ಶರತ್ ಚಂದ್ರ
ಒಂದೊಂದು ಕಾಲವಿತ್ತು ನ್ಯಾಷನಲ್ ಅವಾರ್ಡ್ ಸಿಗಬೇಕೆಂದರೆ ಒಂದಷ್ಟು ಮಾನದಂಡವಿತ್ತು. ಹೆಚ್ಚಿನ ಕಲಾತ್ಮಕ ಚಿತ್ರಗಳಿಗೆ ಮಾತ್ರ ನ್ಯಾಷನಲ್ ಅವಾರ್ಡ್ ದೊರಕುತ್ತಿತ್ತು ಈ ಒಂದು ವಿಷಯಬಲ್ಲ ಅನೇಕ ಕಮರ್ಷಿಯಲ್ ಚಿತ್ರದ ನಿರ್ಮಾಪಕರು ತಮ್ಮ ಚಿತ್ರಗಳನ್ನು ಈ ಸ್ಪರ್ಧೆ ಗೆ ಕಳುಹಿಸುತ್ತಿರಲಿಲ್ಲ.
ಅದರಲ್ಲೂ ಗಿರೀಶ್ ಕಾಸರವಳ್ಳಿ, ಆಡೂರು ಗೋಪಾಲಕೃಷ್ಣನ್ ರಂತಹ ನಿರ್ದೇಶಕರು ನಿರ್ದೇಶಿಸಿದ ಚಿತ್ರಗಳು ಸ್ಪರ್ಧೆಯಲ್ಲಿದ್ದರೆ, ಎಷ್ಟೋ ನಿರ್ಮಾಪಕರು ಬಹುಶಃ ಈ ಸ್ಪರ್ಧೆ ನಮ್ಮಂತವರಿಗಲ್ಲ ಅಂತ ಅಪ್ಲೈ ಕೂಡ ಮಾಡುತ್ತಿರಲಿಲ್ಲ.
ಆದರೆ ಇತ್ತೀಚಿನ ಕೆಲವು ವರ್ಷಗಳಲ್ಲಿ ಹೆಚ್ಚಿನ ನ್ಯಾಷನಲ್ ಅವಾರ್ಡ್ ಗಳನ್ನು ಪಡೆಯುತ್ತಿರುವುದು ಕಮರ್ಷಿಯಲ್ ಚಿತ್ರಗಳೇ. ಯಾವಾಗ ಅಜಯ್ ದೇವಗನ್, ಅಲ್ಲು ಅರ್ಜುನ್, ಧನುಶ್ ಅಂತ ಕಮರ್ಷಿಯಲ್ ಚಿತ್ರದ ನಾಯಕರು ಅವಾರ್ಡ್ ಪಡೆಯಲು ಆರಂಭಿಸಿದರೋ, ನ್ಯಾಷನಲ್ ಅವಾರ್ಡ್ ಕೂಡ ಫಿಲಂ ಫೇರ್, ಸ್ಕ್ರೀನ್ ಹಾಗು ಇನ್ನಿತರ ಖಾಸಗಿ ಸಂಸ್ಥೆಗಳು ನಡೆಸುವ ಅವಾರ್ಡ್ ತರ ಬದಲಾಯಿತು.
ಜೂರಿಗಳು ಕೂಡ ವಿನ್ನರ್ ಗಳನ್ನು ಖಾಸಗಿ ಅವಾರ್ಡ್ ಮಾದರಿಯಲ್ಲಿ ಆಯ್ಕೆ ಮಾಡುತ್ತಿದ್ದಾರೆ.
ಅದಕ್ಕೆ ಈ ಹಿಂದೆ ಪುಷ್ಪ ಚಿತ್ರದ ಅಭಿನಯಕ್ಕೆ ಅವಾರ್ಡ್ ಪಡೆದ ಅಲ್ಲು ಅರ್ಜುನ್ ಹಾಗೂ ನಿನ್ನೆ ಅನೌನ್ಸ್ ಆದ ಅತ್ಯುತ್ತಮ ನಟ ಪ್ರಶಸ್ತಿ ಪಡೆದ ಶಾರುಖ್ ಖಾನ್ ಅಂತವರೇ ಸಾಕ್ಷಿ.
ಅಭಿನಯ ಕಮರ್ಷಿಯಲ್ ಚಿತ್ರ ದಲ್ಲಿ ನಟಿಸಿದರೂ ಅಭಿನಯವೇ ಕಲಾತ್ಮಕ ಚಿತ್ರಗಳಲ್ಲಿ ಅಭಿನಯಿಸಿದರೂ ಅಭಿನಯವೇ. ಆದರೆ ನ್ಯಾಷನಲ್ ಅವಾರ್ಡ್ ನಡೆದು ಬಂದ ಹಾದಿಯನ್ನು ಗಮನಿಸಿದರೆ, ಆ ಪ್ರಶಸ್ತಿಗೆ ಅದರದೇ ಆದ ಸ್ಥಾನಮಾನ ಗೌರವ ಇದೆ.
ಎನ್ ಎಸ್ ಡಿ ಯಲ್ಲಿ ಅಭಿನಯ ಕಲಿತು ರಂಗಭೂಮಿಯಲ್ಲಿ ಕೂಡ ಅಭಿನಯಿಸಿ ಬಹುತೇಕ ಕಮರ್ಷಿಯಲ್ ಚಿತ್ರಗಳಲ್ಲೇ ಅಭಿನಯಿಸಿದಂತಹ ಶಾರುಖ್ ಖಾನ್ ಈ ಹಿಂದೆ ಒಂದಷ್ಟು ವಿಭಿನ್ನ ಸಬ್ಜೆಕ್ಟ್ ಇರುವ ಕಲಾತ್ಮಕ ಶೈಲಿಯ ಚಿತ್ರಗಳಲ್ಲಿ ಅಭಿನಯಿಸಿದ್ದರು. ಸ್ವದೇಶ್, ಅಶೋಕ, ವೀರ್ ಝಾರ ಹೀಗೆ ಒಂದಷ್ಟು ವಿಭಿನ್ನ ಚಿತ್ರಗಳಲ್ಲಿ ಅಭಿನಯಿಸಿದರು ಕೂಡ ನ್ಯಾಷನಲ್ ಅವಾರ್ಡ್ ಸಿಕ್ಕಿರಲಿಲ್ಲ. ಬಹುಶಃ ಶಾರುಖ್ ಖಾನ್ ಅವಾರ್ಡ್ ಸಿಗುವಂತಹ ಪಾತ್ರ ಇನ್ನೂ ಮಾಡಿಲ್ಲ.
ಎರಡು ಶೇಡ್ ಗಳಲ್ಲಿ ಶಾರುಖ್ ಖಾನ್ ‘ಜ ವಾನ್’ ಚಿತ್ರದಲ್ಲಿ ಉತ್ತಮವಾಗಿ ನಟಿಸಿದ್ದರು ಕೂಡ ನ್ಯಾಷನಲ್ ಅವಾರ್ಡ್ ನೀಡುವಂತಹ ಪರ್ಫಾರ್ಮೆನ್ಸ್ ಆಗಿರಲಿಲ್ಲ.
ಒಟ್ಟಿನಲ್ಲಿ ಇಲ್ಲಿಯತನಕ ಸಾಕಷ್ಟು ಅವಾರ್ಡ್ ಗಳನ್ನು ಪಡೆದಿರುವ ಶಾರುಖ್ ಖಾನ್ ಶೋಕೇಸ್ ನಲ್ಲಿ ನ್ಯಾಷನಲ್ ಅವಾರ್ಡ್ ಒಂದು ಬಾಕಿ ಇತ್ತು. ತೀರ್ಪುಗಾರರ ಡಿಸಿಷನ್ ನ್ನು ಗೌರವಿಸಿ, ನ್ಯಾಷನಲ್ ಅವಾರ್ಡ್ ವಿನ್ನರ್ ಶಾರುಖ್ ಖಾನ್ ಅಭಿನಂದನೆ ಸಲ್ಲಿಸೋಣ.