ಶರತ್ ಚಂದ್ರ
ಕಳೆದ ಎರಡು ವರ್ಷಗಳ ಹಿಂದೆ ಬಿಡುಗಡೆಯಾದ ಕೌಶಲ್ಯ ರಾಮ ಸುಪ್ರಜಾದ ನಾಯಕ ಡಾರ್ಲಿಂಗ್ ಕೃಷ್ಣ ಮತ್ತು ನಿರ್ದೇಶಕ ಶಶಾಂಕ್ ಜೋಡಿ, ಮತ್ತೆ Brat ಚಿತ್ರದ ಮೂಲಕ ಒಂದಾಗಿದೆ.
ಶಶಾಂಕ್ ತಮ್ಮ ಹೆಚ್ಚಿನ ಚಿತ್ರಗಳಲ್ಲಿ ಸೂಪರ್ ಹಿಟ್ ಹಾಡುಗಳು ನೀಡಿಕೊಂಡು ಬಂದಿದ್ದಾರೆ. ಇತ್ತೀಚಿನ ಅವರ ಇತ್ತೀಚಿನ ಎಲ್ಲಾ ಚಿತ್ರಗಳಲ್ಲಿ ಅರ್ಜುನ್ ಜನ್ಯ ಅವರ ಸಂಗೀತ ನಿರ್ದೇಶನದ ಮಾಂತ್ರಿಕತೆಯನ್ನು ಸಂಗೀತಪ್ರಿಯರು ಅನುಭವಿಸಿದ್ದಾರೆ.
ಇವರಿಬ್ಬರ ಕಾಂಬಿನೇಷನ್ನಲ್ಲಿ ಬಂದ' ಲವ್ 360' ಚಿತ್ರದ 'ಜಗವೇ ನೀನು ಗೆಳತಿಯೇ' ಕೌಶಲ್ಯ ರಾಮ ಸುಪ್ರಜಾ ಚಿತ್ರದ 'ಪ್ರೀತಿಸುವೆ ಪ್ರೀತಿಸುವೆ'ಹಾಗೂ ಮುಂಗಾರು ಮಳೆ 2 ಚಿತ್ರದ ಹಾಡುಗಳು ಈಗಲೂ ಕೇಳುಗರ ಪ್ಲೇ ಲಿಸ್ಟ್ ನಲ್ಲಿದ್ದು, ಎಫ್ ಎಂ ನಲ್ಲಿ ಕೂಡ ಪದೇಪದೇ ಈ ಹಾಡುಗಳು ಪ್ರಸಾರ ವಾಗುತ್ತಿದ್ದೂ ಜನ ಈಗಲೂ ಕೇಳುತ್ತಿದ್ದಾರೆ.
' ಜಗವೇ ನೀನು ಗೆಳತಿಯೇ' ಹಾಡನ್ನು ಹಾಡಿದ ಸಿದ್ ಶ್ರೀ ರಾಮ್ ಮತ್ತೆ ಶಶಾಂಕ್ ನಿರ್ದೇಶನದ Brat ಚಿತ್ರದ ಹೊಸ ಹಾಡಿಗೆ ದನಿಯಾಗಿದ್ದಾರೆ.
ಅರ್ಜುನ್ ಜನ್ಯ ಸಂಗೀತ ನೀಡಿರುವ ' ನಾನೇ ನೀನಂತೆ' ಚಿತ್ರದ ಲಿರಿಕಲ್ ಹಾಡು ಈ ತಿಂಗಳ 25ನೇ ತಾರೀಕಿಗೆ ಬಿಡುಗಡೆಯಾಗಲಿದೆ.
ಮೊದಲ ಬಾರಿಗೆ ಶಶಾಂಕ್ ಪ್ಯಾನ್ ಇಂಡಿಯಾ ಸಿನಿಮಾ ಮಾಡುತ್ತಿದ್ದು, ಕನ್ನಡ ಹಾಡಿನ ಜೊತೆಗೆ ಹಿಂದಿ ತಮಿಳು, ಮಲಯಾಳಂ ಭಾಷೆಯಲ್ಲಿ ಕೂಡ ಈ ಹಾಡು ಬಿಡುಗಡೆಯಾಗಲಿದೆ. ಕನ್ನಡ ಮತ್ತು ತೆಲುಗು ಹಾಡುಗಳನ್ನು ಸಿದ್ ಶ್ರೀ ರಾಮ್ ಅವರೇ ಹಾಡಿದ್ದಾರೆ. ಹಿಂದಿ ಆವೃತ್ತಿ ಯನ್ನು ಕನ್ನಡದ ಗಾಯಕ ನಿಹಾಲ್ ತಾವ ರೋ ಹಾಡಿರುವುದು ವಿಶೇಷ.
ಡಾರ್ಲಿಂಗ್ ಕೃಷ್ಣ ಅವರಿಗೆ ಮನಿಷಾ ಕಂಡ ಕೂರ್ ನಾಯಕಿಯಾಗಿ ಅಭಿನಯಿಸುತ್ತಿದ್ದೂ, ಇಳಿದ ಪಾತ್ರ ವರ್ಗದಲ್ಲಿ ಅಚ್ಯುತ್ ಕುಮಾರ್, ಇಂದಿರಾ ರಮೇಶ್, ಡ್ರ್ಯಾಗನ್ ಮಂಜು ಮುಂತಾದವರಿದ್ದಾರೆ. ಡಾಲ್ಫಿನ್ ಎಂಟರ್ಟೈನ್ಮೆಂಟ್ ಬ್ಯಾನರ್ ಅಡಿಯಲ್ಲಿ ಮಂಜುನಾಥ್ ಕಂಡಕೂರ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.