Sj*

ಈ ಮೊದಲು 'ತಾಯವ್ವ' ಎಂಬ ಸಿನಿಮಾದಲ್ಲಿ ನಟಿಸಿದ್ದ, ಗೀತಪ್ರಿಯ ಸುರೇಶ್ ಕುಮಾರ್ ಅಭಿನಯದ 'ಅಪರಿಚಿತೆ' ಚಿತ್ರ ಕೆಲವು ದಿನಗಳ ಹಿಂದಷ್ಟೇ ಬಿಡುಗಡೆಯಾಗಿ ಎಲ್ಲರ ಗಮನ ಸೆಳೆದಿತ್ತು. ಇತ್ತೀಚಿಗೆ ಈ ಚಿತ್ರದ ಸಕ್ಸಸ್ ಮೀಟ್ ಅನ್ನು ನಿರ್ಮಾಪಕ ಸುರೇಶ್ ಕುಮಾರ್ ಹಾಗೂ ನಟಿ ಗೀತಪ್ರಿಯ ಅವರು "ಸಕ್ಸಸ್ ಆಫ್ ಅಪರಿಚಿತೆ" ಎಂಬ ಹೆಸರಿನಿಂದ ವಿಭಿನ್ನವಾಗಿ ಹಾಗೂ ಅರ್ಥಪೂರ್ಣವಾಗಿ ಆಚರಿಸಿದರು. ಈ ಸಂದರ್ಭದಲ್ಲಿ ಚಿತ್ರದ ಕಲೆಕ್ಷನ್ ನಿಂದ ಬಂದ ಹಣದಿಂದ ಆಸಿಡ್ ದಾಳಿಗೆ ತುತ್ತಾದ ಮೂವರು ಮಹಿಳೆಯರಿಗೆ ಐವತ್ತು ಸಾವಿರದ ಚೆಕ್ ನೀಡಿ ಸನ್ಮಾನಿಸಿದರು. ನಟಿ ಮೇಘನರಾಜ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಹಿರಿಯ ನಟರಾದ ಶ್ರೀನಾಥ್, ಸುರೇಶ್ ಹೆಬ್ಳೀಕರ್ ಹಾಗೂ ಪತ್ರಕರ್ತ ಸದಾಶಿವ ಶೆಣೈ ಮುಂತಾದವರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಗೀತಪ್ರಿಯ ಅವರು ಈ ಹಿಂದೆ "ತಾಯವ್ವ" ಚಿತ್ರದ ಸಕ್ಸಸ್ ಮೀಟ್ ನಲ್ಲಿ ಗರ್ಭಿಣಿ ಮಹಿಳೆಯರನ್ನು ಸನ್ಮಾನಿಸಿದ್ದರು.

ಗೀತಪ್ರಿಯ ಅವರು ಒಂದೊಳ್ಳೆ ಉದ್ದೇಶವಿಟ್ಟುಕೊಂಡು ಈ ಸಿನಿಮಾ‌ ಮಾಡಿದ್ದಾರೆ. ಚಿತ್ರದ ಯಶಸ್ಸನ್ನು ಬಹಳ ಅರ್ಥಪೂರ್ಣವಾಗಿ ಸಂಭ್ರಮಿಸಿದ್ದಾರೆ. ಆಸಿಡ್ ದಾಳಿಯಿಂದ ತುತ್ತಾದ ಮಹಿಳೆಯರಿಗೆ ಸಹಾಯ ಮಾಡುವ ಉತ್ತಮ ಕಾರ್ಯದ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ. ಇಲ್ಲಿ ಬಂದಿರುವ ಮಹಿಳೆಯರ ಕಥೆ ಕೇಳಿ ನಾನು ಭಾವುಕಳಾದೆ. ಅದಕ್ಕಿಂತ ಅವರನ್ನು ನೋಡಿ ನನ್ನ ಧೈರ್ಯ ಮತ್ತಷ್ಟು ಹೆಚ್ಚಾಯಿತು. ಈ ಸಮಾರಂಭಕ್ಕೆ ನನ್ನನ್ನು ಆಹ್ವಾನಿಸಿದ್ದಕ್ಕಾಗಿ ಗೀತಪ್ರಿಯ ಅವರಿಗೆ ಧನ್ಯವಾದ ಎಂದರು ನಟಿ ಮೇಘನಾರಾಜ್.

acidic 1

ನಮ್ಮ "ಅಪರಿಚಿತೆ" ಚಿತ್ರದ ಗಳಿಕೆಯಿಂದ ಬಂದ ಹಣದಿಂದ ಆಸಿಡ್ ದಾಳಿಯಿಂದ ನೊಂದು, ಪುನಃ ಜೀವನ ಕಟ್ಟಿಕೊಂಡಿರುವ ಮೂವರು ಮಹಿಳೆಯರಿಗೆ ಸಹಾಯ ಮಾಡೋಣ ಎನಿಸಿತು. ಇಂದಿನ ಯುವಪೀಳಿಗೆಯ ಧ್ವನಿಯಾಗಿರುವ ಮೇಘನಾರಾಜ್ ಅವರಿಂದ ಆ ಮಹಿಳೆಯರಿಗೆ ಸನ್ಮಾನ ಮಾಡಿಸಬೇಕೆಂದುಕೊಂಡೆವು‌. ಮೇಘನಾರಾಜ್ ಅವರು ಒಪ್ಪಿಕೊಂಡು ಕಾರ್ಯಕ್ರಮಕ್ಕೆ ಬಂದಿದ್ದಾರೆ. ಅವರಿಗೆ ಹಾಗೂ ಹಿರಿಯ ನಟರಾದ ಶ್ರೀನಾಥ್, ಸುರೇಶ್ ಹೆಬ್ಳೀಕರ್ ಮತ್ತು ಪತ್ರಕರ್ತ ಸದಾಶಿವ ಶೆಣೈ ಅವರಿಗೆ ನನ್ನ ಧನ್ಯವಾದ. ಮುಂದೆ ಕೂಡ ನಮ್ಮ ಸಂಸ್ಥೆಯಿಂದ ಇಂತಹ ಸದಭಿರುಚಿಯ ಚಿತ್ರಗಳು ನಿರ್ಮಾಣವಾಗುತ್ತದೆ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಟಿ ಗೀತಪ್ರಿಯ. ‌ ನಟರಾದ ಶ್ರೀನಾಥ್, ಸುರೇಶ್ ಹೆಬ್ಳೀಕರ್ ಹಾಗೂ ಪತ್ರಕರ್ತ ಸದಾಶಿವ ಶೆಣೈ ಅವರು ಸಹ ತಮ್ಮ ಮಾತುಗಳ ಮೂಲಕ ಗೀತಪ್ರಿಯ ಅವರ ಸಮಾಜಮುಖಿ ಕಾರ್ಯಗಳನ್ನು ಶ್ಲಾಘಿಸಿದರು.

ಅಮರ ಫಿಲಂಸ್ ಲಾಂಛನದಲ್ಲಿ ಸುರೇಶ್ ಕುಮಾರ್ ಅವರು ನಿರ್ಮಿಸಿರುವ ಈ ಚಿತ್ರವನ್ನು ವಿಶ್ವನಾಥ್ ನಿರ್ದೇಶಿಸಿದ್ದಾರೆ. ಗೀತಪ್ರಿಯ, ಸಿಂಧೂ ಲೋಕನಾಥ್, ಆರ್.ಜೆ. ನಿಖಿತಾ, ಹಿರಿಯ ನಟ ಶ್ರೀನಾಥ್ ಹಾಗೂ ಶ್ರೀನಾಥ್ ಅವರ ಮಗ ರೋಹಿತ್ ಕೂಡ ಚಿತ್ರದ ತಾರಾಬಳಗದಲ್ಲಿದ್ದಾರೆ.

 

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ