ನಮ್ ‘ಶಿವರುದ್ರೇಗೌಡರ ಮಗಳು’ ಎಲ್ಲಿ ಹೋದ್ರು.. ಎಲ್ಲೂ ಕಾಣ್ತಿಲ್ವಲ್ಲಾ ಅಂತೆಲ್ಲಾ ಹುಡುಕ್ತಿದ್ದ ಕನ್ನಡಿಗರಿಗೆ ಕೊನೆಗೂ ಸಿಕ್ಕಿದ್ದಾರೆ. ಬರೋಬ್ಬರಿ 10 ವರ್ಷಗಳ ಬಳಿಕ ಕನ್ನಡಿಗರಿಗೆ ‘ರಾಮರಸ’ ಕುಡಿಸೋಕೆ ವಾಪಸ್ಸಾಗ್ತಿದ್ದಾರೆ. ಹೌದು.. 10 ವರ್ಷಗಳ ಹಿಂದೆ ‘ಅಧ್ಯಕ್ಷ’ ಸಿನಿಮಾದಲ್ಲಿ ನಟ ಶರಣ್​​​ಗೆ ಜೋಡಿಯಾಗಿದ್ದ ಹಾಗೂ ಆ ಸಿನಿಮಾದಲ್ಲಿ ಶಿವರುದ್ರೇಗೌಡರ ಮಗಳಾಗಿ ಎಂಟ್ರಿ ಕೊಟ್ಟಿದ್ದ ನಟಿ ಹೆಬ್ಬಾ ಪಟೇಲ್​ ಕನ್ನಡಕ್ಕೆ ಮತ್ತೆ ಕಂಬ್ಯಾಕ್ ಆಗಿದ್ದಾರೆ.

ಕಾಮಿಡಿ ಸಿನಿಮಾ ‘ಅಧ್ಯಕ್ಷ’ದಲ್ಲಿ ಮನೋಜ್ಞವಾಗಿ ಅಭಿನಯಿಸಿ ಕನ್ನಡಿಗರ ಮನ ಗೆದ್ದಿದ್ದ ಹೆಬ್ಬಾ ಪಟೇಲ್​​ ‘ರಾಮರಸ’ ಚಿತ್ರದ ಮೂಲಕ ರೀ ಎಂಟ್ರಿ ಕೊಡ್ತಿದ್ದಾರೆ. ಬಿ.ಎಂ. ಗಿರಿರಾಜ್​ ನಿರ್ದೇಶನದ ಹಾಗೂ ಬಿಗ್​ ಬಾಸ್ ವಿನ್ನರ್​​ ಕಾರ್ತಿಕ್ ಮಹೇಶ್​ ನಾಯಕರಾಗಿರುವ ‘ರಾಮರಸ’ ಚಿತ್ರದಲ್ಲಿ ಮುಖ್ಯ ಪಾತ್ರ ಮಾಡುತ್ತಿದ್ದಾರೆ. ‘ಭ್ರಮರಿ’ ಎಂಬ ಪಾತ್ರದ ಮೂಲಕ ತಮ್ಮ ಮಾದಕ ಮೈಮಾಟದಿಂದಲೇ ಸಿನಿರಸಿಕರಿಗೆ ಸೌಂದರ್ಯ ಎಂಬ ‘ರಾಮರಸ’ ಕುಡಿಸಲು ರೆಡಿಯಾಗಿದ್ದಾರೆ.

HEBBA PATEL (2)

‘ಅಧ್ಯಕ್ಷ’ ಸಿನಿಮಾ ನಂತರ ತೆಲುಗು ಚಿತ್ರರಂಗಕ್ಕೆ ಹೋಗಿದ್ದ ಹೆಬ್ಬಾ ಪಟೇಲ್​​ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ತಮ್ಮ ಮೊದಲ ಸಿನಿಮಾದಲ್ಲೇ ಜನಮೆಚ್ಚುಗೆ ಗಳಿಸಿದ್ದ ಹೆಬ್ಬಾ, ‘ಕುಮಾರಿ 21 ಎಫ್’​ ಚಿತ್ರದ ಮೂಲಕ ಟಾಲಿವುಡ್​ಗೆ ಎಂಟ್ರಿ ಕೊಟ್ಟು ಅಲ್ಲಿನ ಜನರು ಅಬ್ಬಬ್ಬಾ ಅನ್ನೋ ರೀತಿ ಌಕ್ಟಿಂಗ್ ಮಾಡಿದ್ದರು. ಬಳಿಕ ಅಲಾ ಎಲಾ, ಎಕ್ಕಡಿಕಿ ಪೋತಾವು ಚಿನ್ನವಾಡ, ಇದೊರಕಂ ಆದೊರಕಂ, ತಿರುಮನಂ, ಮಿಸ್ಟರ್, ಆಂಜಲ್​, 24 ಕಿಸ್ಸಸ್​, ಭೀಷ್ಮ, ಒರೇ ಬುಜ್ಜಿಗಾ, ರೆಡ್, ಓದೆಲಾ ರೈಲ್ವೇಸ್ಟೇಷನ್, ಸೇಸನಾಸಭ, ದಿ ಗ್ರೇಟ್ ಇಂಡಿಯನ್ ಸೂಸೈಡ್, ಅಲಾ ನಿನ್ನು ಚೆರಿ, ಹನಿಮೂನ್ ಎಕ್ಸ್​ಪ್ರೆಸ್​, ಅಂಧಾಗಡು ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿ ಕೆಲವು ಹಿಟ್​ ಸಿನಿಮಾಗಳನ್ನು ಕೊಟ್ಟಿದ್ದಾರೆ.‘

HEBBA PATEL (5)

ಮುಂಬೈನಲ್ಲಿ ಬೆಳೆದಿದ್ರೂ ಕೂಡ ಸಿನಿಮಾ ಲೈಫ್ ಕೊಟ್ಟಿದ್ದು ಕನ್ನಡ ಚಿತ್ರರಂಗ. ಯಾಕಂದ್ರೆ, ಈಗಲೂ ಕೂಡ ಹೆಬ್ಬಾ ಪಟೇಲ್ ನೋಡಿದ ಪ್ರತಿಯೊಬ್ಬರೂ ‘ಶಿವರುದ್ರೇಗೌಡರ ಮಗಳು’ ಅಂತಾನೇ ಕರೆಯುತ್ತಾರೆ. ಯಾಕಂದ್ರೆ, ‘ಅಧ್ಯಕ್ಷ’ ಸಿನಿಮಾದ ನಾಯಕಿ ಹೆಬ್ಬಾ ಪಟೇಲ್ ಇವತ್ತಿಗೂ ಕನ್ನಡಿಗರ ಮನದಲ್ಲಿ ಹಾಗೇ ಅಚ್ಚಳಿಯದೆ ಉಳಿದುಬಿಟ್ಟಿದ್ದಾರೆ. ಇಷ್ಟು ದಿನ ತೆಲುಗು ಚಿತ್ರರಂಗದಲ್ಲೇ ಇದ್ರೂ ಕೂಡ ಸೋಷಿಯಲ್ ಮೀಡಿಯಾದಲ್ಲಿ ಮಾತ್ರ ಸಖತ್ ಹಲ್​ಚಲ್ ಕ್ರಿಯೇಟ್ ಮಾಡುತ್ತಿದ್ದರು. ಕಲರ್​ಫುಲ್ ಡ್ರೆಸ್​​ಗಳಲ್ಲಿ ಮನಮೋಹಕ ಭಂಗಿಗಳಲ್ಲಿ ಪೋಸು ಕೊಟ್ಟು ಮಾದಕ ಮೈಮಾಟ ತೋರಿಸಿ ಪಡ್ಡೆಹೈಕಳ ನಿದ್ದೆ ಕೆಡಿಸುತ್ತಿದ್ದರು. ಇತ್ತೀಚೆಗಷ್ಟೇ  ಓಪನ್ ಹೇರು ಬಿಟ್ಕೊಂಡು ಲೇಟೆಸ್ಟ್ ಫೋಟೋಶೂಟ್​ ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದರು. ಹೆಬ್ಬಾ ಅವರ ಫೋಟೋಗಳು ಸಖತ್ ಟ್ರೆಂಡ್ ಆಗಿದ್ವು. ಗ್ಲಾಮರ್ ಜೊತೆಗೆ ಹಾಟ್ ಟಚ್​ ಕೊಟ್ಟು ಹೆಬ್ಬಾ ಪಟೇಲ್ ಫೋಟೋಗೆ ಪೋಸ್ ಕೊಟ್ಟಿದ್ದರು.

HEBBBA PATEL (1)

ತೆಲುಗಿನ ‘ಕುಮಾರಿ 21 ಎಫ್’ ಚಿತ್ರದ ಮೂಲಕ ಹೆಬ್ಬಾ ಪಟೇಲ್ ಜನಮನ್ನಣೆ ಗಳಿಸಿದ್ದಾರೆ. ಈ ಚಿತ್ರದ ಮೂಲಕ ಬೋಲ್ಡ್ ನಟಿಯಾಗಿ ಫೇಮಸ್ ಆಗಿದ್ದಾರೆ. ಕನ್ನಡ, ತೆಲುಗು ಜೊತೆಗೆ ತಮಿಳು ಭಾಷೆಯ ಸಿನಿಮಾಗಳಲ್ಲೂ ನಟಿಸಿದ್ದಾರೆ. ನಟನೆಯಲ್ಲಿ ಎಷ್ಟು ಆಕ್ಟಿವ್ ಆಗಿದ್ದಾರೋ ಅಷ್ಟೇ ಸೋಶಿಯಲ್ ಮೀಡಿಯಾದಲ್ಲೂ ಆಕ್ಟಿವ್ ಆಗಿದ್ದಾರೆ. ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಅದ್ಭುತವಾದ ಸುಂದರವಾದ ಫೋಟೋಗಳನ್ನು ಪೋಸ್ಟ್ ಮಾಡಿ ಹುಡುಗರ ಹೃದಯ ಕದ್ದಿದ್ದಾರೆ. ಇನ್​ಸ್ಟಾದಲ್ಲಿ ಹೆಬ್ಬಾ ಪಟೇಲ್ ಅಪ್​​ಲೋಡ್ ಮಾಡ್ತಿರೋ ಹಾಟ್ ಹಾಟ್ ಫೋಟೋಸ್ ನೋಡಿದ ನೆಟ್ಟಿಗರು, ನೀವು ಸಿಕ್ಕಾಪಟ್ಟೆ ಹಾಟ್​.. ನಿಜವಾಗ್ಲೂ ನಾವು ಮೆಂಟ್ಲ್​​ ಆಗಿಬಿಡ್ತೀವಿ ಅಂತೆಲ್ಲಾ ಕಮೆಂಟ್​ ಮಾಡ್ತಿದ್ದಾರೆ. ಅಸಲಿಗೆ ಹೆಬ್ಬಾ ಪಟೇಲ್ ಕನ್ನಡ ಮೂಲದವರು. ಕನ್ನಡದ ಮುಸ್ಲಿಂ ಕುಟುಂಬದಲ್ಲಿ ಜನಿಸಿದ್ದಾರೆ. ಇವರ ಹೆಸರು ನೋಡಿ ಗುಜರಾತಿ ಮೂಲದ ನಟಿ ಅಂತಾನೇ ಎಲ್ರೂ ತಿಳಿದುಕೊಂಡಿದ್ದರು. ಆದ್ರೆ, ಕನ್ನಡ ಮೂಲದವರಾದರೂ, ಬೆಳೆದಿದ್ದೆಲ್ಲ ಮುಂಬೈನಲ್ಲೇ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ