- ರಾಘವೇಂದ್ರ ಅಡಿಗ ಎಚ್ಚೆನ್.

ಚಂದನವನದಲ್ಲಿ ಮತ್ತೊಂದು ಮಹತ್ವಾಕಾಂಕ್ಷೆಯ (ಪಿರಿಯಾಡಿಕ್) ನಿಯತಕಾಲಿಕ  ಕಥಾವಸ್ತುವಿನ ಚಿತ್ರ ತಯಾರಿಕೆಗೆ ತಂಡ ಸಜ್ಜಾಗಿದೆಯಂತೆ. ಬೆಳ್ಳಿ ಪರದೆಯ ಮೇಲೆ  ಚಂದ್ರ ಚಕೋರಿ ಸೇರಿದಂತೆ ಹಲವು ಚಿತ್ರಗಳಲ್ಲಿ ವಿಭಿನ್ನ ಪಾತ್ರಗಳ ಮೂಲಕ ಪ್ರೇಕ್ಷಕರ ಮನಸನ್ನ ಗೆದ್ದು , ರೋರಿಂಗ್ ಸ್ಟಾರ್ ಆಗಿ  ಉಗ್ರಂ , ಮಫ್ತಿ , ಭರಾಟೆ , ಬಘೀರಾ ಚಿತ್ರದಲ್ಲಿ ಮಿಂಚಿ ಸದ್ಯ  ಪರಾಕ್ ಚಿತ್ರದಲ್ಲಿ ಬ್ಯುಸಿ ಆಗಿರುವ ನಟ ಶ್ರೀಮುರಳಿ. ಈ ಬಾರಿ ಐತಿಹಾಸಿಕ ಚಿತ್ರದ ಬಗ್ಗೆ ಗಮನಹರಿಸಿದ್ದಾರಂತೆ. ಸರಿಸುಮಾರು 500 ವರ್ಷದ ಹಳೆಯ ಕಥೆಯನ್ನು

IMG-20250926-WA0006

ಒಳಗೊಂಡಿರುವಂತಹ ಚಿತ್ರದಲ್ಲಿ ಅಭಿನಯಿಸಲು ನಿರ್ಧರಿಸಿ , ಸುಧೀರ್ಘ ಮಾತುಕತೆ  ನಡೆದಿದೆ ಎಂಬ ಮಾಹಿತಿ ಹೊರಬಂದಿದೆ. ಇದೊಂದು ಬಾರಿ ಬಜೆಟಿನ ಸಿನಿಮಾವಾಗಿದ್ದು , ಯುವ ನಿರ್ದೇಶಕ  ಪುನೀತ್ ರುದ್ರನಾಗ್ ಸಾರಥ್ಯ ವಹಿಸಿಕೊಂಡಿದ್ದಾರೆ. ಚಿತ್ರವನ್ನು SURAM ಮೂವೀಸ್ ಮೂಲಕ ನಿರ್ಮಾಪಕ ಜಯರಾಮ್ ದೇವಸಮುದ್ರ ದೊಡ್ಡ ಮಟ್ಟದಲ್ಲಿ ನಿರ್ಮಾಣಕ್ಕೆ ಮುಂದಾಗಿದ್ದಾರಂತೆ. ಈಗಾಗಲೇ ಈ ಕಥೆಯ ವಿಚಾರವಾಗಿ ಬಹಳಷ್ಟು ಕೆಲಸಗಳು ಆರಂಭಗೊಂಡಿದ್ದು , ಒಂದು ಕಾಲಘಟ್ಟದಲ್ಲಿ ನಡೆಯುವ ಕಥಾ ವಸ್ತುವಿನ ಬಗ್ಗೆ  ಪೂರ್ವ ತಯಾರಿ ನಡೆಸುತ್ತಿದ್ದಾರಂತೆ.

IMG-20250926-WA0017

ನಿರ್ದೇಶಕ ಪುನೀತ್  ರುದ್ರನಾಗ್ ಬಹಳ ವರ್ಷಗಳಿಂದ ನಟ ಶ್ರೀ ಮುರುಳಿಯ ಜೊತೆ ಸಿನಿಮಾ ಒಡನಾಟ ಇಟ್ಟುಕೊಂಡಿದ್ದಾರೆ. ಹಾಗೆಯೇ ಪುನೀತ್  ಕೆಜಿಫ್ ಚಾಪ್ಟರ್ 1 ,  ಎಕ್ಕ , ವೀರ ಚಂದ್ರಹಾಸ , ಸಿಂಹ ರೂಪಿಣಿ , ಶಿವ 143 ಚಿತ್ರದಲ್ಲಿ ಅಭಿನಯಿಸಿ  ನಟನ ಸಾಮರ್ಥ್ಯವನ್ನು ತೋರಿಸಿದ್ದಾರೆ. ನಟ ಯುವರಾಜ್ ಕುಮಾರ್ ಅಭಿನಯದ ಯುವ ರಣಧೀರವ ಕಂಠೀರವ ಚಿತ್ರದ  ನಿರ್ದೇಶನದ ಹೊಣೆಯನ್ನ ಹೊತ್ತಿಕೊಂಡಿದ್ದಾರೆ. ಪುನೀತ್ ನಿರಂತರ ಕಥೆಗಳ ಹುಡುಕಾಟದಲ್ಲಿ ಸಾಗಿದ್ದು , ಶ್ರೀಮುರಳಿಗಾಗಿ 500 ವರ್ಷದ ಹಳೆಯ ಮಹತ್ವಾಕಾಂಕ್ಷೆಯ ಕಥೆಯನ್ನ ಆಯ್ಕೆ ಮಾಡಿಕೊಂಡು ಒಂದಷ್ಟು ಪೂರ್ವ ತಯಾರಿ ಕೆಲಸವನ್ನು ಮಾಡ್ತಾ ಬಂದಿದ್ದಾರೆ. ಇದಕ್ಕಾಗಿ ಒಂದು ಉತ್ತಮ ತಂಡವನ್ನ ಆಯ್ಕೆ ಮಾಡಿ ಚಿತ್ರಿಕರಣಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರಂತೆ.  ಮೈಸೂರಿನ ಸಂಕೇತ್ ಈ ಚಿತ್ರಕ್ಕೆ

IMG-20250926-WA0009

ಛಾಯಾಗ್ರಹಕರಾಗಿ ಕೆಲಸ ಮಾಡಲಿದ್ದು , ಸಂಕಲನ ವಿಜಯ್ ರಾಜ್ ನಿಭಾಯಿಸಲಿದ್ದು,  ಕಲಾ ನಿರ್ದೇಶನದಲ್ಲಿ ಅಮರ್ ಸಾರಥ್ಯದಲ್ಲಿ ಭರ್ಜರಿ ಸೆಟ್ ಗಳು ನಿರ್ಮಾಣವಾಗಲಿದ್ದು, ಸಲಾರ್ ಚಿತ್ರಕ್ಕೆ ವಿ.ಎಫ್.ಎಕ್ಸ್  ಮಾಡಿರುವ ನಿರ್ಮಲ್ ಕುಮಾರ್ ಸಾತ್ ಸಿಗಲಿದೆಯಂತೆ. ಸಂಗೀತ ನಿರ್ದೇಶಕರ ಆಯ್ಕೆಯ ಕೆಲಸ ನಡೆಯುತ್ತಿದೆಯಂತೆ. ಇದರ ಜೊತೆ ಉಳಿದ ತಂತ್ರಜ್ಞರು ಹಾಗೂ ಕಲಾವಿದರ ಆಯ್ಕೆಯ ಪ್ರಕ್ರಿಯೆ ಮುಂದುವರೆದಿದ್ದು , ಈಗಾಗಲೇ ಫ್ರೀ ಪ್ರೊಡಕ್ಷನ್ ಕೆಲಸ ನಿರಂತರವಾಗಿ ಸಾಗಿದ್ದು ,  ನವೆಂಬರ್ ನಲ್ಲಿ ಚಿತ್ರದ ಅಧಿಕೃತ ಮಾಹಿತಿ ಹೊರಬರಲಿದೆಯಂತೆ.

IMG-20250926-WA0013

ಇದೊಂದು ಸಾಹಸಮಯ ನಿಯತಕಾಲಿಕ ಚಿತ್ರವಾಗಿದ್ದು ,

ಹಳೆಯ ಅನ್ವೇಷಣೆಯಲ್ಲಿ ರೋಮಾಂಚನ ವೈಭವದ ಕಥಾ ಸಾರಾಂಶ ಒಳಗೊಂಡಿದೆ ಎಂಬ ಮಾಹಿತಿ  ಸಿಕ್ಕಿದ್ದು  ಅದ್ದೂರಿ ದೃಶ್ಯ ವೈಭವದ ಚಿತ್ರ ಇದಾಗಲಿದೆಯಂತೆ. ಇದು ವಿಶೇಷ ರೀತಿಯಲ್ಲಿ ನಿರ್ಮಾಣವಾಗಲಿದ್ದು , ಚಿತ್ರದ ನಾಯಕ  ಶ್ರೀಮುರಳಿ ಜೊತೆ ಯುವ ಪ್ರತಿಭೆ ಪುನೀತ್ ಸಹ  ಕಾರ್ಯ ನಿರ್ವಹಿಸಲಿದ್ದಾರಂತೆ. ಒಟ್ಟಾರೆ ಒಂದೊಂದೇ ಮಾಹಿತಿ ಕುತೂಹಲಕಾರಿಯಾಗಿ ಕೇಳಿ ಬರುತ್ತಿದ್ದು , ಈ ಐತಿಹಾಸಿಕ ಕಥಾ ವಸ್ತುವಿನ ಬಗ್ಗೆ ಹೆಚ್ಚಿನ ಮಾಹಿತಿ ಸದ್ಯದಲ್ಲಿ  ಹೊರಬರಲಿದೆ ಎನ್ನಬಹುದು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ