- ರಾಘವೇಂದ್ರ ಅಡಿಗ ಎಚ್ಚೆನ್.

ಸಾರಾ ಅರ್ಜುನ್ ಧುರಂಧರ್ ಚಿತ್ರದ ಮೂಲಕ ಜನಮನ ಗೆದ್ದಿರುವ ಕಲಾವಿದೆ. ತನ್ನ ಸೌಂದರ್ಯ, ನಟನೆಯಿಂದ ಮೋಡಿ ಮಾಡಿರುವ ಸಾರಾ ಸದ್ಯ ಮಹಿಳಾ ಪ್ರಧಾನ ಸಿನಿಮಾ, ಅದರಲ್ಲೂ ಹಿರಿಯ ನಟಿಯ ಬಯೋಪಿಕ್‌ನಲ್ಲಿ ನಟಿಸಲಿದ್ದಾರೆ.

madhu1

ಹೌದು, ಮಧುಬಾಲಾರ ಜೀವನ ಚರಿತ್ರೆಯನ್ನು ಆಧರಿಸಿ ಸಿನಿಮಾ ಬರುತ್ತಿದ್ದು, ಇದರಲ್ಲಿ ಮಧುಬಾಲಾ ಪಾತ್ರದಲ್ಲಿ ನಟಿ ಕಾಣಿಸಿಕೊಳ್ಳಲಿದ್ದಾರೆ. ಅಂದಹಾಗೆ ಈ ಚಿತ್ರವನ್ನು ಸಂಜಯ್ ಲೀಲಾ ಬನ್ಸಾಲಿ ನಿರ್ಮಾಣ ಮಾಡಲಿರುವ ಈ ಸಿನಿಮಾಕ್ಕೆ ಜಸ್ಮೀತ್ ಕೆ.ರೀನ್ ನಿರ್ದೇಶಿಸಲಿದ್ದಾರೆ.
ಸಂಜಯ್ ಲೀಲಾ ಬನ್ಸಾಲಿ ಸದ್ಯ ರಣಬೀರ್ ಕಪೂರ್, ಆಲಿಯಾ ಭಟ್, ವಿಕ್ಕಿ ಕೌಶಲ್‌ ನಟನೆಯ ಲವ್ & ವಾರ್ ಸಿನಿಮಾದಲ್ಲಿ ಬಿಝಿಯಾಗಿದ್ದಾರೆ. ಈ ಚಿತ್ರ ಪೂರ್ಣಗೊಂಡ ಬಳಿಕ ಮಧುಬಾಲಾ ಜೀವನಾಧಾರಿತ ಸಿನಿಮಾ ಕೈಗೆತ್ತಿಗೊಳ್ಳಲಿದ್ದಾರೆ ಎಂದು ಹೇಳಲಾಗಿದೆ.
ಸೆಪ್ಟೆಂಬರ್‌ನಲ್ಲಿ ಈ ಸಿನಿಮಾ ಆರಂಭಗೊಳ್ಳುವ ಸಾಧ್ಯತೆ ಇದೆ. ಮಧುಬಾಲಾರ ವ್ಯಕ್ತಿತ್ವ, ವೃತ್ತಿ ಬದುಕನ್ನಾಧರಿಸಿ ಚಿತ್ರದ ಕಥೆ ಹೆಣೆಯಲಿದ್ದಾರೆಂದು ತಿಳಿದುಬಂದಿದೆ. ಅನೇಕ ಸೂಪರ್ ಹಿಟ್ ಚಿತ್ರಗಳನ್ನು ಕೊಟ್ಟಿರುವ ನಟಿ ಮಧುಬಾಲಾ 1969ರ ಫೆ.23 ರಂದು ತಮ್ಮ 36ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದರು.
ಧುರಂಧರ್, ಧುರಂಧರ್ 2 ಚಿತ್ರದಲ್ಲಿ ಯಾಲಿನಾ ಜಮಾಲಿಯಾಗಿ ಜನಪ್ರಿಯರಾಗಿರುವ ಸಾರಾ ಅರ್ಜುನ್‌ ಸದ್ಯ ‘ಮಧುಬಾಲಾ’ ಆಗುವ ತಯಾರಿಯಲ್ಲಿದ್ದಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ