. ಇಲ್ಲಿ ವಧು ಲುಕ್ಸ್ ಬಲು ಡಿಫರೆಂಟ್ ಆಗಿತ್ತು. ಹೀಗಾಗಿ ದೇಶದ ಬಹುತೇಕ ಹುಡುಗಿಯರು ತಮ್ಮ ಮದುವೆಗಾಗಿ ಇಂಥದ್ದೇ ಲುಕ್ಸ್ ಬಯಸಿದರು. ಇವಳು ಗಾಢ ಕೆಂಪಿನ ಲೆಹಂಗಾ ಧರಿಸಿ, ರಜವಾಡೆ ವಧುವಾಗಿ ಶೋಭಿಸಿದರೆ, ಅವಳ ಲೆಹಂಗಾ ಪ್ರತ್ಯೇಕ ಆಕರ್ಷಣೆಯಾಗಿತ್ತು.
ಇದರಲ್ಲಿ ಚಿನ್ನದ ಎಳೆಗಳ ಗ್ರಾಂಡ್ ಕಸೂತಿ ಇತ್ತು. ಇವಳ ಬ್ಲೌಸ್, ದುಪಟ್ಟಾ ಸಹ ಇವಳಿಗೆ ರಾಯಲ್ ಲುಕ್ಸ್ ಕೊಟ್ಟಿದ್ದ. ಈ ಭಾರಿ ಲೆಹಂಗಾದಲ್ಲಿ ಗೋಲ್ಡನ್ ಥ್ರೆಡ್ ವರ್ಕ್ ಎದ್ದು ಕಾಣುತ್ತಿತ್ತು. ಕೈಗಳಲ್ಲಿ ನೇಯ್ದ ಮಟ್ಕಾ ಸಿಲ್ಕ್ ಬ್ರೈಡಲ್ ಲೆಹಂಗಾ, ನುಣುಪಾದ ಟೀಟಾ ವರ್ಕ್, ಮಖಮಲ್ ಕಸೂತಿಯಿಂದ ರಿವೈಲ್ ಜರ್ದೋಜಿ ಬಾರ್ಡರ್ ಒದಗಿಸಲಾಗಿತ್ತು. ಇದರೊಟ್ಟಿಗೆ ಇವಳ ಬ್ರೈಡಲ್ ಜ್ಯೂವೆಲರಿ ಅಪರೂಪದ ಚೂಡಾಮಣಿ, ಕಲೀರಾಗಳಿಂದ ಸ್ಪೆಷಲ್ ಎನಿಸಿತ್ತು.