ಕಳೆದ ಎರಡು ದಶಕಗಳಿಂದಲೂ ಭಾರತೀಯ ದೃಶ್ಯಮಾಧ್ಯಮಗಳಲ್ಲಿ ಬಿಗ್​ಬಾಸ್ ಎನ್ನುವ ರಿಯಾಲಿಟಿ ಶೋ ಬಹಳ ಪ್ರಖ್ಯಾತಿಯನ್ನು ಪಡೆದಿದ್ದು ಇದು  ಮೂಲತಃ ನೆದರ್ಲ್ಯಾಂಡ್ಸ್ನಲ್ಲಿ ಜಾನ್ ಡಿ ಮೋಲ್ ಜೂನಿಯರ್ ಅವರಿಂದ ರಚಿಸಲ್ಪಟ್ಟ  ಡಚ್ ರಿಯಾಲಿಟಿ ಶೋ ಬಿಗ್ ಬ್ರದರ್ ಆಧಾರಿತವಾದ ಕಾರ್ಯಕ್ರಮವಾಗಿದೆ. ಇದನ್ನು ವಯಾಕಾಮ್ 18 ಮತ್ತು ಡಿಸ್ನಿ ಸ್ಟಾರ್ ನೆಟ್‌ವರ್ಕ್‌ಗಳ ಮೂಲಕ ಎಂಡೆಮೊಲ್ ಶೈನ್ ಇಂಡಿಯಾ (ಈಗ ಬನಿಜಯ್‌) ಕಂಪನಿ ನಡೆಸುವ ಕಾರ್ಯಕ್ರಮವಾಗಿದೆ.

endomol

ಭಾರತದಲ್ಲಿ ಬಿಗ್ ಬಾಸ್ ಮೊದಲು 2006 ರಲ್ಲಿ ಸೋನಿ ಟಿವಿ ಮೂಲಕ ಹಿಂದಿ ಭಾಷೆಯಲ್ಲಿ ಪ್ರಾರಂಭವಾಗಿ ನಂತರ 2013 ರಲ್ಲಿ, ಕಲರ್ಸ್ ಕನ್ನಡದ ಮೂಲಕ  ಕನ್ನಡದ ಆನಂತರ  ಬಂಗಾಳಿ, ತಮಿಳು, ತೆಲುಗು, ಮರಾಠಿ ಮತ್ತು ಮಲಯಾಳಂ ಸೇರಿದಂತೆ ಒಟ್ಟು ಏಳು ಭಾರತೀಯ ಭಾಷೆಗಳಲ್ಲಿ ಈ ಕಾರ್ಯಕ್ರಮವನ್ನು ವಿಸ್ತರಿಸಲಾಗಿದೆ .

bigboss

ಹೌಸ್‌ಮೇಟ್‌ಗಳು ಎಂದು ಕರೆಯಲ್ಪಡುವ ಸ್ಪರ್ಧಿಗಳು ಹೊರಗಿನ ಪ್ರಪಂಚದಿಂದ  ಸ್ವಲ್ಪವೂ ಸಂಪರ್ಕವೇ ಇರದಂತಹ ಟಿವಿ, ಮೊಬೈಲ್, ಗಡಿಯಾರ ಯಾವುದೂ ಇಲ್ಲದಂತಹ ವಿಶೇಷವಾಗಿ ನಿರ್ಮಿಸಲಾದ ಮನೆಯಲ್ಲಿ 15-18 ವಿವಿಧ ಮನಸ್ಥಿತಿಯ, ವಿವಿಧ ವ್ಯಕ್ತಿತ್ವದ ಮತ್ತು ಬೇರೆ ಬೇರೆ ಕ್ಷೇತ್ರದಿಂದ ಬಂದಂತಹ ಸ್ಪರ್ಧಿಗಳು 90-100 ದಿನಗಳ ಕಾಲ ಒಟ್ಟಿಗೆ ವಾಸಿಸುತ್ತಾರೆ. ಪ್ರತೀ ದಿನವೂ ಒಂದಲ್ಲಾ ಒಂದು ಟಾಸ್ಕ್ ಗಳನ್ನು ಕೊಡುತ್ತಾ, ಪ್ರತೀವಾರವೂ ಒಬ್ಬೊಬ್ಬ ಸ್ಪರ್ಧಿಯನ್ನು ಮನೆಯಿಂದ ಹೊರಹಾಕುತ್ತಾ, ಅಂತಿಮವಾಗಿ ಉಳಿಯುವ ಒಬ್ಬ ವ್ಯಕ್ತಿಯನ್ನು ವಿಜೇತ ಎಂದು ಘೋಷಿಸಿ  ಅವರಿಗೆ ನಿರ್ಧಿಷ್ಟ ಮೊತ್ತದ ನಗದು ಬಹುಮಾನವನ್ನು ಕೊಡಲಾಗುತ್ತದೆ. ಈ ರೀತಿಯಲ್ಲಿ ಮನೆಯಲ್ಲಿ ವಾಸಿರುವ ಸ್ಪರ್ಧಿಗಳ ಪ್ರತೀ ಹೆಜ್ಜೆಯನ್ನೂ ಅವರ ಕಣ್ಣಿಗೆ ಕಾಣಿಸದಂತಹ 70ಕ್ಕೂ ಹೆಚ್ಚಿನ ಕ್ಯಾಮೆರಾಗಳು ಸೆರೆ ಹಿಡಿಯುತ್ತದೆಯಲ್ಲದೇ ಅವರು ಮಾತನಾಡುವ ಪ್ರತಿಯೊಂದು ಶಬ್ಧವನ್ನೂ ಮೈಕ್ರೊಫೋನ್‌ಗಳ ಮೂಲಕ ರೆಕಾರ್ಡ್ ಮಾಡುತ್ತಾ ಸಂಕಲಿಸಿ ಪ್ರತೀ ದಿನವೂ  ಒಂದು ಗಂಟೆಗಳ ಕಾಲ ಪ್ರಸಾರ ಮಾಡಲಾಗುತ್ತದೆ,

bb4

ಕಲರ್ಸ್ ಕನ್ನಡದಲ್ಲಿ 10 (2ನೇ ಸರಣಿ ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗಿತ್ತು) ಸರಣಿಗಳು ಸುದೀಪ್ ಅವರ ಸಾರಥ್ಯದಲ್ಲಿ ಅತ್ಯಂತ ಯಶಸ್ವಿಯಾಗಿ ಮುಗಿಸಿ ಕಳೆದ ಮೂರು ವಾರಗಳ ಹಿಂದೆ ಬಿಗ್​ ಬಾಸ್​​ ಸೀಸನ್​ 11 ಕಾರ್ಯಕ್ರಮ ಆರಂಭವಾಗಿತ್ತು. ಈ ಬಾರಿ ಆಯ್ಕೆಯಾಗಿದ್ದ 18 ಸ್ಪರ್ಧಿಗಳಲ್ಲಿ ಹೆಚ್ಚಿನವರು ಧಾರಾವಾಹಿ ಮತ್ತು ಸಿನಿಮಾ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಖ್ಯಾತರವರಾಗಿದ್ದವರಾಗಿದ್ದರೆ, ತನ್ನ ಹರುಕು ಬಾಯಿ ಮತ್ತು ಪ್ರಚಾರ ಪ್ರಿಯತೆಯಿಂದಾಗಿ ಈಗಾಗಲೇ ರಾಜ್ಯಾದ್ಯಂತ ಕುಖ್ಯಾತಿಯನ್ನು ಪಡೆದಿರುರುವ ಲಾಯರ್​ ಜಗದೀಶ್ ಅವರನ್ನೂ ಸಹಾ ಆಯ್ಕೆ ಮಾಡುವ ಮೂಲಕ ಹಲವರನ್ನು  ಅಚ್ಚರಿಯನ್ನು ತರಿಸಿತ್ತು.

bb9

ಇದೇ ವಿಷಯವಾಗಿ ಸಾಮಾಜಿಕ ಜಾಲತಾಣದಲ್ಲಿ ಜಗದೀಶ್ ಅವರ ಆಯ್ಕೆ ಎಷ್ಟು ಸಮಂಜಸ? ಎಂದು ಯಾರೋ ಒಬ್ಬರು ಕೇಳಿದ್ದ ಪ್ರಶ್ನೆಗೆ, ಜಗದೀಶ್ ಒಬ್ಬ ಪ್ರಚಾರ ಪ್ರಿಯ. ಕರೀ ಕೋಟ್ ಹಾಕಿಕೊಂಡು ಕೋರ್ಟಿನಲ್ಲಿ ವಾದ ಮಾಡಿ ಯಾವುದೇ ಕೇಸುಗಳನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗದೇ ಇದ್ದರೂ, ಎಲ್ಲದ್ದರಲ್ಲಿಯೂ ಪ್ರಚಾರವನ್ನು ಪಡೆಯುವ ಪ್ರಚಾರ ಪ್ರಿಯ. ಹಾಗಾಗಿ  ಆತನ ಪ್ರಚಾರದ ತೆವಲಿಗೆ ಇದು ಸರಿಯಾದ ಶೋ. ಆದರೆ ವಯಕ್ತಿಯವಾಗಿ ಪರಿಚಯವಿರದೇ ಇದ್ದರೂ, ಸಾಮಾಜಿಕ ಜಾಲತಾಣಗಳಲ್ಲಿ ಆತ ಹಾಕುತ್ತಿದ್ದ ವಿಡಿಯೋಗಳನ್ನು ಗಮನಿಸಿದ್ದರಿಂದ, ಕುರಿ ಹೆಚ್ಚಿದಷ್ಟೂ ಕುರಬನಿಗೇ ಲಾಭ ಎನ್ನುವಂತೆ, ತನ್ನ ಪ್ರಚಾರ ಪ್ರಿಯತೆಯ ಹಪಾಹಪಿಯಲ್ಲಿ ಆತ ಹುಚ್ಚು ಹುಚ್ಚಾಗಿ ಮಾತನಾಡಿ ಇಲ್ಲವೇ ಹಾರಾಡಿ ಚೀರಾಡಿ ಕಡೆಗೆ ಎಲ್ಲರ ಮುಂದೆ ಅತನ ನಿಜವಾದ ವ್ಯಕ್ತಿತ್ವವೆಲ್ಲಾ ಬೆತ್ತಲಾಗುತ್ತಾ ಹೋಗಿ   ಎಲ್ಲರಿಂದಲೂ ಥೂ! ಛೀ! ಎಂದು ಉಗಿಸಿಕೊಳ್ಳುತ್ತಾನೆ ಎಂದು ಬರೆದಿದ್ದೆ.  ಆದರೆ ನನ್ನ ಊಹೆ ಇಷ್ಟು ಬೇಗ ಆಗುತ್ತದೆ ಎಂದು ಖಂಡಿತವಾಗಿಯೂ ನಾನು ಎಣಿಸಿರಲಿಲ್ಲ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ