ಕನ್ನಡ ಚಿತ್ರರಂಗವಷ್ಟೇ ಅಲ್ಲ ಇತರೆ ಭಾಷೆಗಳ ಚಿತ್ರಗಳಲ್ಲೂ ಕಾಣಿಸಿಕೊಳ್ತಿರುವ ನಟಿ ಚೈತ್ರಾ ಜೆ ಆಚಾರ್ ಇತ್ತೀಚೆಗೆ ಸ್ವಲ್ಪ ಡಿಮ್ಯಾಂಡ್ ಇರುವ ನಟಿ. ತಮ್ಮ ವಿಭಿನ್ನ ನಟನೆಯಿಂದಲೇ ಹೆಸರು ಗಳಿಸಿರುವ ನಟಿ ಚೈತ್ರಾ ಆಚಾರ್ ಇತ್ತೀಚೆಗೆ ತಮ್ಮ ಸೋಷಿಯಲ್ ಮಿಡಿಯಾದಲ್ಲಿ ಅಭಿಮಾನಿಗಳಿಗೆ ಕೇಳೋ ಪ್ರಶ್ನೆಗಳು.. ಅದಕ್ಕೆ ಅಭಿಮಾನಿಗಳು ಹೇಳುವ ಉತ್ತರಗಳಿಂದಲೇ
ಹೆಚ್ಚು ಕಾಂಟ್ರವರ್ಸಿ ಆಗ್ತಿದ್ದಾರೆ. ಅಷ್ಟೇ ಅಲ್ಲ, ಬೇರೆ ನಟಿಯರಿಗಿಂತ ಇವರು ವಿಭಿನ್ನವಾಗಿಯೇ ಡ್ರೆಸ್ ಹಾಕ್ತಾರೆ. ಆದ್ರೆ, ಸಿನಿಮಾಗಳಲ್ಲಿ ಅಪ್ಪಟ ಗೌರಮ್ಮನ ರೀತಿ ನಟಿಸೋ ಇವರು ಸೋಷಿಯಲ್ ಮಿಡಿಯಾದಲ್ಲಿ ಯಾಕೆ ಬಿಚ್ಚಮ್ಮನ ರೀತಿ ಇರ್ತಾರೆ ಅಂತಾ ಕೆಲವರು ಕಮೆಂಟ್ ಹಾಕ್ತಾನೇ ಇರ್ತಾರೆ.
ಕೆಲ ತಿಂಗಳುಗಳ ಹಿಂದಷ್ಟೇ ತಮ್ಮ ಬಟ್ಟೆ ಹಾಗೂ ಖಾಸಗಿ ವಿಚಾರಗಳ ಬಗ್ಗೆ ಮಾತನಾಡೋರಿಗೆ ಬೆವರಿಳಿಸಿ ಮೈಚಳಿ ಬಿಡಿಸುವಂತಹ ಉತ್ತರ ಕೊಟ್ಟಿದ್ದರು. ಖುಷಿಯಿಂದಲೇ ಅಭಿಮಾನಿಗಳಿಗೆ ನೀವು ಪ್ರಶ್ನೆ ಕೇಳಿ ಎಂದಾಗ ಅಭಿಮಾನಿಯೊಬ್ಬ ಕನ್ಯತ್ವದ ಪ್ರಶ್ನೆ ಹಾಕಿದ್ದನು. ಆಗ ಅದಕ್ಕೆ ನಿಮ್ಮ ಅಕ್ಕ, ತಂಗಿಯನ್ನ ಕೇಳು ಅಂತಾ ತಿರುಗೇಟು ಕೊಟ್ಟಿದ್ದರು. ಇಂತಹ ನಟಿ ಈಗ ಮತ್ತೆ ತಮ್ಮ ಬೋಲ್ಡ್ ಫೋಟೋಗಳನ್ನ ತಮ್ಮ ಇನ್ಸ್ಟಾ ಖಾತೆಯಲ್ಲಿ ಹಾಕಿದ್ದಾರೆ. ಸಿಕ್ಕಾಪಟ್ಟೆ
ಗ್ಲಾಮರಸ್ ಇರೋ ಫೋಟೋಗಳನ್ನ ಹಂಚಿಕೊಂಡಿದ್ದು, ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾರೆ. ಕಿವಿಗೆ ಕೋಡುಬೇಳೆಯಂತಹ ರಿಂಗ್ಗಳನ್ನ ಹಾಕಿಕೊಂಡು ಅತ್ಯಂತ ಆಕರ್ಷಕ ರೀತಿಯಲ್ಲಿ ಕಾಣಿಸಿಕೊಂಡಿದ್ದಾರೆ. ತಮ್ಮ ಎಣ್ಣೆಗೆಂಪಿನಿಂದಲೇ ಅಟ್ರ್ಯಾಕ್ಟ್ ಮಾಡುವ ಚೈತ್ರಾಗೆ ಮುಖದ ಮೇಲಿರುವ ಕಪ್ಪು ಮಚ್ಚೆ ದೃಷ್ಟಿ ಬೊಟ್ಟು ಇಟ್ಟಂತಿದೆ.
ಆದ್ರೆ, ಅಭಿಮಾನಿಗಳಿಗೆ ಮಾತ್ರ ಭಾರೀ ನಿರಾಸೆ ಆಗ್ತಿದೆ. ಯಾಕಂದ್ರೆ, ಚೈತ್ರಾ ಆಚಾರ್ ಈಗ ಕಮೆಂಟ್ ಸೆಕ್ಷನ್ನ್ನ ಆಫ್ ಮಾಡಿದ್ದಾರೆ. ಯಾರೂ ಕೂಡ ಕೆಟ್ಟದಾಗಿ ಅಭಿಪ್ರಾಯ ವ್ಯಕ್ತಪಡಿಸಬಾರದು ಅನ್ನೋ ಉದ್ದೇಶ ಅವರದ್ದಿರಬಹುದು. ಯಾಕಂದ್ರೆ, ಈ ಹಿಂದೆ ತಮ್ಮ ಬೋಲ್ಡ್ ಫೋಟೋ ಹಂಚಿಕೊಂಡಾಗ ಕೆಲವರಂತೂ ಕೆಟ್ಟದಾಗಿ ಕಮೆಂಟ್ ಹಾಕ್ತಿದ್ದರು. ಹಾಗಾಗಿ ಈ ಬಾರಿ ಅಷ್ಟೂ ಫೋಟೋಗಳನ್ನ ಅಪ್ಲೋಡ್ ಮಾಡಿದ್ರೂ ಯಾವುದಕ್ಕೂ ಕಮೆಂಟ್ ಬಾಕ್ಸ್ ಓಪನ್ ಮಾಡಿಲ್ಲ.
ನಟ ರಾಜ್ಬಿ ಶೆಟ್ಟಿಯ ಮಹಿರಾ ಮೂಲಕ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟ ಚೈತಾ ಆಚಾರ್ ಸಪ್ತಸಾಗರದಾಚೆ ಎಲ್ಲೋ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ಜೊತೆ ಮನೋಜ್ಞವಾಗಿ ಅಭಿನಯಿಸಿದ್ದರು. ಬಳಿಕ ಗಿಲ್ಕಿ, ತಲೆದಂಡ, ಅದೃಶ್ಯ, ಬ್ಲಿಂಕ್ನಲ್ಲೂ ಆಕ್ಟಿಂಗ್ ಮಾಡಿದ್ದಾರೆ.
ಸ್ಟ್ರಾಬೆರಿ, ಹ್ಯಾಪಿ ಬರ್ತ್ಡೇ ಟು ಮಿ, ಯಾರಿಗೆ ಹೇಳ್ಬೇಡಿ ಮತ್ತು ಇನ್ನೂ ಹೆಸರಿಡದ ಇನ್ನೆರಡು ಸಿನಿಮಾಗಳು ತೆರೆಗೆ ಬರಲು ಸಿದ್ದವಾಗಿದೆ. ಸದ್ಯ ಡಾಲಿ ಧನಂಜಯ್ ಅಭಿನಯದ ಉತ್ತರಾಕಾಂಡದಲ್ಲಿ ಪ್ರಮುಖಪಾತ್ರದಲ್ಲಿ ನಟಿಸುತ್ತಿದ್ದು, ಮಾರ್ನಮಿ ಚಿತ್ರತಂಡವನ್ನೂ ಸೇರಿಕೊಂಡಿದ್ದಾರೆ.