-  ರಾಘವೇಂದ್ರ ಅಡಿಗ ಎಚ್ಚೆನ್.

ಕನ್ನಡ ಪುಸ್ತಕ ಪ್ರಾಧಿಕಾರದ 2025ನೇ ಸಾಲಿನ ವಾರ್ಷಿಕ ಪ್ರಶಸ್ತಿಗಗಳಿಗೆ ಇಂದು ಅರ್ಹ ಗಣ್ಯರನ್ನು ಆಯ್ಕೆ ಮಾಡಲಾಗಿದೆ. ಇದರ ಜೊತೆಗೆ ಇದೇ ಮೊಟ್ಟಮೊದಲ ಬಾರಿಗೆ ಕನ್ನಡ ಪುಸ್ತಕ ಪ್ರಾಧಿಕಾರದಿಂದ ಎರಡು ದತ್ತಿ ಬಹುಮಾನಗಳನ್ನು ಸಹ ನೀಡಲಾಗುತಿದ್ದು, ಪ್ರತಿ ವರ್ಷ ಇಬ್ಬರು ಚುಟುಕು ಸಾಹಿತಿಗಳಿಗೆ ಈ ದತ್ತಿ ಬಹುಮಾನವನ್ನು ನೀಡಲಾಗುವುದು ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಮಾನಸ ಹೇಳಿದ್ದಾರೆ.

ಪ್ರಶಸ್ತಿ ವಿವರ ಕೆಳಕಂಡಂತಿದೆ.

ಅತ್ಯುತ್ತಮ ಪ್ರಕಾಶನ ಪ್ರಶಸ್ತಿ  -

ಪಲ್ಲವ ಪ್ರಕಾಶನ, ಹೊಸಪೇಟೆ

(ಪ್ರಶಸ್ತಿ ಮೊತ್ತ ರೂ.1,00,000-00)

ಡಾ. ಎಂ. ಎಂ. ಕಲಬುರ್ಗಿ ಮಾನವಿಕ ಅಧ್ಯಯನ ಪ್ರಶಸ್ತಿ –

ಡಾ. ರಾಮೇಗೌಡ (ರಾಗೌ), ಮೈಸೂರು

(ಪ್ರಶಸ್ತಿ ಮೊತ್ತ ರೂ.75,000-00)

ಡಾ. ಜಿ.ಪಿ. ರಾಜರತ್ನಂ ಸಾಹಿತ್ಯ ಪರಿಚಾರಕ ಪ್ರಶಸ್ತಿ -

ಡಾ. ಶ್ರೀ ಚನ್ನವೀರ ಶಿವಾಚಾರ್ಯರು, ಬೀದರ್

(ಶ್ರೀ ಚನ್ನಬಸವೇಶ್ವರ ಸಂಸ್ಥಾನ ಹಿರೇಮಠ ಹಾರಕೂಡ)

(ಪ್ರಶಸ್ತಿ ಮೊತ್ತ ರೂ.50,000-00)

ಡಾ|| ಅನುಪಮಾ ನಿರಂಜನ ವೈದ್ಯಕೀಯ ಹಾಗೂ ವಿಜ್ಞಾನ ಸಾಹಿತ್ಯ ಪ್ರಶಸ್ತಿ -

ಡಾ|| ಬಿ.ಶ್ರೀನಿವಾಸ ಕಕ್ಕಿಲಾಯ, ಮಂಗಳೂರು

ಚುಟುಕು ಯೋಗಾಚಾರ್ಯ ಡಾ. ಎಂ.ಜಿ.ಆರ್. ಅರಸ್ ದತ್ತಿ ಬಹುಮಾನ  -

ಶ್ರೀ ಎ.ಈ. ವೀರಭದ್ರೇಗೌಡ ಆಂದಲೆ

(ಚುಟುಕು ಮುಂಗಾರು ಹನಿಗಳು ಕವನ ಸಂಕಲನ)

(ಬಹುಮಾನದ ಮೊತ್ತ ರೂ.6,000-00)

ಡಾ. ಅಂಬಾ ಎಂ.ಜಿ.ಆರ್. ಅರಸ್ ದತ್ತಿ ಬಹುಮಾನ -

ಶ್ರೀಮತಿ ವಿ. ಸೀತಾಲಕ್ಷ್ಮಿವರ್ಮ, ವಿಟ್ಲ ಅರಮನೆ

(ಬೊಗಸೆಯೊಳಗಿನ ಚುಟುಕು ಸಾಗರ)

(ಬಹುಮಾನದ ಮೊತ್ತ ರೂ.6,000-00)

ಪ್ರಶಸ್ತಿ ಪ್ರದಾನ ದಿನಾಂಕವನ್ನು ಸಧ್ಯದಲ್ಲಿಯೇ ತಿಳಿಸಲಾಗುವುದು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ