ತಮಿಳು ಚಿತ್ರರಂಗದ ಲೇಡಿ ಸೂಪರ್​ಸ್ಟಾರ್ ನಯನತಾರಾ ಸಖತ್ ಡಿಮ್ಯಾಂಡ್​ನಲ್ಲಿರೋ ನಟಿ. ದಕ್ಷಿಣ ಭಾರತದ ಚಿತ್ರರಂಗದಲ್ಲೇ ನಂಬರ್ ಒನ್​​ ನಟಿ ಅಂತಾ ಹೇಳಿದ್ರೂ ತಪ್ಪಾಗ್ಲಿಕ್ಕಿಲ್ಲ. ಗಜನಿ ಸಿನಿಮಾ ಮೂಲಕ ಸಿನಿಲೈಫ್​ಗೆ ಎಂಟ್ರಿ ಕೊಟ್ಟ ನಯನತಾರಾ ಬ್ಯೂಟಿಗೆ ಫಿದಾ ಆಗದೇ ಇರೋರೇ ಇಲ್ಲ.

NAYANATHARA

ಎಂಥವರನ್ನೂ ಸೌಂದರ್ಯದಿಂದಲೇ ಸುಟ್ಟುಹಾಕುವಂತಹ ಹೊಳೆಯುವ ಕಣ್ಣು, ಆ ಕಣ್ಣುಗಳಿಗೆ ಮತ್ತಷ್ಟು ಮೆರಗು ನೀಡುವ ರೆಪ್ಪೆಗಳು, ದಪ್ಪನೆಯ ಹುಬ್ಬು, ದೃಷ್ಟಿ ಬೊಟ್ಟು ಇಟ್ಟಂತಿರುವ ತುಟಿಯ ಮೇಲಿನ ಆ ಕಪ್ಪು ಮಚ್ಚೆ, ಒಂದೇ ಮಾತಲ್ಲಿ ಹೇಳಬೇಕು ಅಂದ್ರೆ ನಟಿ ನಯನತಾರಾ ಸೌಂದರ್ಯದ ಖನಿನೇ ಸರಿ.

NAYANATARA (7)

ಆದ್ರೆ, ನಿರ್ದೇಶಕ, ನಿರ್ಮಾಪಕರೂ ಆಗಿರುವ ವಿಘ್ನೇಶ್ ಶಿವನ್​ ಅವರನ್ನು ಮದುವೆ ಆದ ಬಳಿಕ ಯಾಕೋ ಸಂಕಷ್ಟದ ಮೇಲೆ ಸಂಕಷ್ಟ ಶುರುವಾಗ್ತಿದೆ. ನಟ ಧನುಷ್ ಸಲ್ಲಿಸಿದ್ದ ಕೇಸ್ ಕ್ಲಿಯರ್ ಆಗುವ ಮುನ್ನವೇ ಈಗ ಮತ್ತೊಂದು ಕೇಸ್​​​ ಎದುರಾಗಿದೆ.

NAYANATARA (6)

2022ರಲ್ಲಿ ನಟಿ ನಯನತಾರಾ – ವಿಘ್ನೇಶ್​​ ಮದುವೆ ನಡೆದಿತ್ತು. ಆ ಮದುವೆಯ ವಿಡಿಯೋವನ್ನು 2 ವರ್ಷಗಳ ಬಳಿಕ ನೆಟ್​ಫ್ಲಿಕ್ಸ್​​ನಲ್ಲಿ ರಿಲೀಸ್ ಮಾಡಿದ್ದರು. ಅದು ಕೇವಲ ಮದುವೆಯ ವಿಡಿಯೋ ಆಗಿದ್ದಲ್ಲದೇ ‘ನಯನತಾರಾ : ಬಿಯಾಂಡ್ ದಿ ಫೇರಿ ಟೇಲ್​’ ಎಂಬ ಟೈಟಲ್​​ನಲ್ಲಿದ್ದ ಡಾಕ್ಯುಮೆಂಟರಿ ಆಗಿತ್ತು. ಈ ಸಾಕ್ಷ್ಯಚಿತ್ರದಲ್ಲಿ ನಯನತಾರಾರ ಲವ್ ಸ್ಟೋರಿ, ಲೈಫ್ ಸ್ಟೋರಿಗಳನ್ನೂ ಎಳೆ ಎಳೆಯಾಗಿ ಬಿಚ್ಚಿಡಲಾಗಿತ್ತು.

NAYANATARA (1)

ಇದೇ ಡಾಕ್ಯುಮೆಂಟರಿಗೆ 2005ರಲ್ಲಿ ತೆರೆಕಂಡು ಬ್ಲಾಕ್​ಬಸ್ಟರ್​ ಆಗಿದ್ದ ಚಂದ್ರಮುಖಿ ಸಿನಿಮಾದ ಹಾಡಿನ ತುಣುಕನ್ನು ಬಳಸಲಾಗಿದೆ. ಅಸಲಿಗೆ ನಯನತಾರಾ ಅವರ ಡಾಕ್ಯುಮೆಂಟರಿಯಲ್ಲಿ ನಯನತಾರಾ ನಟಿಸಿರುವ ಹಲವು ಸಿನಿಮಾಗಳ ಸಣ್ಣ-ಸಣ್ಣ ದೃಶ್ಯಗಳನ್ನು ಬಳಸಿಕೊಳ್ಳಲಾಗಿತ್ತು, ಅವುಗಳಲ್ಲಿ ‘ಚಂದ್ರಮುಖಿ’ ಸಹ ಒಂದು. ರಜನೀಕಾಂತ್ ನಟಿಸಿದ್ದ ‘ಚಂದ್ರಮುಖಿ’ ಸಿನಿಮಾದಲ್ಲಿ ನಯನತಾರಾ ನಾಯಕಿಯಾಗಿ ನಟಿಸಿದ್ದರು. ಕನ್ನಡದ ‘ಆಪ್ತಮಿತ್ರ’ ಸಿನಿಮಾದ ರೀಮೇಕ್ ಇದಾಗಿದ್ದು, ಕನ್ನಡದಲ್ಲಿ ನಟಿ ಪ್ರೇಮಾ ನಿರ್ವಹಿಸಿದ್ದ ಪಾತ್ರವನ್ನು ತಮಿಳಿನಲ್ಲಿ ನಯನತಾರಾ ನಿರ್ವಹಣೆ ಮಾಡಿದ್ದರು.

NAYANATARA (2)

ಈ ಸಿನಿಮಾದ ಕೆಲವು ದೃಶ್ಯಗಳನ್ನು ನಯನತಾರಾ ತಮ್ಮ ಡಾಕ್ಯುಮೆಂಟರಿಯಲ್ಲಿ ಬಳಸಿಕೊಂಡಿದ್ದರು. ಇದೀಗ ‘ಚಂದ್ರಮುಖಿ’ ಸಿನಿಮಾದ ನಿರ್ಮಾಣ ಸಂಸ್ಥೆಯಾಗಿರುವ ಶಿವಾಜಿ ಎಂಟರ್ಟೈನ್ಮೆಂಟ್, ನಯನತಾರಾ ವಿರುದ್ಧ ದೂರು ದಾಖಲಿಸಿದ್ದು, ತಮ್ಮ ಅನುಮತಿ ಇಲ್ಲದೆ ತಾವು ಹಕ್ಕು ಹೊಂದಿರುವ ಸಿನಿಮಾದ ದೃಶ್ಯಗಳನ್ನು ನಯನತಾರಾ ಬಳಸಿಕೊಂಡಿದ್ದಾರೆ ಎಂದು ಆರೋಪಿಸಿದೆ.  ಹೀಗಾಗಿ ಚಂದ್ರಮುಖಿ ಸಿನಿಮಾದ ನಿರ್ಮಾಪಕರು, ನಟಿ ನಯನತಾರಾ ಮತ್ತು ನೆಟ್​​ಫ್ಲಿಕ್ಸ್ ಇಬ್ಬರಿಗೂ ಲೀಗಲ್ ನೋಟಿಸ್ ಕಳುಹಿಸಿ, 5 ಕೋಟಿ ರೂಪಾಯಿ ಪರಿಹಾರ ಮೊತ್ತವನ್ನು ನೀಡುವಂತೆ ಆಗ್ರಹಿಸಿದ್ದಾರೆ.

NAYANATARA (3)

ವಿಶೇಷವೆಂದರೆ ನಯನತಾರಾ ಅವರ ಡಾಕ್ಯುಮೆಂಟರಿ ಬಿಡುಗಡೆ ಆದಾಗ, ಥ್ಯಾಂಕ್ಸ್​ ನೋಟ್​ನಲ್ಲಿ ‘ಚಂದ್ರಮುಖಿ’ ಸಿನಿಮಾದ ನಿರ್ಮಾಪಕರಿಗೆ ನಯನತಾರಾ ಧನ್ಯವಾದ ಹೇಳಿದ್ದರು. ದೃಶ್ಯಗಳನ್ನು ಬಳಸಿಕೊಳ್ಳಲು ಅನುಮತಿ ನೀಡಿದ್ದಕ್ಕೆ ಧನ್ಯವಾದಗಳನ್ನು ಅರ್ಪಿಸಿದ್ದರು. ಆದರೆ, ಡಾಕ್ಯುಮೆಂಟರಿ ಬಿಡುಗಡೆ ಆದ ತಿಂಗಳುಗಳ ಬಳಿಕ ಇದೀಗ ನಯನತಾರಾಗೆ ಅದೇ ನಿರ್ಮಾಪಕರು ನೊಟೀಸ್ ನೀಡಿರೋದು ಅಚ್ಚರಿ ಮೂಡಿಸಿದೆ.

NAYANATARA (5)

ಇದಕ್ಕೂ ಮುನ್ನ ತಮ್ಮ ಡಾಕ್ಯುಮೆಂಟರಿಗೆ ಧನುಶ್ ನಿರ್ಮಾಣದ ‘ನಾನು ರೌಡಿ ದಾನ್’ ಚಿತ್ರದ ಕ್ಲಿಪ್ ಒಂದನ್ನು ಬಳಸಿಕೊಳ್ಳಲಾಗಿತ್ತು. ಆದ್ರೆ, ಕ್ಲಿಪ್ ಬಳಸಿಕೊಳ್ಳಲು ಧನುಶ್ ಅನುಮತಿ ನೀಡಿರಲಿಲ್ಲ. ಇದರಿಂದ ಸಿಟ್ಟಾದ ನಯನತಾರಾ, ಧನುಶ್ ಒಬ್ಬ ಗೋಮುಖ ವ್ಯಾಘ್ರ ಎಂಬರ್ಥ ನೀಡುವ ಪತ್ರವನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಮಾತ್ರವಲ್ಲದೆ ಧನುಶ್ ಕುರಿತು ಕೆಲವು ನೆಗೆಟಿವ್​ ಅಂಶಗಳನ್ನು ಹಂಚಿಕೊಂಡಿದ್ದರು.

NAYANATARA (4)

ಇದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಆದ್ರೆ ನಯನತಾರಾ ಆರೋಪಕ್ಕೆ ಧನುಷ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ಸಂಬಂಧ ನ್ಯಾಯಾಲಯದಲ್ಲಿ ಕೇಸ್​ ವಿಚಾರಣೆ ನಡೆಯುತ್ತಿದೆ. ಇದೀಗ ಮತ್ತೊಬ್ಬ ನಿರ್ಮಾಪಕ ಲೀಗಲ್​​​ ವಾರ್ ಶುರು ಮಾಡಿದ್ದು, ಲೇಡಿ ಸೂಪರ್​ಸ್ಟಾರ್​​ ನಯನತಾರಾಗೆ ಕಂಟಕ ಕಟ್ಟಿಟ್ಟಬುತ್ತಿ ಎಂದು ಹೇಳಲಾಗ್ತಿದೆ.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ