– ರಾಘವೇಂದ್ರ ಅಡಿಗ ಎಚ್ಚೆನ್

ಕನ್ನಡ ಬಿಗ್​ಬಾಸ್​ನ 12ರ ಪ್ರಾರಂಭ ಯಾವಾಗ ಎನ್ನುವ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ಕನ್ನಡ ಬಿಗ್​ಬಾಸ್​ನ 12ರ ಮೊದಲ ಪ್ರೋಮೊ ಈಗಾಗಲೇ ಬಿಡುಗಡೆ ಆಗಿದ್ದು, ದಿನಾಂಕ ಘೋಷಣೆಯಷ್ಟೆ ಬಾಕಿ ಇತ್ತು. ಚಾನೆಲ್​​ನವರು ದಿನಾಂಕ ಘೋಷಣೆ ಮಾಡುವ ಮುಂಚೆಯೇ ಸುದೀಪ್ ಅವರು ಬಿಗ್​​ಬಾಸ್ ಸೀಸನ್ 12 ಪ್ರಾರಂಭವಾಗುವ ದಿನಾಂಕವನ್ನು ಘೋಷಣೆ ಮಾಡಿದ್ದಾರೆ.
ಮೈಸೂರಿನಲ್ಲಿ ಇಂದು (ಆಗಸ್ಟ್ 31) ನಿರ್ಮಾಪಕ, ಉದ್ಯಮಿ, ರಾಜಕಾರಣಿ ಸಂದೇಶ್ ನಾಗರಾಜ್ ಹುಟ್ಟುಹಬ್ಬದ‌ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ, ಸಚಿವ ಜಮೀರ್ ಅಹ್ಮದ್ ಇನ್ನೂ ಹಲವು ಗಣ್ಯರು ಭಾಗಿ ಆಗಿದ್ದರು. ಇದೇ ಕಾರ್ಯಕ್ರಮದಲ್ಲಿ ನಟ ಸುದೀಪ್ ಸಹ ಅತಿಥಿಯಾಗಿ ಭಾಗಿ ಆಗಿದ್ದರು. ಈ ವೇಳೆ ವೇದಿಕೆ ಮೇಲೆ ಮಾತನಾಡಿದ ಸುದೀಪ್ ಬಿಗ್​​ಬಾಸ್ ಪ್ರಾರಂಭ ದಿನಾಂಕ ಘೋಷಣೆ ಮಾಡಿದ್ದಾರೆ.

20250831_173304

ಸುದೀಪ್, ‘ಶೀಘ್ರವೇ ತೆರೆ ಮೇಲೆ ಬರಲಿದ್ದೇನೆ. ಸೆಪ್ಟೆಂಬರ್ 28ರಿಂದ ಕಿರುತೆರೆಗೆ ಬರಲಿದ್ದೇನೆ ಆಶೀರ್ವಾದ ಮಾಡಿ’ ಎಂದರು. ಆ ಮೂಲಕ ಬಿಗ್​​ಬಾಸ್ ಸೀಸನ್ 12 ಸೆಪ್ಟೆಂಬರ್ 28ಕ್ಕೆ ಪ್ರಾರಂಭ ಆಗಲಿದೆ ಎಂದು ಘೋಷಣೆ ಮಾಡಿದರು. ಈ ಬಾರಿಯೂ ಸುದೀಪ್ ಅವರೇ ಬಿಗ್​​ಬಾಸ್ ನ ನಿರೂಪಣೆ ಮಾಡಲಿದ್ದು, ದಿನಾಂಕವನ್ನೂ ಅವರೇ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.
ಕಳೆದ ಬಾರಿಯ ಬಿಗ್​​ಬಾಸ್ ಸೀಸನ್ 11 ಸೆಪ್ಟೆಂಬರ್ 29ರಂದು ಪ್ರಾರಂಭವಾಗಿತ್ತು. ಈ ಬಾರಿ ಸೆಪ್ಟೆಂಬರ್ 28ಕ್ಕೆ ಪ್ರಾರಂಭ ಆಗಲಿದೆ. ಮೂಲಗಳ ಪ್ರಕಾರ ಈಗಾಗಲೇ ಬಹುತೇಕ ಸ್ಪರ್ಧಿಗಳ ಆಯ್ಕೆ ಆಗಿದ್ದು, ಕೆಲವರ ಆಯ್ಕೆಯಷ್ಟೆ ಬಾಕಿ ಇದೆ ಎನ್ನಲಾಗುತ್ತಿದೆ. ಕಳೆದ ಸೀಸನ್ ನಿರೂಪಣೆ ಮಾಡುವಾಗ ತಾವು ಇನ್ನು ಮುಂದೆ ಬಿಗ್​​ಬಾಸ್ ನಿರೂಪಣೆ ಮಾಡುವುದಿಲ್ಲ ಇದೇ ನನ್ನ ಕೊನೆಯ ಸೀಸನ್ ಎಂದಿದ್ದರು. ಆದರೆ ಆಯೋಜಕರು ಸುದೀಪ್ ಅವರ ಮನವೊಲಿಸುವಲ್ಲಿ ಸಫಲರಾಗಿದ್ದಾರೆ. ಆಯೋಜಕರ ಒತ್ತಡಕ್ಕೆ ಮಣಿದು ಸುದೀಪ್ ಅವರು ಬಿಗ್​​ಬಾಸ್ ನಿರೂಪಣೆಗೆ ಒಪ್ಪಿಗೆ ನೀಡಿದ್ದಾರೆ

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ