ಹಿಮಾಚಲ ಪ್ರದೇಶದ ಸಣ್ಣ ಚಂಭಾ ನಗರದಿಂದ ಮಾಯಾನಗರಿ ಮುಂಬೈನ ಬಾಲಿವುಡ್‌ಗೆ ಧಾಂಗುಡಿಯಿಟ್ಟು, ಯಾವ ಗಾಡ್‌ಫಾದರ್‌ನ ನೆರವು ಇಲ್ಲದೆ, ಒಬ್ಬ ಯಶಸ್ವೀ ನಟಿಯಾಗಿ ಗುರುತಿಸಲ್ಪಡುವುದು ಖಂಡಿತಾ ಸಣ್ಣ ವಿಷಯವೇನಲ್ಲ. ಹೀಗೆ ಕಂಗನಾ ನಿಧಾನವಾಗಿ ತನ್ನನ್ನು ತಾನು ನಿರೂಪಿಸಿಕೊಳ್ಳುತ್ತಾ ಇಂದು ಈ ಮಟ್ಟ ತಲುಪಿದ್ದಾರೆ. ಇಂದು ಈಕೆ ಸಣ್ಣ ಊರುಗಳಿಂದ ಬರುವ ಹುಡುಗಿಯರಿಗೆ ಆದರ್ಶಪ್ರಾಯರಾಗಿದ್ದಾರೆ. ಬನ್ನಿ, ಈಕೆಯ ಫಿಲ್ಮೀ ಕೆರಿಯರ್‌ ಬಗ್ಗೆ ಹತ್ತಿರದಿಂದ ತಿಳಿಯೋಣ :

ಇಂಡಸ್ಟ್ರಿಯಲ್ಲಿ ನಿಮ್ಮ ಎಂಟ್ರಿ ಹೇಗಾಯಿತು? ನೀವು ಬಂದ ನಂತರ ಇಂಡಸ್ಟ್ರಿ ಎಷ್ಟು ಬದಲಾಗಿದೆ ಅನ್ಸುತ್ತೆ?

ನಾನು ಮನೆ ಬಿಟ್ಟು ಓಡಿ ಬಂದು ಈ ಇಂಡಸ್ಟ್ರಿ ಸೇರಿದವಳು. ಮನೆಯವರು ಒಪ್ಪದ ಈ ಚಿತ್ರರಂಗಕ್ಕೆ ನಾನು ಅವರನ್ನು ಎದುರುಹಾಕಿಕೊಂಡು ಹೀಗೆ ಬರಬೇಕಾಯಿತು. ಸಂಪ್ರದಾಯಸ್ಥ ಕುಟುಂಬ ನಮ್ಮದು, ಇಂಥ ಥಳುಕುಬಳುಕಿನ ಗ್ಲಾಮರ್‌ ಲೋಕಕ್ಕೆ ನಾನು ಸೇರುವುದನ್ನು ಅವರು ಬಯಸಲಿಲ್ಲ. ಆದರೆ ನಾನು ಮಹಾ ಹಠಮಾರಿ ಎಂದು ನಮ್ಮ ಮನೆಯವರಿಗೆ ಗೊತ್ತಿತ್ತು, ಮುಂಬೈಗೆ ಹೋಗಿಯೇ ತೀರುತ್ತೇನೆ ಎಂದವರು ಬಲ್ಲರು.

ಅಂತೂ ನಾನು ಇಂಡಸ್ಟ್ರಿಗೆ ಬಂದ ನಂತರ ಆಗ ಈ ಚಿತ್ರರಂಗ ಅಂಥ ಸ್ಪೆಷಲ್ ಎಂದೇನೂ ಅನಿಸಲಿಲ್ಲ. ಎಷ್ಟೋ ಚಿತ್ರಗಳ ಕಾಂಟ್ಯಾಕ್ಟ್ ಚೆನ್ನಾಗಿತ್ತು, ಹೀಗಾಗಿ ರಿಲೀಸ್‌ ಆಗ್ತಿತ್ತು. ಆದರೆ ಉತ್ತಮ ಗುಣಮಟ್ಟದ ಕ್ಲಾಸ್‌ ಚಿತ್ರಗಳನ್ನು ಕೇಳುವವರಾರು? ಅಂಥ ಕ್ಲಾಸ್‌ ಚಿತ್ರಗಳಿಗೆ ಮಾರ್ಕೆಟ್‌ ಇರಲೇ ಇಲ್ಲ ಎಂದರೆ ಉತ್ಪ್ರೇಕ್ಷೆ ಅಲ್ಲ! 2004ರ ನಂತರ ಈ ಹಿಂದಿ ಚಿತ್ರರಂಗದಲ್ಲಿ ಬದಲಾವಣೆಯ ಗಾಳಿ ಬೀಸಿತು. ಚಿತ್ರಗಳ ಕಲೆಕ್ಷನ್‌ ಇದ್ದಕ್ಕಿದ್ದಂತೆ ಬದಲಾಯಿತು. ಮಲ್ಟಿಪ್ಲೆಕ್ಸ್ ಸಿನಿಮಾ ನೋಡುವವರ ಅಭಿರುಚಿಯೂ ಬದಲಾಯಿತು. ಡಿಜಿಟಲ್ ಕನ್‌ಸ್ಯೂಮರ್‌ನಲ್ಲೂ ಎಷ್ಟೋ ಪ್ರಗತಿ ಕಂಡುಬಂತು. ಜನ ಎಂಥ ಚಿತ್ರ ನೋಡಲು ಬಯಸುತ್ತಿದ್ದರೋ, ಅಂಥದೇ ಚಿತ್ರಗಳು ತಯಾರಾಗ ತೊಡಗಿದವು. ಆ ಸಮಯದಲ್ಲಿ ನನ್ನ `ಕ್ವೀನ್‌' ಚಿತ್ರ ಬಂದಿತು. ಈ ಚಿತ್ರ ಸಕ್ಸಸ್‌ ಆಗುತ್ತೋ ಇಲ್ಲವೋ ಅಂತ ಭಾರಿ ಡೌಟ್‌ ಇತ್ತು.... ನನ್ನ ಕೆರಿಯರ್‌ ಗೋತಾ ಅಂತಾನೇ ಅಂದುಕೊಂಡಿದ್ದೆ. ಆಗ ಇಂಥ ಟೈಪಿನ ಚಿತ್ರಗಳಿಗೆ ಬೇಡಿಕೆ ಇರಲಿಲ್ಲ. ಬಿಡಿ. ಆದರೆ `ಕ್ವೀನ್‌' ಹಿಟ್‌ ಆದದ್ದೇ ತಡ, ಅಂಥದೇ ಚಿತ್ರಗಳು ಸಾಲು ಸಾಲಾಗಿ ಬಂದವು.

ಈ ಪುರುಷಪ್ರಧಾನ ಸಮಾಜದಲ್ಲಿ ನೀವು ನಿಮ್ಮ ಸ್ಥಾನ ಸ್ಥಾಪಿಸಿಕೊಳ್ಳುವುದು ಕಷ್ಟ ಅನಿಸಲಿಲ್ಲವೇ?

ಕಷ್ಟಗಳು.... ಒಂದೇ ಎರಡೇ.....? ಆದರೆ ನಾನು ನನಗೊಂದು ಸ್ಥಾನ ಕ್ರಿಯೇಟ್‌ ಮಾಡಿಕೊಳ್ಳಲೇಬೇಕಿತ್ತು. `ಕ್ವೀನ್‌'ನಂಥ ಚಿತ್ರ ನೀಡಿ, ನಾನು ಇಂದಿನ ಯುವಜನತೆಗೆ ಸ್ತ್ರೀಪ್ರಧಾನ ಚಿತ್ರಗಳ ಶಕೆಯನ್ನು ಪುನಃ ಆರಂಭಿಸಿದೆ ಎಂದರೆ ಅತಿಶಯೋಕ್ತಿಯಲ್ಲ. ಅದಾದ ಮೇಲೆ ವಿದ್ಯಾರ `ಕಹಾನೀ,' ದೀಪಿಕಾರ `ಪೀಕೂ' ಮುಂತಾದ ಚಿತ್ರಗಳು ಯಶಸ್ವೀ ಎನಿಸಿದವು. ಇತ್ತೀಚಿನ `ದಬಂಗ್‌' ಸಹ ಮಹಿಳಾ ಪ್ರಗತಿಪರವಾದುದೇ ಎನ್ನಬಹುದು, ಇದಕ್ಕೆ ಬಹಳಷ್ಟು ಪ್ರೋತ್ಸಾಹ ಸಿಕ್ಕಿದೆ. ಇದೇ ನೆಪದಲ್ಲಿ ನಾನು ನಟಿಯರ ಸಂಭಾವನೆ ಹೆಚ್ಚಿಸುವ ಟ್ರೆಂಡ್‌ ಶುರು ಮಾಡಿದೆ. ಅಸಲಿಗೆ, ಇಂದಿನ ದಿನಗಳಲ್ಲಿ ನಟಿಯರು ಎಷ್ಟು ಕಷ್ಟಪಟ್ಟು ಕೆಲಸ ಮಾಡುತ್ತಾರೆಂದರೆ ಖಂಡಿತಾ ಅವರಿಗೆ ಸಿಗಬೇಕಾದ ಸಂಭಾವನೆ, ಸೌಲಭ್ಯ  ಸಿಗುತ್ತಿಲ್ಲ ಎಂದೇ ಹೇಳಬಹುದು. ನಾಯಕ ನಾಯಕಿ ಇಬ್ಬರೂ ಸಮಾನರಾಗಿ ಕಷ್ಟಪಡುತ್ತಿರುವಾಗ, ಇಬ್ಬರಿಗೂ ಸಮಾನ ಸಂಭಾವನೆ ಸಿಗಬೇಕು. ಯಾವುದು ತಪ್ಪು ಅನಿಸುತ್ತದೋ ಅದನ್ನು ನಾನು ಹೀಗೆ ಸಾರಾಸಗಟಾಗಿ ಖಂಡಿಸುತ್ತೇನೆ. ಹುಡುಗಿಯರು ತಮ್ಮ ಹಕ್ಕಿಗಾಗಿ ಹೋರಾಡಲೇಬೇಕು ಮತ್ತು ಸರಿಯಾದ ದಾರಿಯಲ್ಲಿ ಮುನ್ನಡೆದಾಗ ಮಾತ್ರ, ಈ ಪುರುಷಪ್ರಧಾನ ಸಮಾಜದಲ್ಲಿ ವಾಸಿಸುತ್ತಾ ತಮ್ಮ ಜೀವನಕ್ಕೊಂದು ಅರ್ಥ ರೂಪಿಸಬಹುದು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ