- ರಾಘವೇಂದ್ರ ಅಡಿಗ ಎಚ್ಚೆನ್.
*ಜಾಂಟಿ ಸನ್ ಆಫ್ ಜಯರಾಜ್* ಚಿತ್ರದಲ್ಲಿ ಬರುವ ’ಲೋಕದ ಮೂಲ ಬ್ರಹ್ಮನಂತೆ, ಪ್ರೀತಿಯ ಮೂಲ ಅಮ್ಮನಂತೆ, ಅಮ್ಮ ಕ್ಷಮಿಸು’ ಎನ್ನುವ ಭಾವುಕ ಗೀತೆಯನ್ನು ವಿಕಟಕವಿ ಯೋಗರಾಜಭಟ್ ಮತ್ತು ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷೀ ಬಿಡುಗಡೆ ಮಾಡಿದರು. ಚಿತ್ರರಂಗದಲ್ಲಿ ಎರಡು ದಶಕಗಳ ಕಾಲ ಪ್ರಚಾರ ಕಾರ್ಯದಲ್ಲಿ ಅನುಭವ ಹೊಂದಿರುವ *ಸುಗೂರುಕುಮಾರ್* ಪ್ರಥಮ ಅನುಭವ ಎನ್ನುವಂತೆ ನಿರ್ಮಾಣ ಮಾಡಿದ್ದಾರೆ.
*ಕತೆ, ಸಾಹಿತ್ಯ ಬರೆದು ನಿರ್ದೇಶನ ಮಾಡಿರುವ ಆನಂದರಾಜ್* ಮಾತನಾಡಿ, ಅಮ್ಮನ ಗೀತೆಗೆ ಪಲ್ಲವಿ ಬರೆದು ರಾಗ ಸಂಯೋಜಿಸಲು ವಿಜೇತಮಂಜೇಹ ಅವರಿಗೆ ಕಳುಹಿಸಲಾಯತು. ಅವರು ಟ್ಯೂನ್ ಸಿದ್ದಪಡಿಸಿದ್ದನ್ನು ಕೇಳಿ, ಖಂಡಿತ ಹಿಟ್ ಆಗುತ್ತೆ ಅಂತ ಹೇಳಿದೆ. ರಸ್ತೆ ಇನ್ನಿತರ ಸ್ಥಳಗಳಲ್ಲಿ ತಪ್ಪು ಮಾಡಿದರೆ ತಕ್ಷಣವೆ ಸಾರಿ ಕೇಳುತ್ತೇವೆ. ಆದರೆ ಹೆತ್ತು, ಹೊತ್ತು ಬೆಳೆಸಿದ ಅಮ್ಮನ ಬಳಿ ಕ್ಷಮಿಸು ಅಂತ ಕೇಳೋದಿಲ್ಲ. ನಮ್ಮ ಸಿನಿಮಾ ಮೂಲಕ ಎಲ್ಲಾ ತಾಯಂದರಿಗೂ ಸಾರಿ ಅಂತ ಕೇಳುತ್ತೇವೆ. ಇದು ಸಿನಿಮಾದ ಕ್ಲೈಮಾಕ್ಸ್‌ದಲ್ಲಿ ಬರುತ್ತದೆ. ಆತ ತಾಯಿ ಆಸೆಪಟ್ಟಂತೆ ಸಮಾಜದಲ್ಲಿ ಬದುಕದೆ, ತನ್ನದೆ ಹಾದಿಯಲ್ಲಿ ಸಾಗುತ್ತಾನೆ. ಅದು ಸ್ವಾರ್ಥ, ಹುಡುಗಿ ಇರಬಹುದು. ಕೊನೆಗೆ ಅಮ್ಮನೇ ಸರ್ವಸ್ವ ಎಂದು ತಿಳಿದಾಗ ಹಿನ್ನಲೆಯಲ್ಲಿ ಹಾಡು ಬರುತ್ತದೆ. ಕೆಲವು ಗಾಯಕರಿಗೆ ಅವರದೇ ಆದ ಧ್ವನಿ ಇರುತ್ತದೆ. ನಮ್ಮ ಜೋಗಿ ಪ್ರೇಮ್ ಸರ್ ಒಳಗೆ ತಾಯಿ ಇದ್ದಾಳೆ. ಅದಕ್ಕೆ ಅಮ್ಮನ ಕುರಿತಾಗಿ ಅವರು ಹಾಡಿದ ಗೀತೆಗಳು ಇಂದಿಗೂ ಆಲಿಸುವಂತಗಿದೆ. ಮಾಧ್ಯಮದವರು ಇದನ್ನು ಹೆಚ್ಚು ಜನರಿಗೆ ತಲುಪಿಸುವಂತೆ ಮಾಡಬೇಕೆಂದು ಕೋರಿಕೊಂಡರು.

ಬದುಕಲ್ಲಿ ನಾವು ಏನೇ ತಪ್ಪು ಮಾಡಿದರೂ ಕ್ಷಮಿಸುವಂತಹ ಗುಣ ಇರೋದು ತಾಯಿಗೆ ಮಾತ್ರ. ಇಂತಹ ವಿಷಯವನ್ನು ಹೆಕ್ಕಿಕೊಂಡು ಸಾಹಿತ್ಯ ರಚಿಸಿದ ಆನಂದರಾಜ್, ಸಂಗೀತ ಸಂಯೋಜಕ ಮತ್ತು ಧ್ವನಿ ನೀಡಿದ ಜೋಗಿ ಪ್ರೇಮ್‌ಗೆ ನನ್ನ ಕಡೆಯಿಂದ ವೈಯಕ್ತಿಕ ಅಭಿನಂದನೆಗಳು. ಅಮ್ಮನನ್ನು ಕ್ಷಮಿಸು ಅಂತದ್ದು, ಪ್ರಕೃತಿನೇ ಕ್ಷಮಿಸು ಅಂತದ್ದು. ಇವತ್ತಿನ ಕಾಲಘಟ್ಟದಲ್ಲಿ ಚಿಕ್ಕಪುಟ್ಟ ಸಿನಿಮಾಗಳಿಗೆ ಹರಸಲು ಇಷ್ಟೋಂದು ಜನ ಸೇರಿದ್ದೀರಾ. ನಿಮ್ಮಗಳ ಹಾರೈಕೆ ಇದೇ ರೀತಿ ಎಲ್ಲಾ ಸಿನಿಮಾಗಳ ಮೇಲಿರಲಿ ಎಂಬುದು *ಯೋಗರಾಜಭಟ್* ಖುಷಿಯ ಮಾತಾಗಿತ್ತು.
ನಾಯಕ *ಅಜಿತ್‌ಜಯರಾಜ್* ಹೃದಯತಟ್ಟುವಂತೆ ಮಾತನಾಡುವಾಗ ಕೆಳಗೆ ಆಸೀನರಾಗಿದ್ದ ಅವರ ತಾಯಿಯ ಕಣ್ಣುಗಳು ಒದ್ದೆಯಾಗಿದ್ದವು. ಉಳಿದಂತೆ ನಾಯಕಿ ನಿವಿಷ್ಕಾಪಾಟೀಲ್, ಪೆಟ್ರೋಲ್‌ಪ್ರಸನ್ನ, ಸಂಗೀತ ನಿರ್ದೇಶಕ ವಿಜೇತ್‌ಮಂಜೇಹ ಅನುಭವಗಳನ್ನು ಹಂಚಿಕೊಂಡರು.

ಮಹಿಳಾ ಆಯೋಗದ ಅಧ್ಯಕ್ಷೆ *ಡಾ.ನಾಗಲಕ್ಷೀ* ಹೇಳುವಂತೆ ನಾವು ಎಲ್ಲವನ್ನು ಅಮ್ಮನಿಂದ ಮಾಡಿಸಿಕೊಳ್ತಿವಿ. ಆದರೆ ಥ್ಯಾಂಕ್ಸ್ ಹೇಳೋದನ್ನು ಮರೆಯುತ್ತೇವೆ. ಇಂದಿನ ಗೀತೆ ಮನಮುಟ್ಟುವಂತಿದೆ. ಹಾಡು ಬರೆದ ಆನಂದರಾಜ್‌ರನ್ನು ತಾಯಿಯಾಗಿ ಅಪ್ಪಿಕೊಂಡು ತಂಡಕ್ಕೆ ಶುಭ ಹಾರೈಸಿದರು.
ತಾರಾಗಣದಲ್ಲಿ ರಾಜವರ್ಧನ್, ಶರತ್‌ಲೋಹಿತಾಶ್ವ, ಕಿಶನ್, ಸೋನುಪಾಟೀಲ್, ಸಚ್ಚಿನ್‌ಪುರೋಹಿತ್, ಮೈಕೋನಾಗರಾಜ್ ಮುಂತಾದವರು ಅಭಿನಯಿಸಿದ್ದಾರೆ. ಛಾಯಾಗ್ರಹಣ ಅರ್ಜುನ್ ಆಕೋಟ್, ಹಿನ್ನಲೆ ಶಬ್ದ ಅಲೆಕ್ಸ್ ಅವರದಾಗಿದೆ.





