-  ರಾಘವೇಂದ್ರ ಅಡಿಗ ಎಚ್ಚೆನ್.

ಕೇರಳದ 19 ವರ್ಷದ ಕಾಜಿಯಾ ಲಿಜ್ ಮೆಜೊ ‘ಮಿಸ್ ಯೂನಿವರ್ಸ್ ಇಂಡಿಯಾ-2026’ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಜೈಪುರದಲ್ಲಿ ನಡೆದ ಅಂತಿಮ ಸುತ್ತಿನಲ್ಲಿ 52 ಸ್ಪರ್ಧಿಗಳನ್ನು ಹಿಂದಿಕ್ಕಿ ಅವರು ವಿಜೇತರಾಗಿದ್ದಾರೆ.

ನವೆಂಬರ್‌ʼನಲ್ಲಿ ಜಾಗತಿಕ ವೇದಿಕೆಯಲ್ಲಿ ಭಾರತ ಪ್ರತಿನಿಧಿಸಲಿರುವ ಕಾಜಿಯಾ

ಈ ಗೆಲುವಿನ ಜೊತೆಗೆ ಕಾಜಿಯಾ ಅವರಿಗೆ ಮತ್ತೊಂದು ದೊಡ್ಡ ಅವಕಾಶ ಸಿಕ್ಕಿದ್ದು, ನವೆಂಬರ್‌ನಲ್ಲಿ ಪ್ಯೂರ್ಟೊ ರಿಕೊದಲ್ಲಿ ನಡೆಯಲಿರುವ 75ನೇ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.

ಕಿರೀಟ ಗೆದ್ದ ಕೇರಳದ ಮೊದಲ ಯುವತಿ

ಕಾಜಿಯಾ 2007ರಲ್ಲಿ ಕೇರಳದ ಮಾವೆಲಿಕ್ಕರದಲ್ಲಿ ಜನಿಸಿದ್ದು, ರೂಪದರ್ಶಿ, ನಟಿ ಹಾಗೂ ನರ್ತಕಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಕಾನೂನು ಪದವಿ ವ್ಯಾಸಂಗ ಮಾಡುತ್ತಿರುವ ಅವರು ಬಾಲ್ಯದ ಬಹುಪಾಲು ಸಮಯವನ್ನು ಯುಎಇಯ ಅಬುಧಾಬಿಯಲ್ಲಿ ಕಳೆದಿದ್ದಾರೆ.

ಈ ಹಿಂದೆ ಮಿಸ್ ಟೀನ್ ಡಿವಾ ಕಿರೀಟ ಗೆದ್ದಿದ್ದ ಕಾಜಿಯಾ, ‘ಮಿಸ್ ಟೀನ್ ಇಂಟರ್‌ನ್ಯಾಷನಲ್-2025’ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿ ಮೊದಲ ರನ್ನರ್‌ʼಅಪ್ ಸ್ಥಾನ ಪಡೆದಿದ್ದರು. ಇದೀಗ ಮಿಸ್ ಯೂನಿವರ್ಸ್ ಇಂಡಿಯಾ ಕಿರೀಟ ಗೆಲ್ಲುವ ಮೂಲಕ ಕೇರಳದ ಮೊದಲ ಯುವತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಇತರ ವಿಜೇತರಾರು?

ತಮಿಳುನಾಡಿನ ವೈಷ್ಣವಿ ಗಣೇಶ್ ಮೊದಲ ರನ್ನರ್‌ʼಅಪ್, ಗುಜರಾತ್‌ʼನ ಅನುಶ್ರೀ ಸತವಾಲೇಕರ್ ಎರಡನೇ ರನ್ನರ್‌ʼಅಪ್ ಹಾಗೂ ಮಹಾರಾಷ್ಟ್ರದ ತೇಜಸ್ವಿನಿ ಶ್ರೀವಾಸ್ತವ ಮೂರನೇ ರನ್ನರ್‌ʼಅಪ್ ಆಗಿದ್ದಾರೆ. ಉತ್ತರಾಖಂಡದ ಅನುಭಾ ವಶಿಷ್ಠ್ ಚೌಧರಿ ನಾಲ್ಕನೇ ರನ್ನರ್‌ಅಪ್ ಸ್ಥಾನ ಪಡೆದಿದ್ದಾರೆ.

ಈಗ ಕಾಜಿಯಾ ಅವರ ಮುಂದಿನ ಗುರಿ ಪ್ಯೂರ್ಟೊ ರಿಕೊ. ಭಾರತವನ್ನು ಅಂತರರಾಷ್ಟ್ರೀಯ ಮಿಸ್ ಯೂನಿವರ್ಸ್ ವೇದಿಕೆಯಲ್ಲಿ ಪ್ರತಿನಿಧಿಸುವ ಅವಕಾಶವನ್ನು ಅವರು ಹೇಗೆ ಬಳಸಿಕೊಳ್ಳಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ