ಶರತ್ ಚಂದ್ರ

ಪ್ರವೀಣ್ ನಾಯಕ್ ಅವರ ಕನ್ನಡ ಚಿತ್ರರಂಗ ದ ನಂಟು ಹಲವಾರು ದಶಕ ಗಳದ್ದು. ಛಾಯಾಗ್ರಾಹಕರಾಗಿ, ಪತ್ರಿಕೆ ಸಂಪಾದಕರಾಗಿ, ಸಿನಿಮಾ ನಿರ್ದೇಶಕರಾಗಿ ಪ್ರವೀಣ್ ನಾಯಕ್    ಚಿರಪರಿಚಿತರು. ಪ್ರವೀಣ್ ನಾಯಕ್ ಬಹಳ ವರ್ಷಗಳ ನಂತರ ಆಕ್ಷನ್ ಕಟ್ ಹೇಳಿರುವ ‘ಟಕೀಲಾ’ ಚಿತ್ರ ಮೇ 16 ರಂದು ಬಿಡುಗಡೆಯಾಗಲಿದೆ. ಬಿಗ್ ಬಾಸ್ ನಂತರ ಧರ್ಮ ಕೀರ್ತಿರಾಜ್ ಅಭಿನಯಿಸಿ ಬಿಡುಗಡೆ ಯಾಗುತ್ತಿರುವ ಪ್ರಮುಖ ಚಿತ್ರ ಕೂಡ ಇದಾಗಿದೆ.

1000528201

ಈ ಚಿತ್ರದ ಪೋಸ್ಟರ್, ಟ್ರೈಲರ್ ಮತ್ತು ಹಾಡುಗಳು ಬಿಡುಗಡೆಯಾದ ನಂತರ ಎಲ್ಲರ ಗಮನ ಸೆಳೆದಿದ್ದು ಈ ಚಿತ್ರದ ನಾಯಕಿಯಾದ ನಿಖಿತ ಸ್ವಾಮಿ. ಚಿತ್ರದ ಹಾಡುಗಳಲ್ಲಿ ಗ್ಲಾಮರಸ್ ಆಗಿ    ಚಾಕ್ಲೇಟ್ ಹೀರೋ ಧರ್ಮ ಕೀರ್ತಿರಾಜ್ ಜೊತೆ ಸಕತ್ತಾಗಿ ಕಾಣಿಸಿಕೊಂಡ ನಿಖಿತಾ ಸ್ವಾಮಿ ಸ್ಯಾಂಡಲ್ ವುಡ್ಡಿನ ಭವಿಷ್ಯದಲ್ಲಿ ಗ್ಲಾಮರ್ ತಾರೆಯಾಗಿ ಹೊರ ಹೊಮ್ಮವುದರಲ್ಲಿ    ಸಂಶಯವಿಲ್ಲ.

1000528193

ಈಗಾಗಲೇ ಅನಾಥ, ಇಲ್ಲಿಂದ ಆರಂಭವಾಗಿದೆ,ಸದ್ದು ಇದು ಆಕಾಶವಾಣಿ ಬೆಂಗಳೂರು ಮುಂತಾದ ಚಿತ್ರಗಳಲ್ಲಿ ನಟಿಸಿದ್ದರೂ ಕೂಡ ನಿಕಿತಾಗೆ ಹೇಳಿಕೊಳ್ಳುವ ಯಶಸ್ಸು ಇನ್ನೂ ಸಿಕ್ಕಿಲ್ಲ.

1000528187

ಮಾಡಲಿಂಗ್ ಕ್ಷೇತ್ರದಲ್ಲಿ ಕೂಡ ಕೆಲಸ ಮಾಡಿರುವ ನಿಕಿತಾ, instagram ನಲ್ಲಿ ಆಕ್ಟಿವ್ ಆಗಿದ್ದು ಆಗಾಗ ಗ್ಲಾಮರ್ ಫೋಟೋಗಳನ್ನು ಹಾಕಿ ಗಮನ ಸೆಳೆಯುತ್ತಿದ್ದಾರೆ.

1000528236

ರಾಮಾಚಾರಿ ಸೀರಿಯಲ್ ನಲ್ಲಿ ಪ್ರಮುಖ ಪಾತ್ರ ವಹಿಸದ್ದ ನಿಖಿತಾ ಸಾಫ್ಟ್ವೇರ್ ಕೆಲಸಕ್ಕೆ ತಿಲಾo ಜಲಿ ಇಟ್ಟು  ಬಣ್ಣ ದ ಬದುಕಿಗೋಸ್ಕರ  ತಮ್ಮನ್ನು ಮುಡುಪಾಗಿಸಿಕೊಂಡಿದ್ದಾರೆ

ಈಕೆಯ ಮುಂಬರುವ ಚಿತ್ರ ಟಕಿಲಾ ಈಕೆಗೆ ಇನ್ನಷ್ಟು ಒಳ್ಳೆಯ ಅವಕಾಶಗಳನ್ನು ತಂದು ಕೊಡಲಿ ಎಂದು ನಮ್ಮ ಹಾರೈಕೆ.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ