ಸರಸ್ವತಿ *
ಕಿರುತೆರೆ ಹಾಗೂ ಸಿನಿಮಾಗಳಲ್ಲಿ ಛಾಪು ಮೂಡಿಸಿರುವ ನಟ ರಾಜೇಶ್ ಧ್ರುವ ಹೀರೋ ಆಗಿರುವ ಅಭಿನಯಿಸಿರುವ ಹೊಸ ಸಿನಿಮಾ ಪೀಟರ್. ಈಗಾಗಲೆ ಪೋಸ್ಟರ್ ಹಾಗೂ ಹಾಡಿನ ಮೂಲಕ ನಿರೀಕ್ಷೆ ಹೆಚ್ಚಿಸಿರುವ ಈ ಚಿತ್ರದ ಕುತೂಹಲಕಾರಿ ಟೀಸರ್ ಬಿಡುಗಡೆಯಾಗಿದೆ. ಥಿಂಕ್ ಮ್ಯೂಸಿಕ್ ಕನ್ನಡ ಯೂಟ್ಯೂಬ್ ನಲ್ಲಿ ಪೀಟರ್ ಸಿನಿಮಾದ ಆಕರ್ಷಕ ಟೀಸರ್ ಅನಾವರಣ ಮಾಡಲಾಗಿದೆ. ಸಸ್ಪೆನ್ಸ್ ಥ್ರಿಲ್ಲರ್ ಡ್ರಾಮಾ ಹಾಗೂ ಪ್ರೀತಿ- ಫ್ಯಾಮಿಲಿ ಕಂಟೆಂಟ್ ಜೊತೆಗೆ ಚೆಂಡೆ ಮೇಳವನ್ನು ಇಟ್ಕೊಂಡು ಟೀಸರ್ ಕಟ್ ಮಾಡಿದ್ದಾರೆ. ರಾಜೇಶ್ ಧ್ರುವ, ಪ್ರತಿಮಾ ನಾಯಕ್ , ಜಾನ್ವಿ ರಾಯಲ, ರಘು ಪಾಂಡೇಶ್ವರ ಇಲ್ಲಿ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.
‘ದೂರದರ್ಶನ’ ಚಿತ್ರ ಖ್ಯಾತಿಯ ನಿರ್ದೇಶಕ ಸುಕೇಶ್ ಶೆಟ್ಟಿ ಆ್ಯಕ್ಷನ್ ಕಟ್ ಹೇಳಿದ್ದಾರೆ. ಈ ಬಾರಿ ಸುಕೇಶ್
ಸೆನ್ಸಿಟಿವ್ ಸಸ್ಪೆನ್ಸ್ ಡ್ರಾಮಾ ಕಥಾಹಂದವರನ್ನು ಪ್ರೇಕ್ಷಕರಿಗೆ ಉಣ ಬಡಿಸಲಿದ್ದಾರೆ. ಟೀಸರ್ ಮೂಲಕ ಮತ್ತಷ್ಟು ಚಿತ್ರದ ಮೇಲೆ ಭರವಸೆ ಹೆಚ್ಚಾಗಿದೆ.
ಸಿನಿಮಾದಲ್ಲಿ ಜಾನ್ವಿ ರಾಯಲ, ರವೀಕ್ಷಾ ಶೆಟ್ಟಿ, ಪ್ರತಿಮಾ ನಾಯಕ್, ರಘು ಪಾಂಡೇಶ್ವರ್, ರಾಮ ನಾಡಗೌಡ, ವರುಣ್ ಪಟೇಲ್ ತಾರಾಬಳಗದಲ್ಲಿದ್ದಾರೆ.
ಕನ್ನಡ ಚಿತ್ರರಂಗದ ಖ್ಯಾತ ಸೌಂಡ್ ಇಂಜಿನಿಯರ್ ರವಿ ಹೀರೆಮಠ್ ಹಾಗೂ ರಾಕೇಶ್ ಹೆಗಡೆ ವೃದ್ಧಿ ಸ್ಟುಡಿಯೊಸ್ ಬ್ಯಾನರ್ ನಡಿ ಪೀಟರ್ ಸಿನಿಮಾ ನಿರ್ಮಿಸಿದ್ದಾರೆ. ಗುರುಪ್ರಸಾದ್ ನರ್ನಾಡ್ ಛಾಯಾಗ್ರಹಣ, ನವೀನ್ ಶೆಟ್ಟಿ ಸಂಕಲನ, ದೇವರಾಜ್ ಕಲಾ ನಿರ್ದೇಶನ ಚಿತ್ರಕ್ಕಿದೆ. ಬಹು ಭಾಷೆಯಲ್ಲಿ ಪೀಟರ್ ಸಿನಿಮಾ ತೆರೆಗೆ ಬರಲಿದೆ.




 
  
         
    




 
                
                
                
                
                
               