Sj*

ಮಲಯಾಳಂ ಬಹು ನಿರೀಕ್ಷಿತ ಪಳ್ಳಿಚಟ್ಟಂಬಿ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಏಪ್ರಿಲ್ 9 ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಿಗೆ ಎಂಟ್ರಿ ಕೊಡ್ತಿದೆ. ಇದೀಗ ಪಳ್ಳಿಚಟ್ಟಂಬಿ ಚಿತ್ರದ ಟೀಸರ್ ಬಿಡುಗಡೆ ಮಾಡಲಾಗಿದೆ. ಟೀಸರ್ ನಲ್ಲಿ ಭರಪೂರ ಆಕ್ಷನ್ ದೃಶ್ಯಗಳಿದ್ದು, ಮಲಯಾಳಂ ಚಿತ್ರರಂಗದಲ್ಲಿ ಈ ಚಿತ್ರ ಮತ್ತೊಂದು ಮೈಲಿಗಲ್ಲು ಸೃಷ್ಟಿಸುವ ನಂಬಿಕೆ ಚಿತ್ರತಂಡದಲ್ಲಿದೆ.
ಡಿಜೋ ಜೋಸ್ ಆಂಟೋನಿ ಪಳ್ಳಿಚಟ್ಟಂಬಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಟೊವಿನೋ ಥಾಮಸ್ ನಾಯಕನಾಗಿ, ಕಯಾದು ಲೋಹರ್ ನಾಯಕಿಯಾಗಿ ನಟಿಸಿದ್ದಾರೆ. ವಿಜಯರಾಘವನ್, ಸುಧೀರ್ ಕರಮನ, ಬಾಬುರಾಜ್, ವಿನೋದ್ ಕೆದಮಂಗಲಂ, ಪ್ರಶಾಂತ್ ಅಲೆಕ್ಸಾಂಡರ್ ಮತ್ತು ಇತರ ಹಲವಾರು ತಾರಾಗಣದಲ್ಲಿದ್ದಾರೆ. 1950-60ರ ದಶಕದ ಸುತ್ತ ಕಥೆಯನ್ನು ಎಣೆಯಲಾಗಿದೆ.

action

ವರ್ಲ್ಡ್ ವೈಡ್ ಫಿಲ್ಮ್ಸ್ ಮತ್ತು ಸಿ ಕ್ಯೂಬ್ ಬ್ರದರ್ಸ್ ಎಂಟರ್ಟೈನ್ಮೆಂಟ್ ಬ್ಯಾನರ್ ನಡಿ ಪಳ್ಳಿಚಟ್ಟಂಬಿ ಸಿನಿಮಾವನ್ನು ನೌಫಲ್ ಮತ್ತು ಬ್ರಿಜೇಶ್ ನಿರ್ಮಿಸಿದ್ದಾರೆ. ಕನ್ನಡ, ಮಲಯಾಳಂ ಸೇರಿದಂತೆ ಐದು ಭಾಷೆಯಲ್ಲಿ ಚಿತ್ರ ಬಿಡುಗಡೆಯಾಗಲಿದೆ.

ಚಿತ್ರದ ಛಾಯಾಗ್ರಹಣವನ್ನು ಟಿಜೊ ಟಾಮಿ ನಿರ್ವಹಿಸಿದರೆ, ಜೇಕ್ಸ್ ಬಿಜಾಯ್ ಸಂಗೀತ ಸಂಯೋಜಿಸಿದ್ದಾರೆ. ಸಂಕಲನವನ್ನು ಶ್ರೀಜಿತ್ ಸಾರಂಗ್ ಮತ್ತು ನಿರ್ಮಾಣ ವಿನ್ಯಾಸವನ್ನು ದಿಲೀಪ್ ನಾಥ್ ನಿರ್ವಹಿಸಿದ್ದಾರೆ. ಚಿತ್ರಕಥೆಯನ್ನು ಎಸ್ ಸುರೇಶ್ ಬಾಬು ಬರೆದಿದ್ದಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ