ಅಫೇರ್ ಹೌದೆಂದರು ಕತ್ರೀನಾ
ಕೆಲವು ತಿಂಗಳ ಹಿಂದಿನವರೆಗೂ ಕತ್ರೀನಾ ರಣಬೀರ್ ಕಪೂರ್ ನಡುವಿನ ನಿಕಟತೆ ಕಂಡು ಜನ ಅವರು ಮದುವೆ ಡಿಕ್ಲೇರ್ ಮಾಡುತ್ತಾರೆಂದೇ ನಿರೀಕ್ಷಿಸಿದ್ದರು. ಇದಕ್ಕಾಗಿ ಆತ ತಾಯಿ ತಂದೆಯರ ಮನೆ ಬಿಟ್ಟು ಬೇರೆ ಸಹ ಬಂದಿದ್ದ. ಅದೇನಾಯ್ತೋ....? ಇಬ್ಬರ ದಾರಿ ಬೇರಾಯ್ತು. ಒಂದು ಚ್ಯಾನೆಲ್‌ಗೆ ಸಂದರ್ಶನ ನೀಡುವಾಗ ಈಕೆ, `ನಾನು ಸಕಾಲದಲ್ಲಿ ಅವನಿಂದ ದೂರಾದೆ.... ಇದು ನನ್ನ ಕೆರಿಯರ್‌ಗ್ರಾಫ್ ಹೆಚ್ಚಿಸಿಕೊಳ್ಳುವ ಕಾಲ ಎಂದು ಗೊತ್ತಾಯ್ತು. ಬೆಟರ್ ಲೇಟ್ ದ್ಯಾನ್ ನೆವರ್!' ಎಂದಳು. ಆಹಾ.... ಎಂಥ ಮಾತು?!
ಬಂದೇಬಿಟ್ಟಿತು ಸೋನ್ ಚಿಡಿಯಾ!
ಜಬರ್ದಸ್ತ್ ಬ್ಯಾಕ್‌ಗ್ರೌಂಡ್ ಸ್ಕೋರ್ ಹಾಗೂ ಸೀರಿಯಸ್ ಆಗಿರುವ ಕಲಾವಿದರ ಜೊತೆಗೆ `ಸೋನ್ ಚಿಡಿಯಾ' ಚಿತ್ರದ ಟ್ರೇಲರ್ ಬಂದಿದೆ. ಸುಶಾಂತ್ ಸಿಂಗ್ ರಾಜ್‌ಪೂತ್, ಮನೋಜ್ ಬಾಜ್‌ಪೈ, ಭೂಮಿ ಪೆಡ್ನೇಕರ್ ಇರುವಂಥ ಪಾತ್ರಧಾರಿಗಳ ಝಲಕ್ ನೋಡಿದರೆ, ಬಹಳ ದಿನಗಳ ನಂತರ, ಡಕಾಯಿತರ ಕುರಿತಾದ ಬೊಂಬಾಟ್ ಚಿತ್ರ ಬರುತ್ತಿದೆ ಎನಿಸುತ್ತಿದೆ. ಬಹುಶಃ ಇದು ಪ್ರೇಕ್ಷಕರಿಗೆ ನಿರಾಸೆ ಮೂಡಿಸುವುದೇನೋ.....?
ದಿವ್ಯಾಂಕಾ ಈಸ್ ಮೋಸ್ಟ್ ಪವರ್‌ಫುಲ್!
ಮದುವೆ ಆದ ನಂತರ ಕಿರುತೆರೆಯ ನಾಯಕಿಯರಲ್ಲಿ ಪಾಪ್ಯುಲಾರಿಟಿ ಕಳೆದುಕೊಳ್ಳದವಳು ಎಂದರೆ ದಿವ್ಯಾಂಕಾ ತ್ರಿಪಾಠಿ, `ಫೋರ್ಬ್ಸ್` ಇತ್ತೀಚೆಗೆ ಮೋಸ್ಟ್ ಪಾಪ್ಯುಲರ್ ಪವರ್‌ಫುಲ್ ವುಮನ್ ಪಟ್ಟಿ ಜಾರಿಗೊಳಿಸಿತು. ಅದರಲ್ಲಿ ದಿವ್ಯಾಂಕಾಳ ಹೆಸರು ಪ್ರಿಯಾಂಕಾ, ಕರೀನಾ, ಕತ್ರೀನಾರಿಗಿಂತ ಮುಂದಿತ್ತು ಎಂದರೆ ಎಂಥ ಗ್ರೇಟ್ ಅಲ್ಲವೇ? ಶಭಾಷ್ ದಿವ್ಯಾಂಕಾ!
ನಿಕ್ ಪಿಕ್ ವೆಡ್ಡಿಂಗ್
ಕಳೆದ ವರ್ಷ ಫಿಲ್ಮಿ ಸೆಲೆಬ್ರಿಟಿಗಳ ಮದುವೆಯ ವರ್ಷವೆಂದೇ ಹೇಳಬೇಕು. ಇತ್ತೀಚೆಗಷ್ಟೇ ಪ್ರಿಯಾಂಕಾ ನಿಕ್, ಸೈನಾ ನೆಹ್ವಾಲ್ ಕಶ್ಯಪ್ ಮಾತ್ರವಲ್ಲದೆ ನಮ್ಮ ದಿಗಿ-ಆ್ಯಂಡಿಯವರ ಮದುವೆಯೂ ಮೋಜಾಗಿ ನಡೆದ್ಹೋಯ್ತು! ಪ್ರಿಯಾಂಕಾ ಮದುವೆ ಕುರಿತು ಫೇಸ್‌ಬುಕ್‌ನಲ್ಲಿ ಬೇಕಾದಷ್ಟು ಟ್ರೋಲಿಂಗ್ ಕೂಡ ಆಯ್ತು. ದೀಪಿಕಾಳ ಮದುವೆಗೆ ಹೋಲಿಸಿ ಪ್ರಿಯಾಂಕಾಳ ಮದುವೆ ಬಲು ಸಪ್ಪೆ ಎಂದೂ ಸಾರಿದ್ದಾರೆ. ಪ್ರಿಯಾಂಕಾಳ ಮದುವೆಯಲ್ಲಿ ಹಚ್ಚಲಾದ ಪಟಾಕಿ ಕೂಡ ನಗೆಪಾಟಲಿಗೀಡಾಯ್ತು. ಪ್ರಿಯಾಂಕಾಳ ಅತ್ತೆ ಅವಳಿಗೆ 55 ಲಕ್ಷಕ್ಕೂ ಹೆಚ್ಚಿನ ಮೊತ್ತದ ಒಡವೆ ಕೊಡಿಸಿದರಂತೆ! ಬೇರೆ ಬೇರೆ ನಗರಗಳ ಆರತಕ್ಷತೆಯಲ್ಲಿ ಎಲ್ಲ ಸೆಲೆಬ್ರಿಟಿಗಳೂ ಬಿಝಿ ಆದದ್ದಂತೂ ನಿಜ.