ಕನ್ನಡದ ಟಿ.ವಿ ಇತಿಹಾಸದಲ್ಲಿ ಅತೀಹೆಚ್ಚು ಜನಮನ್ನಣೆ ಗಳಿಸಿದ ಸಿಂಗಿಂಗ್ ರಿಯಾಲಿಟಿ ಶೋ ಅಂದರೆ ಅದು ಸರಿಗಮಪ. 6 ವರ್ಷದಿಂದ 60 ವರ್ಷ ವಯೋಮಿತಿಯ ಸ್ಪರ್ಧಿಗಳು ಭಾಗವಹಿಸುತ್ತಿರುವ ಈ ಸೀಸನ್ ವಿಭಿನ್ನ concept ನಿಂದ ಮತ್ತಷ್ಟು ಇಂಟೆರೆಸ್ಟಿಂಗ್ ಆಗಿ ಮೂಡಿ ಬರುತ್ತಿದೆ.

ಅಷ್ಟೇ ಅಲ್ಲದೇ ತೀರ್ಪುಗಾರರಾದ ಮೆಲೋಡಿ ಕಿಂಗ್ ರಾಜೇಶ್ ಕೃಷ್ಣನ್, ಕಂಚಿನ ಕಂಠದ ಗಾಯಕ ವಿಜಯ ಪ್ರಕಾಶ್, ಮ್ಯೂಸಿಕ್ ಡೈರೆಕ್ಟರ್ ಅರ್ಜುನ್ ಜನ್ಯ ಮತ್ತು ಜನಪ್ರಿಯ ಆಂಕರ್ ಅನುಶ್ರೀ ಈ ಆವೃತ್ತಿಯ ಅತೀ ದೊಡ್ಡ ಹೈಲೈಟ್.ಇನ್ನೇನು ಫಿನಾಲೆ ಹತ್ತಿರ ಬರುತ್ತಿದ್ದಂತೆ ಜನರ ಕುತೂಹಲ, ಎಗ್ಸೈಟ್ಮೆಂಟ್ ಹೆಚ್ಚಾಗುವುದರ ಜೊತೆಗೆ ಸ್ಪರ್ಧೆಯೂ ಮತ್ತಷ್ಟು ಕಠಿಣವಾಗುತ್ತಿದೆ. ಈ ವಾರ ನಡೆಯಲಿರುವ 'ಟಿಕೆಟ್ ಟು ಫಿನಾಲೆ'ಯಲ್ಲಿ 13 ಸ್ಪರ್ಧಿಗಳು- ಬಾಳು ಬೆಳಗುಂದಿ, ಭೂಮಿಕಾ, ದ್ಯಾಮೇಶ, ಕಾರ್ತಿಕ್, ಲಹರಿ, ಮನೋಜ್, ಅಮೋಘ ವರ್ಷ, ರಶ್ಮಿ ಡಿ, ಸುಧೀಕ್ಷಾ, ದೀಪಕ್, ಆಗಮ ಶಾಸ್ತ್ರೀ, ಶಿವಾನಿ ಮತ್ತು ಆರಾಧ್ಯ ರಾವ್ ನಡುವೆ ಹಣಾಹಣಿ ನಡೆಯಲಿದೆ. ಇನ್ನು ಡೈರೆಕ್ಟ್ ಆಗಿ ಫಿನಾಲೆಗೆ ಟಿಕೆಟ್ ಪಡೆಯಲಿರುವ ಆ ಒಬ್ಬ ಲಕ್ಕಿ ಸ್ಪರ್ಧಿ ಯಾರು ಎಂದು ಕಾದು ನೋಡಬೇಕಾಗಿದೆ.ಅಷ್ಟೇ ಅಲ್ಲದೇ, ಈ ವಾರ ನಡೆಯಲಿರುವ ಟಿಕೆಟ್ ಟು ಫಿನಾಲೆ ಎಪಿಸೋಡ್ ಗೆ ಮತ್ತಷ್ಟು ರಂಗು ನೀಡಲು ಕನ್ನಡ ಚಿತ್ರರಂಗದ ಖ್ಯಾತ ನಟ ಶರಣ್ ಮತ್ತು ನಟಿ ಅದಿತಿ ಪ್ರಭುದೇವ ಅವರು ಬರುತ್ತಿದ್ದಾರೆ. ಶರಣ್ ಅವರ ಕಾಮಿಡಿ, ಅದಿತಿ ಪ್ರಭುದೇವ ಅವರ ಚಾರ್ಮ್ 'ಟಿಕೆಟ್ ಟು ಫಿನಾಲೆ' ಎಪಿಸೋಡ್ ನ ಕಲರ್ ಫುಲ್ ಮಾಡಲಿದೆ. ಅಲ್ಲದೇ ಸ್ಪರ್ಧಿಗಳ ಹುಮ್ಮಸ್ಸನ್ನು ಹೆಚ್ಚಿಸಲಿದೆ.

ಕಠಿಣ ಸ್ಪರ್ಧೆಯ ನಡುವೆಯೂ ಯಾರಿಗೆ ಸಿಗಲಿದೆ 'ಟಿಕೆಟ್ ಟು ಫಿನಾಲೆ'? ತಿಳಿದುಕೊಳ್ಳಲು ತಪ್ಪದೆ ವೀಕ್ಷಿಸಿ 'ಸ ರಿ ಗ ಮ ಪ ಟಿಕೆಟ್ ಟು ಫಿನಾಲೆ' ಎಪಿಸೋಡ್ ಇದೇ ಶನಿವಾರ ಮತ್ತು ಭಾನುವಾರ ಸಂಜೆ 7:30 ಕ್ಕೆ ಝೀ ಕನ್ನಡ ವಾಹಿನಿಯಲ್ಲಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ