- ರಾಘವೇಂದ್ರ ಅಡಿಗ ಎಚ್ಚೆನ್.

ಚಿತ್ರ: ಎಲ್ಟು ಮುತ್ತಾ

ನಿರ್ಮಾಣ: HIGH5 ಸ್ಟುಡಿಯೋಸ್ ಬ್ಯಾನರ್, ಸತ್ಯ ಎಸ್ ಶ್ರೀನಿವಾಸನ್

ನಿರ್ದೇಶನ: ರಾ. ಸೂರ್ಯ,

ತಾರಾಗಣ: ರಾ. ಸೂರ್ಯ, ಶೌರ್ಯ ಪ್ರತಾಪ್, ಪ್ರಿಯಾಂಕ ಮಳಲಿ, ಯಮುನಾ ಶ್ರೀನಿಧಿ, ನವೀನ್‍ ಡಿ. ಪಡೀಲ್‍, ಕಾಕ್ರೋಚ್‍ ಸುಧಿ ಮುಂತಾದವರು

ರೇಟಿಂಗ್: 3/5

ಕನ್ನಡ ಚಿತ್ರರಂಗದಲ್ಲಿ ಹೊಸಬರ ಕಂಟೆಂಟ್ ಸಿನಿಮಾಗಳು ಬರುತ್ತಿವೆ. ಈ ಸಾಲಿನಲ್ಲೀಗ 'ಎಲ್ಟು ಮುತ್ತಾ' ಗಮನ ಸೆಳೆದಿದೆ. ರಾ.ಸೂರ್ಯ ಬರೆದು ನಿರ್ದೇಶಿಸಿರುವ ಚಿತ್ರದಲ್ಲಿ ರಾ.ಸೂರ್ಯ - ಶೌರ್ಯ ಪ್ರತಾಪ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು ಚಿತ್ರ ಈಗ ತೆರೆ ಕಂಡಿದೆ. ಚಿತ್ರ ಹೇಗಿದೆ? ಏನು ಹೇಳುತ್ತದೆ ತಿಳಿಯಲು ಇಲ್ಲಿ ಓದಿ.

ಸಾವಿನ ಸಂದರ್ಭ ಡೋಲು ಹೊಡೆಯುವವರ ಸುತ್ತಲಿನ ಕಥೆ. ಎಲ್ಟು ಮುತ್ತಾ ಅಂದರೆ 2 ಪಾತ್ರಗಳು. ಎಲ್ಟು ಹೂವಿನ ವ್ಯಾಪಾರ ನಡೆಸುವವನಾದರೆ ಮುತ್ತ ಸಾವಿಪ ಮನೆಯಲ್ಲಿ ಡೋಲು ಬಾರಿಸುವ ವೃತ್ತಿ ಮಾಡುವವ.ಇಬ್ಬರೂ ಬಾಲ್ಯ ಸ್ನೇಹಿತರು.ಆದರೆ ಬೆಳೆದು ದೊಡ್ಡವರಾದ ನಂತರ ಇಬ್ಬರ ನಡುವೆ ಘರ್ಷಣೆಗಳು ಪ್ರಾರಂಭ ಆಗುತ್ತದೆ. ನವಿಲು ಹಾಗೂ ಸರ್ಪದ ನಡುವೆ ನಡೆಯುವ ಸಂಘರ್ಷದ ಕಥೆಯ ಎಳೆಯನ್ನು ಇಲ್ಲಿ ತರಲಾಗಿದೆ. ಇಬ್ಬರು ಮುಗ್ಧ ಯುವಕರ ನಡುವೆ ಒಂದು ಶಕ್ತಿಯುತ ಶಂಖ ಪ್ರವೇಶ ಆದಾಗ ಅವರ ಬದುಕಿನಲ್ಲಿ ಹೇಗೆಲ್ಲಾ ಬದಲಾವಣೆ ಆಗುತ್ತದೆ ಎನ್ನುವುದು ಚಿತ್ರದ ಕಥಾ ಸಾರಾಂಶ.

ನಿರ್ದೇಶಕ ಕಂ ನಾಯಕ ನಟ ರಾ.ಸೂರ್ಯ ಹೊಸ ಜಾನರ್ ಸಿನಿಮಾ ತಯಾರಿಸಿದ್ದಾರೆ ಆದರೆ ಚಿತ್ರಕಥೆ ನಿರೂಪಣೆ ಶೈಲಿ ಇನ್ನೂ ಗಟ್ಟಿಯಾಗಬೇಕಿತ್ತು.ಚಿತ್ರದ ಪ್ರಥಮಾರ್ಧ ನಿಧಾನಗತಿಯಿಂದ ಸಾಗುತ್ತದೆ.. ಸಿನಿಮಾ ದೃಶ್ಯಗಳನ್ನು ಬಿಡಿ ಬಿಡಿಯಾಗಿ ನೋಡಿದಾಗ ಕೆಲವು ಉತ್ತಮವಾಗಿ ಬಂದಿದ್ದರೂ ಒಟ್ಟಾರೆ ಸಿನಿಮಾ ಕಥೆ ಮನಸ್ಸಿಗೆ ತಟ್ಟುವುದಿಲ್ಲ.  ಮುಖ್ಯವಾಗಿ ಇಂದಿನ ಆಧುನಿಕ ಕಾಲಘಟ್ಟದಲ್ಲಿ ಶಂಖದಿಂದ ಪವಾಡ ನಡೆದುಹೋಗುತ್ತದೆ ಎನ್ನುವ ಪುರಾಣ ನಂಬಿಕೆ, ಮೌಢ್ಯದ ಸವಕಲು ಕಥೆಯನ್ನು ಜನರು ಒಪ್ಪಿಕೊಳ್ಳುತ್ತಾರೆಯೆ ಎನ್ನುವುದು ಪ್ರಶ್ನೆ.

ಪಾತ್ರವರ್ಗ ಬಹುತೇಕ ಹೊಸಬರಾದರೂ ಸಿಕ್ಕ ಅವಕಾಶವನ್ನು ಉತ್ತಮವಾಗಿ ಬಳಸಿಕೊಂಡಿದ್ದಾರೆ.

ಇನ್ನು ಪ್ರಸನ್ನ ಕೇಶವ ಸಂಗೀತವೇ ಚಿತ್ರದ ಪವರ್ ಫುಲ್ ಪಾಯಿಂಟ್.ಹಿನ್ನೆಲೆ ಸಂಗೀತಕ್ಕೆ ಮೆಚ್ಚುಗೆ ಸೂಚಿಸಬಹುದು. ಡಿಓಪಿ ಮಿಲ್ಕಿ ಅವರ ಕ್ಯಾಮರಾ ಕೈ ಚಳಕ ಕೊಡಗಿನ ಸಾಮಾನ್ಯ ಹಳ್ಳಿಯ ಸೌಂದರ್ಯವನ್ನು ಚೆನ್ನಾಗಿ ತೋರಿಸಿದೆ. ಒಂದೊಮ್ಮೆ ಹೊಸ ಯುವಕರ ಪ್ರಯತ್ನಕ್ಕೆ ಬೆಂಬಲ ನೀಡಲು ನೀವು ಸಿದ್ದವಾಗಿದ್ದರೆ ಈ ಚಿತ್ರ ವೀಕ್ಷಿಸಬಹುದು.

 

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ