ಸರಸ್ವತಿ ಜಾಗೀರ್ದಾರ್*

ಸ್ಟಾರ್ ಮಕ್ಕಳು ಸ್ಟಾರೇ  ಡಾಕ್ಟರ್ ಮಕ್ಕಳು ಡಾಕ್ಟರೇ ಆಗೋದು ಎಂಬುದು ಹಳೇ ಮಾತು..ಈಗ ಕಾಲ ಬದಲಾಗುತ್ತಿದೆ ಯುವ ಪೀಳಿಗೆ ಸಿನಿಮಾಗಳನ್ನು ನೋಡುವ ರೀತಿಯೇ ಬೇರೆಯಾಗಿದೆ, ಕಂಟೆಟೇ ಸ್ಟಾರ್ ಅಂತಾರೆ. ಇತ್ತೀಚೆಗೆ ಕನ್ನಡ ಚಿತ್ರರಂಗದಲ್ಲಿ ಹೆಚ್ಚು ಸುದ್ದಿ ಮಾಡುತ್ತಿರುವ ತಾರಾ ಮಕ್ಕಳೆಂದರೆ  ನಿವೇದಿತಾ ಶಿವರಾಜ್ ಕುಮಾರ್. ಮತ್ತು ಸಾನ್ವಿ ಸುದೀಪ್ ಇವರಿಬ್ಬರೂ ಉಳಿದವರಿಗಿಂತ ಡಿಫರೆಂಟ್.. ನಿವೇದಿತಾ ಈಗಾಗಲೇ ಫೈರ್ ಫ್ಲೈ ಸಿನಿಮಾ ಮೂಲಕ ನಿರ್ಮಾಪಕಿ ಆಗಿದ್ದಾಳೆ. ಬರೀ ಹಣ ಹಾಕಿ ಸುಮ್ಮನೆ ಕುಳಿತು ಕೊಳ್ಳುದೇ ಇಡೀ ಟೀಮ್ ಜೊತೆ ಸಿನಿಮಾ ಪ್ರಮೋಷನ್ ಸಲುವಾಗಿ ಉತ್ಸಾಹ ತೋರಿದ್ದು, ಕಥೆ ಆಯ್ಕೆ ಮಾಡುವುದರಿಂಊಹಿಡಿದು ಫಿಲಂ ಬಿಡುಗಡೆ ಆಗುವವರೆಗೂ ನಿವೇದಿತಾ ತೋರಿದ ಆಸಕ್ತಿ ಮೆಚ್ಚುವಂಥದ್ದು. ಒಳ್ಳೆ ಕಂಟೆಂಟ್ ಕೊಟ್ಟರೆ ಖಂಡಿತ ಪ್ರೇಕ್ಷಕರ ಥಿಯೇಟರಿಗೆ ಬರುತ್ತಾರೆ..ಅದನ್ನೇ ನಾವಿಲ್ಲಿ ಪ್ರೂವ್ ಮಾಡಲು ಹೊರಟಿದ್ದೇವೆ..ಎಂದು ಶಿವಣ್ಣನ ಮಗಳು ನುಡಿದಂತೆ ನಡೆದುಕೊಂಡಿದ್ದಾರೆ.

kids 1

 

ಇನ್ನು ಸಾನ್ವಿ ಸುದೀಪ್ ಕಿಚ್ಚ ಸುದೀಪ್ ಅವರ ಮುದ್ದಿನ ಮಗಳು.. ತಂದೆಗೆ ತಕ್ಕ ಮಗಳು  ಸಾನ್ವಿ ಕೂಡ ಸಿನಿಮಾ ಬಗ್ಗೆ ಸಾಕಷ್ಟು ಆಸಕ್ತಿ ಹೊಂದಿರುವಂಥ ಸ್ಟಾರ್ ಪುತ್ರಿ , ಮಾತಿನಲ್ಲಿ ಅಪ್ಪನನ್ನು ಮೀರಿಸುತ್ತಾಳೆ.. ಉತ್ತಮ ಗಾಯಕಿ  ,ಅಪ್ಪನ ನಿರ್ಮಾಣದ ಸಂಸ್ಥೆಯಲ್ಲಿ ಎಲ್ಲಾ ವಿಭಾಗಗಳಲ್ಲೂ ಪಾಲ್ಗೊಳ್ಳುತ್ತಾಳೆ. ಇತ್ತೀಚೆಗೆ ತೆಲುಗು ಚಿತ್ರವೊಂದಕ್ಕೆ ಹಾಡಿನ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ್ದಾಳೆ. ನಂಗೂ ಆಕ್ಟಿಂಗ್ ಇಷ್ಟ ಆದರೆ ಮರ ಸುತ್ತಿ ಹಾಡೋದು ಕುಣಿಯೋದು  , ರೊಮ್ಯಾಂಟಿಕ್ ಆಗಿ ಪೋಸ್ ಕೊಡೋದು ಬೇಡವೇ ಬೇಡ ..ನಾನು ಡಿಫರೆಂಟ್ ಆಗಿ ಎಂಟ್ರಿ ಕೊಡ್ತೀನಿ ಎನ್ನುತ್ತಾಳೆ..

ಇವರಿಬ್ಬರೂ ಉಳಿದವರಿಗಿಂತ ಭಿನ್ನವಾಗಿ ಅವರಂದುಕೊಂಡಂತೆ ಸಾಧಿಸಲಿ..

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ