ಅಪ್ಪ ಅಮ್ಮ ಇಬ್ಬರೂ ಕಲಾವಿದರು. ಕಲೆ ರಕ್ತಗತವಾಗಿ ಹರಿದು ಬಂದಿದೆ. ಇಷ್ಟಾದರೂ ಮೇಘನಾ ರಾಜ್‌ಗೆ ತಾನೊಬ್ಬ ಪ್ರತಿಭಾವಂತ ಕಲಾವಿದೆ ಎಂದು ಪ್ರೂವ್ ‌ಮಾಡಲು ಮಲೆಯಾಳಂ ಚಿತ್ರಗಳಲ್ಲಿ ನಟಿಸಿ ಬರಬೇಕಾಯ್ತು. ಸಿನಿಮಾ ಕುಟುಂಬದಿಂದ ಬಂದಿದ್ದರೂ ಶ್ರಮ ವಹಿಸಲೇಬೇಕು. ಅವಕಾಶಗಳು ಸುಲಭವಾಗಿ ಸಿಗುವುದಿಲ್ಲ ಎಂದು ನಂಬಿದ್ದರಿಂದ ಮೇಘನಾ ರಾಜ್‌ ತನಗೆ ಸಿಕ್ಕ ಪರಭಾಷಾ ಚಿತ್ರಗಳಲ್ಲಿ ಪ್ರತಿಭೆ ಪ್ರದರ್ಶಿಸಿ, ಕನ್ನಡಕ್ಕೆ ಬಂದಂಥ ನಟಿ, ಮೇಘನಾಳಿಗೆ ತಿರುವು ಕೊಟ್ಟ ಚಿತ್ರ `ರಾಜಾ ಹುಲಿ.' ಯಶ್‌ ಜೊತೆ ನಟಿಸಿದ ಈ ನಟಿಗೆ `ಆಟಗಾರ,' `ಬಹುಪರಾಕ್‌' ಚಿತ್ರಗಳು ಒಳ್ಳೆ ಹೆಸರು ತಂದಕೊಟ್ಟಿತು. ಇದೀಗ `ಅಲ್ಲಮ' ಚಿತ್ರದಲ್ಲಿ ನಟಿಸುತ್ತಿದ್ದಾಳೆ. ಅನೂಪ್‌ ಜೊತೆ `ಲಕ್ಷ್ಣಣ' ಚಿತ್ರದಲ್ಲಿ  ನಟಿಸಿ ಬಿಡುಗಡೆಗೆ ರೆಡಿಯಾಗಿರು ಈ ಚಿತ್ರ ಅದ್ಧೂರಿ ನಿರ್ಮಾಣದಿಂದ ಕೂಡಿದೆ. ಕನ್ನಡದ  ಹುಡುಗಿಯಾಗಿ ನಾಯಕನ ಜೊತೆ ನಾಯಕಿಯಾಗಿಯೂ ಕಾಣಿಸಿಕೊಂಡಿರುವ ಮೇಘನಾಳಿಗೆ ಇನ್ನಷ್ಟು ಒಳ್ಳೆ ಪಾತ್ರಗಳು ಸಿಗಲಿ.

ಸಿಂಪಲ್ ಲವ್ ಸ್ಟೋರಿ

`ಸಿಂಪ್ಲಾಗೊಂದು ಲವ್ ಸ್ಟೋರಿ' ನಿರ್ದೇಶಿಸಿದ್ದ ಸುನಿ ಗಿಮಿಕ್‌ ಮಾಡೋದ್ರಲ್ಲಿ ಫಸ್ಟ್ ರಾಂಕ್‌. ಸಿನಿಮಾ ಪ್ರೇಕ್ಷಕರನ್ನು ಆಕರ್ಷಿಸುವ ಕಲೆ ಇವರಿಗೆ ಗೊತ್ತಿದೆ. ಸಿನಿಮಾದ ಪ್ರೊಮೋ ರಿಲೀಸ್‌ ಮಾಡಿ ಸಿನಿಮಾ ಬಗ್ಗೆ ಸಾಕಷ್ಟು ಪ್ರಚಾರ ಪಡೆಯೋ ಕಲೆಯನ್ನು ಇವರಿಂದ ಕಲಿಯಬೇಕು. ಡೈಲಾಗ್‌ ಮೂಲಕ ಎಲ್ಲರ ಗಮನಸೆಳೆಯಲು ಸುನಿ ಸ್ಟೈಲ್‌ನಲ್ಲಿ ಈಗ ಅವರ ಹೊಸ ಚಿತ್ರ `ಸಿಂಪಲ್ ಆಗಿ ಇನ್ನೊಂದು ಲವ್ ಸ್ಟೋರಿ' ಮುಂದುವರಿದಿದೆ. ಇದು ಮೊದಲ ಚಿತ್ರದ ಸೀಕ್ವೆಲ್ ‌ಅಲ್ಲದಿದ್ದರೂ ಅಲ್ಲಿನ ಅನೇಕ ಅಂಶಗಳು, ಮೋಡಿ ಮಾಡೋ ಡೈಲಾಗ್‌ಗಳು ಈ ಸಿನಿಮಾದಲ್ಲೂ ಇದೆ. ನಾಯಕಿ ಪಾತ್ರದಲ್ಲಿ ಮೇಘನಾ ಗಾವಂಕರ್‌ ಮಿಂಚಲಿದ್ದಾಳೆ. ಒಳ್ಳೆ ಪಾತ್ರಗಳಿದ್ದರೆ ಮಾತ್ರ ಸಿನಿಮಾಗಳಲ್ಲಿ ನಟಿಸುವ ಮೇಘನಾ ಸಿನಿಮಾಗಳಿಲ್ಲ ಎಂದು ಯಾವತ್ತೂ ಕೊರಗುವಂಥ ನಟಿಯಲ್ಲ.

`ಚಾರ್‌ಮಿನಾರ್‌' ಚಿತ್ರದಲ್ಲಿ ಮಿಂಚಿದ್ದ ಮೇಘನಾಗೆ ಸಿಂಪಲ್.... ಚಿತ್ರದ ಬಗ್ಗೆ ತುಂಬಾನೆ ನಿರೀಕ್ಷೆ ಇದೆ ಅನಿಸುತ್ತೆ. ಸುನಿ ಪಾಲಿಗಿದು ಕಲರ್‌ಫುಲ್ ಚಿತ್ರ ಎನ್ನಬಹುದು. ಗಣೇಶನ ಆಟ ಮಳೆ ಹುಡುಗ ಗೋಲ್ಡನ್‌ ಸ್ಟಾರ್‌ ಗಣೇಶ್‌ನ `ಸ್ಟೈ‌ಕ್ಲಿಂಗ್‌' ಬಿಡುಗಡೆಗೆ ರೆಡಿಯಾಗಿರುವಾಗ ಅವರು ಈಗೊಂದು ಹೊಸ ಆಟವನ್ನು ಕಿರುತೆರೆಗೆ ರೆಡಿ ಮಾಡಿಟ್ಟಿದ್ದಾರೆ. ಸೂಪರ್‌ ಮಿನಿಟ್‌ ಈಗಾಗಲೇ ಜನಪ್ರಿಯ ಗೇಮ್ ಶೋ ಆಗಿತ್ತು. ಈಗ ಇದರ ಮುಂದುವರಿದ ಭಾಗ ಶುರುವಾಗುತ್ತಿದೆ. ಗಣೇಶ್‌ ಕೈಯಲ್ಲಿ ಸಾಕಷ್ಟು ಚಿತ್ರಗಳಿವೆ. `ಪಟಾಕಿ,' `ಜೂಮ್, `ಮುಂಗಾರು ಮಳೆ-2' ರಮೇಶ್‌ ಅರವಿಂದ್‌ ನಿರ್ದೇಶನದ ಹೊಸ ಚಿತ್ರ ರೆಡಿಯಾಗುತ್ತಿದೆ. `ಸ್ಟೈಕ್ಲಿಂಗ್‌' ಚಿತ್ರದಲ್ಲಿ ಗಣೇಶ್‌ರದು ವಿಭಿನ್ನ  ಪಾತ್ರ. ಅವರ ಗೆಟಪ್‌ ಕೂಡಾ ಡಿಫರೆಂಟಾಗಿದೆ. ಪ್ರತಿಭಾವಂತ ಕಲಾವಿದ ಆಗಿರೋದ್ರಿಂದ ಹೊಸ ಪ್ರಯೋಗಗಳತ್ತ ಸದಾ ಹೆಜ್ಜೆ ಹಾಕುವ ಗಣೇಶ್‌ಗೆ ಬೆನ್ನೆಲುಬಾಗಿ ಪತ್ನಿ ಶಿಲ್ಪಾ ನಿಂತಿದ್ದಾರೆ. ಆರತಿಗೊಬ್ಬ ಮಗಳು ಕೀರ್ತಿಗೊಬ್ಬ ಮಗ ಎನ್ನುವಂತೆ, ಆದರ್ಶ ಕುಟುಂಬ ಹೊಂದಿರುವ ಗಣೇಶ್‌ ಗೇಮ್ ಶೋ ಹೇಗಿರುತ್ತದೆಂಬ ಕುತೂಹಲ ಎಲ್ಲರಲ್ಲೂ ಇದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ