ಬಾಲಿವುಡ್​​ನ ಮಿಸ್ಟರ್​ ಪರ್ಫೆಕ್ಷನಿಸ್ಟ್​ ಅಂತಾನೇ ಖ್ಯಾತಿ ಪಡೆದಿರೋ ನಟ ಆಮೀರ್​ ಖಾನ್​ ಮತ್ತೆ ದೊಡ್ಡ ಸುದ್ದಿಯಲ್ಲಿದ್ದಾರೆ. ಲಗಾನ್​, ಪಿಕೆ, ಗಜನಿಯಂತಹ ಹಲವು ಹಿಟ್ ಸಿನಿಮಾಗಳನ್ನು ಕೊಟ್ಟ ಆಮೀರ್ ಖಾನ್​ ವೈಯಕ್ತಿಕ ಲೈಫ್​ ಕೂಡ ಅಷ್ಟೇ ಸೂಪರ್ ಹಿಟ್ ಆಗಿದೆ. ಎರಡು ಮದುವೆ ಆಗಿ ಇಬ್ಬರಿಗೂ ಡಿವೋರ್ಸ್ ಕೊಟ್ಟಿದ್ದ ಆಮೀರ್​​ ಖಾನ್​ ಗೆ ಮತ್ತೊಂದು ಲವ್ ಶುರುವಾಗಿದೆ. ಅಚ್ಚರಿ ಅಂದ್ರೆ, ತಮ್ಮ 60ನೇ ವಯಸ್ಸಿನಲ್ಲಿ ಪ್ರೀತಿ ಮೊಳಕೆಯೊಡೆದಿರೋದು ವಿಶೇಷ.

AMIR GOWRI (1)

ಇವತ್ತು ಅರ್ಥಾತ್ ಗುರುವಾರದಂದು(ಮಾರ್ಚ್​ 14)ನಟ ಆಮೀರ್ ಖಾನ್ 60ನೇ ವಯಸ್ಸಿಗೆ ಕಾಲಿಟ್ಟಿದ್ದಾರೆ. ಇಂಥಾ ಹೊತ್ತಿನಲ್ಲಿ ಖುಷಿ ಸುದ್ದಿಯೊಂದನ್ನ ಮಾಧ್ಯಮಗಳ ಜೊತೆ ಹಂಚಿಕೊಂಡಿದ್ದಾರೆ. ತಮ್ಮ ಬರ್ತ್​ಡೇಗೂ ಮುನ್ನ ದಿನ ಆಮೀರ್ ಖಾನ್ ಪಾಪರಾಜಿಗಳು ಮತ್ತು ಅಭಿಮಾನಿಗಳ ಜೊತೆ ಜನ್ಮದಿನ ಆಚರಿಸಿಕೊಂಡ್ರು. ಈ ವೇಳೆ ಹೊಸ ಗರ್ಲ್​ ಫ್ರೆಂಡ್​​​ ಗೌರಿಯನ್ನು ಮಾಧ್ಯಮಗಳಿಗೆ ಪರಿಚಯ ಮಾಡಿಕೊಂಟ್ರು.

AMIR GOWRI (1)(1)

ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪರಿಚಯ ಮಾಡಿದ ಆಮೀರ್ ಖಾನ್​​, ಯಾವುದೇ ಕಾರಣಕ್ಕೂ ತನ್ನ ಗೆಳತಿಯ ಫೋಟೋ ತೆಗೆಯದಂತೆ ಮತ್ತು ಪಬ್ಲಿಶ್​ ಮಾಡದಂತೆ ಮನವಿ ಮಾಡಿಕೊಂಡಿದ್ರು. ಆದ್ರೂ ಸೋಷಿಯಲ್ ಮೀಡಿಯಾದಲ್ಲಿ ಆಮೀರ್ ಖಾನ್​ ಗೆಳತಿ ಗೌರಿಯ ಫೋಟೋ ವೈರಲ್ ಆಗಿದೆ.

ಯಾರು ಗೌರಿ..? :

18 ತಿಂಗಳ ಹಿಂದೆಯೇ ಆಮೀರ್ ಖಾನ್ ಮತ್ತು ಗೌರಿಯ ಮಧ್ಯೆ ಪ್ರೇಮ ಕಥೆ ಶುರುವಾಗಿತ್ತಂತೆ. ವಿಶೇಷ ಅಂದ್ರೆ, ಗೌರಿಯನ್ನು ಕಳೆದ 25 ವರ್ಷಗಳ ಹಿಂದೆಯೇ ಆಮೀರ್ ಖಾನ್ ನೋಡಿದ್ದಾರೆ. ಸಿನಿಮಾ ರಂಗದಲ್ಲೇ ಇದ್ದ ಗೌರಿ ಆಮೀರ್​ ಖಾನ್​ಗೆ ಹಳೇ ಸ್ನೇಹಿತರಿದ್ದಂತೆ. ಬೆಂಗಳೂರು ಮೂಲದ ಮಹಿಳೆ ಆಗಿರೋ ಗೌರಿ ಇಷ್ಟು ದಿನ ಕದ್ದು ಮುಚ್ಚಿಯೇ ಆಮೀರ್ ಖಾನ್ ಜೊತೆ ಡೇಟಿಂಗ್ ಅಂತೆಲ್ಲಾ ಓಡಾಡುತ್ತಿದ್ದರು. ಎರಡನೇ ಪತ್ನಿ ಕಿರಣ್ ರಾವ್ ಜೊತೆಗಿನ ಡಿವೋರ್ಸ್ ಬಳಿಕ 18 ತಿಂಗಳಿಂದ ಆಮೀರ್ ಜೊತೆ ಲಿವ್ ಇನ್ ರಿಲೇಷನ್ಶಿಪ್​​ನಲ್ಲಿದ್ದರಂತೆ.

AMIR GOWRI (2)(1)

ಸದ್ಯ ಸಿನಿಮಾ ಕೆಲಸದಿಂದ ದೂರ ಇರುವ ಗೌರಿ ಬೆಂಗಳೂರಿನಲ್ಲೇ ವಾಸವಾಗಿದ್ದಾರೆ. ಈಗಾಗಲೇ ಮದುವೆ ಕೂಡ ಆಗಿರೋ ಗೌರಿಗೆ ಆರು ವರ್ಷದ ಒಬ್ಬ ಮಗನಿದ್ದಾನೆ. ಗೌರಿ ಕೂಡ ಆಮೀರ್ ಖಾನ್​ ಬಗ್ಗೆ ಗೌರವ ಇಟ್ಟುಕೊಂಡಿದ್ದು, ಸೂಪರ್ ಸ್ಟಾರ್ ಅಂತಾ ನಾನು ತಿಳಿಯೋದಿಲ್ಲ. ನಿಧಾನವಾಗಿ ಬಾಲಿವುಡ್​ಗೆ ಹೊಂದಿಕೊಳ್ಳುತ್ತೇನೆ ಅಂತಾ ಹೇಳಿದ್ದಾರೆ.

AMIR GOWRI (3)

ಈ ಹಿಂದೆ 1986ರಲ್ಲಿ ರೀನಾ ದತ್ತ ಅವರನ್ನ ಮದುವೆ ಆಗಿದ್ದ ಆಮೀರ್ ಖಾನ್​​ಗೆ ಇಬ್ಬರು ಮಕ್ಕಳಿದ್ದಾರೆ. ಬಳಿಕ 2002ರಲ್ಲಿ ರೀನಾಗೆ ಡಿವೋರ್ಸ್ ಕೊಟ್ಟ ಬಳಿಕ 2005ರಲ್ಲಿ ಕಿರಣ್​ ರಾವ್ ಅವರನ್ನು ವಿವಾಹವಾಗಿದ್ದರು. ಆದ್ರೆ, 2021ರಲ್ಲಿ ವಿಚ್ಛೇದನ ಕೊಟ್ಟಿದ್ದರು. ಇದೀಗ ಗೌರಿಯನ್ನ ಪ್ರೀತಿಸುತ್ತಿದ್ದು ಮದುವೆ ಯಾವಾಗ ಅನ್ನೋದು ಇನ್ನೂ ರಿವೀಲ್ ಆಗಿಲ್ಲ.

 

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ