ದಕ್ಷಿಣ ಭಾರತದಲ್ಲಿ ನಂಬರ್ ಒನ್ ನಟಿಯಾಗಿ ಮಿಂಚುತ್ತಿರುವ ಕನ್ನಡದ ಕಿಸ್ ಬೆಡಗಿ.. ಪುಷ್ಪ 2ನ ಹಾಟ್ ಹಾಟ್ ಹುಡುಗಿ ನಟಿ ಶ್ರೀಲೀಲಾ ಡೇಟಿಂಗ್ನಲ್ಲಿದ್ದಾರಾ ಅನ್ನೋ ಪ್ರಶ್ನೆ ದಟ್ಟವಾಗಿದೆ. ಅದರಲ್ಲೂ ಬಾಲಿವುಡ್ ನಟ ಕಾರ್ತಿಕ್ ಆರ್ಯನ್ ಜೊತೆ ಅನ್ನೋದು ಹೊಸ ಸುದ್ದಿಯಾಗಿದೆ. ಹಲವು ದಿನಗಳಿಂದ ಶ್ರೀಲೀಲಾ ಮತ್ತು ಕಾರ್ತಿಕ್ ಡೇಟಿಂಗ್ ಮಾಡ್ತಿದ್ದಾರೆ ಅನ್ನೋ ಸುದ್ದಿ ಭಾರೀ ಸದ್ದು ಮಾಡುತ್ತಿತ್ತು. ಇದೀಗ ಅದು ದೃಢ ಅನ್ನಿಸ್ತಿದೆ. ಅದಕ್ಕೆ ಕಾರಣ ನಟ ಕಾರ್ತಿಕ್ ಅವರ ತಾಯಿ ಹೇಳಿದ ಆ ಒಂದು ಮಾತು.
ಇತ್ತೀಚೆಗೆ ಕಾರ್ತಿಕ್ ಅವರ ತಾಯಿ ಮಾಲಾ ತಿವಾರಿ ಅವರು 2025ರ IIFA ಪ್ರಶಸ್ತಿ ಸಮಾರಂಭದಲ್ಲಿ ತಮ್ಮ ಮಗನೊಂದಿಗೆ ಕಾಣಿಸಿಕೊಂಡಿದ್ದರು. ಈ ಕಾರ್ಯಕ್ರಮದ ಒಂದು ಕ್ಲಿಪ್ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದ್ದು, ಅದರಲ್ಲಿ ತಿವಾರಿ ಅವರ ಭಾವಿ ಸೊಸೆಯ ನಿರೀಕ್ಷೆಗಳ ಬಗ್ಗೆ ಕೇಳಲಾಗಿತ್ತು.
ಇದಕ್ಕೆ ಪ್ರತಿಕ್ರಿಯಿಸಿದ ಕಾರ್ತಿಕ್ ಅವರ ತಾಯಿ, ‘ತಮ್ಮ ಮಗನ ಪತ್ನಿ ಒಳ್ಳೆಯ ವೈದ್ಯೆಯಾಗಬೇಕು’ ಅಂತಾ ಹೇಳಿರೋದು ಭಾರೀ ಚರ್ಚೆಗೆ ಕಾರಣವಾಗಿದೆ. ‘ಕುಟುಂಬದ ಬೇಡಿಕೆ ಏನೆಂದರೆ ಆಕೆ ತುಂಬಾ ಒಳ್ಳೆಯ ವೈದ್ಯೆಯಾಗಿರಬೇಕು’ ಅಂತಾ ಹೇಳಿದ್ದಾರೆ.
ವಿಶೇಷ ಅಂದ್ರೆ ನಟಿ ಶ್ರೀಲೀಲಾ ಎಂಬಿಬಿಎಸ್ ಓದಿದ್ದು ಡಾಕ್ಟರ್ ಕೂಡ ಹೌದು. ಹೀಗಾಗಿ ಕಾರ್ತಿಕ್ ತಾಯಿ ಹೇಳಿದ್ದು ನಿಜಾನಾ ಅಂತಾ ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. ದಕ್ಷಿಣ ನಟಿ ಶ್ರೀಲೀಲಾ ಕೂಡ ವೈದ್ಯೆಯಾಗಲು ಮೆಡಿಕಲ್ ಓದುತ್ತಲಿದ್ದು, ಕಾರ್ತಿಕ್ ಅಥವಾ ಶ್ರೀಲೀಲಾ ಇಬ್ಬರೂ ತಮ್ಮ ಸಂಬಂಧವನ್ನು ಇಲ್ಲಿಯವರೆಗೆ ದೃಢೀಕರಿಸಿಲ್ಲ ಅಥವಾ ಡೇಟಿಂಗ್ ವದಂತಿ ನಿರಾಕರಿಸಿಲ್ಲ.
ಈ ತಿಂಗಳ ಆರಂಭದಲ್ಲಿ ಕಾರ್ತಿಕ್ ಫ್ಯಾಮಿಲಿ ಫಂಕ್ಷನ್ನಲ್ಲಿ ಶ್ರೀಲೀಲಾ ಭಾಗಿಯಾಗಿದ್ದರು. ಕಾರ್ತಿಕ್ ಆರ್ಯನ್ ಮತ್ತು ಅವರ ಕುಟುಂಬವು ತಮ್ಮ ವೈದ್ಯಕೀಯ ವೃತ್ತಿಜೀವನದಲ್ಲಿ ಮತ್ತೊಂದು ಮೈಲಿಗಲ್ಲು ಸಾಧಿಸಿದ ತಮ್ಮ ಸಹೋದರಿ ಡಾ. ಕೃತಿಕಾ ತಿವಾರಿಗಾಗಿ ಕಾರ್ಯಕ್ರಮ ಆಯೋಜಿಸಿದ್ದರು. ಕಾರ್ತಿಕ್ ಫ್ಯಾಮಿಲಿ ಆಯೋಜಿಸಿದ್ದ ಸಂಭ್ರಮಾಚರಣೆಯಲ್ಲಿ ಶ್ರೀಲೀಲಾ ಕೂಡ ಭಾಗವಹಿಸಿದ್ದರು.
ಈ ಎಲ್ಲಾ ಕಾರಣಗಳಿಂದಾಗಿ ಡೇಟಿಂಗ್ ಸುದ್ದಿಗೆ ಮತ್ತಷ್ಟು ಪುಷ್ಠಿ ಸಿಕ್ಕಿದೆ. ಇದರ ಮಧ್ಯೆ ಕಾರ್ತಿಕ್ ಆರ್ಯನ್ ಮತ್ತು ಶ್ರೀಲೀಲಾ ಶೀಘ್ರದಲ್ಲೇ ಅನುರಾಗ್ ಬಸು ನಿರ್ದೇಶನದ ಇನ್ನೂ ಹೆಸರಿಡದ ಸಿನಿಮಾದಲ್ಲಿ ಸ್ಕ್ರೀನ್ ಶೇರ್ ಮಾಡಿದ್ದಾರೆ. ಹೀಗಾಗಿ ಸೋಷಿಯಲ್ ಮೀಡಿಯಾದಲ್ಲಿ ಇಬ್ಬರೂ ಡೇಟಿಂಗ್ನಲ್ಲಿದ್ದಾರೆ ಅಂತಾ ಸೀರಿಯಸ್ ಆಗಿ ಚರ್ಚೆ ಮಾಡ್ತಿದ್ದಾರೆ.