ಸರಸ್ವತಿ*

ರಿಷಬ್ ಶೆಟ್ಟಿ ಅವರ ನಟನೆ ಮತ್ತು ನಿರ್ದೇಶನದಲ್ಲಿ ಮೂಡಿಬಂದಿರುವ ಹಾಗೂ ಹೊಂಬಾಳೆ ಫಿಲಂಸ್ ನಿರ್ಮಿಸಿರುವ ‘ಕಾಂತಾರ ಚಾಪ್ಟರ್ 1’ ಸಿನಿಮಾವು ಗಲ್ಲಾಪೆಟ್ಟಿಗೆಯಲ್ಲಿ ದಾಖಲೆಗಳ ಮೇಲೆ ದಾಖಲೆ ಬರೆದು, ಭಾರತದಾದ್ಯಂತ ತನ್ನ ಅಬ್ಬರವನ್ನು ಮುಂದುವರೆಸಿದೆ. ಬರೀ ಕರ್ನಾಟಕದಲ್ಲಿಯೇ ₹೨೫೦ ಕೋಟಿಗೂ ಹೆಚ್ಚು ಗಳಿಕೆ ಮಾಡುವ ಮೂಲಕ, ಈ ಚಿತ್ರವು ಇತಿಹಾಸ ಸೃಷ್ಟಿಸಿದ್ದು, ೨೦೨೫ರ ಅತಿ ದೊಡ್ಡ ಯಶಸ್ಸು ಕಂಡ ಚಲನಚಿತ್ರವಾಗಿ ಹೊರಹೊಮ್ಮಿದೆ. ಕನ್ನಡ ಚಿತ್ರರಂಗಕ್ಕೊಂದು ಹೊಸ ಮೈಲಿಗಲ್ಲನ್ನು ಸ್ಥಾಪಿಸಿದೆ.

ಕರ್ನಾಟಕದ ಹೆಮ್ಮೆಯ ಹಬ್ಬವಾದ ಕನ್ನಡ ರಾಜ್ಯೋತ್ಸವದ ಹಿನ್ನೆಲೆಯಲ್ಲಿ, ಹೊಂಬಾಳೆ ಫಿಲಂಸ್ ಒಂದು ವಿಶೇಷ ಕೊಡುಗೆಯನ್ನು ಘೋಷಿಸಿದೆ:

ನಾಳೆಯಿಂದಲೇ (ಅಂದರೆ ಅಕ್ಟೋಬರ್ ೩೧ ರಿಂದ), ಕಾಂತಾರ ಚಾಪ್ಟರ್ 1 ಸಿನಿಮಾದ ಟಿಕೆಟ್ ದರಗಳು ಈ ಕೆಳಗಿನಂತಿವೆ:

  • ಸಿಂಗಲ್ ಸ್ಕ್ರೀನ್‌ಗಳಲ್ಲಿ (ಏಕಪರದೆ): ಕೇವಲ ₹99/-
  • ಮಲ್ಟಿಪ್ಲೆಕ್ಸ್‌ಗಳಲ್ಲಿ: ₹150/-

ಅಕ್ಟೋಬರ್ ೨, ೨೦೨೫ ರಂದು ಬಿಡುಗಡೆಯಾದ ಈ ಸಿನಿಮಾ, ತನ್ನ ಮಣ್ಣಿನ ಕಥೆ, ಅದ್ಭುತ ದೃಶ್ಯ ವೈಭವ ಹಾಗೂ ಶಕ್ತಿಯುತ ಅಭಿನಯದಿಂದ ಪ್ರೇಕ್ಷಕರ ಮನಸ್ಸನ್ನು ಗೆದ್ದಿದೆ.

ಈ ರಾಜ್ಯೋತ್ಸವದ ಶುಭ ಸಂದರ್ಭದಲ್ಲಿ, ಕರ್ನಾಟಕದ ಅಭಿಮಾನಿಗಳು ಕಡಿಮೆ ಬೆಲೆಯಲ್ಲಿ, ನಮ್ಮ ನಾಡಿನ ಕಲೆ-ಸಂಸ್ಕೃತಿಯ ಹೆಮ್ಮೆಯ ಪ್ರತೀಕವಾದ ‘ಕಾಂತಾರ’ದ ಲೋಕವನ್ನು ಮತ್ತೊಮ್ಮೆ ಸವಿಯಬಹುದು!

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ