ಶರತ್ ಚಂದ್ರ
ಇತ್ತೀಚಿನ ಕೆಲವು ವರ್ಷಗಳಲ್ಲಿ ಟೆಲಿವಿಜನ್ ಮತ್ತು ಯೂಟ್ಯೂಬ್ ನಲ್ಲಿ ಒಂದಷ್ಟು ಟಾಕ್ ಶೋಗಳು ಪ್ರಸಾರವಾಗುತ್ತಿದ್ದೂ ಇಂತಹ ಶೋಗಳನ್ನು ನೋಡುವ ಒಂದು ಅಭಿಮಾನಿ ಬಳಗ ಇದೆ.
ಅದರಲ್ಲೂ ಕರಣ್ ಜೋಹರ್ ನಡೆಸಿಕೊಡುತ್ತಿದ್ದ ‘ಕಾಫಿ ವಿಥ್ ಕರಣ್ ‘ ಶೋ ಭಾರತದ ಅತ್ಯಂತ ಜನಪ್ರಿಯ ಶೋ ಆಗಿದ್ದು, ಅನೇಕ ಸೀಸನ್ ಕಂಡ ಅತೀ ಜನಪ್ರಿಯ ಶೋ ಇದಾಗಿತ್ತು.
ಇದು podcast ಯುಗ, ಯೂಟ್ಯೂಬ್ ನಲ್ಲಂತೂ ಹೆಜ್ಜೆ ಹೆಜ್ಜೆಗೂ ಒಂದಷ್ಟು ಎಲ್ಲಾ ಭಾಷೆಗಳಲ್ಲಿ podcast ನಡೆಸಿಕೊಡುವ ಚಾನಲ್ ಗಳು ನಿಮಗೆ ಸಿಗುತ್ತವೆ. ಇಂಥ ಸಂದರ್ಭದಲ್ಲಿ ಅಮೆಜಾನ್ ಪ್ರೈಮ್ ನಲ್ಲಿ ಸಪ್ಟಂಬರ್ ತಿಂಗಳಿನಿಂದ Two Much with Kajol and Twinkle” ಎಂಬ ಟಾಕ್ ಶೋ ಆರಂಭವಾಗಿದೆ.
ಬಾಲಿವುಡ್ ನ ಜನಪ್ರಿಯ ಹೀರೋಯಿನ್ ಗಳಾದ ಹಾಗೂ ಸ್ಟಾರ್ ಪತ್ನಿಯರಾದ ಕಾಜಲ್ ದೇವಗನ್ ಮತ್ತು ಟ್ವಿಂಕಲ್ ಖನ್ನಾ ನಡೆಸುತ್ತಿರುವ ಈ ಕಾರ್ಯಕ್ರಮ ಜನಪ್ರಿಯಗೊಳ್ಳುತ್ತಿದೆ.
ಕಾರ್ಯಕ್ರಮದ ಮುಖ್ಯ ಕಾನ್ಸೆಪ್ಟ್ ಏನೆಂದರೆ ಬಾಲಿವುಡ್ ನಲ್ಲಿ ಜನಪ್ರಿಯವಾಗಿರುವ ಸಿನಿಮಾಗಳ ಜೋಡಿಗಳನ್ನು ಕರೆಸಿ ಒಂದಷ್ಟು ಹರಟೆ ,ತಮಾಷೆ, ಹಳೆಯನೆನಪುಗಳನ್ನು ಕೆದುಕುವ ಟಾಕ್ ಶೋ ಇದಾಗಿದೆ.
ಕಾಜಲ್ ಅಂತೂ ಚಿತ್ರರಂಗದ ಎಲ್ಲಾ ನಾಯಕ ನಾಯಕಿಯರ ಜೊತೆ ಉತ್ತಮ ಬಾಂಧವ್ಯವನ್ನು ಇಟ್ಟುಕೊಂಡು ಬಂದಿರುತ್ತಾರೆ. ಇದು ನಿಜಕ್ಕೂ ಇಲ್ಲಿ ವರ್ಕ್ ಆಗಿದೆ. ಕಾಜಲ್ ಇದ್ದಲ್ಲಿ ಒಂದಷ್ಟು ಫನ್ ಮತ್ತು ಮನೋರಂಜನೆ ಗ್ಯಾರಂಟಿ.
ಈ ಶೋನಲ್ಲಿ ಕಾಜಲ್ ಮಾಡುತ್ತಿರುವುದು ಅದನ್ನೇ. ಟ್ವಿಂಕಲ್ ಖನ್ನಾ ಜೊತೆ ಸೇರಿ ಕಾರ್ಯಕ್ರಮದಲ್ಲಿ ಬರುವ ಗೆಸ್ಟುಗಳ ಕಾಲೆ ಳೆದು ಜೊತೆ ಒಂದಷ್ಟು ಮಸ್ತಿ ಮಾಡುತ್ತಿದ್ದಾರೆ.
ಈ ಕಾರ್ಯಕ್ರಮದ ಮೊದಲನೇ ಎಪಿಸೋಡ್ ನಲ್ಲಿ ಅಂದಾಜ್ ಅಪ್ನಾ ಅಪ್ನಾ ಚಿತ್ರದ ಖಾನ್ ಜೋಡಿಗಳನ್ನು ಕರೆತಂದು ಕಾರ್ಯಕ್ರಮಕ್ಕೆ ಮೆರಗು ಕೊಟ್ಟಿದ್ದಾರೆ. ಅಮೀರ್ ಖಾನ್ ಮತ್ತು ಸಲ್ಮಾನ್ ಖಾನ್ ಈ ಎಪಿಸೋಡಿನಲ್ಲಿ ಒಂದಷ್ಟೇ ಹಳೆಯ ವಿಷಯಗಳನ್ನು ಮೇಲೆಕು ಹಾಕಿದ್ದಾರೆ.
ಈಗಾಗಲೇ ಅಕ್ಷಯ್ ಕುಮಾರ್ ಮತ್ತು ಸೈಫ್ ಅಲಿ ಖಾನ್, ವರುಣ್ ಧವನ್ ಮತ್ತು ಅಲಿಯಾಸ್ ಭಟ್ ಈ ಕಾರ್ಯಕ್ರಮದಲ್ಲಿ ಭಾಗವಹಿಸದ್ದು ಮುಂದಿನ ಎಪಿಸೋಡ್ ಗಳಲ್ಲಿ ಗೋವಿಂದ ಮತ್ತು ಚುಂಕಿ ಪಾಂಡೆ,ಕರಣ್ ಜೋಹಾರ್ ಮತ್ತು ಜಾಹ್ನವಿ ಕಪೂರ್ ಹೀಗೆ ಒಂದಷ್ಟು ಜನಪ್ರಿಯ ಜೋಡಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಟ್ವಿಂಕಲ್ ಖಾನ್ ಸದ್ಯಕ್ಕೆ ನಟನೆಗೆ ಬ್ರೇಕ್ ಕೊಟ್ಟಿದ್ದು ಯಾವುದೇ ಚಿತ್ರಗಳಲ್ಲಿ ನಟಿಸುತ್ತಿಲ್ಲ. ಆದರೆ ಕಾಜಲ್ ಇತ್ತೀಚೆಗೆ ಅನೇಕ ವೆಬ್ ಸೀರಿಸ್ ಮತ್ತು ಒಂದಷ್ಟು ಚಲನಚಿತ್ರಗಳಲ್ಲಿ ನಟಿಸುವುದರ ಮೂಲಕ ಬಿಜಿಯಾಗಿದ್ದರು ಕೂಡ ಈ ಒಂದು ಶೋ ನಡೆಸಿಕೊಡುತ್ತಿದ್ದಾರೆ.
ಟ್ವಿಂಕಲ್ ಖನ್ನ ಕಜೋಲ್ ಗೆ ಅಂತಹ ಕ್ಲೋಸ್ ಫ್ರೆಂಡ್ ಅಲ್ಲದಿದ್ದರೂ ಕೂಡ ಇವರಿಬ್ಬರ ನಡುವಿನ ಹೊಂದಾಣಿಕೆ ಬಗ್ಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ.
ಅಮೆಜಾನ್ ಪ್ರೈಮ್ ನಲ್ಲಿ ಸ್ಟ್ರೀಮ್ ಆಗುತ್ತಿರುವ ಈ ಕಾರ್ಯಕ್ರಮ ಇದೇ ರೀತಿ ಮುಂದುವರೆದರೆ ಕಾಫಿ ವಿತ್ ಕರಣ್ ರೀತಿಯಲ್ಲಿ ಜನಪ್ರಿಯ ಶೋ ಆಗುವುದು ಖಂಡಿತ.